Ultimate magazine theme for WordPress.

brahma muhurta 3 ರಿಂದ 5 ಗಂಟೆಯೊಳಗೆ ಈಕಸನು ಬಿದ್ದರೆ

0 191

brahma muhurta astrology ಬೆಳಗಿನ ಜಾವ ಯಾರಿಗೆ ಈ ಕನಸುಗಳು ಬೀಳುತ್ತವೆಯೋ ಅವರ ಕಷ್ಟಗಳು ಬಹಳ ಬೇಗ ಕೊನೆಗೊಳ್ಳುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬೆಳಗಿನ ಜಾವ ಬೀಳುವ ಕನಸುಗಳ ಅರ್ಥವೇನು? ನಮಗೆ ನಮ್ಮ ಜೀವನದಲ್ಲಾಗುವ ಯಾವ ವಿಷಯಗಳ ಬಗ್ಗೆ ಸೂಚನೆ ಕೊಡುತ್ತದೆ? ಅದಕ್ಕೆ ಪರಿಹಾರವೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಬೆಳಗಿನ ಜಾವ ಬೀಳುವ ಕನಸುಗಳು ನಿಜವಾಗುತ್ತದೆ. ಈ ಕನಸುಗಳು ನಿಜವಾಗುತ್ತದೆಯಾ?

ಸುಳ್ಳಾ ಎಂಬ ರಹಸ್ಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ವೈದಿಕ ಶಾಸ್ತ್ರಗಳ ಪ್ರಕಾರ ರಾಹು ಕನಸುಗಳ ಆಡಳಿತಗಾರ. ರಾಹು ಚಂದ್ರನೊಂದಿಗೆ ಸಂಪರ್ಕಕ್ಕೆ ಬಂದಾಗಲೇ ವ್ಯಕ್ತಿ ಹೆಚ್ಚು ಕನಸ್ಸನ್ನು ಕಾಣಲು ಆರಂಭಿಸುತ್ತಾನೆ. ಕನಸ್ಸುಗಳು ಮೂಲತಃ ನಮ್ಮ ಮನಸ್ಸಿನ ಆಲೋಚನೆಗಳನ್ನು ಅವಲಂಬಿಸಿರುತ್ತದೆ. ಮನಸ್ಸಿಗೆ ಸಂಬಂಧಿಸಿದ ಈ ಕನಸುಗಳನ್ನು ರಾಹು ಗ್ರಹವು ನಮ್ಮನ್ನು ಆಳುತ್ತದೆ. ಜೊತೆಗೆ ತಮ್ಮನ್ನು ನಿಯಂತ್ರಣಕ್ಕೆ ಇಟ್ಟುಕೊಳ್ಳುತ್ತಾನೆ ಎಂದು ಹೇಳುತ್ತಾನೆ.

ಈ ಕನಸುಗಳು ನಿಮ್ಮ ಉತ್ತಮ ಭವಿಷ್ಯದ ಬಗ್ಗೆ ಮುಂಬರುವ ಘಟನೆಗಳ ಸೂಚನೆಯಾಗಿದೆ. ಕೆಲವೊಮ್ಮೆ ಒಂದೇ ಕನಸ್ಸು ಪದೇ ಪದೇ ಬೀಳುತ್ತಿರುತ್ತದೆ. ಶುಭ ಕನಸುಗಳು ನಿಮಗೆ ಸರಿಯಾದ ಮಾರ್ಗದರ್ಶನವನ್ನು ನೀಡಿದರೇ, ಅಶುಭ ಕನಸುಗಳು ಆತ್ಮವಿಶ್ವಾಸವನ್ನು ದುರ್ಬಲಗೊಳಿಸಬಹುದು. ಆದ್ದರಿಂದ ಕನಸುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಇದೇ ಕನಸುಗಳು ಮುಂದಿನ ದಿನಗಳಲ್ಲಿ ಏನು ನಡೆಯಲಿದೆ? ಯಾವ ರೀತಿಯ ಸ್ಥಾನಮಾನಗಳು ಸಿಗುತ್ತದೆ? ಲಕ್ಷ್ಮಿ ಒಲಿಯುತ್ತಾಳೋ ಇಲ್ಲವೋ? brahma muhurta

ಸಮೃದ್ಧಿ ಆಗುತ್ತದೆಯೋ ಇಲ್ಲವೋ ಎಲ್ಲದರ ಮಾಹಿತಿಯನ್ನು ನೀಡುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಕನಸುಗಳು ಬೀಳುವುದು ಅಪರೂಪ. ಕನಸು ಕಂಡರೇ ನಿಮ್ಮ ಭಾಗ್ಯದ ಬಾಗಿಲು ತೆರೆದಿದೆ ಎಂದು ಅರ್ಥ. ಸ್ವಪ್ನಗಳ ಬಗ್ಗೆ ಹೇಳುವುದಾದರೇ ಅದು ಮುಗಿಯುವುದೇ ಇಲ್ಲ. ಶಾಸ್ತ್ರಗಳಲ್ಲೂ ಕೂಡ ಸ್ವಪ್ನಗಳ ಉಲ್ಲೇಖವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸ್ವಪ್ನಗಳ ಅರ್ಥವೇನು ಎಂಬುದನ್ನು ತಿಳಿಸಿಕೊಡುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸುಗಳಲ್ಲಿ ದೇವರನ್ನು ನೋಡುವುದು ತುಂಬಾ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಕನಸಿನಲ್ಲಿ ದೇವರನ್ನು ನೋಡುವುದು ಎಂದರೆ ನೀವು ಎಲ್ಲಾ ರೀತಿಯ ದುಃಖಗಳು ಮತ್ತು ತೊಂದರೆಗಳು ದೂರವಾಗಲಿವೆ ಎಂಬ ಅರ್ಥವನ್ನು ನೀಡುತ್ತದೆ. ದೀರ್ಘವಿದ್ಯೆಯಲ್ಲಿದ್ದಾಗ ಕನಸಿನಲ್ಲಿ ಹಾವುಗಳು ಕಂಡರೆ ಬೆಚ್ಚಿ ಬೀಳುವ ಅವಶ್ಯಕತೆ ಇಲ್ಲ. ಅದನ್ನು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗೆಯೇ ಹೊಸ ಜೀವನವನ್ನು ಆರಂಭ ಮಾಡುವ ಕಾಲ ಬಂದಿದೆ ಎಂಬ ಅರ್ಥ. brahma muhurta

ಅದರಲ್ಲೂ ಹಾವು ಅದರ ಬಿಲದ ಬಳಿ ಕಂಡರೇ ಇನ್ನಷ್ಟು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಸಾವಿನ ಕನಸು ಬಂದರೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕನಸುಗಳು ಬಂದರೆ ನಿಮ್ಮ ಕನಸುಗಳು ಶೀಘ್ರದಲ್ಲೇ ಹೀಡೇರುತ್ತದೆ. ಅದೇ ಸಮಯದಲ್ಲಿ ಮೃತದೇಹವನ್ನು ನೋಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಕನಸಿನಲ್ಲಿ ಮೀನನ್ನು ನೋಡಿದರೇ ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಎಂಬ ಅರ್ಥ ಮತ್ತು ಈ ಕನಸಿನಿಂದ ಎಲ್ಲಿಂದ ಬೇಕಾದರೂ ಹಣವನ್ನು ಪಡೆಯಬಹುದು.

ಇಡೀ ಕುಟುಂಬ ದೇವರನ್ನು ಆರಾಧಿಸುತ್ತಿರುವುದನ್ನು ನೋಡಿದರೇ ಅದು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ ಮತ್ತು ಇಡೀ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಹೀಗೆ ಅನೇಕ ಕನಸುಗಳಿಗೆ ನಾನಾ ಅರ್ಥಗಳಿವೆ. ಕೆಟ್ಟ ಕನಸುಗಳು ನಮ್ಮ ಕುಂಡಲಿ, ಆಲೋಚನೆ, ಸುಪ್ತಮನಸುಗಳಿಂದ ಕೂಡಿರುತ್ತದೆ. ಅಶುಭ ಕನಸುಗಳು ಯಾವುವು ಎಂದರೇ ಕಪ್ಪು ಬಟ್ಟೆಗಳನ್ನು ಧರಿಸಿರುವ

ವ್ಯಕ್ತಿ ಅಥವಾ ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡಾಗ ಅದು ಗಂಭೀರ ಅನಾರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ನಿಮ್ಮ ಅನಾರೋಗ್ಯದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯು ರಾತ್ರಿ ಮಲಗಿದಾಗ ಕನಸಿನಲ್ಲಿ ಎತ್ತಿನ ಬಂಡಿಯನ್ನು ನೋಡಿದಾಗ ಜೀವನದಲ್ಲಿ ನಡೆಯುವ ಚಟುವಟಿಕೆಗಳ ನಿಧಾನಗತಿಯನ್ನು ಸೂಚಿಸುತ್ತದೆ. ಇದು ಭವಿಷ್ಯದ ವೈಫಲ್ಯವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ಪಕ್ಷಿಗಳು ಹಾರುವುದನ್ನು ನೋಡಿದಾಗ ಸ್ವಪ್ನಶಾಸ್ತ್ರದ ಪ್ರಕಾರ ವ್ಯಕ್ತಿಯು ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. brahma muhurta

ವ್ಯಕ್ತಿಯು ಬಡತನದ ಕಡೆಗೆ ಸಾಗುತ್ತಾನೆ. ಇಂತಹ ಕನಸುಗಳನ್ನು ಅಶುಭ ಕನಸುಗಳು ಎಂದು ಪರಿಗಣಿಸಲಾಗಿದೆ. ಇದಕ್ಕೂ ಪರಿಹಾರ ಮಾರ್ಗಗಳಿವೆ. ಮಲಗುವ ಮೊದಲು ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ದಿಂಬಿನ ಕೆಳಗೆ ಇಡಬೇಕು ಮತ್ತು ಒಂದು ಬಿಳಿ ಬಟ್ಟೆಯಲ್ಲಿ ಸ್ವಲ್ಪ ಸೋಂಪಿನ ಕಾಳನ್ನು ಸೇರಿಸಿ ಸುತ್ತಿ ಹಾಸಿಗೆ ಅಥವಾ ದಿಂಬಿನ ಕೆಳಭಾಗದಲ್ಲಿ ಇಡಬೇಕು. ಹಳದಿ ಅಕ್ಕಿಯನ್ನು ಅಥವಾ ಅಕ್ಷತೆಯ ಒಂದು ಪೊಟ್ಟಣವನ್ನು ದಿಂಬು ಅಥವಾ ಹಾಸಿಗೆಯ ಕೆಳಭಾಗದಲ್ಲಿ ಇಟ್ಟರೇ ಒಳ್ಳೆಯದು. ಇವುಗಳು ರೋಗಾಣು ಮತ್ತು ಋಣಾತ್ಮಕ ಶಕ್ತಿಯನ್ನು ದೂರಮಾಡುತ್ತದೆ. ಅಲ್ಲದೇ ಆರೋಗ್ಯಕರವಾದ ನಿದ್ರೆ ಬರುತ್ತದೆ ಮತ್ತು ಕೆಟ್ಟ ಸ್ವಪ್ನದಿಂದ ನಿಮ್ಮನ್ನು ದೂರವಿರಿಸುತ್ತದೆ.

Leave A Reply

Your email address will not be published.