Ultimate magazine theme for WordPress.

astrology garud puran ಈ 5 ಜನರ ಮನೆಯಲ್ಲಿ ಊಟ ಮಾಡಬಾರದು

0 405

astrology garud puran ಹಸಿದು ಪ್ರಾಣ ಹೋದರೂ ಪರವಾಗಿಲ್ಲ ಆದರೇ ಇಂತಹ ಜನರ ಮನೆಯಲ್ಲಿ ಮಾತ್ರ ಊಟ ಮಾಡಲೇಬೇಡಿ. ಕಷ್ಟಗಳು ಬರುತ್ತವೆ ಎಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಿಂದೂ ಧರ್ಮದಲ್ಲಿ ಹಲವು ಪುರಾಣಗಳು ಇವೆ ಅದರಲ್ಲಿ ಗರುಡ ಪುರಾಣವು ಒಂದಾಗಿದೆ. ಗರುಡ ಪುರಾಣಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಇದರಲ್ಲಿ ಸುಮಾರು 279 ಅಧ್ಯಾಯಗಳು ಮತ್ತು 18000 ಶ್ಲೋಕಗಳು ಇವೆ. ಸಾಮಾನ್ಯ ಮನುಷ್ಯರಿಗಾಗಿ ಕೆಲವೊಂದು ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಲಾಗಿದೆ.

ಗರುಡ ಪುರಾಣಗಳ ಪ್ರಕಾರ ನಾವು ಕೆಲವೊಂದು ವ್ಯಕ್ತಿಗಳ ಮನೆಗಳಲ್ಲಿ ಆಹಾರ ಸೇವನೆ ಮಾಡಬಾರದೆಂದು ಹೇಳಲಾಗಿದೆ. ಸಾಮಾನ್ಯವಾಗಿ ನಾವು ಏನನ್ನು ಸೇವನೆ ಮಾಡುತ್ತೀವಿ ಎನ್ನುವ ಆಧಾರದ ಮೇಲೆ ನಮ್ಮ ವರ್ತನೆ ಇರುತ್ತದೆ. ಸಾತ್ವಿಕ ಆಹಾರ ಸೇವನೆ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ತಾಮಸ ಆಹಾರ ತಿಂದರೆ ಮನಸ್ಸು ಅಗ್ರೆಸ್ಸಿವ್ ನೆಸ್ ಆಗಿರುತ್ತದೆ. ಈ ಅಗ್ರೆಸ್ಸಿವ್ ನೆಸ್ ಒಳ್ಳೆಯದಕ್ಕೆ ಬಳಕೆಯಾಗುತ್ತದೆಂದು ಹೇಳಲಾಗುವುದಿಲ್ಲ. ಇದರ ಪ್ರಮುಖ ವಿಚಾರವೇನೆಂದರೆ astrology garud puran

ನಾವು ಸೇವನೆ ಮಾಡುವ ಆಹಾರವು ನಕಾರಾತ್ಮಕ ಅಂಶಗಳನ್ನು ಆಕರ್ಷಿಸಿ ಈ ಸೇವನೆ ಮಾಡುವವರಲ್ಲಿ ಅದು ಹೋಗಿ ಸೇರಿಕೊಳ್ಳುತ್ತದೆ. ಇದರಿಂದ ವ್ಯಕ್ತಿಯ ಬದುಕಿನಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಭಾರತೀಯರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮನೆಯಲ್ಲಿ ಆಹಾರ ಸೇವನೆ ಮಾಡುತ್ತಾರೆ. ಆದರೇ ಇಂದಿನ ಲೇಖನದಲ್ಲಿ ಆಹಾರ ಸೇವನೆ ಮಾಡಲೇಬಾರದಂತಹ ಕೆಲವು ಜನರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಒಬ್ಬ ಅಪರಾಧಿಯ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಗರುಡ ಪುರಾಣದ ಪ್ರಕಾರ ಆತನ ಮನೆಯಲ್ಲಿ ಊಟ ಮಾಡುವುದರಿಂದ ಆತ ಮಾಡಿದ ದುಶ್ಕೃತ್ಯಗಳಲ್ಲಿ ಪಾಲುದಾರರಾಗುತ್ತೀರಿ. ಇಂತಹವರ ಮನೆಯಲ್ಲಿ ದುಶ್ಕೃತ್ಯಗಳನ್ನು ಮಾಡಿ ಗಳಿಸಿದಂತಹ ಹಣದಿಂದ ಆಹಾರವನ್ನು ಖರೀದಿ ಮಾಡಿ ತರಲಾಗುತ್ತದೆ. ಈ ಆಹಾರವನ್ನು ತಿಂದವರಿಗೂ ಕೂಡ ಕಳ್ಳತನದಲ್ಲಿ ಬಾಗಿಯಾದ ಫಲವೇ ಸಿಗುತ್ತದೆ. ಯಾವುದೇ ಮಹಿಳೆ ಮೋಸ, ಅನೈತಿಕತೆ, ಇತರೆ ಕೆಟ್ಟ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೆ ಆಗ ಇದು ದೇವರ ಹಾಗೂ ಸಮಾಜದ ದೃಷ್ಟಿಯಲ್ಲಿ ತಪ್ಪು ಎಂದು ಪರಿಗಣಿಸಲಾಗುತ್ತದೆ. astrology garud puran

ಇಂತಹವರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಇದರಿಂದ ಆಕೆಯ ಪಾಪಕರ್ಮದಲ್ಲಿ ನೀವು ಕೂಡ ಪಾಲುದಾರರಾಗಬೇಕಾಗುತ್ತದೆ. ದುಬಾರಿ ಬಡ್ಡಿಗೆ ಸಾಲ ಕೊಡುವ ವ್ಯಕ್ತಿಗಳ ಮನೆಯಲ್ಲಿ ಕೂಡ ಊಟವನ್ನು ಮಾಡಬಾರದು. ಇಂತಹ ವ್ಯಕ್ತಿ ದುಬಾರಿ ಬಡ್ಡಿಗೆ ಸಾಲವನ್ನು ನೀಡುತ್ತಾನೆ. ಬೇರೆಯವರ ಸಮಸ್ಯೆಯನ್ನ ಗುರಿಯಾಗಿಸಿಕೊಂಡು ತಕ್ಷಣವೇ ಅವರಿಂದ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಾನೆ. ತಮ್ಮ ಚಾಣಾಕ್ಷತನದಿಂದ ಜನರನ್ನ ಗುರಿಯಾಗಿಸುತ್ತಾರೆ.

ಹಣಕ್ಕಾಗಿ ತಮ್ಮ ಸ್ನೇಹಿತರನ್ನು ತಮ್ಮ ಜಾಲದಲ್ಲಿ ಬೀಳಿಸುತ್ತಾರೆ. ಇಂತಹವರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬೇಡಿ. ತನ್ನ ಕೋಪದ ಮೇಲೆ ನಿಯಂತ್ರಣವಿಲ್ಲದೇ ಇರುವ ವ್ಯಕ್ತಿಗಳ ಮನೆಯಲ್ಲಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ಕೋಪದಲ್ಲಿ ಹಿಂಸೆಗೆ ತಿರುಗುವ ವ್ಯಕ್ತಿಗಳು ತುಂಬಾ ಅಪಾಯಕಾರಿಯಾಗಿರುತ್ತಾರೆ. ಕೋಪದಲ್ಲಿ ನಿಮ್ಮ ಮೇಲೂ ದಾಳಿ ಮಾಡಬಹುದು. ಇಂತಹವರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬಾರದು. ಇನ್ನು ದುಷ್ಟವ್ಯಕ್ತಿ ಮತ್ತು ದುಷ್ಟರಾಜಕಾರಣಿ ಜನರನ್ನು ಬಳಕೆ ಮಾಡಿಕೊಂಡು ಹಣ ಸಂಪಾದಿಸುತ್ತಾರೆ. astrology garud puran

ಅಮಾಯಕ ಜನರ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿ ಮಾಡಿ ಅವರ ನಡುವೆ ಜಗಳ ತಂದು ಇಟ್ಟು ಮೆರೆಯುತ್ತಿರುತ್ತಾರೆ. ಹಾಗಾಗಿ ಇಂತಹವರ ಮನೆಯಲ್ಲಿ ಊಟವನ್ನು ಮಾಡಬಾರದು. ಇನ್ನೊಬ್ಬರಿಗೆ ಭಯ ಹುಟ್ಟಿಸಿ ಸಂಪಾದಿಸಿದವರ ಮನೆಯಲ್ಲೂ ಊಟವನ್ನು ಮಾಡಬೇಡಿ. ಬೆನ್ನಿಗೆ ಚೂರಿ ಇರಿಯುವ ವ್ಯಕ್ತಿಗಳ ಮನೆಯಲ್ಲಿ ಊಟವನ್ನು ಮಾಡಬೇಡಿ. ಮಾದಕದ್ರವ್ಯ ಸಾಗಾಟ ಮಾಡುವವರು ತಮ್ಮ ಸ್ನೇಹಿತರನ್ನು ಕೂಡ ಅದರ ಚಟಕ್ಕೆ ಸಿಲುಕಿಸುತ್ತಾರೆ. ಇವರು ಹಣಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಇಂತಹವರ ಸ್ನೇಹವು ಜೀವನವನ್ನೇ ಹಾಳು ಮಾಡಬಹುದು.

ಆಗಾಗಿ ಇಂತಹವರ ಮನೆಯಲ್ಲಿ ಊಟವನ್ನು ಮಾಡಬಾರದು. ವೇದವ್ಯಾಸರು ಹೇಳುತ್ತಾರೆ ತುಂಬಾ ಸಂಕಷ್ಟದ ಜೀವನನಡೆಸುತ್ತಿರುವವರು ಮತ್ತು ಬಡತನವುಳ್ಳವರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ತನ್ನ ಆಹಾರಕ್ಕೆ ಕಷ್ಟಪಡುವ ವ್ಯಕ್ತಿಗೆ ಮನೆಗೆ ಬಂದ ಅತಿಥಿಗೆ ಯಾವ ರೀತಿ ಸತ್ಕಾರ ಮಾಡಲು ಸಾಧ್ಯ? ನಾವು ಕಡು ಬಡವರಿಂದ ದೇಣಿಗೆಯನ್ನು ಸ್ವೀಕರಿಸಬಾರದು. ಯಾರ ಮನೆಯಲ್ಲಿ ಅಹಿತಕರ ಘಟನೆ ನಡೆದಿರುತ್ತದೆಯೋ, ನೊಂದ ಮನಸ್ಸು ಇರುತ್ತದೆಯೋ ಆ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. astrology garud puran

ಏಕೆಂದರೆ ಅವರು ಬಹಳ ನೋವಿನಿಂದ ಆಹಾರವನ್ನು ತಯಾರು ಮಾಡಿರುತ್ತಾರೆ. ಇದು ಸಮಸ್ಯೆಗೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ಆರೋಗ್ಯ ಸರಿ ಇಲ್ಲದವರು ಇರುತ್ತಾರೋ ಆ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಅವರಿಗೆ ಕೆಲಸ ಹೆಚ್ಚಾಗುವುದಲ್ಲದೇ ನಿಮಗೂ ಕೂಡ ತೊಂದರೆಯಾಗುತ್ತದೆ. ಹಾಗಾಗಿ ನೀವು ರೋಗಿಯನ್ನು ನೋಡಿಕೊಂಡು ಬಂದರೆ ಸಾಕು. ಸ್ಕಂದ ಪುರಾಣದ ವಸಿಷ್ಠ ಕೃತಿಯಲ್ಲಿ ಯಾವಾಗಲೂ ಏಕಾಂತದಲ್ಲಿ ಕುಳಿತು ಆಹಾರವನ್ನು ಸೇವಿಸಬೇಕೆಂದು ಹೇಳಲಾಗಿದೆ.

ಊಟ ಮಾಡುವಾಗ ಮೌನವಾಗಿರಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಮಾತನಾಡಬೇಕು. ಪದ್ಮಪುರಾಣದ ಸುಶೃತ ಸಂಹಿತೆಯಲ್ಲಿ ಕೈ, ಕಾಲು ಮತ್ತು ಬಾಯಿಯನ್ನು ತೊಳೆದುಕೊಂಡು ಆಹಾರವನ್ನು ಸೇವಿಸಬೇಕು. ಮಹಾಭಾರತದ ಉಪನಿಷತ್ತುಗಳಲ್ಲಿ ಹೀಗೆ ಹೇಳಲಾಗಿದೆ ನಮ್ಮ ತಟ್ಟೆಯಲ್ಲಿರುವ ಆಹಾರವನ್ನು ಎಂದಿಗೂ ಖಂಡಿಸಬಾರದು. ನಿಮ್ಮ ತಟ್ಟೆಗೆ ಏನೇ ಬಡಿಸಿದರೂ ಅದಕ್ಕೆ ಕೈ ಮುಗಿದು ಅದನ್ನು ಸೇವಿಸಬೇಕು. ನೀವು ತುಂಬಾ ದಣಿದಿದ್ದರೇ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆದುಕೊಂಡು ಆಹಾರ ಸೇವಿಸಬೇಕು ಇಲ್ಲದಿದ್ದರೇ ಆಯಾಸದ ಸ್ಥಿತಿಯಲ್ಲಿ ಆಹಾರವನ್ನು ಸೇವಿಸುವುದರಿಂದ ಜ್ವರ ಅಥವಾ ವಾಂತಿ ಉಂಟಾಗುತ್ತದೆಂದು ನೀತಿವಾಕ್ಯಾಮೃತದಲ್ಲಿ ಹೇಳಲಾಗಿದೆ.

ಚರಕ ಸಂಹಿತೆಯಲ್ಲಿ ಸ್ವತಃ ಅಸುವಿನಿಂದ ಬಳಲುತ್ತಿರುವ ವ್ಯಕ್ತಿ ತಂದಂತಹ ಆಹಾರವನ್ನು ಸೇವಿಸಬಾರದೆಂದು ಹೇಳಲಾಗಿದೆ. ನಿಮ್ಮ ಮೇಲೆ ಪ್ರೀತಿ ಮತ್ತು ಮಮತೆ ಇಲ್ಲದಂತಹ ವ್ಯಕ್ತಿಗಳು ತಂದಂತಹ ಆಹಾರವನ್ನು ತಿನ್ನಬಾರದು. ಕತ್ತಲೆಯಲ್ಲಿ, ತೆರೆದ ಆಹಾರದ ಕೆಳಗೆ ಮತ್ತು ದೇವಸ್ಥಾನದಲ್ಲಿ ಇಟ್ಟಿರುವ ಆಹಾರವನ್ನು ಸೇವಿಸಬಾರದೆಂದು ಪೂರ್ವಪುರಾಣದಲ್ಲಿ ಹೇಳಲಾಗಿದೆ. ಬಟ್ಟೆಯಲ್ಲಿ ಧರಿಸುವಾಗ, ಸವಾರಿ ಮಾಡುವಾಗ, ಹಾಸಿಗೆಯ ಮೇಲೆ ಕುಳಿತಾಗ, ಬೂಟುಗಳನ್ನು ಧರಿಸುವಾಗ ಆಹಾರವನ್ನು ಸೇವನೆ ಮಾಡಬಾರದು. ನಗುತ್ತಾ ಮತ್ತು ಅಳುತ್ತಾ ಯಾವುದೇ ಆಹಾರವನ್ನು ಸೇವಿಸಬಾರದು. astrology garud puran

Leave A Reply

Your email address will not be published.