Ultimate magazine theme for WordPress.

deepa oil ದೀಪಕ್ಕೆ ಈ ಎಣ್ಣೆ ಬಳಸಿದ್ರೆ ಕಷ್ಟಗಳು ತಪ್ಪೋದಿಲ್ಲ

0 385

deepa oil astrology ಸ್ನೇಹಿತರೇ ಯಾವುದೇ ಕಾರಣಕ್ಕೂ ದೇವರ ದೀಪಕ್ಕೆ ಈ ಎಣ್ಣೆಯನ್ನು ಬಳಸಬೇಡಿ. ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತವೆ ಎಂಬ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚುವುದು ಸಂಪ್ರದಾಯ. ಮನೆಯಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶ ಮಾಡುವುದಿಲ್ಲ.

ದೀಪವನ್ನು ಬೆಳಗಿಸಲು ಬೇಕಾಗಿರುವ ಪ್ರಮುಖ ಅಂಶ ಬತ್ತಿ, ತೈಲ, ಬೆಂಕಿ ಕಡ್ಡಿ, ಆದರೇ ದೇವರಿಗೆ ಯಾವುದೋ ಎಣ್ಣೆಯನ್ನು ಬಳಸಿ ದೀಪಗಳನ್ನು ಬೆಳಗಬಾರದು. ಶಾಸ್ತ್ರಗಳಲ್ಲಿ ಹೇಳಲಾದ ಎಣ್ಣೆಗಳನ್ನು ಮಾತ್ರ ಬಳಸಿ ದೀಪಗಳನ್ನು ಬೆಳಗಬೇಕು. ಆಗಾದರೇ ಯಾವ ತೈಲಗಳನ್ನು ಪೂಜೆಯಲ್ಲಿ ಬಳಸಬೇಕು ಮತ್ತು ಅದರ ಪ್ರಯೋಜನಗಳೇನು? ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. deepa oil

ಇಂದಿನ ಯಾಂತ್ರಿಕ ಯುಗದಲ್ಲಿ ಹಬ್ಬದ ದಿನ ಮೂಂಬತ್ತಿ ಮತ್ತು ಕೃತಕ ವಿದ್ಯುತ್ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೇ ಅದು ಆಧ್ಯಾತ್ಮಿಕವಾಗಿ ಅಷ್ಟು ಪ್ರಶಸ್ತವಾದುದ್ದಲ್ಲ ಆದ್ದರಿಂದ ಹಬ್ಬದ ದಿನ ಹಣತೆಯಿಂದ ತುಂಬಿದ ದೀಪವನ್ನು ಏಕೆ ಬೆಳಗಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಇರುವುದು ಸಹಜವಾಗಿದೆ. ಇದಕ್ಕೆ ಸೂಕ್ತ ವಿವರಣೆ ಇಲ್ಲಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ದೀಪಗಳು ಶುರುವಾಗುವ ಮೊದಲು ಎಣ್ಣೆ ದೀಪಗಳನ್ನು ಪ್ರಪಂಚದಾದ್ಯಂತ ಬೆಳಗಲಾಗುತ್ತಿತ್ತು.

ಅಲ್ಲದೇ ವಿವಿಧ ಸಂಪ್ರದಾಯ ಮತ್ತು ಸಂಸ್ಕೃತಿಯ ದ್ಯೂತಕವಾಗಿತ್ತು. ಕ್ರಿ.ಪೂ. 4500ರಿಂದ 3300ರ ವರೆವಿಗೂ ಎಣ್ಣೆಯ ದೀಪದ ಮಹತ್ತ್ವ ಆಗೆಯೇ ಉಳಿದುಕೊಂಡು ಬಂದಿತ್ತು. ನಂತರ ಎಣ್ಣೆಯ ದೀಪದ ಬದಲು ಬೇರೆ ಬೇರೆ ದೀಪಗಳು ಬೆಳಕಿಗೆ ಬಂದವು. ದೀಪಕ್ಕೆ ಯಾವ ತೈಲ ಬಳಸಬೇಕು ಎಂದು ನೋಡುವುದಾದರೇ ಮೊದಲನೆಯದಾಗಿ ಶುದ್ಧ ಹಸುವಿನ ತುಪ್ಪವನ್ನು ಹೋಮ ಹವನಾದಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಅಗ್ನಿ ಪುರಾಣದ ಪ್ರಕಾರ ಸುತ್ತಮುತ್ತಲುನ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವಂತಹ ಸಾಮರ್ಥ್ಯವನ್ನು ಹಸುವಿನ ತುಪ್ಪ ಹೊಂದಿದೆ. ಮನೆಯಲ್ಲಿ ಪಾಸಿಟಿವಿಟಿ ಶಕ್ತಿ ಹೆಚ್ಚಾಗಬೇಕಾದರೇ ದೇವರಿಗೆ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿದರೆ ಬಡತನವು ದೂರವಾಗುತ್ತದೆ, ಲಕ್ಷ್ಮಿ ಕೃಪೆ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ.

ಸಂಪತ್ತು ಮತ್ತು ಸಂತೋಷ ಮನೆಯಲ್ಲಿ ನೆಲೆಸುತ್ತದೆ. ಅದರಲ್ಲೂ ಲಕ್ಷ್ಮಿ ಪೂಜೆಯಲ್ಲಿ ತಪ್ಪದೇ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುತ್ತಾಳೆ. ತುಪ್ಪವನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ ಹಾಗೂ ಮುಖದ ಮೇಲೆ ಹೊಳಪು ಮೂಡುತ್ತದೆ. ಬೇವಿನ ಎಣ್ಣೆಯೊಂದಿಗೆ ಮೊಹುವ ಎಣ್ಣೆಯನ್ನ ಮಿಶ್ರ್ಣ ಮಾಡಿ ದೇವರಿಗೆ ದೀಪವನ್ನು ಬೆಳಗುವುದರಿಂದ ಪರಾಶಕ್ತಿಯ ದೇವಿಯ ಅನುಗ್ರಹ ಹಾಗೂ ಕುಲದೇವತಾ ಅನುಗ್ರಹ

ನಿಮ್ಮ ಮೇಲೆ ಇರುತ್ತದೆ. ಬೇವಿನ ಎಣ್ಣೆಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶತೃಗಳಿಂದ ಆಗುವ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಒಂದು ವೇಳೆ ಶತೃಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೃಷ್ಣಾಷ್ಟಮಿಯ ದಿನದಂದು ಎಂಟು ಬೇವಿನ ದೀಪವನ್ನು ಬೈರವನಿಗೆ ಬೆಳಗಿ ಆತನನ್ನು ಪೂಜಿಸಬೇಕು ಮತ್ತು ಸಹಸ್ರ ನಾಮವನ್ನು ಪಠಿಸಬೇಕು. ಇದರಿಂದ ಶತೃದೋಷ ದೂರವಾಗುತ್ತದೆ. ತೆಂಗಿನ ಎಣ್ಣೆಯು ಆಧ್ಯಾತ್ಮಿಕ ಪ್ರಾಮುಖ್ಯತೆಯ ಎಣ್ಣೆಗಳಲ್ಲಿ ಒಂದಾಗಿದೆ.

ತೆಂಗಿನ ಎಣ್ಣೆಯು ವಿನಾಯಕನಿಗೆ ಪ್ರಿಯವಾದ ಎಣ್ಣೆಯಾಗಿದೆ. ಆದ್ದರಿಂದ ಗಣೇಶನನ್ನು ಆರಾಧಿಸುವಾಗ ತೆಂಗಿನ ಎಣ್ಣೆಯನ್ನು ಉಪಯೋಗಿಸಬೇಕು. ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಗಣೇಶನು ಸಂತೋಷದಿಂದ ಆಶೀರ್ವದಿಸುತ್ತಾನೆ. ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಗಣೇಶನಿಗೆ ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಜೊತೆಗೆ ಗಣೇಶನ ಪೂಜೆಯಲ್ಲಿ ಗರಿಕೆ ಹಾಗೂ ಮೋದಕವನ್ನು ಇಟ್ಟು ಪೂಜಿಸಿದರೇ ಇನ್ನು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. deepa oil

ಹರಳೆಣ್ಣೆಯನ್ನು ಬಳಸಿಕೊಂಡು ದೀಪವನ್ನು ಹಚ್ಚಿದರೇ ಆ ಮನೆಯಲ್ಲಿ ಸಂತೋಷ, ಅಭಿವೃದ್ಧಿ ಆಧ್ಯಾತ್ಮಿಕ, ಬೆಳವಣಿಗೆ, ಸಮೃದ್ಧಿ ಹಾಗೂ ಖ್ಯಾತಿಯು ಹೆಚ್ಚಾಗುತ್ತದೆ. ಸಂಬಂಧಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹರಳೆಣ್ಣೆಯ ದೀಪಕ್ಕೆ ಇದೆ. ಆದ್ದರಿಂದ ಪೂಜೆಯಲ್ಲಿ ಹರಳೆಣ್ಣೆಯ ದೀಪವನ್ನು ಬೆಳಗುವುದು ಸೂಕ್ತ. ಮೊಹುವ ತೈಲವನ್ನು ಪರಶಿವನಿಗೆ ಬಳಸುವುದರಿಂದ ಆರ್ಥಿಕ ಸಮಸ್ಯೆಯು ದೂರವಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು. deepa oil

ಯಾವುದೇ ಕೆಲಸವನ್ನು ಮಾಡುವ ಮೊದಲು ದೇವರಿಗೆ ಎಣ್ಣೆಯ ದೀಪ ಅಥವಾ ತುಪ್ಪದ ದೀಪವನ್ನು ಬೆಳಗಬೇಕು. ಆದಷ್ಟು ಸಸ್ಯಜನ್ಯ ಎಣ್ಣೆಯನ್ನೆ ಬಳಸಬೇಕು. ನಿಮಗೆ ಯಾರಾದರೂ ತೊಂದರೆಯನ್ನು ಕೊಡುತ್ತಿದ್ದರೇ ನೀವು ದೀಪಕ್ಕೆ ಮಲ್ಲಿಗೆ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಶತೃಗಳ ತೊಂದರೆ ಇರುವುದಿಲ್ಲ. ಈ ದೀಪದಲ್ಲಿ ಎರಡು ಬತ್ತಿ ಮತ್ತು ಎರಡು ಲವಂಗವನ್ನು ಹಾಕಿ ಉರಿಸಬೇಕು.

ಕಷ್ಟಗಳು ನಿವಾರಣೆಯಾಗಬೇಕೆಂದರೆ ಈ ಮಂತ್ರವನ್ನು ಹೇಳಿಕೊಂಡು ದೀಪವನ್ನು ಹಚ್ಚಿರಿ ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ ಶತೃಬುದ್ಧಿ ವಿನಾಶಾಯ ದೀಪ ಜ್ಯೋತಿರ್ ನಮೋಸ್ತುತೆ ಹೀಗೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ ಮನೆಯಲ್ಲಿ ನೆಲೆಸುತ್ತದೆ. ಮಣ್ಣಿನ ದೀಪವನ್ನು ಹಚ್ಚುವುದು ಅತ್ಯಂತ ಶುಭಕರ.

Leave A Reply

Your email address will not be published.