Ultimate magazine theme for WordPress.

MESHA RASHI ಮೇಷರಾಶಿ ಮಾರ್ಚ್ ಭವಿಷ್ಯ 2024

0 148

MESHA RASHI 2024ನೇ ಇಸವಿಯ ಮಾರ್ಚ್ ತಿಂಗಳಿನ ಮೇಷರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ನಿಮ್ಮ ರಾಶಿಯಲ್ಲೇ ಗುರು ಇರುವುದರಿಂದ ಗುರುವಿನ ಸಂಪೂರ್ಣ ಅನುಗ್ರಹ ನಿಮಗೆ ಇರುತ್ತದೆ. ಗುರು ನಿಮ್ಮ ರಾಶಿಯಲ್ಲಿದ್ದುಕೊಂಡು ಪಂಚಮಸ್ಥಾನ ಮತ್ತು ನವಮ ಸ್ಥಾನವನ್ನು ನೋಡುವುದರಿಂದ ದೈವೀಕಾರ್ಯಗಳು, ಪೂಜೆ ಪುನಸ್ಕಾರಗಳನ್ನು

ಈ ಮಾಸದಲ್ಲಿ ಹೆಚ್ಚಾಗಿ ಮಾಡುತ್ತೀರಿ. ದೇವರ ಕಾರ್ಯಗಳನ್ನು ಮಾಡಲು ಮುಂದೂಡುತ್ತಿದ್ದರೇ ಈ ತಿಂಗಳಿನಲ್ಲಿ ಪೂರ್ಣಗೊಳಿಸುವಿರಿ. ಗುರು ದೃಷ್ಟಿ ಪಂಚಮಕ್ಕೆ ಇರುವುದರಿಂದ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಏಕೆಂದರೆ ಪಂಚಮ ಸ್ಥಾನಕ್ಕೆ ಗುರು ದೃಷ್ಟಿ ಮಾತ್ರವಲ್ಲದೇ ರವಿ ದೃಷ್ಟಿ ಕೂಡ ಇರುವುದರಿಂದ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯವಾಗಿದೆ. ರವಿಯು ಓದುವ ವಿಚಾರದಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡುತ್ತಾನೆ. MESHA RASHI

ಪಂಚಮ ಸ್ಥಾನಕ್ಕೆ ಗುರು ದೃಷ್ಠಿ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಕೊಡುತ್ತಾನೆ. ದಶಮ ಸ್ಥಾನದಲ್ಲಿ ಕುಜನಿದ್ದಾನೆ. ನಿಮ್ಮ ರಾಶಿಯ ಅಧಿಪತಿಯಾದ ಮಂಗಳನೇ ದಶಮಸ್ಥಾನದಲ್ಲಿ ಮಕರ ರಾಶಿಯಲ್ಲಿ ಕುಳಿತಿರುತ್ತಾನೆ. 15ನೇ ತಾರೀಖಿನವರೆಗೆ ತನ್ನ ಉಚ್ಛಸ್ಥಾನದಲ್ಲಿರುತ್ತಾನೆ. ಆಗಾಗಿ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಬಹಳಷ್ಟು ಶುಭ ಫಲಗಳನ್ನು ಕಾಣುತ್ತೀರಿ. ಕುಜ 16ನೇ ತಾರೀಖು ಕುಂಭರಾಶಿಗೆ ಪ್ರವೇಶ ಮಾಡುವುದರಿಂದ ಕುಜ ಶುಭಫಲವನ್ನು ಕೊಡುತ್ತಾನೆ. MESHA RASHI

ರಾಶಿಯ ಅಧಿಪತಿ ಲಾಭ ಸ್ಥಾನಕ್ಕೆ ಬರುತ್ತಾನೋ ಹೆಚ್ಚಿನ ಲಾಭವನ್ನು ಕೊಡುತ್ತಾನೆ. ಕುಜನ ಜೊತೆ ಶುಕ್ರ ಮತ್ತು ಶನಿ ಇರುವುದರಿಂದ ಕೆಲವೊಂದು ವಿಷಯದಲ್ಲಿ ಅಶುಭವಾದರೂ ಹೆಚ್ಚು ಶುಭವನ್ನೇ ಕೊಡುತ್ತಾನೆ. 12ನೇ ಮನೆಯಲ್ಲಿ ಬುಧನಿರುವುದರಿಂದ ಬೇರೆಯವರ ಕೆಲಸ ಮಾಡುತ್ತಿರುತ್ತೀರೋ ನಿಮ್ಮ ಕೆಲಸವನ್ನು ನಿಮ್ಮ ಸಮಯಕ್ಕೆ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಬುಧನಿಗೆ ಪರಿಹಾರವನ್ನು ಈ ತಿಂಗಳು ಮಾಡಿಕೊಳ್ಳಿ. ಸ್ವಂತ ಉದ್ಯೋಗ ಮಾಡುವವರಿಗೆ ಯಾವುದೇ ರೀತಿಯ ತೊಂದರೆಗಳಿಲ್ಲ.

11ನೇ ಮನೆಯಲ್ಲಿ ಶನಿ, ಶುಕ್ರ ಮತ್ತು ಕುಜ ಗ್ರಹಗಳು 16ನೇ ತಾರೀಖಿನ ನಂತರ ಒಟ್ಟಿಗೆ ಇರುತ್ತಾರೆ. ಶನಿ, ಕುಜ ಗ್ರಹಗಳು ಒಟ್ಟಿಗೆ ಸೇರುವುದರಿಂದ ನಿಮ್ಮ ಆರೋಗ್ಯದಲ್ಲಿ ತೊಂದರೆಗಳು ಬರುತ್ತವೆ. ರವಿ, ಶನಿ ಒಂದೇ ಮನೆಯಲ್ಲಿರುವುದರಿಂದ ಸಹಜವಾಗಿ ನಿಮ್ಮ ಕುಟುಂಬದಲ್ಲಿ ನಿಮ್ಮ ತಂದೆಯ ಜೊತೆ ವಾದಗಳು ಉಂಟಾಗುತ್ತದೆ. ಮೇಷರಾಶಿಯವರು ತಾಳ್ಮೆಯಿಂದ ಇದ್ದರೇ ಒಳ್ಳೆಯದು. 15ನೇ ತಾರೀಖಿನ ನಂತರ ಶನಿ, ಕುಜ ಒಟ್ಟಿಗೆ ಸೇರುವುದರಿಂದ ಸುಸ್ತು, ದೇಹದಲ್ಲಿ ನೋವಾಗುವುದು, MESHA RASHI

ಜ್ವರ ಬರುವಂತದ್ದು ಇದೆಲ್ಲವೂ ಆರೋಗ್ಯದಲ್ಲಿ ತೊಂದರೆ ಬರುತ್ತದೆ. ಹನ್ನೊಂದನೇ ಮನೆಯಲ್ಲಿ ಮೂರು ಗ್ರಹಗಳು ಇರುವುದರಿಂದ ಹಣಕಾಸಿನ ವಿಷಯದಲ್ಲಿ ಶುಭವಾದರೂ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೊಂದರೆಗಳಾಗುತ್ತದೆ. ಸಪ್ತಮಾಧಿಪತಿಯಾದ ಶುಕ್ರನು ಈ ತಿಂಗಳಿನಲ್ಲಿ ಲಾಭದ ಸ್ಥಾನದಲ್ಲಿರುತ್ತಾನೆ. ಪಾರ್ಟ್ ನರ್ ಶಿಪ್ ನಲ್ಲಿ ವ್ಯವಹಾರ ಮಾಡುವುದರಿಂದ ಲಾಭವಿರುತ್ತದೆ. 12ನೇ ಮನೆಯಲ್ಲಿ ರಾಹು ಇರುವುದರಿಂದ ದೈವೀಕಾರ್ಯಗಳಿಗೆ ಮತ್ತು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಲು ದೂರಪ್ರಯಾಣ ಮಾಡುವಿರಿ. ಮೇಷರಾಶಿಯವರು ವಿದೇಶದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಪಡುತ್ತಿದ್ದರೇ

ಈ ತಿಂಗಳು ಒಳ್ಳೆಯ ಅವಕಾಶ ನಿಮ್ಮದಾಗಲಿದೆ. ಭೂಮಿ, ಮನೆ, ಸರ್ಕಾರಿ ಕೆಲಸಕ್ಕೆ ಸಂಬಂಧಪಟ್ಟ ಕೆಲಸವು ಈ ತಿಂಗಳಿನ 15ನೇ ತಾರೀಖಿನ ಒಳಗೆ ಆಗುತ್ತದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಿ. ರವಿ, ಶನಿ ಇರುವುದರಿಂದ ಕುಟುಂಬದಲ್ಲಿ ಸಣ್ಣಪುಟ್ಟ ವಾದ ಬಂದರೂ ಅಂತಹ ತೊಂದರೆಗಳೇನು ಇಲ್ಲ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಪ್ರತೀ ಮಂಗಳವಾರ ತೊಗರಿಬೇಳೆಯನ್ನು ಸುಬ್ರಮಣ್ಯ ದೇವಸ್ಥಾನಕ್ಕೆ ದಾನಕೊಡಿ. ಈ ತಿಂಗಳ ಎರಡು ಪ್ರದೋಷದ ದಿನಗಳಂದು ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ಅಭಿಷೇಕಕ್ಕೆ ಎಳೆನೀರನ್ನು ಕೊಡಿ. ಒಟ್ಟಾರೆಯಾಗಿ ನೋಡುವುದಾದರೇ ಮೇಷರಾಶಿಯವರಿಗೆ ಹೆಚ್ಚು ಶುಭಫಲಗಳೇ ಇವೆ.

Leave A Reply

Your email address will not be published.