Ultimate magazine theme for WordPress.

Guava Fruit ಪೇರಲೆ ಹಣ್ಣು ಅಥವಾ ಸೀಬೆಹಣ್ಣಿನ ವಿಶೇಷತೆ

0 138

Guava Fruit Health Benefits of Guava Fruit ಪೇರಲೆ ಹಣ್ಣು ಅಥವಾ ಸೀಬೆಹಣ್ಣಿನ ವಿಶೇಷತೆಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳ ಸಾಲಿನಲ್ಲಿ ಸೀಬೆಹಣ್ಣು ಮೊದಲನೇ ಸ್ಥಾನದಲ್ಲಿ ಬರುತ್ತದೆ. ಇದರಲ್ಲಿ ಸಿ ವಿಟಮಿನ್ ಹೇರಳವಾಗಿದೆ. ಸೇಬಿನ ಹಣ್ಣಿಗಿಂತ ಹತ್ತು ಪಟ್ಟು ಪೋಷಕಾಂಶ ಸೀಬೆಹಣ್ಣಿನಲ್ಲಿ ಸಿಗುತ್ತದೆ. ಇದು ಸೇಬಿನ ಹಣ್ಣಿನಷ್ಟು ದುಬಾರಿಯಲ್ಲ, ಬಡವರಿಗೂ ಇದು ಕೈಗೆ ಎಟಕುತ್ತದೆ. ವೈಜ್ಞಾನಿಕವಾಗಿ ಸೀಬೆಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳು ಇರುವುದು ಸಾಬೀತಾಗಿದೆ.

ಸೀಬೆಹಣ್ಣಿನಲ್ಲಿ ಎರಡು ವಿಧಗಳಿವೆ. ವೈಟ್ ಕಲರ್ ಮತ್ತು ಪಿಂಕ್ ಕಲರ್ . ಪಿಂಕ್ ಕಲರ್ ಪೇರಲೆ ಹಣ್ಣು ಬಹಳ ರುಚಿ ಮತ್ತು ಬಹಳ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಲೈಕೋಪಿನ್ ಎಂಬ ಅಂಶವು ಕೆಂಪು ಬಣ್ಣ ಬರಲು ಕಾರಣವಾಗುತ್ತದೆ. ಈ ಕೆಂಪುಬಣ್ಣ ರಕ್ತನಾಳಗಳ ಒಳಭಾಗವನ್ನು ಶುದ್ದೀಕರಿಸುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಲೈಂಗಿಕ ಸಮಸ್ಯೆಗಳಿದ್ದರೇ ಲೈಕೋಪಿನ್ ಸಹಾಯ ಮಾಡುತ್ತದೆ ಆ ಲೈಕೋಪಿನ್ ಅಂಶ ಪೇರಲೆ ಹಣ್ಣಿನಲ್ಲಿದೆ.

ಸೀಬೆಹಣ್ಣನ್ನು ತಿನ್ನುವುದರಿಂದ ಮೊದಲ ದಿನ ಗಂಟಲು ಕೆರೆತ ಆಗುತ್ತದೆ ಕಾರಣ ಅದರಲ್ಲಿರುವ ಹೆಚ್ಚು ವಿಟಮಿನ್ ಸಿ ಯಿಂದ ಆಗುತ್ತದೆ ಹೆದರಬೇಡಿ ಮೂರು ನಾಲ್ಕು ದಿವಸ ತಿಂದು ರೂಢಿ ಮಾಡಿಕೊಂಡರೆ ಹ್ಯೂಮಿನಿಟಿ ಬರುತ್ತದೆ. ಶೀತ, ನೆಗಡಿಯನ್ನ ಕಡಿಮೆ ಮಾಡುವುದಲ್ಲದೇ ಜ್ವರಕ್ಕೆ ಒಳ್ಳೆಯದು. ಮುಖದಲ್ಲಿ ಭಂಗು ಆದರೇ ಅದನ್ನು ತಡೆಗಟ್ಟಲು ಸೀಬೆಹಣ್ಣನ್ನ ಸೇವಿಸಿ. ಕ್ಯಾನ್ಸರ್ ಆಗಲು ಡಿಎನ್ಎ ಗೆ ಆಗಿರುವ ಡ್ಯಾಮೇಜ್ ಕಾರಣವಾಗುತ್ತದೆ ಅದನ್ನು ತಡೆಗಟ್ಟಲು ಸೀಬೆಹಣ್ಣು ಸಹಾಯಕಾರಿಯಾಗಿದೆ. Guava Fruit

ಬೀಟಾ ಕೆರೋಟಿನ್ ಇದೆ. ಕಣ್ಣಿನ ಪೊರೆಯು ಬರದ ರೀತಿಯಲ್ಲಿ ಈ ಪೇರಲೆ ಹಣ್ಣು ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಬೇಕಾಗಿರುವುದು ವಿಟಮಿನ್ ಸಿ, ಇದು ನಮ್ಮ ಹ್ಯುಮಿನಿಟಿಯನ್ನು ಹೆಚ್ಚು ಮಾಡುತ್ತದೆ. ಸಾಮಾನ್ಯವಾಗಿ ನಾವು ತಿಳಿದುಕೊಂಡಿರುವುದು ನಿಂಬೆಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಇದೆ ಎಂದುಕೊಂಡಿದ್ದೀವಿ ಆದರೇ 100 ಗ್ರಾಂ ನಿಂಬೆಹಣ್ಣಿನಲ್ಲಿ 64 ಮಿಲಿಗ್ರಾಂ ವಿಟಮಿನ್ ʻಸಿʼ ಸಿಗುತ್ತದೆ, ಪೇರಲೆ ಹಣ್ಣಿನಲ್ಲಿ 100 ಗ್ರಾಂ ಸೀಬೆಕಾಯಿಯಲ್ಲಿ 337ಮಿಲಿಗ್ರಾಂ ವಿಟಮಿನ್ ʻಸಿʼ ಅಂಶವಿದೆ.

ಇದರಲ್ಲಿ ಹೇರಳವಾಗಿ ಪೊಟಾಷಿಯಂ ಅಂಶ ಹೆಚ್ಚಾಗಿದೆ. ಇದರಲ್ಲಿರುವ ಪೊಟಾಷಿಯಂ ರಕ್ತನಾಳವನ್ನು ಸರಿಯಾಗಿ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತದೆ. ನೈಟ್ರಿಕ್ ಆಸಿಡ್ ಇದ್ದರೇ ಮಾತ್ರ ರಕ್ತನಾಳಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯ. ರಕ್ತದ ಒತ್ತಡವನ್ನು ಕಡಿಮೆ ಮಾಡಲು ಈ ಪೇರಲೆ ಹಣ್ಣು ಸಹಾಯಕಾರಿಯಾಗಿದೆ. ಇದರಲ್ಲಿ ವಿಟಮಿನ್ ಇ, ಕೆ, ವಿಟಮಿನ್ ಬಿ6, ಮಿನರಲ್ಸ್, ಕಾಪರ್, ಮ್ಯಾಂಗನೀಸ್, ಮೆಗ್ನೇಷಿಯಂ ಇದೆ. ಇವೆಲ್ಲವೂ ಹೊಸ ರಕ್ತ ಉತ್ಪಾದನೆಯಾಗಲು ತುಂಬಾ ಸಹಾಯ ಮಾಡುತ್ತದೆ. Guava Fruit

ರಕ್ತಹೀನತೆ ಇರುವವರು ದಿನಕ್ಕೆ ಒಂದು ಅಥವಾ ಎರಡು ಪೇರಲೆ ಹಣ್ಣನ್ನು ತಿನ್ನಬಹುದು. ಇದರಲ್ಲಿರುವ ನಾರಿನಾಂಶ ಸರಿಯಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಊಟದ ಜೊತೆಗೆ ಒಂದು ಪೇರಲೆ ಹಣ್ಣನ್ನು ತಿಂದರೆ ಅನ್ನದ ಜೊತೆ ಸಕ್ಕರೆ ಅಂಶವು ನಿಧಾನಗತಿಯಲ್ಲಿ ದೇಹಕ್ಕೆ ಸೇರುತ್ತದೆ. ಇದರಲ್ಲಿರುವ ನಾರಿನಾಂಶ ಸಕ್ಕರೆಯ ಅಂಶವು ಒಟ್ಟಿಗೆ ದೇಹದಲ್ಲಿ ಹೆಚ್ಚು ಮಾಡುವುದಿಲ್ಲ. ಜೀರ್ಣಕ್ರಿಯೆಗೆ, ಕಣ್ಣಿಗೆ, ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಇದರಲ್ಲಿರುವ ನಾರಿನಾಂಶದಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಪೇರಲೆ ಹಣ್ಣು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಮಬಾಣವಾಗಿ ಕೆಲಸ ಮಾಡುತ್ತದೆ.

Leave A Reply

Your email address will not be published.