Ultimate magazine theme for WordPress.

Tulasi Vastu Shastra ಈ ಬೇರು ಸಿಕ್ಕರೆ ಬಿಡಬೇಡಿ! ಹಣ ನಿಮ್ಮನ್ನು ಹುಡುಕಿ ಬರುತ್ತೆ

0 215

Tulasi Vastu Shastra ಈ ಬೇರು ಸಿಕ್ಕರೇ ಬಿಡಬೇಡಿ ಇದು ನಿಮ್ಮ ಬಳಿ ಇದ್ದರೇ ಸಾಕು ಚಮತ್ಕಾರವಾಗುತ್ತದೆ. ಜನಾಕರ್ಷಣೆ, ಹಣ ಆಕರ್ಷಣೆಯಾಗಿ ಬಡತನ ದೂರವಾಗುತ್ತದೆಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬರ ಹಿಂದೂ ಧರ್ಮದ ಮನೆಯಲ್ಲೂ ತುಳಸಿ ಗಿಡ ಇರಲೇಬೇಕು. ಆಧ್ಯಾತ್ಮಿಕ ದೃಷ್ಟಿಕೋನದಿಂದ ತುಂಬಾ ಮಹತ್ವ ಹೊಂದಿದೆ. ಯಾರ ಮನೆಯ ಮುಂದೆ

ತುಳಸಿ ಗಿಡ ಇರುತ್ತದೆಯೋ ಅಂತಹ ಮನೆಗಳಿಗೆ ಕೆಟ್ಟ ಶಕ್ತಿಗಳು ಪ್ರವೇಶ ಮಾಡಲು ಎದರುತ್ತವೆ. ತುಳಸಿ ಗಿಡದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ. ತುಳಸಿ ಗಿಡ ಇರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ತಾಯಿ ಲಕ್ಷ್ಮಿ ಮತ್ತು ಭಗವಾನ್ ವಿಷ್ಣು ದೇವರ ಅನುಗ್ರಹವು ನಮ್ಮ ಮೇಲೆ ಸದಾ ಕಾಲ ಉಳಿಯುವಂತೆ ಮಾಡುತ್ತದೆ. ಶಾಸ್ತ್ರಗಳಲ್ಲಿ ಸಾಲಿಗ್ರಾಮವು ತುಳಸಿ ಬೇರುಗಳಲ್ಲಿ ನೆಲೆಸಿದೆ ಎಂದು ಹೇಳಲಾಗುತ್ತದೆ. ತುಳಸಿ ಬೇರುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದ್ದೇ ಆದಲ್ಲಿ ನಿಮ್ಮ ಅದೃಷ್ಟವೇ ಖುಲಾಯಿಸುತ್ತದೆ. Tulasi Vastu Shastra

ಪದೇ ಪದೇ ಕೆಲಸದಲ್ಲಿ ವಿಫಲರಾಗುತ್ತಿದ್ದರೇ ತುಳಸಿಯ ಬೇರುಗಳನ್ನು ತೆಗೆದುಕೊಂಡು ಅದನ್ನು ಗಂಗಾಜಲದಲ್ಲಿ ತೊಳೆಯಿರಿ. ನಂತರ ಅದನ್ನು ಪೂಜಿಸಿ ಆನಂತರ ತುಳಸಿಯ ಬೇರನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಜೊತೆ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಜಾತಕದ ಗ್ರಹದೋಷಗಳಿಗೆ ತುಳಸಿಯನ್ನು ಪೂಜೆ ಮಾಡಿ. ತುಳಸಿಯಿಂದ ಸ್ವಲ್ಪ ಬೇರನ್ನು ತೆಗೆದು ಬಳಿ ಇಟ್ಟುಕೊಳ್ಳಿ. ನೀವು ತೆಗೆದುಕೊಂಡ ತುಳಸಿ ಬೇರನ್ನು ಕೆಂಪು ಬಣ್ಣದ ಬಟ್ಟೆ ಅಥವಾ ತಾಯತದಲ್ಲಿ ಹಾಕಬೇಕು

ಇದು ನಿಮ್ಮ ಜಾತಕದಲ್ಲಿನ ದೋಷಗಳನ್ನು ತೆಗೆದು ಹಾಕುತ್ತದೆ. ಆರ್ಥಿಕ ಸ್ಥಿತಿಯನ್ನು ಫಲಪಡಿಸಲು ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಹಾಕಿ ಮತ್ತು ಸಂಜೆ ತುಳಸಿ ಗಿಡದ ಮುಂದೆ ದೀಪವನ್ನು ಬೆಳಗಿಸಿ. ತುಳಸಿ ಗಿಡದ ಬೇರನ್ನು ತಾಯತ್ತಕ್ಕೆ ಹಾಕಿ ಕತ್ತಿಗೆ ಹಾಕಿಕೊಂಡರೇ ಆರ್ಥಿಕ ಲಾಭ ಸಿಗುತ್ತದೆ ಮತ್ತು ಹಣದ ಸಮಸ್ಯೆ ದೂರವಾಗುತ್ತದೆ. ಮನೆ ಮತ್ತು ಕಛೇರಿಯಲ್ಲಿ ಧನಾತ್ಮಕ ಶಕ್ತಿ ಕಾಪಾಡಿಕೊಳ್ಳಲು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸಲು ತುಳಸಿ ಬೇರಿನ ಮಾಲೆಯನ್ನು ಮಾಡಿ ಅದನ್ನು ದೇವರ ಕೋಣೆಯಲ್ಲಿ ಇಡಿ,

ಇದು ನಿಮ್ಮ ಸುತ್ತಮುತ್ತಲಿನ ನಕಾರಾತ್ಮಕತೆಯನ್ನು ತೊಡೆದು ಹಾಕುತ್ತದೆ. ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ತೊಡೆದು ಹಾಕಲು ತುಳಸಿ ಬೇರಿನ ಮಾಲೆಯನ್ನು ಕುತ್ತಿಗೆಗೆ ಧರಿಸಿ. ಪರಜೀವಿ ಮರ ಎಂದು ಕರೆಯುವ ಅಬ್ಬು ಸಸ್ಯದ ಪರಿಕಲ್ಪನೆಯು ಹಿಂದೂ ಪುರಾಣ ಮತ್ತು ಜ್ಯೋತಿಷ್ಯದಲ್ಲಿ ಮಹತ್ತ್ವದ ಸ್ಥಾನವನ್ನು ಹೊಂದಿದೆ. ಒಂದು ಮರದ ಮೇಲೆ ಬೆಳೆಯುವ ಯಾವುದೇ ಸಸ್ಯವನ್ನು ಅಬ್ಬು ಸಸ್ಯ ಎಂದು ಕರೆಯಲಾಗಿದೆ ಮತ್ತು ಆ ಸಸ್ಯವು ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ವಿಶಿಷ್ಟ ಶಕ್ತಿಯನ್ನು ಹೊಂದಿದೆ. Tulasi Vastu Shastra

ವ್ಯಕ್ತಿಯನ್ನು ಅದೃಶ್ಯಮಯ ಮಾಡುವಂತಹ ಸಾಮರ್ಥ್ಯ ಈ ಅಬ್ಬು ಸಸ್ಯಕ್ಕೆ ಇದೆ. ಶಾಸ್ತ್ರಗಳ ಪ್ರಕಾರ ಒಬ್ಬ ವ್ಯಕ್ತಿಯು ಅಶ್ವಿನಿ ನಕ್ಷತ್ರದ ಸಮಯದಲ್ಲಿ ಬಿಲ್ವಪತ್ರೆ ಮರದ ಅಬ್ಬು ಗಿಡವನ್ನು ಪೂಜಿಸಿದರೆ ಮತ್ತು ಶಿವಾಯ ಎಂದು 25 ಸಾವಿರದಷ್ಟು ಜಪವನ್ನು ಮಾಡಿದರೆ ಅವನು ಅದೃಶ್ಯನಾಗುತ್ತಾನೆ. ಭರಣಿ ನಕ್ಷತ್ರದಂದು ಸೂಕ್ತವಿಧಿವಿಧಾನ ಮಾಡಿ ಹತ್ತಿ ಗಿಡದ ಅಬ್ಬು ಸಸ್ಯವನ್ನು ಧರಿಸಿದರೇ ವ್ಯಕ್ತಿ ಅದೃಶ್ಯನಾಗುತ್ತಾನೆ. ಅಬ್ಬು ಸಸ್ಯವನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವವರಿಗೆ ಸಂಪತ್ತು ಮತ್ತು ಸಂಮೃದ್ಧಿಯನ್ನು ತರುತ್ತದೆ.

ಎಕ್ಕದ ಗಿಡದ ಬೇರಿನಿಂದ ಮಾಡಿದ ಗಣೇಶ ಮೂರ್ತಿಯು ಶುಭ ಎಂದು ಪರಿಗಣಿಸಲಾಗಿದೆ. ಎರಡು ಮತ್ತು ಮೂರು ವರ್ಷಗಳ ಹಳೆಯದಾದ ಎಕ್ಕದ ಸಸ್ಯವನ್ನು ಎಚ್ಚರಿಕೆಯಿಂದ ಬೇರು ಸಹಿತ ಕೀಳಬೇಕು. ನಂತರ ಬಹಳ ನಾಜೂಕಿನಿಂದ ಗಣೇಶನ ವಿಗ್ರಹವನ್ನು ಕೆತ್ತಬೇಕು. ಈ ಗಣೇಶನನ್ನು ಶುಭ ಕಾರ್ಯದಲ್ಲಿ ದೇವರ ಪೀಠದಲ್ಲಿ ಸ್ಥಾಪಿಸಿ ಪೂಜೆ ಮಾಡಬೇಕು. ಜೀವನದಲ್ಲಿ ಸುಖ ಮತ್ತು ಎಲ್ಲಾ ಸಂತೋಷಗಳು ಸಿಗುತ್ತದೆ. ಈ ಗಣೇಶನ ಮೂರ್ತಿಗೆ ಕೆಂಪು ಬಟ್ಟೆಯನ್ನು ಹಾಕಿ, ಕೆಂಪು ಹೂ, ಕೆಂಪು ಶ್ರೀಗಂಧದ ಲೇಪನ ಮತ್ತು ಕೆಂಪುರತ್ನಗಳನ್ನು ಅರ್ಪಿಸಬೇಕು.

ಬೆಲ್ಲದಿಂದ ಮಾಡಿದ ಲಡ್ಡುಗಳನ್ನು ನೈವೇದ್ಯಕ್ಕೆ ಇಡಬೇಕು. ರವಿ ಪುಷ್ಯನಕ್ಷತ್ರದ ದಿನ ಎಕ್ಕದ ಗಿಡದ ಬೇರನ್ನು ಪವಿತ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಬೇಕು, ನಂತರ ಸ್ವಚ್ಛ ಹಾಗೂ ಸುರಕ್ಷಿತವಾದ ಸ್ಥಳದಲ್ಲಿ ಇಡಬೇಕು. ಇದರಿಂದ ಮನೆಯ ಸದಸ್ಯರ ನಡುವೆ ಶಾಂತಿ, ಸಂತೋಷ ಇರುತ್ತದೆ. ಬಿಳಿ ಎಕ್ಕದ ಗಿಡದ ಬೇರಿನಿಂದ ಪೇಸ್ಟ್ ತಯಾರು ಮಾಡಿಕೊಳ್ಳಿ ಆ ಪೇಸ್ಟ್ ಅನ್ನು ತಿಲಕದ ರೂಪದಲ್ಲಿ ನಿತ್ಯವು ಹಚ್ಚಿಕೊಳ್ಳಿ ಇದರಿಂದ ಜನಾಕರ್ಷಣೆಯಾಗುತ್ತದೆ.

ಬೆಂಕಿಯಲ್ಲಿ ಒಂದು ಸಣ್ಣ ಶಂಖ ಹಾಗೂ ಬಿಳಿ ಎಕ್ಕದ ಬೇರನ್ನು ಹಾಕಿ ನಂತರ ಆ ಭಸ್ಮವನ್ನು ಸಂಗ್ರಹಿಸಿ , ಈ ಭಸ್ಮವನ್ನು ತಿಲಕದ ರೂಪದಲ್ಲಿ ಧರಿಸಿ ಇದರಿಂದ ಕೆಟ್ಟ ಶಕ್ತಿ ಮತ್ತು ಕೆಟ್ಟ ಅದೃಷ್ಟ ನಿಮ್ಮ ಬಳಿ ಯಾವುದು ಸುಳಿಯುವುದಿಲ್ಲ ಎಲ್ಲವೂ ದೂರ ಸರಿಯುತ್ತದೆ. ಮಕ್ಕಳನ್ನು ದುಷ್ಟಶಕ್ತಿಗಳಿಂದ ಪಾರು ಮಾಡಿಕೊಳ್ಳಲು ಒಂದು ಬಟ್ಟೆಯಲ್ಲಿ ಬಿಳಿ ಎಕ್ಕದ ಸಸ್ಯದ ಬೇರು, ಬೆಳ್ಳುಳ್ಳಿ, ಬಿಳಿ ಹರುಳು ಮತ್ತು ನವಿಲು ಗರಿಯನ್ನು ಇಡಬೇಕು. ನಂತರ ಆ ಚೀಲವನ್ನು ಸೂಕ್ತ ಜಾಗದಲ್ಲಿ ಇಡಬೇಕು. ಹೀಗೆ ಮಾಡಿದರೇ ಮನೆಯಲ್ಲಿರುವ ಮಕ್ಕಳು ಯಾವುದೇ ಕೆಟ್ಟ ಶಕ್ತಿಗಳ ಕಣ್ಣಿಗೆ ಗುರಿಯಾಗುವುದಿಲ್ಲ. ಪ್ರಯಾಣದ ಸಮಯದಲ್ಲಿ ಬಿಳಿ ಎಕ್ಕದ ಗಿಡದ ಬೇರನ್ನು ನಿಮ್ಮ ಬಳಿ ಇಟ್ಟುಕೊಂಡರೇ ಅಪಘಾತದ ಭಯ ಇರುವುದಿಲ್ಲ.Tulasi Vastu Shastra

Leave A Reply

Your email address will not be published.