Ultimate magazine theme for WordPress.

Anti Aging ಈ 5 ಆಹಾರ ತಿಂದರೆ ಚಿರಯುವಕರಂತೆ ಕಾಣುತ್ತಿರಾ

0 287

Anti Aging Foods in Kannada ಇಂದಿನ ಲೇಖನದಲ್ಲಿ ಐದು ಅತೀ ಶಕ್ತಿಶಾಲಿ ಚೈತನ್ಯ, ಉಲ್ಲಾಸ, ಕಾಂತಿಯನ್ನು ಕಾಪಾಡುವಂತಹ ಆಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮಂಗನಿಂದ ಮಾನವ ಎಂದು ನಮಗೆಲ್ಲರಿಗೂ ಗೊತ್ತಿದೆ ಮಾನವ ತನ್ನ ಬುದ್ಧಿಶಕ್ತಿಯಿಂದ ತಾನು ಮಂಗಕ್ಕಿಂತ ಹೆಚ್ಚು ವರ್ಷ ಬದುಕುವ ಕಲೆಯನ್ನ ಕಲಿತಿದ್ದಾನೆ. ಮಂಗ ನಲವತ್ತು ವರ್ಷ ಬದುಕುತ್ತವೆ ಮಾನವ ಎಪ್ಪತ್ತು, ಎಂಭತ್ತು ವರ್ಷದ ವರೆಗೆ ಬದುಕುವ ಕಲೆಯನ್ನು ಕಲಿತುಕೊಂಡಿದ್ದಾನೆ. ಮನುಷ್ಯ ಆಹಾರವನ್ನು ಸಂಸ್ಕರಣೆ ಮಾಡಿಕೊಂಡು ಅದನ್ನು ಸರಿಯಾಗಿ ಸಮತೋಲನವಾಗಿ ಸೇವನೆ ಮಾಡುವುದು,

ಪಚನ ಮಾಡಿಕೊಳ್ಳುವ ಕಲೆಯನ್ನು ಅರಿತುಕೊಂಡಿದ್ದಾನೆ. ಆ ಐದು ಶಕ್ತಿಶಾಲಿ ಆಹಾರ ಯಾವುವು ಎಂದರೆ ಹಾಲು ಕೆನೆ ತುಪ್ಪವನ್ನು ಯಾರ ಮನೆಯಲ್ಲಿ ಸೇವನೆ ಮಾಡುತ್ತಾರೋ ಆ ಮನೆತನವನ್ನು ಸಿರಿವಂತಿಕೆಯ ಮನೆಯವರು ಎಂದು ಹೇಳಲಾಗುತ್ತಿತ್ತು. ನಾವು ಹಳೆಯ ಸಂಪ್ರದಾಯ ಪದ್ಧತಿಯ ಆಹಾರಗಳನ್ನು ತ್ಯಜಿಸಿ ಜಂಕ್ ಫುಡ್ ಗಳ ಮೊರೆ ಹೋಗಿದ್ದೇವೆ. ಬೆಣ್ಣೆ ಮತ್ತು ತುಪ್ಪವನ್ನು ಯಾರು ಹೆಚ್ಚು ಸೇವನೆ ಮಾಡುತ್ತಾರೋ ಅವರ ಮಾಂಸಖಂಡ ಎಲುಬುಗಳು ಗಟ್ಟಿಯಾಗಿರುತ್ತವೆ. Anti Aging

ಚರ್ಮದ ಸುಕ್ಕು ಕಡಿಮೆಯಾಗಿ ಕಾಂತಿಯುಕ್ತವಾಗಿರುತ್ತದೆ. ದಿನಕ್ಕೆ ನಾಲ್ಕು ಟೇಬಲ್ ಸ್ಪೂನ್ ನಷ್ಟು ಬಳಕೆ ಮಾಡಿದರೇ ನಮ್ಮ ಜೀವಶಕ್ತಿ, ವೀರ್ಯಶಕ್ತಿ, ಚರ್ಮದ ಕಾಂತಿ ಉತ್ತಮವಾಗಿರುತ್ತದೆ ಮತ್ತು ನಮ್ಮ ವಯಸ್ಸಿಗೆ ಮುಂಚೆ ಆಗುವ ಮುಪ್ಪನ್ನು ತಡೆಯಬಹುದು. ಎರಡನೇಯ ಮುಖ್ಯವಾದ ಶಕ್ತಿಶಾಲಿ ಆಹಾರ ಯಾವುವು ಎಂದರೆ ತೆಂಗಿನ ಕಾಯಿ. ಈ ಕಲ್ಪವೃಕ್ಷದ ಪ್ರತಿಯೊಂದು ಭಾಗವು ನಮಗೆ ಅನುಕೂಲಕರವಾಗಿದೆ. ಈ ತೆಂಗಿನ ಕಾಯಿಯ ಬಳಕೆಯಿಂದ ಅದರಲ್ಲಿರುವ ಲಾರಿಕ್ ಆಸಿಡ್ ತಾಯಿ ಹಾಲಿಗೆ ಸಮ ಎಂದು ಹೇಳಲಾಗುತ್ತದೆ. ವಯೋಮಾನವೃದ್ಧಾಪ್ಯವನ್ನು ತಡೆಯಿಡಿಯಲು

ಈ ತೆಂಗಿನಕಾಯಿಯು ಸಹಕಾರಿಯಾಗಿದೆ. ಈ ತೆಂಗಿನಕಾಯಿಯನ್ನು ಹಸಿಯಾಗಿ ಸೇವನೆ ಮಾಡಬಹುದು ಇಲ್ಲವೇ ಅಡುಗೆಯಲ್ಲಿ ಬಳಸಿ ಸೇವನೆ ಮಾಡಬಹುದು. ಮೂರನೇ ಶಕ್ತಿಶಾಲಿ ಆಹಾರ ಯಾವುದು ಎಂದರೆ ಮೀನು. ತರಕಾರಿಯು ನಮ್ಮ ದೇಹಕ್ಕೆ ಯಾವುದೇ ದೋಷವಿಲ್ಲದೇ ಪೌಷ್ಠಿಕಾಂಶಗಳನ್ನು ನೀಡುತ್ತದೆಯೋ ಅದೇ ರೀತಿ ಮೀನು ಕೂಡ ನಮ್ಮ ಮೆದುಳಿಗೆ ಬೇಕಾಗಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಅಂಶವನ್ನು ನೀಡುತ್ತದೆ. ಸಸ್ಯಹಾರಿಗಳಾಗಿದ್ದರೇ ಅಗಸೆ ಬೀಜವನ್ನು ಅದರ ಪರ್ಯಾಯವಾಗಿ ಸೇವನೆ ಮಾಡಬಹುದು. ಎರಡು ಸ್ಪೂನ್ ನಷ್ಟು Anti Aging

ಅಗಸೆ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವನೆ ಮಾಡುವುದರಿಂದ ಒಮೆಗಾ ತ್ರಿ ಸಿಗುತ್ತದೆ. ಮಾಂಸಹಾರಿಗಳಾಗಿದ್ದರೇ ಮೀನನ್ನು ಸೇವನೆ ಮಾಡಬಹುದು. ಇದು ನಮ್ಮ ಮೆದುಳಿನ ಬಹಳಷ್ಟು ಅಂಶ ಒಮೆಗಾ ತ್ರಿಯಿಂದ ಮಾಡಲ್ಪಟ್ಟಿದೆ. ಉತ್ತಮ ನರಗಳ ಶಕ್ತಿಗಾಗಿ, ಉಲ್ಲಾಸಭರಿತವಾಗಿರಲು, ರಕ್ತನಾಳಗಳು ಎಪ್ಪುಗಟ್ಟುವುದನ್ನು ತಡೆಗಟ್ಟಲು ಮತ್ತು ನರಗಳ ಚೈತನ್ಯಕ್ಕೆ ಒಮೆಗಾ ತ್ರಿ ಫ್ಯಾಟಿ ಆಸಿಡ್ ಬೇಗಾಗಿದೆ. ಇದು ಮೂರನೇ ಶಕ್ತಿಶಾಲಿ ನವಚೈತನ್ಯ ಭರಿತ ಆಹಾರವಾಗಿದೆ. ನಾಲ್ಕನೇ ಶಕ್ತಿಶಾಲಿ ಆಹಾರವೆಂದರೆ ಕುಂಬಳಕಾಯಿಯ ಬೀಜಗಳು.

ಹೆಚ್ಚು ಆಂಟಿ ಆಕ್ಸಿಡೆಂಟ್ ಗಳು ಇರುವಂತಹ ಮುಖ್ಯವಾಗಿ ಜಿಂಕ್ ಮತ್ತು ಸೆಲೆನಿಯಂ ಇರುವಂತಹ ಆಹಾರ ಎಂದರೆ ಈ ಬೀಜಗಳು. ಈ ಬೀಜಗಳ ಸೇವನೆಯಿಂದ ವಯಸ್ಸಿಗೆ ಮುಂಚೆ ಚರ್ಮದ ಮೇಲೆ ಉಂಟಾಗುವ ನೆರಿಗೆಗಳು, ಅಲ್ಲಲ್ಲಿ ಚರ್ಮ ಜೋತುಬೀಳುವುದನ್ನ ತಡೆಗಟ್ಟಲು ಅತೀ ಉಪಯುಕ್ತ. ನಮ್ಮ ಹಾರ್ಮೋನ್ ಸಮತೋಲನದಲ್ಲಿರಲು ಬೇಕಾಗುವ ಜಿಂಕ್ ಮತ್ತು ಸೆಲೆನಿಯಂ ನವಯೌವನತೆಯನ್ನು ಹೆಚ್ಚಿಸುವಂತಹ ಕುಂಬಳಕಾಯಿಯ ಬೀಜವನ್ನು ಸೇವನೆ ಮಾಡಿದ್ದೇ ಆದರೇ ಶಕ್ತಿಭರಿತ ಆರೋಗ್ಯ ಸಿಗುತ್ತದೆ.

ಐದನೇ ಶಕ್ತಿಶಾಲಿ ಆಹಾರ ಯಾವುದು ಎಂದರೆ ಮೊಟ್ಟೆ. ದಿನಕ್ಕೆ ನಾಲ್ಕರಿಂದ ಐದು ಮೊಟ್ಟೆಯ ಸೇವನೆ ಮಾಡಿದರೆ ಉತ್ತಮ ಉಪಹಾರವಾಗುತ್ತದೆ. ಮೊಟ್ಟೆಯಲ್ಲಿ ಮುಖ್ಯವಾಗಿ 44 ಬಗೆಯ ಎಮಿನೋ ಆಸಿಡ್ ಇರುವುದರಿಂದ ನಮ್ಮ ಮಾಂಸಖಂಡ, ನರ, ಎಲುಬುಗಳು, ಹಲ್ಲುಗಳು, ಚರ್ಮ, ಕೂದಲಗಳಿಗೆ ಬೇಕಾಗಿರುವ ಪ್ರೊಟೀನ್ ಅಂಶಗಳು ಈ ಮೊಟ್ಟೆಯಿಂದ ಸಿಗುತ್ತದೆ. ಮೂಳೆಗಳ ಸಂದುಗಳಲ್ಲಿ ನೋವು, ಬೆನ್ನುನೋವು, ಮಾಂಸಖಂಡಗಳಲ್ಲಿ ಶಕ್ತಿಹೀನತೆ ಬರುವುದನ್ನ ತಡೆಯುವ ಶಕ್ತಿ ಈ ಮೊಟ್ಟೆಗೆ ಇದೆ. Anti Aging

Leave A Reply

Your email address will not be published.