Ultimate magazine theme for WordPress.

Betel Leaves ವೀಳ್ಯದೆಲೆಯನ್ನು ಯಾರು ಸೇವನೆ ಮಾಡಬೇಕು?

0 224

Betel Leaves Benefits ವೀಳ್ಯದೆಲೆಯನ್ನು ಯಾರು ಸೇವನೆ ಮಾಡಬೇಕು? ಯಾರು ಸೇವನೆ ಮಾಡಬಾರದು? ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು? ಎಂಬುದರ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ವೀಳ್ಯದೆಲೆಯು ಬಹಳ ಅದ್ಭುತವಾದಂತಹ ಕಫ ಮತ್ತು ವಾತ ನಿವಾರಕ ಔಷಧಿ ಎಂದು ಹೇಳಬಹುದು. ಈ ವೀಳ್ಯದೆಲೆಯು ಉಷ್ಣವೀರ್ಯ ಸ್ವಭಾವವನ್ನು ಒಳಗೊಂಡಿದೆ. ಕಹಿ ಮತ್ತು ಒಗರು ರಸವನ್ನು ಹೊಂದಿದೆ. ಇದರ ಸೇವನೆಯಿಂದ ಕಫದ ಸಮಸ್ಯೆಯು ನಿವಾರಣೆಯಾಗುತ್ತದೆಂದು ಆಯುರ್ವೇದ ಹೇಳುತ್ತದೆ.

ಜೀರ್ಣಾಂಗ್ಯವ್ಯವಸ್ಥೆಯನ್ನು ಹೆಚ್ಚು ಮಾಡುವಂತಹ ದಿವ್ಯ ಔಷಧಿ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಿದೆ. ಬಿಳಿ ವೀಳ್ಯದೆಲೆಯು ಎಲ್ಲರಿಗೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಕಪ್ಪು ವೀಳ್ಯದೆಲೆಯು ಯಾರು ಹೆಚ್ಚು ತೂಕವನ್ನು ಹೊಂದಿರುತ್ತಾರೋ ಮತ್ತು ಹೆಚ್ಚು ಕಫದ ಸಮಸ್ಯೆ ಇರುತ್ತದೆಯೋ ಅಂತಹವರು ಕಪ್ಪು ವೀಳ್ಯದೆಲೆಯನ್ನು ಬಳಸಿದರೆ ಉತ್ತಮ. ವೀಳ್ಯದೆಲೆಯ ಸೇವನೆಯಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಐದು ಬಗೆಯ ಕಫದೋಷಗಳು ನಮ್ಮ ಶರೀರದಲ್ಲಿವೆ. Betel Leaves

ಹೈಪೋಥೈರಾಯಿಡ್, ಬೊಜ್ಜು, ಕೊಲೆಸ್ಟ್ರಾಲ್, ಸುಸ್ತು, ನಿಶ್ಯಕ್ತಿ, ಡಿಪ್ರೆಷನ್ ಹೀಗೆ ಹಲವಾರು ಸಮಸ್ಯೆಗಳು ಬರುತ್ತವೆ. ಸ್ಥೂಲಕಾಯದ ಸಮಸ್ಯೆ, ಅತಿಯಾಗಿ ನಿದ್ದೆ ಬರುವ ಸಮಸ್ಯೆ, ಸುಸ್ತು ಇವೆಲ್ಲವೂ ಕಫಜ ರೋಗಗಳಾಗಿರುತ್ತವೆ. ಇವುಗಳನ್ನು ಸಮತೋಲವನ್ನಾಗಿ ಮಾಡಿ ಶರೀರವನ್ನು ಚುರುಕುಗೊಳಿಸುವಂತಹ ಅದ್ಭುತವಾದ ಶಕ್ತಿ ಎಂದರೆ ವೀಳ್ಯದೆಲೆ. ಆಯುರ್ವೇದದ ಪ್ರಕಾರ ಸತಿಪತಿಯರ ಮಿಲನದ ನಂತರ ತಾಂಬೂಲದ ಸೇವನೆ ಮಾಡಬೇಕು ಎಂದು ಹೇಳುತ್ತಾರೆ.

ಏಕೆಂದರೆ ಆ ಸಮಯದಲ್ಲಿ ಕಫದ ಪ್ರಕೃತಿ ಸಾಕಷ್ಟು ವೃದ್ಧಿ ಇರುತ್ತದೆ ಆದ್ದರಿಂದ ವೀಳ್ಯದೆಲೆಯನ್ನು ಸೇವನೆ ಮಾಡುವುದು ಒಳ್ಳೆಯದು. ಜೀರ್ಣಾಂಗ ವ್ಯೂಹವನ್ನು ಲಘುತ್ವಗೊಳಿಸಲು ಆಹಾರ ಸೇವನೆ ನಂತರ ಎಲೆ ಅಡಿಕೆಯನ್ನು ತಿನ್ನಬೇಕು ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲೂ ತಾಂಬೂಲದ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಈ ಸಮಯಗಳಲ್ಲಿ ಎಲೆ ಮತ್ತು ಅಡಿಕೆಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಚುರುಕಾಗುತ್ತದೆ. Betel Leaves

ದೇಹದ ಎಲ್ಲಾ ಜಡತ್ವಗಳು ಕಡಿಮೆಯಾಗುತ್ತವೆ. ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಯಿಂದ ಜೀರ್ಣಾಂಗವ್ಯೂಹದಲ್ಲಿ ಹೆಚ್ಚು ತೊಂದರೆಗಳು ಉಂಟಾಗುತ್ತವೆ. ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆಗಾಗಿ ವೀಳ್ಯದೆಲೆಯು ಅತ್ಯುತ್ತಮ ಔಷಧಿ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಅನೇಕ ರೋಗಗಳು ಕಾಣಿಸುತ್ತಿವೆ. ಅದಕ್ಕೆ ಕಾರಣಕ್ಕೆ ದೇಹದಲ್ಲಿ ಶೇಖರಣೆಯಾಗುತ್ತಿರುವ ಕೊಲೆಸ್ಟ್ರಾಲ್ ಟ್ರೈಗ್ಲಿಸ್ ರೈಲ್. ಇದು ನಮ್ಮ ಆಹಾರ ಪದ್ದತಿಯಿಂದ ಆಗುತ್ತಿದೆ. Betel Leaves

ವೀಳ್ಯದೆಲೆಯಿಂದ ಕೊಲೆಸ್ಟ್ರಾಲ್, ಕೊಬ್ಬು ಕರಗುತ್ತಾ ಹೋಗುತ್ತದೆ. ವೀಳ್ಯದೆಲೆಯ ಸೇವನೆಯಿಂದ ಪಿತ್ತ ಶುದ್ದೀಕರಣವಾಗುತ್ತದೆ. ಜೊತೆಗೆ ತ್ವಚೆಯು ಕಾಂತಿಯುಕ್ತವಾಗುತ್ತದೆ. ಯಾರ ದೇಹದಲ್ಲಿ ಪಿತ್ತವು ಸಮತೋಲನದಲ್ಲಿರುತ್ತದೆಯೋ ಅಂತಹವರ ಶರೀರದ ಬಣ್ಣವು ಬಹಳ ಹೊಳಪಾಗಿರುತ್ತದೆ. ಯಾರು ಬೆಳ್ಳಗೆ ಕಾಣಿಸಬೇಕು ಎಂದು ಬಯಸುವವರು ವೀಳ್ಯದೆಲೆಯನ್ನು ಸೇವನೆ ಮಾಡಬಹುದು. ವೀಳ್ಯದೆಲೆಯನ್ನು ಆಹಾರ ಸೇವನೆ ಮಾಡುವ ಅರ್ಧ ಗಂಟೆಯ ಮೊದಲು ಅಥವಾ ಊಟವಾದ ಮೇಲೆ ಸೇವನೆ ಮಾಡಬಹುದು.

ವೀಳ್ಯದೆಲೆಯನ್ನು ಸೇವನೆ ಮಾಡುವಾಗ ಹಿಂದಿನ ಮತ್ತು ಮುಂದಿನ ಭಾಗದ ಸ್ವಲ್ಪ ತುದಿಯನ್ನು ಕಟ್ ಮಾಡಬೇಕು. ಏಕೆಂದರೆ ಆ ಭಾಗವನ್ನು ಉಷ್ಣಯುಕ್ತ ನಿರುಪಯುಕ್ತ ಭಾಗ ಎಂದು ಆಯುರ್ವೇದ ಶಾಸ್ತ್ರಗಳಲ್ಲಿ ಹೇಳಲಾಗಿದೆ. ವೀಳ್ಯದೆಲೆಯನ್ನು ಅಗಿದು ತಿನ್ನುವ ಮೊದಲು ಬರುವ ಎರಡು ಸಲದ ರಸವನ್ನು ಹೊರಕ್ಕೆ ಉಗಿಯಬೇಕು ನಂತರ ತಿನ್ನಬೇಕು. ಮೊದಲು ಬರುವ ರಸವು ಹೆಚ್ಚು ಉಷ್ಣಪ್ರಕೋಪವನ್ನು ಮಾಡುತ್ತದೆ. ಇದು ನಮ್ಮ ಕೊಲೆಸ್ಟ್ರಾಲ್ Betel Leaves

ಮತ್ತು ಫ್ಯಾಟಿ ಲಿವರ್ ನ ಸಮಸ್ಯೆಯನ್ನ ದೂರ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಆಗೆಯೇ ಇದು ರಕ್ತಶುದ್ಧೀಕರಣವನ್ನು ಮಾಡುತ್ತದೆ. ಈ ವೀಳ್ಯದೆಲೆಯನ್ನು ಅತೀಉಷ್ಣ ಇರುವವರು, ಪಿತ್ತ ವಿಕಾರವಿರುವವರು, ಕರುಳಿಗೆ ಸಂಬಂಧಪಟ್ಟ ಸರ್ಜರಿಯಾಗಿರುವವರು ಸೇವನೆ ಮಾಡಬಾರದು ಉಳಿದಂತೆ ಎಲ್ಲರೂ ಸೇವನೆ ಮಾಡಬಹುದು. ವೀಳ್ಯದೆಲೆಯ ಜೊತೆಗೆ ಸ್ವಲ್ಪ ಸುಣ್ಣ, ಅಡಿಕೆ, ಸೋಂಪುಕಾಳನ್ನು ಬೇಕಾದರೇ ಸೇರಿಸಿ ಸೇವನೆ ಮಾಡಬಹುದು. ನಾಲ್ಕರಿಂದ ಆರು ತುಳಸಿ ಬೀಜವನ್ನು ಸೇರಿಸಿ ವೀಳ್ಯದೆಲೆಯನ್ನು ಸೇವನೆ ಮಾಡುವುದರಿಂದ ಎದೆಯಲ್ಲಿ ಕಟ್ಟಿರುವ ಕಫ ಬಹಳ ಬೇಗ ಕರಗುತ್ತದೆ. ಬೆಳಿಗ್ಗೆ ದೊಡ್ಡವರು ಒಂದು ಎಲೆಯನ್ನು ಸೇವನೆ ಮಾಡಬಹುದು. ಚಿಕ್ಕ ಮಕ್ಕಳು ಅರ್ಧ ಎಲೆಯನ್ನು ಸೇವನೆ ಮಾಡಬಹುದು. Betel Leaves

Leave A Reply

Your email address will not be published.