Ultimate magazine theme for WordPress.

Jyotirlingas ಮಹಾ ಶಿವರಾತ್ರಿ 2024 | ಭಾರತದ 12 ಜ್ಯೋತಿರ್ಲಿಂಗಗಳು

0 151

Jyotirlingas of India ನಾವು ಈ ಲೇಖನದಲ್ಲಿ ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳ, ಬಗ್ಗೆ ತಿಳಿದುಕೊಳ್ಳೋಣ. ದೇವಾನುದೇವತೆಗಳಲ್ಲಿ ಅತ್ಯಂತ ಪ್ರಮುಖರಾದವರು ಎಂದರೆ, ತ್ರಿಮೂರ್ತಿಗಳಾದಂತಹ ಬ್ರಹ್ಮ, ವಿಷ್ಣು ,ಹಾಗೂ ಮಹೇಶ್ವರರು , ಸೃಷ್ಟಿ , ಸ್ಥಿತಿ ,ಹಾಗೂ ಲಯ ಕಾರ್ಯಗಳ ಹೊಣೆಗಾರಿಕೆ ಅನುಕ್ರಮವಾಗಿ ಈ ತ್ರಿಮೂರ್ತಿಗಳೇ ಆಗಿರುತ್ತಾರೆ. ಲಯ ಕರ್ತನಾದ ಶಿವ ಪರಮಾತ್ಮರನ್ನು ವಿಗ್ರಹ ರೂಪಕ್ಕಿಂತಲೂ, ಲಿಂಗ ರೂಪದಲ್ಲಿ ಪೂಜಿಸುವುದರ ಪದ್ಧತಿ. ನಮ್ಮ ಭಾರತ ದೇಶದಲ್ಲಿ ಅನೇಕ ಶಿವಲಿಂಗಗಳಿವೆ , ಶಿವಾಲಯಗಳಿವೆ.

ಆದರೆ ಅವುಗಲ್ಲೆಲ್ಲಾ 12 ಜ್ಯೋತಿರ್ಲಿಂಗಗಳು ಮಾತ್ರ ಬಹಳ ಮಹತ್ವದ ಶಿವ ಸ್ಥಾನ ಗಳಿಸಿಕೊಂಡಿವೆ. ಈ 12 ಸ್ಥಳಗಳಲ್ಲಿ ಇರುವಂತಹ ಶಿವ ಲಿಂಗಗಳಲ್ಲಿ ಶಿವ ಪರಮಾತ್ಮರು ಸ್ವತಃ ಜ್ಯೋತಿಯ ರೂಪದಲ್ಲಿ ನೆಲೆಸಿರುತ್ತಾರೆ . ಹಾಗಾಗಿ ಅವುಗಳನ್ನು ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವಾಗ, ಲಿಂಗದ ಕೆಳಗೆ ಕನಕಾದಿ ವಸ್ತುಗಳನ್ನೆಲ್ಲಾ ಸೇರಿಸಿ ಮಂತ್ರ ಮತ್ತು ಪ್ರಾಣ ಪ್ರತಿಷ್ಠಾಪನೆಗಳ ಮೂಲಕ ತೇಜಸ್ಸನ್ನು ಆಹ್ವಾನಿಸಲಾಗುತ್ತದೆ. Jyotirlingas

ಆದರೆ ಈ ಜ್ಯೋತಿರ್ಲಿಂಗಗಳಲ್ಲಿ , ಶಿವ ಪರಮಾತ್ಮರ ತೇಜಸ್ಸಿನ ರೂಪದಲ್ಲಿ ನೆಲೆಸಿದ್ದಾರೆ. ಇದೇ ಕಾರಣಕ್ಕಾಗಿ ಜ್ಯೋತಿರ್ಲಿಂಗಗಳಿಂದ, ನಿರಂತರವಾಗಿ ಜ್ಯೋತಿ ಹಾಗು ಪ್ರಚಂಡ ಶಕ್ತಿಗಳು, ಹೊರಹೊಮ್ಮು ತಲಿರುತ್ತವೆ. ಈ ವಿಶಿಷ್ಟವಾದ ಕಾರಣಕ್ಕಾಗಿ ಜ್ಯೋತಿರ್ಲಿಂಗ ದೇವಾಲಯಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆಲ್ಲಾ , ದಿವ್ಯವಾದ ಅನುಭೂತಿ ಉಂಟಾಗುತ್ತದೆ. ಈ 12 ಜ್ಯೋತಿರ್ಲಿಂಗಗಳ ದರ್ಶನ ಮಾತ್ರದಿಂದಲೇ , ಭಕ್ತಾದಿಗಳ ಏಳೇಳು ಜನ್ಮಗಳ ಪಾಪಗಳೂ ಸಹ ನಶಿಸಿಬಿಡುತ್ತವೆ. Jyotirlingas

ಜ್ಯೋತಿರ್ಲಿಂಗ ಅಥವಾ 12 ಜ್ಯೋತಿರ್ಲಿಂಗಗಳ ಉದ್ಭವ ಹಾಗೂ ಮಹಿಮೆಗಳ ಕುರಿತಾಗಿ, ಶಿವ ಪುರಾಣದಲ್ಲಿ ಉಲ್ಲೇಖವಿದೆ. ಜ್ಯೋತಿರ್ಲಿಂಗಗಳು, ಉಗಮಗೊಂಡಿದ್ದು ಹೇಗೆ ಎಂದು ತಿಳಿದುಕೊಳ್ಳೋಣ .ಒಮ್ಮೆ ಬ್ರಹ್ಮದೇವರು ಹಾಗೂ ಮಹಾವಿಷ್ಣು ದೇವರ ನಡುವೆ ಯಾರು ಶ್ರೇಷ್ಠರು ಎಂಬುದರ ಬಗ್ಗೆ ವಾದ ವಿವಾದ ಉಂಟಾಗುತ್ತದೆ. ಅವರಿಬ್ಬರ ನಡುವಿನ ಜಗಳ ಉತ್ತುಂಗಕ್ಕೇರಿದಾಗ , ಶಿವ ಪರಮಾತ್ಮರು ಮೂರು ಲೋಕಗಳಲ್ಲಿಯೂ, ವ್ಯಾಪಿಸಿರುವಂತಹ, ಬೆಳಕಿನ ಅಗ್ನಿಸ್ಥಂಭ ರೂಪದಲ್ಲಿ , ಅವರಿಬ್ಬರ ನಡುವೆ ಪ್ರತ್ಯಕ್ಷರಾಗುತ್ತಾರೆ.

ಈ ಬೆಳಕಿನ ಸ್ತಂಭದ ಆದಿ ಅಥವಾ ಅಂತ್ಯವನ್ನು , ಕಂಡು ಹಿಡಿದವರೇ ಶ್ರೇಷ್ಠರು ಎಂದು ಶಿವ ಪರಮಾತ್ಮರು ಘೋಷಣೆಯನ್ನು ಮಾಡುತ್ತಾರೆ. ಬ್ರಹ್ಮದೇವನು ಹಂಸದ ರೂಪವನ್ನು ತಾಳಿ ಬೆಳಕಿನ ಸ್ತಂಭದ ಮೇಲ್ಮುಖವಾಗಿ ಚಲಿಸಿದರೆ ,ಮಹಾವಿಷ್ಣು ದೇವರು ವರಾಹ ರೂಪವನ್ನು ತಾಳಿ ಬೆಳಕಿನ ಸ್ತಂಭದ ಕೆಳಮುಖವಾಗಿ ತುದಿಯನ್ನು ಹುಡುಕಲು, ಹೊರಡುತ್ತಾರೆ. ಎಷ್ಟೇ ದೂರ ಸಾಗಿದರು,ಅವರಿಬ್ಬರಿಗೂ ಬೆಳಕಿನ ಸ್ತಂಭದ ಆದಿ ಅಥವಾ ಅಂತ್ಯವೇ ದೊರೆಯುವುದಿಲ್ಲ. Jyotirlingas

ಕೊನೆಗೆ ಮಹಾವಿಷ್ಣು ದೇವರು ಹಿಂದಿರುಗಿ ಬಂದು ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬ್ರಹ್ಮ ದೇವರಿಗೆ ಅಷ್ಟು ಸುಲಭವಾಗಿ, ಸೋಲನ್ನಪ್ಪಲು ಮನಸ್ಸಾಗುವುದಿಲ್ಲ . ತಾನು ಬೆಳಕಿನ ಸ್ತಂಭದ ಆದಿಯನ್ನು ತಲುಪಿದ್ದಾಗಿಯೂ , ಇದಕ್ಕೆ ಬೆಳಕಿನ ಸ್ತಂಭದ ನಿತ್ಯ ಮೇಲಿದ್ದಂತಹ , ಕೇದಿಗೆ ಪುಷ್ಪವೇ ಸಾಕ್ಷಿ ಎಂದು ಬ್ರಹ್ಮ ದೇವರು ನುಡಿಯುತ್ತಾರೆ. ಬ್ರಹ್ಮದೇವರ ಸುಳ್ಳಿನಿಂದ ಶಿವ ಪರಮಾತ್ಮ ಅವರಿಗೆ ಕೋಪ ಬಂದು ಬಿಡುತ್ತದೆ. ಈ ಲೋಕದಲ್ಲಿ ನಿನ್ನನ್ನು ಯಾರು ಸಹ ಪೂಜೆ ಮಾಡದಿರಲಿ ಎಂದು ಬ್ರಹ್ಮ ದೇವರನ್ನು ಶಿವ ಪರಮಾತ್ಮರು ಶಪಿಸಿ ಬಿಡುತ್ತಾರೆ .

ನಂತರ ಶಿವ ಪೂಜೆ ಮಾಡುವ ಸಮಯದಲ್ಲಿ ಕೇದಿಗೆ ಹೂವನ್ನು ಬಳಕೆ ಮಾಡದಿರಲಿ , ಎಂದು ಸುಳ್ಳು ಸಾಕ್ಷಿ ನೋಡಿದಂತಹ ಕೇದಿಗೆ ಹೂವನ್ನು , ಸಹ ಶಿವ ಪರಮಾತ್ಮರು ಶಪಿಸಿ ಬಿಡುತ್ತಾರೆ. ಶಿವ.
ಪರಮಾತ್ಮ ರ ಈ ಬೆಳಕಿನ ಸ್ತಂಭದ ಪ್ರಕಾರ ಜ್ಯೋತಿ ಬಿದ್ದ ಸ್ಥಳಗಳಲ್ಲಿ ಸ್ಥಾಪನೆಗೊಂಡ, ಶಿವಲಿಂಗಗಳೇ ಜ್ಯೋತಿರ್ಲಿಂಗಗಳು ಪ್ರತ್ಯಕ್ಷವಾಗಿ ಹೋಗಿ ದರ್ಶಿಸಲು, ಸಾಧ್ಯವಿಲ್ಲದಿದ್ದಲ್ಲಿ ಜ್ಯೋತಿರ್ಲಿಂಗಗಳಿರುವ ಕ್ಷೇತ್ರಗಳ ಮಹಿಮೆಯನ್ನು ಕೇಳಿದರೂ , ಸಾಕು ಭಕ್ತರ ಸಕಲ ಪಾಪಗಳು ಸಹ ಪರಿಹಾರವಾಗುತ್ತದೆ.

ನಮ್ಮ ಪ್ರಾಚೀನ ಗ್ರಂಥಗಳು ಉಲ್ಲೇಖಿಸಿರುವ ನಮ್ಮ ಅಖಂಡ ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ. ಸೋಮನಾಥ ಜ್ಯೋತಿರ್ಲಿಂಗ ಗುಜರಾತ್ ರಾಜ್ಯ .ದ್ವಾದಶ ಜ್ಯೋತಿರ್ಲಿಂಗಗಳಲ್ಲಿ, ಪ್ರಥಮ ಜ್ಯೋತಿರ್ಲಿಂಗವೇ , ಗುಜರಾತ್ ರಾಜ್ಯದ ಖಾತೆವಾಡ ಜಿಲ್ಲೆಯ, ದಕ್ಷಿಣ ತುದಿಯಲ್ಲಿರುವಂತಹ, ಅರಬಿ ಸಮುದ್ರದ ತೀರದಲ್ಲಿರುವ , Jyotirlingas

ಸೋಮನಾಥ ಜ್ಯೋತಿರ್ಲಿಂಗ. ಇದನ್ನು ಪ್ರವಾಸ ಕ್ಷೇತ್ರ ಎಂದು ಕರೆಯಲಾಗುತ್ತದೆ. ಸೋಮ ಎಂದರೆ ಚಂದ್ರ , ನಾಥ ಎಂದರೆ ಒಡೆಯ ಎಂದರ್ಥ. ಅಂದರೆ ಈಶ್ವರ ದೇವರು ಶಿವ ಪುರಾಣದ ಪ್ರಕಾರ ಚಂದ್ರನು ದಕ್ಷ ಪ್ರಜಾಪತಿಯ 27 ಜನ ಹೆಣ್ಣು ಮಕ್ಕಳನ್ನು ಮದುವೆಯಾಗಿರುತ್ತಾನೆ. ಆದರೆ ಅವರಲ್ಲಿ ರೋಹಿಣಿಯ ಕಡೆಗೆ ಮಾತ್ರ ಹೆಚ್ಚು ಒಲವನ್ನು ತೋರಿಸಿ , ಇತರ ಹೆಂಡತಿಯರನ್ನು ಆತ ನಿರ್ಲಕ್ಷ್ಯ ಮಾಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ದಕ್ಷನು, ಚಂದ್ರನಿಗೆ ಕಾಂತಿಯನ್ನು ಕಳೆದುಕೊಳ್ಳುವಂತೆ, ಮಾಡಿ ಬಿಡುತ್ತಾನೆ.

ಕಲಾವಿದನಾಗಿ ದುಃಖತಪ್ತನಾದ ಚಂದ್ರ ಬ್ರಹ್ಮದೇವರ ಸಲಹೆ ಮೇರೆಗೆ ಪ್ರವಾಸ ಕ್ಷೇತ್ರಕ್ಕೆ ,ಆಗಮಿಸಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾನೆ. ಚಂದ್ರ ದೇವನ ಪ್ರಾರ್ಥನೆಗೆ ಮೆಚ್ಚಿದ ಶಿವ ದೇವರು , ಕ್ಷೇತ್ರದ ಶಾಪದ ಪರಿಣಾಮವನ್ನು ತಗ್ಗಿಸುತ್ತಾರೆ. ಪ್ರತಿ ತಿಂಗಳು 15 ದಿನಗಳ ಕಾಲ ಚಂದ್ರ ತನ್ನ ಕಾಂತಿಯನ್ನು ಮರಳಿ ಪಡೆಯುವಂತೆ ಶಿವ ದೇವರು ಆಶೀರ್ವದಿಸುತ್ತಾರೆ . ಚಂದ್ರ ದೇವನೇ ಸ್ಥಾಪಿಸಿ ಪೂಜಿಸಿದ ಶಿವಲಿಂಗವನ್ನು ಸೋಮನಾಥ ಎಂದು ಪೂಜಿಸಲಾಗುತ್ತದೆ. Jyotirlingas

ಶಾಪ ವಿಮೋಚನೆ ಹೊಂದಿದ ಚಂದ್ರ ದೇವನು ಶಿವ ಪರಮಾತ್ಮನಿಗೆ ತನ್ನ ಕೃತಜ್ಞತೆಯನ್ನು ಅರ್ಪಿಸಲು ಈ ಸ್ಥಳದಲ್ಲಿ ಬಂಗಾರದ ದೇವಾಲಯವನ್ನು, ನಿರ್ಮಿಸಿದನಂತೆ. ನಂತರದ ಯುಗಗಳಲ್ಲಿ ಸೂರ್ಯದೇವ ಬೆಳ್ಳಿಯಿಂದಲೂ , ಹಾಗೂ ಶ್ರೀ ಕೃಷ್ಣ ಪರಮಾತ್ಮರು ಶ್ರೀಗಂಧದಿಂದ ಇಲ್ಲಿ ದೇಗುಲಗಳನ್ನು ನಿರ್ಮಿಸಿದರಂತೆ. ಕುತೂಹಲದ ಸಂಗತಿ ಏನೆಂದರೆ, ಚಂದ್ರ ದೇವ ಸ್ಥಾಪಿಸಿದ್ದ ಮೂಲ ಶಿವಲಿಂಗ ಗಾಳಿಯಲ್ಲಿ ಯಾವುದೇ ಆಧಾರವಿಲ್ಲದೆ ತೇಲುತ್ತಿರುತ್ತದೆ.

ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇಗುಲಕ್ಕೆ ,ಇದ್ದಷ್ಟು ದೊಡ್ಡ ಮತ್ತು ರೋಚಕ ಇತಿಹಾಸ ಪ್ರಾಯಶಃ ನಮ್ಮ ದೇಶದಲ್ಲಿ ಬೇರೆ ಯಾವ ದೇವಾಲಯಕ್ಕೂ ಇಲ್ಲ. ಸರಿಸುಮಾರು 16 ಬಾರಿ ಈ ದೇವಸ್ಥಾನ ಅನ್ಯ ಧರ್ಮೀಯರ ದಾಳಿಗೆ ಒಳಗಾಗಿ ಮತ್ತೆ ಅದೇ ಪ್ರದೇಶದಲ್ಲಿ ಮತ್ತೆ ನಿರ್ಮಾಣವಾಗಿ ಗಟ್ಟಿಯಾಗಿ ನಿಂತಿದೆ. ಇದೇ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗದ ಹಿರಿಮೆ. ಪ್ರಸ್ತುತ ನಾವು ಕಾಣಬಹುದಾದಂತಹ ದೇಗುಲವನ್ನು 1951ರ ಇಸವಿಯಲ್ಲಿ ನಿರ್ಮಾಣ ಮಾಡಲಾಗಿದೆ .

ಇನ್ನು ಎರಡನೆಯದಾಗಿ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ . ದ್ವಾದಶ ಜ್ಯೋತಿರ್ಲಿಂಗದಲ್ಲಿ ಎರಡನೆಯ ಜ್ಯೋತಿರ್ಲಿಂಗ. ಆಂಧ್ರಪ್ರದೇಶದ ಕರ್ನೂಲ್ ನಾ ನಲ್ಲ ಮಲ್ಲ ಅರಣ್ಯ ದಲ್ಲಿ ಕೃಷ್ಣ ತೀರದ ಪರ್ವತದ ತುದಿಯಲ್ಲಿ ನೆಲೆಸಿದೆ. ಅದುವೇ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನ . ಈ ಆಲಯವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಅಂದರೆ ಉತ್ತರದಲ್ಲಿರುವ ಕಾಶಿ , ಅಥವಾ ವಾರಣಾಸಿ ಕ್ಷೇತ್ರದಂತೆಯೇ, ದಕ್ಷಿಣದಲ್ಲಿ ಶ್ರೀಶೈಲ ಯಾತ್ರೆ ಬಹಳ ಮೋಕ್ಷದಾಯಕವೆನಿಸುತ್ತದೆ .

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದ ಬಗ್ಗೆ ಕುತೂಹಲಕಾರಿ ವಿಷಯವನ್ನು ಹೊಂದಿದೆ . ಒಮ್ಮೆ ಶಿವ ಪಾರ್ವತಿಯ ಪುತ್ರರಾದ , ಗಣಪತಿ ಹಾಗೂ ಸುಬ್ರಮಣ್ಯ ನಡುವೆ ಯಾರಿಗೆ ಮೊದಲು ವಿವಾಹ ನಡೆಯಬೇಕೆಂಬ ,ವಿಚಾರದಲ್ಲಿ ವಾಗ್ವಾದ ಶುರುವಾಗುತ್ತದೆ. ಆಗ ಶಿವ ಪಾರ್ವತಿಯರು ಈ ಲೋಕವನ್ನು ಯಾರು ಮೊದಲು ಸುತ್ತಿ ಬರುವರು ಅವರಿಗೆ ಮೊದಲು ವಿವಾಹ ಮಾಡಲಾಗುವುದು , ಎಂದು ಸವಾಲನ್ನು ಹಾಕುತ್ತಾರೆ. ತಕ್ಷಣವೇ ಕುಮಾರಸ್ವಾಮಿಯು ಮಯೂರ ವಾಹನವನ್ನೇರಿ , Jyotirlingas

ಭೂ ಪ್ರದಕ್ಷಣೆಗೆ ಹೊರಡುತ್ತಾರೆ. ಚಾಣಕ್ಯರಾದ ವಿಘ್ನೇಶ್ವರರು, ತಮ್ಮ ಮುಷಿಕ ವಾಹನದಿಂದ ಭೂ ಪ್ರದಕ್ಷಿಣೆ ಮಾಡುವುದು ಅಸಾಧ್ಯವೆಂದು ತಿಳಿದು , ತಮ್ಮ ಮಾತಾ ಪಿತೃಗಳ, ಸುತ್ತಲೇ ಮೂರು ಪ್ರದಕ್ಷಿಣೆಗಳನ್ನು ಹಾಕಿ ತಂದೆ-ತಾಯಿಯರ ಪ್ರದಕ್ಷಿಣೆ ಮಾಡುವುದು , ಭೂಪ್ರದಕ್ಷಣೆ ಮಾಡುವುದಕ್ಕೆ , ಸಮ ಎಂದು ತಿಳಿಸುತ್ತಾರೆ. ಸಂತೃಪ್ತರಾದ ಶಿವ ಪಾರ್ವತಿಯರು ಮುಕ್ಕೋಟಿ ದೇವಾನು ದೇವತೆಗಳ, ಸಮಕ್ಷಮದಲ್ಲಿ ಬುದ್ಧಿ ಹಾಗೂ ಸಿದ್ದಿ ದೇವಿಯವರೊಂದಿಗೆ ಗಣೇಶನ ಮದುವೆಯನ್ನು ನೆರವೇರಿಸುತ್ತಾರೆ.

ಭೂಪ್ರದಕ್ಷಣೆಯನ್ನು ಮುಗಿಸಿ ಕೈಲಾಸಕ್ಕೆ ಮರಳಿ ಬಂದ ಕುಮಾರಸ್ವಾಮಿ , ಈ ವಿಷಯವನ್ನು ತಿಳಿದು ಕೋಪಗೊಂಡು ಕೈಲಾಸ ಪರ್ವತದಿಂದ ಹೊರಟು ದಕ್ಷಿಣ ಭಾರತದಲ್ಲಿರುವ ಕ್ರೌಂಚ್ಯ ಪರ್ವತದಲ್ಲಿ ಧ್ಯಾನಸ್ತರಾಗಿ , ಕುಳಿತು ಬಿಡುತ್ತಾರೆ .ಶಿವ ಪಾರ್ವತಿಯರು ಅವರಿಗೆ ಸಮಾಧಾನ ಪಡಿಸಲು ಆಗಮಿಸುತ್ತಾರೆ, ಆದರೆ ಸಮಾಧಾನಗೊಳ್ಳದ, ಕುಮಾರಸ್ವಾಮಿಯು ಅಲ್ಲಿಂದ ಮತ್ತೊಂದು ಸ್ಥಳಕ್ಕೆ ಹೊರಡುತ್ತಾರೆ. ಕುಮಾರಸ್ವಾಮಿಯನ್ನು ಸಮಾಧಾನಪಡಿಸಲು ಬಂದಿದ್ದ ಶಿವ ಪಾರ್ವತಿಯರು

ಆ ಸ್ಥಳದ ಪ್ರಕೃತಿ ಸೌಂದರ್ಯಕ್ಕೆ ಬೆರಗಾಗಿ ಜ್ಯೋತಿ ಸ್ವರೂಪರಾಗಿ ಈ ಕ್ರೌಂಚ್ಯ ಪರ್ವತದಲ್ಲೇ ನೆಲೆಸಿ ಬಿಡುತ್ತಾರೆ . ಶಿವದೇವನು ಮಲ್ಲಿಕಾರ್ಜುನ ಜ್ಯೋತಿರ್ಲಿಂಗವಾಗಿ ಹಾಗೂ ಪಾರ್ವತಿ ದೇವಿ , ಭ್ರಮರಾಂಬ ದೇವಿಯಾಗಿ ನೆಲೆಸಿದಂತಹ, ಪರ್ವತವೇ , ಶ್ರೀಶೈಲ ಎಂದು ಕರೆಸಿಕೊಳ್ಳುತ್ತದೆ. ಕನ್ನಡ ನಾಡಿನ ಶಿವಭಕ್ತೆ , ಶರಣೆಯು ,ಆಗಿದ್ದ ಅಕ್ಕಮಹಾದೇವಿಯು ಸರ್ವಸಂಗ ಪರಿತ್ಯಾಗಿ ಆಗಿ ಮಲ್ಲಿಕಾರ್ಜುನ , ಅರಸುತ್ತಾ ಶ್ರೀಶೈಲಕ್ಕೆ ಆಗಮಿಸಿ ಇಲ್ಲಿರುವಂತಹ , ಕದಲಿ ವನದಲ್ಲಿ ಶಿವ ಪರಮಾತ್ಮರಲ್ಲಿ, ಐಕ್ಯರಾಗುತ್ತಾರೆ ..

ಮೂರನೆಯ ಜ್ಯೋತಿರ್ಲಿಂಗ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿದೆ. ಪುಣ್ಯ ಪ್ರದ ಕ್ಷಿಪ್ರನದಿ ತೀರದಲ್ಲಿರುವ ಉಜ್ಜಯಿನಿ ಒಂದು ಪುರಾತನವಾದ ನಗರ. ಭಾರತದ ಸಪ್ತಮೋಕ್ಷ ಕೇಂದ್ರಗಳಲ್ಲಿ ಉಜ್ಜಯಿನಿಯು ಸಹ ಒಂದು. ಪ್ರಾಚೀನ ಕಾಲದಲ್ಲಿ ಉಜ್ಜಯಿನಿಯನ್ನು ಅವಂತಿಕಪುರ ಎನ್ನಲಾಗುತ್ತಿತ್ತು. ಇಲ್ಲಿ ನೆಲೆಸಿರುವ ಜ್ಯೋತಿರ್ಲಿಂಗ ಮಹಾಕಾಳೇಶ್ವರ ಎಂದು ಕರೆಸಿಕೊಳ್ಳುತ್ತದೆ.

ಇದೇ. ನಗರದಲ್ಲಿ ಶ್ರೀ ಕೃಷ್ಣ ಪರಮಾತ್ಮರು , ತಮ್ಮ ಸಹೋದರ ಬಲ ರಾಮರು ಸುಧಾಮರೊಂದಿಗೆ , ಶಾಂತಿ ಪದಿ ಮುನಿಗಳ ಆಶ್ರಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದರಂತೆ. ಕವಿರತ್ನ ಕಾಳಿದಾಸರು ಸಹ ಇದೇ ನಗರ ವಾಸಿಯಾಗಿದ್ದರು. ಅಲ್ಲದೆ ಉಜ್ಜಯಿನಿ ರಾಜ ವಿಕ್ರಮಾದಿತ್ಯರ ಸ್ಥಳ ಆತ ಬೇತಾಳವನ್ನು ವಶಪಡಿಸಿಕೊಂಡಿದ್ದು , ಆ ಸ್ಥಳದ ವಿಶೇಷವೆಂದರೆ ಮಹಕಾಲೇಶ್ವರ ,ಜ್ಯೋತಿರ್ಲಿಂಗ ಉದ್ಭವ ಲಿಂಗವಾಗಿದ್ದು , ದಕ್ಷಿಣ ಅಭಿಮುಖವಾಗಿದೆ .ಸ್ಥಳ ಪುರಾಣದ ಪ್ರಕಾರ ದೂಷಣ ಎಂಬ ರಾಕ್ಷಸ ಬ್ರಹ್ಮದೇವನ, ಕುರಿತು ತಪಸ್ಸನ್ನು ಆಚರಿಸಿ, ಬ್ರಹ್ಮದೇವರೂ ಪ್ರತ್ಯಕ್ಷವಾದ ನಂತರ ಅಮರನಾಗುವ ವರವನ್ನು ಬೇಡಿಕೊಳ್ಳುತ್ತಾನೆ.

ಆದರೆ ಅಮರತ್ವದ ವರವನ್ನು ನೀಡುವುದು ಸಾಧ್ಯವಿಲ್ಲವಾದುದ್ದರಿಂದ , ದೂಷಣ ರಾಕ್ಷಸನನ್ನು ಯಾರಾದರೂ ಒಬ್ಬ ಶಿವಭಕ್ತನನ್ನು ಹಿಂಸಿಸಿದರೆ ಮಾತ್ರ ಆತನು ಬಸ್ಮನಾಗಿ ಬಿಡುತ್ತಾನೆಂದು, ಬ್ರಹ್ಮದೇವನು ವರ ನೀಡುತ್ತಾರೆ . ಹೀಗೆ ವರವನ್ನು ಪಡೆದ ದೂಷಣ ಅವಂತಿಕ ಪುರದಲ್ಲಿ ಇದ್ದಂತಹ ಪ್ರಜೆಗಳನ್ನೆಲ್ಲಾ ಹಿಂಸೆ ಕೊಡಲು ಶುರು ಮಾಡುತ್ತಾನೆ .ಅದೇ ಸಮಯದಲ್ಲಿ ಶ್ರೀಕರ ಎಂಬ ಮಹಾಶಿವ ಭಕ್ತ ಬಾಲಕನೊಬ್ಬ ಶಿವಲಿಂಗದ ಮುಂದೆ ಕುಳಿತು ಪೂಜೆಯನ್ನು, ಮಾಡುತ್ತಿರುತ್ತಾನೆ, ದೂಷಣ , Jyotirlingas

ಶ್ರೀಕರ ನು ಪೂಜೆಯನ್ನು, ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಆತನಿಗೆ ಪೂಜೆಯನ್ನು ನಿಲ್ಲಿಸಲು ಹೇಳುತ್ತಾನೆ. ಆದರೆ ಶಿವಪೂಜೆಯಲ್ಲಿ ತಲ್ಲಿನ ನಾಗಿದ್ದ ಶ್ರೀಕರ ದೂಷಣ ಮಾತುಗಳನ್ನು, ಕೇಳಿಸಿಕೊಳ್ಳುವುದಿಲ್ಲ. ಇದರಿಂದ ಕೋಪಗೊಂಡ ದೂಷಣ, ತನ್ನ ಗದೆಯಿಂದ ಶಿವಲಿಂಗದ ಮೇಲೆ ಪ್ರಹಾರ ಮಾಡುತ್ತಾನೆ. ತಕ್ಷಣವೇ ಶಿವಲಿಂಗದಿಂದ ಅಗ್ನಿ ಹೊರಬಂದು, ದೂಷಣನನ್ನು ಸುಟ್ಟು ಬೂದಿ ಮಾಡಿ ಬಿಡುತ್ತದೆ. ನಂತರ ಶಿವ ಪರಮಾತ್ಮರು ಪ್ರತ್ಯಕ್ಷರಾಗಿ , ದೂಷಣನ ಬಸ್ಮವನ್ನೇ ತಮ್ಮ ಶರೀರಕ್ಕೆಲ್ಲಾ ಲೇಪಿಸಿಕೊಳ್ಳುತ್ತಾರೆ.

ಶ್ರೀಕರನ ಭಕ್ತಿಗೆ ಮೆಚ್ಚಿ ಅಲ್ಲಿಯೇ, ಮಹಾಕಾಳರಾಗಿ ಶಿವ ದೇವರು ನೆಲೆಸಿಬಿಡುತ್ತಾರೆ. ಇದೇ ಕಾರಣಕ್ಕಾಗಿ ಬೇರೆ ಯಾವ ಶಿವಾಲಯ ದೇವಾಲಯಗಳಲ್ಲಿಯೂ, ಮಾಡಲಾಗದಂತಹ ಬಸ್ಮ ದ ಆರತಿಯನ್ನು , ಉಜ್ಜೈನಿಯ ಮಹಾಕಾಳೇಶ್ವರರಿಗೆ, ಮಾಡಲಾಗುತ್ತದೆ. ಬಸ್ಮಾರುತಿ ಪ್ರತಿದಿನ ಮುಂಜಾನೆ 4:00ಗೆ ಇಲ್ಲಿ ನಡೆಯುತ್ತದೆ. ಮೊದಮೊದಲು ಹಿಂದಿನ ದಿನ ಮರಣ ಹೊಂದಿ , ಸುಟ್ಟ ಶವದ ಬಸ್ಮವನ್ನು ತಂದು , ಈ ಬಸ್ಮ ಆರತಿಯನ್ನು ಮಾಡಲಾಗುತ್ತಿತ್ತು .ಆದರೆ ಇತ್ತೀಚಿನ ದಿನಗಳಲ್ಲಿ ಬೆರಣಿ ತಂದು ಸುಟ್ಟ ಬಸ್ಮದಿಂದಲೇ, ಭಸ್ಮಾ ಆರತಿಯನ್ನು ಮಾಡಲಾಗುತ್ತದೆ . Jyotirlingas

ಮಧ್ಯಪ್ರದೇಶ ರಾಜ್ಯ ಓಂಕಾರೇಶ್ವರ ಜ್ಯೋತಿರ್ಲಿಂಗ ಮೂರನೆಯ ಜ್ಯೋತಿರ್ಲಿಂಗವಾಗಿದೆ. ಮಧ್ಯಪ್ರದೇಶದ , ಕಾಂಡ್ವಾ ಜಿಲ್ಲೆಯಲ್ಲಿ ಪ್ರವೇಶಿಸುತ್ತಿರುವ ನರ್ಮದಾ ನದಿಯ ಮಧ್ಯದಲ್ಲಿ, ಇರುವಂತಹ ಮಂದಾತಾ ಎಂಬ ದ್ವೀಪದಲ್ಲಿದೆ. ಈ ದ್ವೀಪ ನೋಡಲು ಸಂಸ್ಕೃತದ ಓಂಕಾರದ ರೂಪದಲ್ಲಿರುವುದರಿಂದ , ಶಿವ ದೇವರಿಗೆ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ವಿಶೇಷವೆಂದರೆ, ಓಂಕಾರೇಶ್ವರ ಜ್ಯೋತಿರ್ಲಿಂಗ ಎರಡು ಸ್ವರೂಪಗಳಲ್ಲಿ ಇದೆ. ಒಂದು ಲಿಂಗವನ್ನು ಓಂಕಾರೇಶ್ವರ ಎಂದು ಮತ್ತೊಂದು ಲಿಂಗವನ್ನು ಅಮರೇಶ್ವರ ಎಂದು ಇಲ್ಲಿ ಪೂಜಿಸಲಾಗುತ್ತದೆ. ಓಂಕಾರೇಶ್ವರ ಲಿಂಗವು ನರ್ಮದಾ ನದಿಯ ಮಧ್ಯದಲ್ಲಿ ಮಂದಾತಾ ದ್ವಿಪದಲ್ಲಿದೆ.

ಅಮರೇಶ್ವರ ಲಿಂಗವು ನರ್ಮದಾ ನದಿಯ ದಕ್ಷಿಣ ತೀರದಲ್ಲಿದೆ. ಈ ಎರಡು ಶಿವಲಿಂಗಗಳನ್ನು ಜೊತೆಯಾಗಿಯೇ , ಓಂಕಾರೇಶ್ವರ ಜ್ಯೋತಿರ್ಲಿಂಗ. ಎಂದು ಕರೆಯಲಾಗುತ್ತದೆ. ಸ್ಥಳ ಪುರಾಣದ ಪ್ರಕಾರ ಒಂದು ಬಾರಿ ನಾರದ ಮಹರ್ಷಿಗಳು , ವಿಂಧ್ಯ ಪರ್ವತದ ಬಳಿ ಬಂದು ಮೇರು ಪರ್ವತ ನಿನಗಿಂತ ಎತ್ತರವಾಗಿದೆ, ಹಾಗಾಗಿ ಮೇರು ಪರ್ವತವೇ ಶ್ರೇಷ್ಠ .ಎಂದು ಹೇಳುತ್ತಾರೆ.ಇದನ್ನು ಕೇಳಿಸಿಕೊಂಡು ಮನದಂತ ವಿಂದ್ಯ ಪವರ್ತ ಶಿವ ದೇವರನ್ನು ಕುರಿತು ಘೋರ ತಪಸನ್ನು, ಮಾಡ ತೊಡಗುತ್ತಾನೆ.

ಶಿವ ದೇವರು ಪ್ರತ್ಯಕ್ಷರಾದಾಗ , ತಾನು ಎತ್ತರಕ್ಕೆ ಬೆಳೆಯುವಂತೆ ,ವರವನ್ನು ಕರುಣಿಸು ಎಂದು ವಿಂದ್ಯ ಪರ್ವತ ಕೇಳುತ್ತಾನೆ. ಶಿವ ದೇವರು ವಿಂದ್ಯಾನ ಬೆಳವಣಿಗೆಯಿಂದ ಯಾರಿಗೂ ತೊಂದರೆ ಆಗಬಾರದೆಂಬ , ಷರತ್ತಿನೊಂದಿಗೆ ಆತನ ಇಚ್ಛೆಯನ್ನು ಪೂರೈಸುತ್ತಾರೆ. ತದನಂತರ ವಿಂದ್ಯಾ ಪರ್ವತದ ಎರಡು ಬದಿಗಳಲ್ಲಿ ಓಂಕಾರೇಶ್ವರ, ಹಾಗೂ ಅಮರೇಶ್ವರ , ಎಂಬ ಜ್ಯೋತಿರ್ಲಿಂಗಗಳ ರೂಪದಲ್ಲಿ ಶಿವ ದೇವರು ನೆಲೆಸುತ್ತಾರೆ . ಕಾಲ ನಂತರ ಶಿವ ದೇವರ ಷರತನ್ನು ಮರೆತ ವಿಂದ್ಯಾ ಆಕಾಶದ, ಎತ್ತರಕ್ಕೆ ಬೆಳೆದುಬಿಡುತ್ತಾನೆ.

ಇದರಿಂದ ಸೂರ್ಯ ಚಂದ್ರರ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಆ ಸಮಯದಲ್ಲಿ ದಕ್ಷಿಣದ ಕಡೆಗೆ, ಹೊರಟಿದ್ದ ಅಗಸ್ತ್ಯರು ವಿಂದ್ಯಾನ ಸಮೀಪಕ್ಕೆ ಬರುತ್ತಾರೆ .ಅವರಿಗೆ ವಿಂಧ್ಯ ಬಾಗಿ ನಮಸ್ಕರಿಸುತ್ತಾನೆ. ಅಗಸ್ತ್ಯರು ಆತನನ್ನು ತುಳಿದುಕೊಂಡು ದಾಟಿ ಆಚೆಗೆ ಬಂದು, ತಾನು ದಕ್ಷಿಣಕ್ಕೆ ಹೋಗಿ ಬರುವವರೆಗೂ ಹೀಗೆ ತಲೆಭಾಗಿಸಿ, ನಿಂತಿರು ಎಂದು ಆಜ್ಞೆಯನ್ನು ನೀಡುತ್ತಾರೆ. ಆನಂತರ ದಕ್ಷಿಣದ ಕಡೆ ಬಂದಂತಹ ಅಗಸ್ತ್ಯರು, ಮರಳಿ ಹೋಗುವುದೇ ಇಲ್ಲ . ಆ ಕ್ಷಣದಿಂದ ವಿಂಧ್ಯನು ಬೆಳೆಯುವುದನ್ನು , ನಿಲ್ಲಿಸಿ ಬಿಡುತ್ತಾನೆ .ಈ ಕ್ಷೇತ್ರದಲ್ಲಿ ನರ್ಮದ ನದಿದಲ್ಲಿ ಮಿಂದು ಓಂಕಾರೇಶ್ವರ ಹಾಗೂ ಅಮರೇಶ್ವರರ ದರ್ಶನವನ್ನು, ಪಡೆಯುವವರ ಸಕಲ ಇಷ್ಟಾರ್ಥಗಳು , ಸಹ ಶೀಘ್ರವೇ ಈಡೇರುತ್ತವೆ.

ಇನ್ನು ಐದನೆಯ ಜ್ಯೋತಿರ್ಲಿಂಗ ಕೇದಾರೇಶ್ವರ, ಜ್ಯೋತಿರ್ಲಿಂಗವಾಗಿದೆ . ಉತ್ತರಕಾಂಡ ರಾಜ್ಯದಲ್ಲಿ , ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ,ಸಮುದ್ರ ಮಟ್ಟಕ್ಕಿಂತಲೂ ಸುಮಾರು 11 ಸಾವಿರದ 759 ಅಡಿಷ್ಟು ಎತ್ತರದಲ್ಲಿ ನೆಲೆ ನಿಂತಿರುವ ಕೇದಾರನಾಥ ದೇವಾಲಯ. ಚೋಟ ಚಾರ್ ದಾಮ್ ಯಾತ್ರೆಯ ಭಾಗವಾಗಿದೆ. ಕೇದಾರ ನಾಥವು ಮಂದಾಕಿನಿ ನದಿಯ ದಡದಲ್ಲಿ, ನಿಂತಿದೆ. ಕೇದಾರನಾಥ ಕ್ಷೇತ್ರಕ್ಕೆ ವರ್ಷಪೂರ್ತಿ ಹೋಗಲಾಗುವುದಿಲ್ಲ .ಒಂದು ನಿಗದಿತ ಸಮಯದಲ್ಲಿ ಮಾತ್ರ ಈ ದೇಗುಲಕ್ಕೆ ತೆರಳಬಹುದು .

ಮಿಕ್ಕ ಸಮಯದಲ್ಲಿ ಇಡೀ ಕೇದಾರನಾಥ ಹಿಮದಿಂದ ಮುಚ್ಚಲ್ಪಟ್ಟಿರುತ್ತದೆ. ಕೇದಾರನಾಥದಲ್ಲಿರುವ ಜ್ಯೋತಿರ್ಲಿಂಗ ಗೂಳಿಯ ಬೆನ್ನಿನ ಆಕಾರದಲ್ಲಿದೆ . ಇದಕ್ಕೆ ಒಂದು ಪೌರಾಣಿಕ ಕಾರಣವೂ ಇದೆ. ದ್ವಾಪರ ಯುಗದ ಕುರುಕ್ಷೇತ್ರ ಯುದ್ಧದಲ್ಲಿ , ತಮ್ಮ ಸಂಬಂಧಿಕರನ್ನೆಲ್ಲ ಕೊಂದಂತಹ ಪಾಂಡವರು ದೋಷ ಪರಿಹಾರವನ್ನು ,ಮಾಡಿಕೊಳ್ಳಲು ಕಾಶಿಗೆ ಶಿವ ದೇವರನ್ನು ಆರಾಧಿಸಲು, ಆಗಮಿಸುತ್ತಾರೆ.ಆದರೆ ಪಾಂಡವರ ಕೃತ್ಯದ ವಿರುದ್ಧ ಕೋಪಗೊಂಡಿದ್ದಂತಹ ಶಿವ ಪರಮಾತ್ಮರು ಅವರಿಗೆ ದರ್ಶನವನ್ನು ,ನೀಡಲು ನಿರಾಕರಿಸಿ ಕಾಶಿಯಿಂದ, ಮಾಯವಾಗಿ, ಕೇದಾರನಾಥಕ್ಕೆ ಬಂದು ಅಲ್ಲಿನ ಹುಲ್ಲುಗಾವಲುಗಳಲ್ಲಿ ಮೇಯುತ್ತಿದ್ದ ,

ಗೋವುಗಳ ಜೊತೆಗೆ ನಂದಿಯ ರೂಪದಲ್ಲಿ ಅಡಗಿ ಕುಳಿತುಬಿಡುತ್ತಾರೆ. ಶಿವದೇವರನ್ನು ಹುಡುಕುತ್ತಾ, ಕೇದಾರನಾಥಕ್ಕೆ , ಪಾಂಡವರು ಆಗಮಿಸುತ್ತಾರೆ. ಅಲ್ಲಿ ಭೀಮನು ಬೃಹದಾಕಾರವನ್ನು ತಾಳಿ ಎರಡು ಬೆಟ್ಟಗಳ ನಡುವೆ ತನ್ನ ಕಾಲನ್ನು, ಇಟ್ಟು ನಿಂತುಬಿಡುತ್ತಾನೆ .ಬೇರೆಲ್ಲಾ ಜಾನುವಾರುಗಳು , ಭೀಮನ ಕಾಲುಗಳ ನಡುವೆ ನುಸುಳಿ ತೆರಳುತ್ತವೆ. ಆದರೆ ನಂದಿಯ ರೂಪದಲ್ಲಿದ್ದ ಶಿವ ದೇವರು ಮಾತ್ರ ಹಾಗೆ ಮಾಡದೇ, ಭೀಮನಿಂದ ತಪ್ಪಿಸಿಕೊಳ್ಳುತ್ತಾರೆ. ಆಗ ನಂದಿಯನ್ನು ಹಿಂಬಾಲಿಸುತ್ತಾ , ಭೀಮ ಓಡತೊಡಗುತ್ತಾನೆ.

ಆ ಸಮಯದಲ್ಲಿ ಶಿವ ದೇವರು ಭೂಮಿಯಲ್ಲಿ, ಅಂತರ್ಗತರಾಗುತ್ತಾರೆ . ಶಿವ ದೇವರು ಭೂಮಿಯಲ್ಲಿ ಅಂತರ್ಗತರಾಗುವ, ವೇಳೆಯಲ್ಲಿಯೇ ನಂದಿಯ ಬೆನ್ನಿನ ಮೇಲಿನ ಗೋನನ್ನು , ಭೀಮ ಹಿಡಿದು ಎಳೆದುಬಿಡುತ್ತಾನೆ. ಆಗ ಶಿವಪರಮಾತ್ಮರು ಹಿಮಾಲಯದ ಐದು ಭಾಗಗಳಲ್ಲಿ , ನಂದಿಯ ಐದು ಅಂಗಗಳ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ. ಕೇದಾರನಾಥದಲ್ಲಿ ಗೂನಿನ ಭಾಗ, ತುಂಗ ನಾಥದಲ್ಲಿ ತೋಳು, ಕಲ್ಪ ನಾಥನ ಭಾಗದಲ್ಲಿ ಜಡೆಯ ಭಾಗ, ರುದ್ರ ನಾಥದಲ್ಲಿ ಮುಖದ ಭಾಗ, ಮಧ್ಯ ಮಹೇಶ್ವರನ ಭಾಗದಲ್ಲಿ ಉದರ ಭಾಗಗಳು ಪ್ರತ್ಯಕ್ಷವಾಗುತ್ತವೆ. ಪಾಂಡವರು 5 ಕ್ಷೇತ್ರಗಳಿಗೆ ತೆರಳಿ , ಶಿವ ದೇವರನ್ನು ಆರಾಧನೆ ಮಾಡಿ ತಮ್ಮ ಪಾಪ ಕರ್ಮಗಳಿಂದ ಮುಕ್ತಗೊಳ್ಳುತ್ತಾರೆ. Jyotirlingas

ಇನ್ನೂ ಆರನೆಯ ಜ್ಯೋತಿರ್ಲಿಂಗ. ಭೀಮಶಂಕರ ಜ್ಯೋತಿರ್ಲಿಂಗ. ಮಹಾರಾಷ್ಟ್ರದ ಪುಣೆಯಿಂದ 110 ಕಿಲೋಮೀಟರ್ ದೂರದಲ್ಲಿ ಕೃಷ್ಣಾ ನದಿ ಉಪನದಿಯಾದ ಭೀಮ ನದಿ ಉದ್ಭವಿಸುವಂತಹ, ಸಹ್ಯಾದ್ರಿಯ ತಪ್ಪಲಿನಲ್ಲಿಯೇ, ಭೀಮಶಂಕರ, ಜ್ಯೋತಿರ್ಲಿಂಗವಿದೆ. ಇಲ್ಲಿರುವ ಲಿಂಗದ ಮಧ್ಯೆ ಗೆರೆ ಒಂದಿದ್ದು. ಶಿವಶಕ್ತಿ ಸ್ವರೂಪವಾಗಿದೆ. ಇನ್ನು ಇದನ್ನು ಅರ್ಧನಾರೀಶ್ವರ ರೂಪ ಎನ್ನಲಾಗುತ್ತದೆ .ಸ್ಥಳ ಪುರಾಣದ ಪ್ರಕಾರ ಕುಂಭಕರ್ಣನ ಮಗ ಭೀಮಾಸುರ ಎನ್ನುವವನು ತಂದೆಯ ಸಾವಿನ ಪ್ರತಿಕಾರವನ್ನು ತೀರಿಸಿಕೊಳ್ಳಲು , ಅಗಾದ ಶಕ್ತಿಯನ್ನು ಪಡೆಯಲು ಇಚ್ಚಿಸುತ್ತಾನೆ.

ಬ್ರಹ್ಮದೇವನನ್ನು ಕುರಿತು ತಪಸ್ಸನ್ನು ಮಾಡಿ ಬ್ರಹ್ಮದೇವರ ವರಪ್ರಸಾದದಿಂದ, ಮಹಾಪರಾಕ್ರಮಿಯಾಗುತ್ತಾನೆ . ದೇವಾನು ದೇವತೆಗಳನ್ನು , ಪೀಡಿಸತೊಡಗುತ್ತಾನೆ . ಭೂ ಲೋಕದಲ್ಲಿಯೂ ಸಹ ದಂಡ ಯಾತ್ರೆಯನ್ನು ಕೈಗೊಳ್ಳುತ್ತಾ , ಕಾಮ ರೂಪ ರಾಜ್ಯದ ದೊರೆಯಾದ ಷಮಹಾನ್ ಶಿವ ಭಕ್ತ ಸುದ್ಗುಣನು, ಕಾರಾಗೃಹದಲ್ಲಿ, ಹಿಡಿಸಿ ಬಿಡುತ್ತಾನೆ. ಆ ಸಮಯದಲ್ಲಿ ಬಂದಿಕೊನೆಯಲ್ಲಿದ್ದ , ಸುದ್ಗುಣ ಶಿವಲಿಂಗವನ್ನು ಸ್ಥಾಪಿಸಿ ಶಿವ ಪರಮಾತ್ಮರನ್ನು ಪ್ರಾರ್ಥಿಸ ತೊಡಗುತ್ತಾನೆ.

ಈ ವಿಷಯ ತಿಳಿದ ಭೀಮಾಸುರ ಬಂದಿಖಾನೆಗೆ ಬಂದು , ಶಿವಲಿಂಗದ ಮೇಲೆ ಖಡ್ಗವನ್ನು , ಬೀಸುತ್ತಾನೆ. ಶಿವಲಿಂಗಕ್ಕೆ ಖಡ್ಗ ತಾಗುವ ಮುನ್ನವೇ ,ಶಿವಪರಮಾತ್ಮರು ಲಿಂಗದಿಂದ ಪ್ರತ್ಯಕ್ಷರಾಗಿ ಭೀಮಾಸುರರನ್ನು ,ಸಂಹಾರ ಮಾಡುತ್ತಾರೆ . ನಂತರ ಲೋಕಕಲ್ಯಾಣಕ್ಕಾಗಿ ಶಿವ ದೇವರು ಜ್ಯೋತಿ ಸ್ವರೂಪರಾಗಿ ಇಲ್ಲೇ ನೆಲೆಸಿಬಿಡುತ್ತಾರೆ. ಭೀಮಾಸೂರ ಎಂಬ ಅಸುರನಿಂದ ಒದಗಿ ಬರುವ ವಿಪತ್ತನ್ನು , ತಡೆದಿದ್ದರಿಂದ ಶಿವ ದೇವರು ಭೀಮಾಶಂಕರ. ಎಂಬ ಹೆಸರನ್ನು ಪಡೆದುಕೊಳ್ಳುತ್ತಾರೆ.

ಇನ್ನೂ 7ನೇ ಜ್ಯೋತಿರ್ಲಿಂಗ ಕಾಶಿ ವಿಶ್ವನಾಥ ಜ್ಯೋತಿರ್ಲಿಂಗವಾಗಿದೆ . ಕಾಶಿ ವಿಶ್ವನಾಥ ದೇಗುಲ ನಮ್ಮ ಭಾರತ ದೇಶದಲ್ಲಿಯೇ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಒಂದು ಪ್ರಮುಖವಾದ ಜ್ಯೋತಿರ್ಲಿಂಗ. ಈ ಜ್ಯೋತಿರ್ಲಿಂಗ ಉತ್ತರ ಪ್ರದೇಶದ ರಾಜ್ಯದ ಪವಿತ್ರ ಗಂಗಾ ನದಿಯ ತೀರದಲ್ಲಿ ನೆಲಸಿದೆ .ಕಾಶಿಗೆ ಹೋಗಿ ಬಂದರೆ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ. ಎಂಬ ನಂಬಿಕೆ ಇದೆ. ಕಾಶಿ ಕ್ಷೇತ್ರದಲ್ಲಿ ಮರಣ ಹೊಂದಿದವರಿಗೆ ಪುನರ್ಜನ್ಮವೇ ಇರುವುದಿಲ್ಲ .ಅವರೆಲ್ಲರೂ ಜನನ ಮರಣಗಳ ಚಕ್ರದಿಂದ ಮುಕ್ತಿಯನ್ನು , ಪಡೆದುಕೊಳ್ಳುತ್ತಾರೆ. ಹಾಗಾಗಿ ಅನಾದಿಕಾಲದಿಂದಲೂ , ಭಾರತ ದೇಶದಲ್ಲಿ ಕಾಶಿಯಾತ್ರೆಗೆ ಬಹಳ ಪ್ರಾಮುಖ್ಯತೆಯಿದೆ .

ಕಾಶಿ ಈ ಪ್ರಪಂಚದ ಅತ್ಯಂತ ಪುರಾತನ ನಗರಗಳಲ್ಲಿ ಒಂದು. ಕಾಶಿ ಕ್ಷೇತ್ರ ಭಾರತದ ಸಪ್ತಮೋಕ್ಷ ಕ್ಷೇತ್ರಗಳಲ್ಲಿ, ಒಂದೇನಿಸಿಕೊಳ್ಳುತ್ತದೆ, ಕಾಶಿ ಸೃಷ್ಟಿಯ ಪ್ರಾರಂಭಕ್ಕೂ ಮೊದಲು ಶಿವ ಪರಮಾತ್ಮರೆ ನಿರ್ಮಾಣ ಮಾಡಿದ ನಗರ . ಸೃಷ್ಟಿಯ ಪ್ರಾರಂಭಕ್ಕೂ ಮೊದಲು ಶಿವ ಪರಮಾತ್ಮರು ಕಾಶಿ ಎಂಬ ಸುಂದರ ನಗರವನ್ನು ನಿರ್ಮಾಣ ಮಾಡುತ್ತಾರೆ, ನಂತರ ಶ್ರೀ ಹರಿ ದೇವರು ಶಿವ ದೇವರು, ನಿರ್ಮಿಸಿದ ಆ ನಗರದಲ್ಲಿ ತಪಸ್ಸನ್ನು ಮಾಡತೊಡಗುತ್ತಾರೆ. ಆಗ ಶ್ರೀ ಹರಿಯವರ ನಾಭಿಯಿಂದಲೇ ಬ್ರಹ್ಮದೇವರು ಉದ್ಭವಿಸುತ್ತಾರೆ.

ನಂತರ ಬ್ರಹ್ಮದೇವರು ಇಡೀ ಬ್ರಹ್ಮಾಂಡವನ್ನೇ ನಿರ್ಮಿಸುತ್ತಾರೆ. ಬ್ರಹ್ಮ ದೇವರು ಸೃಷ್ಟಿಸಿದ ಜೀವಿಗಳಿಗೆ ಸೃಷ್ಟಿಯಿಂದಲೇ, ಸಂಸಾರ ಸಾಗರದಿಂದ, ಮುಕ್ತಿಯನ್ನು ನೀಡಬೇಕಾಗಿರುವ, ಉದ್ದೇಶದಿಂದ ಶಿವ ಪರಮೇಶ್ವರರು ತಾವು ನಿರ್ಮಿಸಿರುವ ಸುಂದರ ನಗರವನ್ನು , ಅಂದರೆ ಕಾಶಿಯನ್ನು ಭೂಮಂಡಲದಲ್ಲಿ, ಸೇರಿಸುತ್ತಾರೆ . ತದನಂತರ ಮಹಾವಿಷ್ಣು, ಹಾಗೂ ಬ್ರಹ್ಮದೇವರ ಪ್ರಾರ್ಥನೆಯನ್ನು, ಮನ್ನಿಸಿ ಕಾಶಿ ಕ್ಷೇತ್ರದಲ್ಲಿಯೇ, ವಿಶ್ವೇಶ್ವರರು ಜ್ಯೋತಿರ್ಲಿಂಗವಾಗಿ ಉಗಮಿಸುತ್ತಾರೆ .

ಕಾಶಿಯಲ್ಲಿ ವಿಶ್ವೇಶ್ವರ ಜ್ಯೋತಿರ್ಲಿಂಗಕ್ಕೆ ಸ್ವತಹ ಭಕ್ತಾದಿಗಳೇ, ಗಂಗಾಜಲದಿಂದ ಅಭಿಷೇಕವನ್ನು ಮಾಡಬಹುದು. ಕಾಶಿಯಲ್ಲಿ ಗಂಗಾ ನದಿಗೆ ಹಲವಾರು ಘಾಟ್ ಗಳಿವೆ. ಇವುಗಳಲ್ಲಿ ಹರಿಶ್ಚಂದ್ರ ಘಾಟ್ ಅತ್ಯಂತ ಪ್ರಸಿದ್ಧವಾಗಿದ್ದು . ಪೌರಾಣಿಕ ಮಹತ್ವವನ್ನು ಹೊಂದಿದೆ. ಇಲ್ಲಿ ಮೃತ ದೇಹಗಳನ್ನು ಸರತಿ ಸಾಲಿನಲ್ಲಿ ಸುಡಲಾಗುತ್ತದೆ. ಹಿಂದೆ ಸತ್ಯ ಹರಿಶ್ಚಂದ್ರರು ಇದೇ ಹರಿಚಂದ್ರ ಘಾಟ್ ನಲ್ಲಿ ಕಾವಲನ್ನು ಕಾಯುತ್ತಿದ್ದರಂತೆ.

ಇನ್ನು ಎಂಟನೆಯ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ. ಜ್ಯೋತಿರ್ಲಿಂಗವಾಗಿದೆ. ಮಹಾರಾಷ್ಟ್ರದ ನಾಸಿಕ್ ನಗರದಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಗೋದಾವರಿ ನದಿಯ ಉಗಮ ಸ್ಥಾನದ ಬಳಿಯೇ ತ್ರಯಂಬಕೇಶ್ವರ ಜ್ಯೋತಿರ್ಲಿಂಗ ಸ್ಥಿತವಾಗಿದೆ. ಸಾಮಾನ್ಯವಾಗಿ ಭಾರತದ ಎಲ್ಲಾ ಜ್ಯೋತಿರ್ಲಿಂಗಗಳು ಶಿವಪ್ರಧಾನ ವಾಗಿರುತ್ತವೆ. ಆದರೆ ತ್ರಯಂಬಕೇಶ್ವರನ ವೈಶಿಷ್ಟ್ಯವೆಂದರೆ , ಇಲ್ಲಿನ ಜ್ಯೋತಿರ್ಲಿಂಗ ಮೂರು ಮುಖಗಳನ್ನು ಹೊಂದಿದೆ .

ಈ ಮುಖಗಳು ಬ್ರಹ್ಮ , ವಿಷ್ಣು , ಹಾಗೂ ಮಹೇಶ್ವರರ , ಪ್ರತಿಕವಾಗಿವೆ . ಇದೇ ಕಾರಣಕ್ಕಾಗಿ, ಶಿವಲಿಂಗಕ್ಕೆ ತ್ರಯಂಬಕೇಶ್ವರ ಎಂಬ ಹೆಸರು ಬಂದಿದೆ. ತ್ರಯಂಬಕೇಶ್ವರದಲ್ಲಿ, ಉಷಾವರ್ತಿ ,ಎಂಬ ಪವಿತ್ರ ಕಲ್ಯಾಣಿ ಇದೆ. ಬ್ರಹ್ಮಗಿರಿ ಬೆಟ್ಟದ ಸಾಲಿನಲ್ಲಿ ಉದ್ಭವಿಸುವ, ಗೋದಾವರಿ ನದಿ ಈ ಕುಂಡಕ್ಕೆ ಬರುತ್ತದೆ. ಹಾಗಾಗಿ ಈ ಕಲ್ಯಾಣಿಯಲ್ಲಿ , ಶ್ರದ್ದಾಳುಗಳು ಪವಿತ್ರ ಸ್ನಾನವನ್ನು ಕೈಗೊಂಡು ಆ ನಂತರ ತ್ರಯಂಬಕೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ.

ಸ್ಥಳ ಪುರಾಣದ ಪ್ರಕಾರ ಗೌತಮ ಮುನಿಗಳು ಪ್ರಸ್ತುತ ತ್ರಯಂಬಕೇಶ್ವರನ ದೇಗುಲ ಪಕ್ಕ ಸ್ಥಿತ ಇರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಪತ್ನಿ ಅಹಲ್ಯಾ , ಜೊತೆ ಆಶ್ರಮವನ್ನು ಕಟ್ಟಿಕೊಂಡು ವಾಸವಿರುತ್ತಾರೆ. ಒಂದು ಬಾರಿ ಈ ಪ್ರದೇಶಕ್ಕೆ ಮಳೆ ಇಲ್ಲದೆ ಭೀಕರ ಬರಗಾಲ ಎದುರಾಗುತ್ತದೆ .ಪ್ರಾಣಿ ಪಕ್ಷಿಗಳಿಗೆಲ್ಲಾ , ನೀರಿಲ್ಲದ ಪರಿಸ್ಥಿತಿ ಬರುತ್ತದೆ .ಈ ಭೀಕರ ಪರಿಸ್ಥಿತಿಯನ್ನು , ನೋಡಿ ಮನನೊಂದ , ಗೌತಮ ಋಷಿಗಳು ವರುಣ ದೇವನನ್ನು ,ಕುರಿತು ತಪಸ್ಸನ್ನು ಮಾಡುತ್ತಾರೆ. ಅವರ ತಪಸ್ಸಿಗೆ ಮೆಚ್ಚಿದ ,ವರುಣದೇವ ಅವರ ಆಶ್ರಮದ ಬಳಿ ಬಂದು ಹಳ್ಳವನ್ನು ತೋಡುವಂತೆ, ಆದೇಶಸುತ್ತಾನೆ.

ಗೌತಮ ಮುನಿಗಳು, ಆ ಹಳ್ಳವನ್ನು ತೋಡಿದಾಗ , ವರುಣನು ಆ ಹಳ್ಳದಲ್ಲಿ ಎಷ್ಟು ನೀರನ್ನು ಬಳಸಿದರು ಖಾಲಿಯಾಗದಂತೆ , ಅಕ್ಷಯ ತೀರ್ಥವನ್ನು ತುಂಬುತ್ತಾನೆ. ಆ ಅಕ್ಷಯ ತೀರ್ಥವನ್ನು ಬಳಸಿಕೊಂಡು ಗೌತಮ ಮುನಿಗಳು ಬೆಳೆಯನ್ನು ಬೆಳೆದು ಸುತ್ತಮುತ್ತಲಿನ , ಪ್ರಾಣಿ ಪಕ್ಷಿಗಳಿಗೆ ,ಹಾಗೂ ಮನುಷ್ಯರ ಹಸಿವು , ಹಾಗೂ ದಾಹವನ್ನು, ತೀರಿಸುತ್ತಾರೆ. ಗೌತಮ ಮುನಿಗಳು ತಂದ ಅಕ್ಷಯ ತೀರ್ಥ ದಿಂದ ಅವರ ಖ್ಯಾತಿ ಉತ್ತುಂಗಕ್ಕೆ, ಏರುತ್ತದೆ . ಇದನ್ನು ಆಶ್ರಮದಲ್ಲಿದ್ದಂತಹ , ಅನೇಕರು ಖುಷಿ ಮುನಿಗಳಿಗೆ , ಸಹಿಸಿಕೊಳ್ಳಲು ಆಗುವುದಿಲ್ಲ. ಅವರು ತಮ್ಮ ಮಂತ್ರಶಕ್ತಿಯಿಂದ, ಗೋವು ಒಂದನ್ನು ಸೃಷ್ಟಿ ಮಾಡುತ್ತಾರೆ.

ಆ ಗೋವು ಗೌತಮ ಮುನಿಗಳ , ಆಶ್ರಮಕ್ಕೆ ನುಗ್ಗಿ ಅಲ್ಲಿದ್ದ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತದೆ. ಇದನ್ನು ಗಮನಿಸಿದ ಗೌತಮ ಮುನಿಗಳು, ಗೋವನ್ನು ಓಡಿಸಲು, ಒಂದು ದರ್ಬೆಯನ್ನು ತೆಗೆದುಕೊಂಡು ಅದನ್ನು ಅದರ ಕಡೆ ಎಸೆಯುತ್ತಾರೆ, ತಕ್ಷಣವೇ ಆ ಗೋವು ಮೃತಪಡುತ್ತದೆ .ಇದೇ ಸಮಯಕ್ಕೆ ಕಾಯುತ್ತಿದ್ದ ಇತರ ಋಷಿ ಮುನಿಗಳು ಗೌತಮ ಮಹರ್ಷಿಗಳಿಗೆ ಗೋ ಹತ್ಯೆ ದೋಷ ಉಂಟಾಯಿತು . ಎಂದು ಶಿವ ದೇವರನ್ನು ಕುರಿತು ತಪಸ್ಸನ್ನು ಆಚರಿಸಿ ಗಂಗೆಯನ್ನು ಇಲ್ಲಿಗೆ ಕರೆ ತಂದು, ಆ ಪವಿತ್ರ ಜಲದಲ್ಲಿ ಅಭ್ಯಂಜನವನ್ನು ಮಾಡಿದರೆ ಮಾತ್ರ ಗೌತಮ ಮಹರ್ಷಿಗಳಿಗೆ ನಾಶದಿಂದ, ಪರಿಹಾರ ಉಂಟಾಗುತ್ತದೆ ಎಂದು ತಿಳಿಸುತ್ತಾರೆ.

ಋಷಿಮುನಿಗಳ ಸೂಚನೆ ಅನುಸಾರವಾಗಿ , ಗೌತಮ ಮುನಿಗಳು ಬ್ರಹ್ಮಗಿರಿಯ ತಪ್ಪಲಿನಲ್ಲಿ ಶಿವ ದೇವರನ್ನು ಕುರಿತು ಸಾವಿರ ವರ್ಷಗಳ ಕಾಲ ಘೋರ ತಪಸ್ಸುನ್ನು, ಆಚರಿಸುತ್ತಾರೆ. ಗೌತಮ ಮಹರ್ಷಿಗಳ. , ತಪಸ್ಸಿಗೆ ಮೆಚ್ಚಿದ ಶಿವಪರಮಾತ್ಮರು, ತಮ್ಮ ಜಡೆಯಲ್ಲಿ ಇದ್ದಂತಹ ಗಂಗೆಯನ್ನು ಸ್ಥಳದಲ್ಲೇ ಹರಿಸಿದರಂತೆ, ಗಂಗೆ ಗೌತಮಿ ಅಥವಾ ಗೋದಾವರಿ ನದಿಯಾಗಿ, ಈ ಪ್ರದೇಶದಲ್ಲಿ ಹರಿಯುತ್ತಾಳೆ. ಗಂಗೆ ಅವತರಿಸಿದ ನಂತರ ಶಿವಪರಮಾತ್ಮರು ಗೋದಾವರಿ ನದಿಯ , ತೀರದಲ್ಲಿ ತ್ರಯಂಬಕೇಶ್ವರ ಜ್ಯೋತಿರ್ಲಿಂಗವಾಗಿ, ಉದ್ಭವಿಸಿದ್ದಾರಂತೆ .

ಇನ್ನೂ ಮುಂದಿನ ಜ್ಯೋತಿರ್ಲಿಂಗ, ವೈದ್ಯನಾಥೇಶ್ವರ ಜ್ಯೋತಿರ್ಲಿಂಗವಾಗಿದೆ. .ವೈದ್ಯನಾಥ ಜ್ಯೋತಿರ್ಲಿಂಗವು ಜಾರ್ಖಂಡ್ ರಾಜ್ಯದ ದೇವುಗಲ್ ಸ್ಥಳದಲ್ಲಿದೆ. ಈ ದೇಗುಲ ಚಿತಾ ಭೂಮಿಯ, ಮೇಲೆ ನಿರ್ಮಾಣವಾಗಿದೆ. ಎಂದು ಹೇಳುತ್ತಾರೆ.ಈ ವೈದ್ಯನಾಥ ಜ್ಯೋತಿರ್ಲಿಂಗವು ,ರಾವಣ ಕೈಲಾಸದಿಂದ ತಂದನೆಂದು, ಉಲ್ಲೇಖಿಸಲಾಗುತ್ತದೆ. ಪುರಾಣ ನಮ್ಮ ಗೋಕರ್ಣ ಕ್ಷೇತ್ರದ , ಸ್ಥಳ ಪುರಾಣದಂತೆ ಇದೆ. ರಾವಣ ಶಿವ ದೇವರನ್ನು ಕುರಿತು , ಘೋರ ತಪಸ್ಸನ್ನು ಆಚರಿಸಿ ಶಿವ ದೇವರಿಂದ ಶಿವ ದೇವರ ಪ್ರತಿಕವಾದ ಆತ್ಮಲಿಂಗವನ್ನು. ಪಡೆದುಕೊಳ್ಳುತ್ತಾನೆ.

ಆ ಲಿಂಗವನ್ನು ಲಂಕೆಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಎಲ್ಲಿಯಾದರೂ, ಲಿಂಗವನ್ನು ಕೆಳಗೆ ಇಟ್ಟರೆ ಲಿಂಗ ಅಲ್ಲಿ ಪ್ರತಿಷ್ಠಾಪನೆಯಾಗುತ್ತದೆ. ಎಂದು ಶಿವ ಪರಮಾತ್ಮರು ಎಚ್ಚರಿಕೆಯನ್ನು ನೀಡಿರುತ್ತಾರೆ. ರಾವಣ ಏನಾದರೂ ಶಿವಲಿಂಗವನ್ನು ಲಂಕೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರೆ ,ಅವನು ಅಗಾಧ ಶಕ್ತಿಯನ್ನು ಪಡೆದುಕೊಂಡು, ತಮ್ಮ ಪದವಿಗೆ ಏನಾದರೂ ಬರುವುದೆಂದು ದೇವಾನು ದೇವತೆಗಳು ಚಿಂತಿಸ ತೊಡಗುತ್ತಾರೆ .ಅವರೆಲ್ಲರೂ ರಾವಣನ ಪ್ರಯತ್ನ ಫಲಿಸದೆ, ಇರಲಿ ಎಂದು ಒಂದು ತಂತ್ರವನ್ನು ಮಾಡುತ್ತಾರೆ.

ಆಗ ಇದ್ದಕ್ಕಿದ್ದಂತೆಯೇ , ಮೋಡ ಕವಿದು ಕತ್ತಲು ಆಗುತ್ತದೆ. ಆಗ ಸಂಜೆ ಸಮಯವಾದ್ದರಿಂದ ರಾವಣ ಸಂಧ್ಯಾವಂಧನೆಯನ್ನು ಮಾಡಬೇಕೆಂದು ಯೋಚಿಸುತ್ತಾನೆ. ಆತನಿಗೆ ಆಗ ಗಣಪತಿ ಗೋವುಗಳನ್ನು ಕಾಯುತ್ತಿದ್ದ, ಬಾಲಕನ ವೇಷದಲ್ಲಿ ಕಾಣಿಸುತ್ತಾರೆ . ಶಿವಲಿಂಗವನ್ನು ಕೆಳಗೆ ಇಡಬಾರದು .ಎಂದು ಗೊತ್ತಿದ್ದರಿಂದಲೇ ರಾವಣನು ಬಾಲಕನಿಗೆ ಲಿಂಗವನ್ನು ನೀಡಿ ತಾನು ಸಂಧ್ಯಾವಂದನೆಯನ್ನು ಮುಗಿಸಿ. ಬರುವವರೆಗೂ ಸಹ ಶಿವಲಿಂಗವನ್ನು ಭೂಮಿಯ ,ಮೇಲೆ ಇರಿಸಬಾರದೆಂದು ಎಂಬ ಎಚ್ಚರಿಕೆಯನ್ನು ನೀಡಿ ತೆರಳುತ್ತಾನೆ. ಆದರೆ ಬಾಲಕನ ರೂಪದಲ್ಲಿದ್ದ ಗಣೇಶ ದೇವರು ಲಿಂಗದ ಬಾರವನ್ನು ಹೊರಲಾರದೆ ನೆಲದ ಮೇಲೆ ಇಟ್ಟು ಬಿಡುತ್ತಾರೆ.

ಸಂಧ್ಯಾವಂದನೆ ಮುಗಿಸಿ ಬಂದ ರಾವಣ ತನ್ನ ಶಕ್ತಿಯನ್ನೆಲ್ಲಾ ,ಉಪಯೋಗಿಸಿ ಶಿವಲಿಂಗವನ್ನು ,ಮತ್ತೆ ಮೇಲೆ ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಆ ಶಿವಲಿಂಗ ಒಂದು ಚೂರು ಸರಿಯುವುದಿಲ್ಲ. ಆ ಪ್ರಯತ್ನದಲ್ಲಿ ರಾವಣನ ಶರೀರದಲ್ಲಿ, ಗಾಯಗಳಾಗುತ್ತವೆ. ಆಗ ಅಲ್ಲೊಂದು ಅಶರೀರವಾಣಿ ಕೇಳುತ್ತದೆ. ಈ ಲಿಂಗವನ್ನು ನೀನು ಇಲ್ಲಿಂದ ಕದಡಿಸಲಾಗುವುದಿಲ್ಲ. ಹಾಗಾಗಿ ಲಿಂಗವನ್ನು ಇಲ್ಲಿಯೇ ಪೂಜಿಸಿ ನಿನ್ನ ಗಾಯಗಳಿಂದ, ಮುಕ್ತಿಯನ್ನು ಪಡೆದಿಕೋ ಎಂದು ಅಶರೀರವಾಣಿ ಸೂಚಿಸುತ್ತದೆ.

ಆದೇ ರೀತಿ ರಾವಣನು ಶಿವಲಿಂಗವನ್ನು , ಅಲ್ಲಿಯೇ ಪೂಜಿಸಿ ತನ್ನ ಗಾಯಗಳಿಂದ ಮುಕ್ತಿಯನ್ನು, ಪಡೆದುಕೊಳ್ಳುತ್ತಾನೆ. ರಾವಣನ ಗಾಯಗಳನ್ನೆಲ್ಲಾ ಹೋಗಲಾಡಿಸಿ , ಅವನನ್ನು ಆರೋಗ್ಯವಂತನಾಗಿ , ಮಾಡಿದ ಕಾರಣದಿಂದ ಈ ಜ್ಯೋತಿರ್ಲಿಂಗಕ್ಕೆ ವೈದ್ಯನಾಥೇಶ್ವರ ಎಂಬ ಹೆಸರು ಬಂದಿದೆ. ವೈದ್ಯನಾಥ ಜ್ಯೋತಿರ್ಲಿಂಗವನ್ನು, ಪೂಜಿಸುವವರು ಸಕಲ ವ್ಯಾದಿಗಳಿಂದಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು. ಗಂಗಾ ನದಿಯ ಪವಿತ್ರ ನೀರನ್ನು, ಸಂಗ್ರಹಿಸಿ ಅಲ್ಲಿನ ವೈದ್ಯನಾಥೇಶ್ವರರಿಗೆ ಜಲ ಅಭಿಷೇಕ ಮಾಡುವುದು ಈ ದೇಗುಲದ ವಿಶೇಷತೆ.

ಇನ್ನು ಮುಂದಿನ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗವಾಗಿದೆ. ನಾಗೇಶ್ವರ ಜ್ಯೋತಿರ್ಲಿಂಗ ಗುಜರಾತ್ ರಾಜ್ಯದ ದ್ವಾರಕಾದಿಂದ 18 ಕಿಲೋಮೀಟರ್ ದೂರದಲ್ಲಿ, ದಾರುಕಾವನ ಎಂಬಲ್ಲಿ ನಾಗೇಶ್ವರ ಜ್ಯೋತಿರ್ಲಿಂಗ ಸ್ಥಿತವಾಗಿದೆ. ನಾಗೇಶ್ವರ ಎಂದರೆ ಸರ್ಪಗಳ ದೇವರು ಎಂದರ್ಥ. ಈ ಜ್ಯೋತಿರ್ಲಿಂಗದ ದರ್ಶನದಿಂದ ಎಲ್ಲಾ ರೀತಿಯ ವಿಷಯಗಳಿಂದಲೂ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅಷ್ಟು ಮಾತ್ರವಲ್ಲದೆ ಈ ನಾಗೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ,

ಸಕಲ ಸರ್ಪ ದೋಷಗಳೆಲ್ಲಾ ನಿವಾರಣೆಯಾಗುತ್ತವೆ. ಶ್ರೀ ಕೃಷ್ಣ ಪರಮಾತ್ಮರು ಮತ್ತು ಬಲರಾಮರು ದ್ವಾರಕೆಯಲ್ಲಿ ನವ ರಾಜಧಾನಿಯನ್ನು , ನಿರ್ಮಾಣ ಮಾಡುವ ಮೊದಲು ನಾಗೇಶ್ವರ ಮಹಾದೇವರನ್ನು ಪ್ರಾರ್ಥನೆ ಮಾಡಿದ್ದರಂತೆ , ಸ್ಥಳ ಪುರಾಣದ ಪ್ರಕಾರ ದಾರುಕ ಎಂಬ ಅಸುರ ದಂಪತಿಗಳು , ಇತರ ರಾಕ್ಷಸರೊಡನೆ , ಜೊತೆಗೂಡಿ ದಾರುಕಾವನ ಎಂಬ ಅರಣ್ಯದಲ್ಲಿ ವಾಸವಿರುತ್ತಾರೆ. ರಾಕ್ಷಸಿ ದಾರುಕಾದೇವಿ ಪಾರ್ವತಿಯನ್ನು ಕುರಿತು ತಪಸ್ಸನ್ನು ಆಚರಿಸಿ ವರವಂದನ್ನು ಪಡೆದುಕೊಳ್ಳುತ್ತಾಳೆ.

ಆ ವರದ ಪರಿಣಾಮವಾಗಿ ಆಕೆ ಧಾರಾಕಾವನ್ನು ಎಲ್ಲಿಗೆ ಬೇಕಾದರೂ ಹೊತ್ತುಕೊಂಡು ತೆರಳಬಹುದಾಗಿರುತ್ತದೆ. ಇದರಿಂದ ದಾರುಕಾವನವನ್ನು , ಗಾಳಿಯಲ್ಲಿ ಆರಿಸುತ್ತಲೇ , ಆ ರಕ್ಕಸ ದಂಪತಿಗಳು ಹಲವು ಪ್ರದೇಶಗಳಿಗೆ ಹೊತ್ತೊಯ್ಯುತ್ತಿರುತ್ತಾರೆ .ಹೋದ ಕಡೆಯೆಲ್ಲಾ ಜನರನ್ನು ಪೀಡಿಸುತ್ತಿರುತ್ತಾರೆ. ಇವರ ಕಿರುಕುಳವನ್ನು ತಾಳಲಾರದ, ಜನರೆಲ್ಲರೂ ಅವರುವ ಎಂಬ ಋಷಿಗಳ ಕುಟೀರದಲ್ಲಿ ಆಶ್ರಯವನ್ನು ಪಡೆಯುತ್ತಾರೆ. ರಾಕ್ಷಸರ ಹಾವಳಿಗೆ ತುತ್ತಾದ ಜನರ ಭಯವನ್ನು , ಕಂಡು ಋಷಿಗಳು ರಕ್ಷಸರಿಗೆ ಒಂದು ಶಾಪವನ್ನು ನೀಡುತ್ತಾರೆ .ರಾಕ್ಷಸರ ಏನಾದರೂ ಭೂಮಿಯ

ಮೇಲಿರುವ ಜನರಿಗೆ ತೊಂದರೆಯನ್ನು ನೀಡಿದರೆ ಮರುಕ್ಷಣವೇ ಅವರು ಮರಣ ಹೊಂದುತ್ತಾರೆ . ಎಂದು ಋಷಿಗಳು ಶಾಪ ನೀಡುತ್ತಾರೆ. ಈ ವಿಷಯ ತಿಳಿದು ಭಯಗೊಂಡ , ಆ ರಾಕ್ಷಸ ದಂಪತಿಗಳು ,ಧಾರುಕಾವನ್ನು ಸಮುದ್ರದ ಮಧ್ಯೆ ಇರಿಸುತ್ತಾರೆ. ರಾಕ್ಷಸರು ಭೂಮಿಯ ಮೇಲಿನ ಜನರಿಗೆ ತೊಂದರೆಯನ್ನು, ಕೊಡುವುದಿಲ್ಲ ,ಆದರೆ ಸಮುದ್ರದಲ್ಲಿ ಸಾಗುತ್ತಿರುವ, ಹಡಗುಗಳನ್ನೆಲ್ಲ , ವಶಪಡಿಸಿಕೊಂಡು ಅದರಲ್ಲಿ ಇರುವಂತಹ ವಸ್ತುಗಳನ್ನೆಲ್ಲಾ ದೋಚಿಕೊಂಡು , ಜನರನ್ನು ಕೊಲ್ಲಲು ಆರಂಭಿಸುತ್ತಾರೆ .

ಹೀಗೆ ಒಮ್ಮೆ ಅವರು ಒಂದು ಹಡಗಿನ ಮೇಲೆ ದಾಳಿಯನ್ನು ಮಾಡಿ ಅದರಲ್ಲಿರುವ ಪ್ರಜೆಗಳನ್ನೆಲ್ಲಾ ಸೆರೆಯಾಳುಗಳಾಗಿ, ಮಾಡಿಕೊಳ್ಳುತ್ತಾರೆ . ಅವರಲ್ಲಿ ಸುಪ್ರಿಯ ಎಂಬ ಮಹಾ ಶಿವಭಕ್ತ ಇರುತ್ತಾನೆ. ಸೆರೆಮನೆಯಲ್ಲಿಯೇ ಒಂದು ಶಿವಲಿಂಗವನ್ನು ತಯಾರು ಮಾಡಿ ಪೂಜಿಸಲು ಶುರುಮಾಡುತ್ತಾನೆ .ಆತ ಸೆರೆಮನೆಯಲ್ಲಿ ಇರುವವರಿಗೆಲ್ಲ, ಶಿವ ಪೂಜೆ ಮಾಡುವಂತೆ ಹೇಳಿಕೊಟ್ಟಿರುತ್ತಾನೆ. ಇದರಿಂದ ಕೋಪಗೊಂಡ ರಾಕ್ಷಸರು ಸುಪ್ರೀಯನನ್ನು ,ಸಾಯಿಸುವುದಕ್ಕೆ ಆಗಮಿಸುತ್ತಾರೆ.

ಸುಪ್ರಿಯ ನನ್ನು ಶಿವದೇವರನ್ನು ,ಕುರಿತು ಧ್ಯಾನಿಸುತ್ತಿರುತ್ತಾನೆ. ಶಿವ ದೇವರು ತಮ್ಮ ಪರಮ ಭಕ್ತನಾದ, ಸುಪ್ರಿಯನಿಗೆ ಪಾಶುಪತಾಸ್ತ್ರವನ್ನು ನೀಡಿ ಆ ರಕ್ಕಸರನ್ನು ಸಂಹರಿಸಲು ಸೂಚಿಸುತ್ತಾರೆ .ರಾಕ್ಷಸರ ಸಂಹಾರದ ನಂತರ ಶಿವಪರಮಾತ್ಮರು , ಸುಪ್ರಿಯಾ ನಾ ಕೋರಿಕೆ ಮೇಲೆ ನಾಗೇಶ್ವರ ಜ್ಯೋತಿರ್ಲಿಂಗದ ರೂಪದಲ್ಲಿ, ದಾರುಕ ವನದಲ್ಲಿ ನೆಲೆಸುತ್ತಾರೆ.

ಇನ್ನು ಮುಂದಿನ ಜ್ಯೋತಿರ್ಲಿಂಗ ರಾಮೇಶ್ವರ ಜ್ಯೋತಿರ್ಲಿಂಗವಾಗಿದೆ . ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮನಾಥ ಸ್ವಾಮಿ ದೇವಸ್ಥಾನ . ಭಾರತದ ಚಾರ್ ದಾಮ್ ಕ್ಷೇತ್ರಗಳಲ್ಲಿ ಪ್ರಮುಖವಾಗಿದೆ. ಇಲ್ಲಿರುವ ರಾಮನಾಥ ಸ್ವಾಮಿ ಜ್ಯೋತಿರ್ಲಿಂಗ , ಮಹಾ ವಿಷ್ಣುವಿನ, ಏಳನೆಯ ಅವತಾರವಾದ , ಪ್ರಭು ಶ್ರೀರಾಮಚಂದ್ರನು, ಸ್ಥಾಪಿಸಿರುವಂತಹ ಜ್ಯೋತಿರ್ಲಿಂಗವಾಗಿದೆ. ರಾಮಾಯಣದ ಪ್ರಕಾರ. ಪ್ರಭು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿದ ನಂತರ , ಲಕ್ಷ್ಮಣ, ಸೀತೆ ಹಾಗೂ ಆಂಜನೇಯರೊಂದಿಗೆ, ರಾಮೇಶ್ವರಕ್ಕೆ ಆಗಮಿಸುತ್ತಾರೆ . ರಾವಣನ ಹತ್ಯೆಯಿಂದ , ಬಂದು ಒದಗಿದ್ದಂತಹ.

ಬ್ರಹ್ಮ ಹತ್ಯೆ, ದೋಷದ ಪರಿಹಾರಕ್ಕಾಗಿ ಸಾಗರ ತೀರದಲ್ಲಿ ,ಶಿವಲಿಂಗವನ್ನು ಸ್ಥಾಪಿಸುವಂತೆ , ಅಗಸ್ತ್ಯರು ಪ್ರಭು ಶ್ರೀರಾಮಚಂದ್ರನಿಗೆ , ಸೂಚನೆ ನೀಡಿರುತ್ತಾರೆ. ಶಿವ ದೇವರ ದಿವ್ಯ ಲಿಂಗವನ್ನು ತರಲು ಪ್ರಭು ಶ್ರೀರಾಮಚಂದ್ರನು ಅಂಜನೇಯನನ್ನು ಕೈಲಾಸಕ್ಕೆ ಕಳುಹಿಸಿಕೊಡುತ್ತಾರೆ . ಆದರೆ ಮುಹೂರ್ತದ ಸಮಯಕ್ಕೆ ಸರಿಯಾಗಿ ಆಂಜನೇಯ ಸ್ವಾಮಿಗೆ ಲಿಂಗದೊಂದಿಗೆ ಆಗಮಿಸಲು ಆಗುವುದಿಲ್ಲ.ಆಗ ಸೀತಾದೇವಿ ಮರಳಿನಿಂದ ಒಂದು ಲಿಂಗವನ್ನು ತಯಾರು ಮಾಡುತ್ತಾರೆ ,ನಂತರ ಪ್ರಭು ಶ್ರೀರಾಮಚಂದ್ರರು, ಅದೇ ಲಿಂಗವನ್ನು ಸ್ಥಾಪಿಸುತ್ತಾರೆ .

ಅದೇ ರಾಮನಾಥ ಸ್ವಾಮೀ ಜ್ಯೋತಿರ್ಲಿಂಗ . ಆಂಜನೇಯ ಸ್ವಾಮಿ ಲಿಂಗದೊಂದಿಗೆ ಮರಳಿ ಬಂದಾಗ ಅದಾಗಲೇ ಪ್ರಭು ಶ್ರೀರಾಮಚಂದ್ರನು , ಲಿಂಗವನ್ನು ಸ್ಥಾಪಿಸಿರುವುದು ಕಂಡುಬರುತ್ತದೆ . ಇದರಿಂದ ಅವರಿಗೆ ಬಹಳ ದುಃಖವಾಗುತ್ತದೆ. ಆಗ ಪ್ರಭು ಶ್ರೀರಾಮಚಂದ್ರನು, ತಾವು ಸ್ಥಾಪಿಸಿದ ಲಿಂಗದ ಸಮೀಪವೇ ,ಆಂಜನೇಯ ಸ್ವಾಮಿ ತಂದ ಲಿಂಗವನ್ನು, ಸ್ಥಾಪಿಸುವಂತೆ ತಿಳಿಸುತ್ತಾರೆ. ಆಂಜನೇಯ ಸ್ವಾಮಿ ಸ್ಥಾಪಿಸಿದ ಲಿಂಗದ ದರ್ಶನವನ್ನು, ಪಡೆಯದಿದ್ದಲ್ಲಿ ಭಕ್ತಾದಿಗಳಿಗೆ, ರಾಮೇಶ್ವರದ ದರ್ಶನಫಲ ದೊರೆಯುವುದಿಲ್ಲ .ಎಂದು ಹರಸುತ್ತಾರೆ .

ಕಾಶಿಯ ಗಂಗಾಜಲದಿಂದ ,ರಾಮೇಶ್ವರಂ ನ ರಾಮನಾಥ ಸ್ವಾಮಿಗೆ ಅಭಿಷೇಕವನ್ನು ಮಾಡಿದ ನಂತರವೇ ಕಾಶಿ ಕ್ಷೇತ್ರದ ತೀರ್ಥಯಾತ್ರೆ , ಪರಿಪೂರ್ಣಗೊಳ್ಳುತ್ತದೆ. ಮಹಾವಿಷ್ಣುವಿನ ಏಳನೆಯ ಅವತಾರವಾದ , ಪ್ರಭು ಶ್ರೀರಾಮಚಂದ್ರನೇ ರಾಮನಾಥ ಸ್ವಾಮಿ ಜ್ಯೋತಿರ್ಲಿಂಗವನ್ನು, ಸ್ಥಾಪನೆ ಮಾಡಿರುವುದರಿಂದ , ಈ ಕ್ಷೇತ್ರ ಶೈವ ಕ್ಷೇತ್ರವಾಗಿದ್ದರೂ, ವೈಷ್ಣವರಿಗೂ ಕೂಡ ಪೂಜನೀಯವಾಗಿದೆ .ಈ ಲಿಂಗ ಪ್ರಭು ಶ್ರೀ ರಾಮಚಂದ್ರನಿಂದ ಪ್ರತಿಷ್ಠಾಪಿತಗೊಂಡಿರುವುದರಿಂದ, ಲಿಂಗಕ್ಕೆ ರಾಮೇಶ್ವರ ಎಂದು ಕರೆಯಲ್ಪಡುತ್ತದೆ.

ಇನ್ನು ಮುಂದಿನ ಜ್ಯೋತಿರ್ಲಿಂಗ ಗೃಷ್ಣೇಶ್ವರ ಜ್ಯೋತಿರ್ಲಿಂಗವಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ನಿಂದ 30 ಕಿಲೋ ಮೀಟರ್ ಹಾಗೂ ಎಲ್ಲೋರಾದ ಗುಹೆಗಳಿಂದ ಅರ್ಧ ಕಿಲೋಮೀಟರ್ ಗೃಷ್ಣೇಶ್ವರ ದೇವಾಲಯವಿದೆ . ಶಿವದೇವರ 12 ಜ್ಯೋತಿರ್ಲಿಂಗಗಳಲ್ಲಿ ಇದು ಕೊನೆಯ ಜ್ಯೋತಿರ್ಲಿಂಗ . ಸ್ಥಳ ಪುರಾಣದ ಪ್ರಕಾರ , ದೇವಗಿರಿಯ ತಪ್ಪಲಿನಲ್ಲಿ ಸುದರ್ಮ ಎನ್ನುವರು ತಮ್ಮ ಪತ್ನಿ ಸುದೇವರೊಂದಿಗೆ, ವಾಸವಿರುತ್ತಾರೆ. ಹಲವು ವರ್ಷಗಳು ಕಳೆದರು ಅವರಿಗೆ ಮಕ್ಕಳ ಭಾಗ್ಯ ಲಬಿಸಿರುವುದಿಲ್ಲ.

ಆಗ ಸುದೇವಳು ತಮ್ಮ ಪತಿಯ ಮನವನ್ನು ಒಲಿಸಿ , ತನ್ನ ಸಹೋದರಿ ಕೃಷ್ಣೆಯೊಂದಿಗೆ, ಪತಿಯ ವಿವಾಹವನ್ನು ಮಾಡಿಸುತ್ತಾಳೆ. ಗೃಷ್ಣೆಯು ಮಹಾನ್ ಶಿವಭಕ್ತೆ. ದಿನನಿತ್ಯವೂ ಮಣ್ಣಿನಿಂದ 101 ಶಿವಲಿಂಗಗಳನ್ನು ಮಾಡಿ , ಪೂಜಿಸಿ ಆನಂತರ ಅವುಗಳನ್ನು ಕೊಳವಂದರಲ್ಲಿ, ವಿಸರ್ಜಿಸುತ್ತಿರುತ್ತಾರೆ. ಹೀಗಿರುವಾಗ ಆಕೆಗೊಂದು ಗಂಡು ಮಗು ಜನಿಸುತ್ತದೆ . ಅಕ್ಕ ತಂಗಿಯರಿಬ್ಬರು ಮಗುವಿನ ಲಾಲನೆ ಪಾಲನೆಯಲ್ಲಿ ಕಾಲವನ್ನು ಕಳೆಯುತ್ತಿರುತ್ತಾರೆ. ಆದರೆ ದಿನ ಕಳೆದಂತೆ ಸುದೇವಳ ಮನದಲ್ಲಿ, ಮತ್ಸರ ಮೊಳಕೆ ಒಡೆಯಲು ಶುರುವಾಗುತ್ತದೆ .

ಸುದೇವಳು ಒಂದು ದಿನ ತನ್ನ ಸಹೋದರಿ ಗೃಷ್ಣೇ ಶಿವಪೂಜೆಯಲ್ಲಿ, ನಿರತಳಾಗಿರುವಾಗ ಆಕೆಯ ಮಗುವನ್ನು ತುಂಡರಿಸಿ , ಕೊಳದಲ್ಲಿ ಎಸೆದು ಬಿಡುತ್ತಾಳೆ. ಮಗನ ದಾರುಣ ಸಾವಿನ ಸುದ್ದಿ ಕೇಳಿದಾಗಲೂ , ಸಹ ಗೃಷ್ಣೇ ವಿಚಲಿತಳಾಗುವುದಿಲ್ಲ .ಶಿವ ಪೂಜೆಯನ್ನು ಪೂರ್ಣಗೊಳಿಸಿಯೇ, ಲಿಂಗ ಗಳನ್ನು ವಿಸರ್ಜಿಸಲು , ಕೊಳದ ಬಳಿ ಬರುವಾಗ ,ಅವಳ ಭಕ್ತಿಗೆ ಮೆಚ್ಚಿದ ಶಿವ ಪರಮಾತ್ಮರು, ಪ್ರತ್ಯಕ್ಷರಾಗಿ ,

ಆಕೆಯ ಮಗುವನ್ನು ಮತ್ತೆ ಬದುಕಿಸಿ ಕೊಡುತ್ತಾರೆ. ಅಷ್ಟು ಮಾತ್ರವಲ್ಲದೆ ,ಬೇಕಾದ ವರವನ್ನು ಕೇಳುವಂತೆ ಕೇಳುತ್ತಾರೆ. ಆಗ ಗೃಷ್ಣೆ ಯು ತನ್ನ ಅಕ್ಕ ತಿಳಿಯದೆ ಮಾಡಿದಂತಹ ,ತಪ್ಪನ್ನು ಕ್ಷಮಿಸುವಂತೆಯೂ, ಮತ್ತು ಲೋಕದ ಜನರನ್ನೆಲ್ಲಾ , ಉದ್ದರಿಸಲು ಈ ಕ್ಷೇತ್ರದಲ್ಲಿ ನೆಲೆಸಬೇಕೆಂದು, ಕೋರಿಕೊಳ್ಳುತ್ತಾಳೆ. ಗೃಷ್ಣೆಯನ್ನು ಹರಸಿದ ಶಿವಪರಮಾತ್ಮರು ಜ್ಯೋತಿ ಸ್ವರೂಪದಲ್ಲಿ ಗೃಷ್ಣೇಶ್ವರ ಜ್ಯೋತಿರ್ಲಿಂಗ ಎಂಬ ನಾಮಾಂಕಿತ ದಿಂದ ಇಲ್ಲೇ ನೆಲೆಸುತ್ತಾರೆ.

Leave A Reply

Your email address will not be published.