Ultimate magazine theme for WordPress.

Vrishabha Rashi ಫೆಬ್ರವರಿ ತಿಂಗಳಿನ ವೃಷಭರಾಶಿಯ ಮಾಸ ಭವಿಷ್ಯ

0 19,947

Vrishabha Rashi Bhavishya February ಸ್ನೇಹಿತರೇ ಫೆಬ್ರವರಿ ತಿಂಗಳಿನ ವೃಷಭರಾಶಿಯ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ. ಯಾವ ಸವಾಲುಗಳಿವೆ? ಇರುವ ಸಮಸ್ಯೆಗಳು ಪರಿಹಾರವಾಗುತ್ತದೆಯಾ? ಲಾಭ ನಷ್ಟದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ವೃಷಭರಾಶಿಯ ಜನ್ಮ ನಕ್ಷತ್ರಗಳು ಕೃತಿಕ 2,3,4 ಚರಣಗಳು, ರೋಹಿಣಿ ನಾಲ್ಕು ಪಾದಗಳು, ಮೃಗಶಿರ ನಕ್ಷತ್ರದ ಮೊದಲೆರೆಡು ಪಾದಗಳು ಸೇರಿರುವುದೇ

ಈ ವೃಷಭ ರಾಶಿ. ಇವರ ಲಾಂಭನ ಎತ್ತು. ಶುಕ್ರಗ್ರಹ ರಾಶ್ಯಾಧಿಪತಿಯಾಗಿರುತ್ತದೆ. ವೃಷಭ ರಾಶಿಯವರು ದಯಾಮಯಿಗಳು. ಯಾರಿಗಾದರೂ ಕಷ್ಟ ತೊಂದರೆಗಳು ಇದ್ದರೇ ಸಹಿಸುವಂತಹ ವ್ಯಕ್ತಿಗಳಲ್ಲ. ಮಾತೃ ಹೃದಯಿ ಎಂದು ಹೇಳಬಹುದು. ಐಷರಾಮಿಗಳಾಗಿ ಇರಲು ಇಷ್ಟಪಡುತ್ತಾರೆ. 6,15 ಮತ್ತು 24 ಶುಭ ದಿನಾಂಕಗಳಾಗಿರುತ್ತವೆ. ಅದೃಷ್ಟ ಸಂಖ್ಯೆ 6 ಮತ್ತು 8 ಆಗಿರುತ್ತದೆ. ಎಷ್ಟೇ ಸವಾಲು, ಗೊಂದಲಗಳು ಇರಲಿ ಸ್ವಲ್ಪ ಮನಸ್ಸಿನ ಮೂಲೆಯಲ್ಲಿ ಧೈರ್ಯವಿದ್ದರೂ ಆತಂಕವಿರುತ್ತದೆ. Vrishabha Rashi

ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಸ್ವಲ್ಪ ಒತ್ತಡವಿರುತ್ತದೆ. ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೇ ಅದರಿಂದ ಸಕ್ಸಸ್ ಸಿಗುತ್ತದೆಯಾ? ಎಂಬುದರ ಬಗ್ಗೆ ಚಿಂತೆ ಇರುತ್ತದೆ. ಆದರೇ ನೀವು ಯಾವ ಆತಂಕವನ್ನು ಪಡದೇ ಧೈರ್ಯದಿಂದ ಮುನ್ನುಗ್ಗಿದರೇ ನೀವು ಮಾಡುವ ಕೆಲಸದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಸುಮ್ಮನೇ ಯೋಚನೆ ಮಾಡಿ ಆರೋಗ್ಯವನ್ನು ಹಾಳುಮಾಡಿಕೊಳ್ಳದೇ ಧೈರ್ಯದಿಂದ ಮುನ್ನುಗ್ಗಿದರೇ ನಿಮಗೆ ಜಯ ಸಿಗುತ್ತದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಗಳು ಇರುತ್ತವೆ.

ನಿಮ್ಮ ಕುಟುಂಬದಿಂದ ಸಹಾಯವಾಗುತ್ತದೆ. ಹಣದ ಮೂಲ ತುಂಬಾ ಚೆನ್ನಾಗಿರುವುದರಿಂದ ನಿಮಗೆ ಇರುವ ತೊಂದರೆಗಳು, ಸಮಸ್ಯೆಗಳಿಂದ ಹೊರಗಡೆ ಬರಲು ಅವಕಾಶಗಳು ಸಿಗುತ್ತವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿಕೊಳ್ಳುವುದರಿಂದ ಒಳ್ಳೆಯ ಪ್ರತಿಫಲಗಳನ್ನು ಪಡೆಯಬಹುದು. ವಿವಾಹದ ವಿಚಾರಕ್ಕೆ ಬಂದರೆ ಅಡ್ಡಿ ಆತಂಕಗಳು ಇರುತ್ತವೆ. ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ, ವಕೀಲರು, ಡಾಕ್ಟರ್ ಗಳಿಗೆ ನೀವು ಅಂದುಕೊಂಡಿದ್ದನ್ನು ಸಾಧಿಸುವಂತಹ ಸಮಯ ಇದಾಗಿದೆ. Vrishabha Rashi

ಸಂಶೋಧನೆಯನ್ನು ಮಾಡಲು ಬೇರೆ ರಾಜ್ಯ ಅಥವಾ ಬೇರೆ ದೇಶಕ್ಕೆ ಹೋಗುತ್ತಿದ್ದರೇ ಅಂದುಕೊಂಡಿದ್ದ ರೀತಿಯಲ್ಲಿ ಯಶಸ್ಸು ಸಿಗುತ್ತದೆ. ಎಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೀರಿ. ವ್ಯಾಪಾರಿಗಳು, ಪೊಲೀಸ್ ಇಲಾಖೆ, ರಾಜಕಾರಣಿಗಳು, ಸರ್ಕಾರಿ ಅಥವಾ ಅರೆಸರ್ಕಾರಿ, ಉದ್ಯಮಿಗಳಾಗಿರಿ ನೀವು ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಪಟ್ಟಿದ್ದೇ ಆದರೇ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕಾನೂನು ರೀತಿಯ ಹಣಕಾಸಿನ ವ್ಯವಹಾರಗಳಲ್ಲಿ ನೀವು ತೊಡಗಿಸಿಕೊಂಡಿದ್ದರೇ ಒಳ್ಳೆಯ ರೀತಿಯ ಫಲಗಳು ಸಿಗುತ್ತವೆ. ಯಾವುದು ಸುಲಭವಾಗಿ ಸಿಗುವುದಿಲ್ಲ.

ಏನೇ ಕೆಲಸ ಮಾಡಬೇಕಾದರೂ ಕಷ್ಟ, ಹೋರಾಟದಿಂದಲೇ ಯಶಸ್ಸು ಸಿಗುತ್ತದೆ. ಈ ಫೆಬ್ರವರಿ ಮಾಸದಲ್ಲಿ ಒಳ್ಳೆಯ ಫಲಗಳು ಸಿಗುತ್ತವೆ. . ಕೇತು ಅಷ್ಟೋತ್ತರವನ್ನು ಪಠಣ ಮಾಡುವುದರಿಂದ ಬಹಳಷ್ಟು ಅನುಕೂಲಗಳು ಆಗುತ್ತವೆ. ಮನೆ ದೇವರನ್ನು ಪ್ರಾರ್ಥನೆಯನ್ನು ಮಾಡಿಕೊಳ್ಳಿ. ಕಷ್ಟದಲ್ಲಿರುವವರಿಗೆ, ಅನಾಥರಿಗೆ, ಗುರುಗಳಿಗೆ, ಸಾಧು-ಸಂತರಿಗೆ ಅನ್ನಸಂತರ್ಪಣೆಯನ್ನು ಮಾಡಿರಿ. Vrishabha Rashi

Leave A Reply

Your email address will not be published.