Ultimate magazine theme for WordPress.

Makara Rashi ಫೆಬ್ರವರಿ ತಿಂಗಳಿನ ಮಕರ ರಾಶಿಯ ಮಾಸ ಭವಿಷ್ಯ

0 430

Makara Rashi Bhavishya ಫೆಬ್ರವರಿ ತಿಂಗಳಿನ ಮಕರ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ಏನೆಲ್ಲಾ ಶುಭವಾಗಲಿದೆ? ಏನು ಲಾಭವಾಗುತ್ತಿದೆ? ಧನಪ್ರಾಪ್ತಿಯೋಗವಿದೆಯಾ? ಯಾವ ರೀತಿಯಲ್ಲಿ ಪ್ರಯತ್ನಪಟ್ಟಾಗ ಸಕ್ಸಸ್ ಎನ್ನುವುದು ಸಿಗುತ್ತದೆ? ನಿಮ್ಮ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಪೂರ್ಣವಾದ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಮಕರ ರಾಶಿಯ ರಾಶ್ಯಾಧಿಪತಿ ಶನಿ ಪರಮಾತ್ಮ. ಅದೃಷ್ಟ ಬಣ್ಣ ನೀಲಿ ಮತ್ತು ಕಪ್ಪು ಆಗಿದೆ. ಅದೃಷ್ಟದ ದಿನಗಳು ಶನಿವಾರ ಮತ್ತು ಶುಕ್ರವಾರವಾಗಿರುತ್ತದೆ. ಶನಿ ಪರಮಾತ್ಮನು ಅದೃಷ್ಟದ ದೇವರಾಗಿರುತ್ತದೆ. 6,7 ಮತ್ತು 8 ಅದೃಷ್ಟದ ಸಂಖ್ಯೆಗಳಾಗಿರುತ್ತವೆ. ಮಿತ್ರ ರಾಶಿ ಕುಂಭರಾಶಿಯಾದರೇ ಶತೃ ರಾಶಿ ಸಿಂಹರಾಶಿಯಾಗಿದೆ. 8,17 ಮತ್ತು 26 ಅದೃಷ್ಟದ ದಿನಾಂಕಗಳಾಗಿರುತ್ತದೆ. ಮಕರ ರಾಶಿಯವರು ಯಶಸ್ವಿಯಾಗಿರುವಂತಹ ಆಡಳಿತಗಾರರು ಎಂದರೆ ತಪ್ಪಾಗಲಾರದು.

ಮಕರ ರಾಶಿಯವರು ಎಂತಹ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಮಾಡುವಂತಹ ನಾಯಕತ್ವದ ಗುಣ ಇವರದ್ದಾಗಿರುತ್ತದೆ. ಧಾರಾಳವಾದ ಮನಸ್ಸು ಇವರದ್ದಾಗಿದ್ದು ಹಣದ ಮೇಲಿನ ವ್ಯಾಮೋಹ ಕಡಿಮೆ ಇರುತ್ತದೆ. ಬಡವರಿಗೆ, ಕಷ್ಟದಲ್ಲಿರುವವರಿಗೆ, ಅನಾಥರಿಗೆ ರಕ್ಷಣೆ ಮಾಡುವಂತಹ ಕರುಣಾಮಯಿ ಎಂದು ಹೇಳಬಹುದು. ಎಂತಹ ಕಠಿಣವಾದಂತಹ ಕೆಲಸವನ್ನು ತಮ್ಮ ಪರಿಶ್ರಮದಿಂದ ಯಶಸ್ವಿ ಮಾಡುವವರಾಗಿರುತ್ತಾರೆ.
ಈ ಫೆಬ್ರವರಿ ತಿಂಗಳಿನಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಎಷ್ಟೇ ಕಷ್ಟ ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೀರಿ. ಜೀವನದಲ್ಲಿ ಸಕ್ಸಸ್ ಸಿಗಬೇಕಾದರೇ ಕಷ್ಟಪಡದೇ ಯಶಸ್ವಿ ಸಿಗುವುದಿಲ್ಲ. ಅಂದುಕೊಂಡ ಕೆಲಸಗಳು ನಡೆಯುತ್ತವೆಯೋ ಇಲ್ಲವೋ ಎಂಬ ಗೊಂದಲಗಳು ಇರುತ್ತವೆ. ಎಷ್ಟೇ ಸಮಸ್ಯೆ ಇದ್ದರೂ ಗೊಂದಲಗಳು ಇದ್ದರೂ ಆ ಸಮಸ್ಯೆಯಿಂದ ಹೊರಬನ್ನಿ. ಆತ್ಮವಿಶ್ವಾಸದಿಂದ ಮುನ್ನಡೆದರೇ ಎಂತಹ ಸಮಸ್ಯೆ ಇದ್ದರೂ ಅದು ಪರಿಹಾರವಾಗುತ್ತದೆ. ಎಚ್ಚರಿಕೆಯ ವಿಷಯವೇನೆಂದರೆ ನೀವು ಒಳ್ಳೆಯದು

ಮಾಡಿದರೂ ಮತ್ತು ನೀವು ಮಾಡುವ ಕೆಲಸದಲ್ಲಿ ಕೆಟ್ಟದಾಗಿ ನೋಡುವ ಎಷ್ಟೋ ಜನರು ಇದ್ದಾರೆ. ಜನರ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನೀವು ಗಂಡಾಗಿದ್ದರೇ ಸ್ತ್ರೀಯರ ವಿಚಾರದಲ್ಲಿ ನೀವು ಸ್ತ್ರೀಯರಾಗಿದ್ದರೇ ಪುರುಷರ ವಿಚಾರದಲ್ಲಿ ಬಹಳ ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರಬೇಕಾಗುತ್ತದೆ. ಅನಾವಶ್ಯಕವಾಗಿ ಪ್ರಯಾಣ ಮಾಡಬೇಡಿ, ನಿಮಗೆ ಉಪಯೋಗವಿದ್ದರೇ ಮಾತ್ರ ಪ್ರಯಾಣ ಮಾಡಿ, ಇಲ್ಲವೇ ಸಮಯ ಮತ್ತು ದುಡ್ಡು ಎರಡು ಹಾಳಾಗುತ್ತದೆ. Makara Rashi

ಮನಸ್ಸಿನಲ್ಲಿರುವ ಭಯವನ್ನು ತೆಗೆದು ಹಾಕಿ. ಹಣಕಾಸಿನ ಬಗ್ಗೆ ಕಡಿವಾಣವನ್ನ ಹಾಕಿರಿ. ಪರಿಶ್ರಮದಿಂದ ಕೆಲಸ ಮಾಡಿದರೇ ಬಹಳಷ್ಟು ಲಾಭಗಳಾಗುತ್ತದೆ. ಪತಿ ಪತ್ನಿಯರ ನಡುವೆ ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲಗಳು ಇರುತ್ತವೆ, ಭಿನ್ನಾಭಿಪ್ರಾಯಗಳು ಇರುತ್ತವೆ, ಮಾನಸಿಕವಾದಂತಹ ನೋವುಗಳು ಇರುತ್ತವೆ ಇಂತಹ ಸಮಸ್ಯೆಗಳಿಗೆ ಅವರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಏನೇ ಗೊಂದಲಗಳು Makara Rashi

ಇದ್ದರೂ ಅದನ್ನು ಮಾತನಾಡಿಕೊಂಡು ಸರಿಮಾಡಿಕೊಂಡರೇ ಒಳ್ಳೆಯದಾಗುತ್ತದೆ. ಬಂಧುಗಳ ಜೊತೆ ಇರುವ ಸಮಸ್ಯೆಯನ್ನ ತಾಳ್ಮೆಯಿಂದ ಬಗೆಹರಿಸಿಕೊಳ್ಳಿರಿ. ಹಿರಿಯರಿಂದ ಸಲಹೆ, ಸಹಕಾರವನ್ನು ನೀಡುತ್ತಾರೆ. ಹಣಕಾಸಿನ ವಿಚಾರಕ್ಕೆ ಬಂದರೆ ನಿಮ್ಮ ಆದಾಯಕ್ಕೆ ತಕ್ಕ ಹಾಗೇ ಖರ್ಚು ಮಾಡಬೇಕು. ಸಾಲವನ್ನು ಮಾಡಬಾರದು, ಹೆಚ್ಚಿನ ದುಡ್ಡನ್ನು ಹೂಡಿಕೆ ಮಾಡಬಾರದು. ವ್ಯಾಪಾರಸ್ಥರಾಗಿರಿ, ಸರ್ಕಾರಿ ಮತ್ತು ಅರೆಸರ್ಕಾರಿ ಅಧಿಕಾರಿಗಳೇ ಆಗಿರಿ, ಉದ್ಯೋಗಿ, ಕೃಷಿಕರಾಗಿರಿ, ಚಿಕ್ಕ ವ್ಯಾಪಾರಸ್ಥರಾಗಿರಿ, ದೊಡ್ಡ ವ್ಯಾಪಾರಸ್ಥರಾಗಿರಿ ನೀವು ಏನೇ ಕೆಲಸ ಮಾಡುತ್ತಿದ್ದರೂ

ನಿಮ್ಮ ಅನುಕೂಲಕ್ಕೆ ತಕ್ಕ ಹಾಗೇ ಮಾಡಿಕೊಳ್ಳಬೇಕು ಮತ್ತು ಹೆಚ್ಚಿನ ಸಮಯವನ್ನು ಕೆಲಸಕ್ಕೆ ವಿನಿಯೋಗಿಸಿಕೊಂಡರೇ ಅನುಕೂಲಕರವಾದ ಫಲ ಸಿಗುತ್ತದೆ. ಇರುವಂತಹ ಕೆಲಸವನ್ನು ಅಭಿವೃದ್ಧಿ ಮಾಡಲು ಗಮನ ಕೊಡಿ. ಸದ್ಯಕ್ಕೆ ಬೃಹತ್ ಮಟ್ಟದ ಕೆಲಸ ಕಾರ್ಯಗಳಿಗೆ ಹೋಗಬೇಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀನರಸಿಂಹ ಗಾಯತ್ರಿ ಮಂತ್ರವನ್ನು ಪಠಣ ಮಾಡಿರಿ. ಮನೆ ದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಿ, ಸಾಧು ಸಂತರಿಗೆ, ಹಿರಿಯರಿಗೆ, ತಂದೆ ತಾಯಿ, ಈ ರೀತಿ ಗುರು ಸಮಾನರಾಗಿರುವವರ ಸೇವೆಯನ್ನು ಮಾಡಿಕೊಳ್ಳಿ. ಒಳ್ಳೆಯ ಫಲ ಸಿಗುತ್ತದೆ. Makara Rashi

Leave A Reply

Your email address will not be published.