Ultimate magazine theme for WordPress.

Vasthu tips; ಮನೆ ವಾಸ್ತು ಪ್ರಕಾರ ಇದ್ದರೆ ,ದೇವರ ಮನೆ ವಾಸ್ತು ಪ್ರಕಾರ ಇದ್ದರೆ ಮನೆ ಕುಬೇರನ ಮನೆ ಆಗುವಷ್ಟು ಒಳ್ಳೆಯದಾಗುತ್ತದೆ.

0 114

pooja room Vasthu tips ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಒಂದು ಸಂಚಿಕೆಯಲ್ಲಿ ದೇವರ ಮನೆ ವಾಸ್ತು ಈ ರೀತಿಯಾಗಿದ್ದರೆ ಮನೆ ಕುಬೇರನಾನು ಅರಾಮನೆಯಾಗಿರುತ್ತದೆ ಎಂಬ ರಹಸ್ಯವನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.

ಈಗಿನ ಕಾಲದಲ್ಲಂತೂ ವಾಸ್ತು ಶಾಸ್ತ್ರಕ್ಕೆ ಎಲ್ಲರೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ,ಮನೆಯ ಮುಖ್ಯದ್ವಾರ ಯಾವ ಕಡೆ ಇರಬೇಕು ಅಡಿಗೆ ಮನೆ ಯಾವ ದಿಕ್ಕಿನಲ್ಲಿದ್ದರೆ ಸೂಕ್ತ ಟಾಯ್ಲೆಟ್ ಯಾವ ಕಡೆ ಇದ್ದರೆ ಕೆಟ್ಟ ಫಲ ಕೊಡುತ್ತದೆ, ದೇವರ ಮನೆ ಯಾವ ದಿಕ್ಕಿಗೆ ಮಾಡಿದರೆ ಮನೆ ಏಳಿಗೆ ಆಗುತ್ತದೆ, ಈ ರೀತಿ ನೂರಾರು ಪ್ರಶ್ನೆಗಳು ನಮ್ಮಲ್ಲಿ ಸೃಷ್ಟಿಯಾಗುತ್ತದೆ

ಅದರ ದೇವರ ಮನೆ ವಾಸ್ತು ಅಂತ ಜೀವನದಲ್ಲಿ ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತದೆ. ನೀವು ವಾಸ್ತುವನ್ನು ನಂಬುತ್ತೀರಾ ನಂಬಲೇಬೇಕು ಏಕೆಂದರೆ ವಾಸ್ತುವಿನನಲ್ಲಿ ಜೀವನದ ಸುಖ-ದುಃಖ ಶ್ರೀಮಂತಿಕೆ ಬಡತನ ಎಲ್ಲಾ ಅಡಗಿದೆ ನಿಮ್ಮ ಮನೆಯಲ್ಲಿರುವ ಜನರು ಚೆನ್ನಾಗಿರಬೇಕಾ? ಹಾಗಿದ್ದಲ್ಲಿ ವಾಸ್ತು ನಿಯಮವನ್ನು ಪಾಲಿಸಲೇಬೇಕು ಎಂದು ಹೇಳುತ್ತದೆ ವಾಸ್ತುಶಾಸ್ತ್ರ ಮನೆಯಲ್ಲಿ ಮನೆಯಲ್ಲಿ ವಾಸು ದೋಷ ಇದ್ದರೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ

ಮನೆಯಲ್ಲಿ ಸದಾ ನಕಾರಾತ್ಮಕತೆ ಸುಳಿದಾಡುತ್ತದೆ ಅದರಲ್ಲೂ ದೇವರ ಕೋಣೆಯಲ್ಲಿ ವಾಸ್ತು ಸರಿ ಇಲ್ಲ ಅಂದರೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಏಕೆಂದರೆ ನಮಗೆ ರಕ್ಷಣೆಯನ್ನು ನೀಡುವ ದೇವರ ಸ್ಥಾನವನ್ನೇ ಸರಿಯಾಗಿ ಇಟ್ಟಿಲ್ಲ ಎಂದಾದಲ್ಲಿ ಜೀವನದಲ್ಲಿ ಕಷ್ಟಗಳು ಬರುವುದು ಖಚಿತ ಆದರೆ ದೇವರ ಮನೆಯ ವಾಸ್ತು ನಾವು ಹೇಳಿದ ರೀತಿ ಇದ್ದರೆ ಆ ಮನೆಯಲ್ಲಿ ಹಣಕ್ಕೆ ಕೊರತೆಯೇ ಇರುವುದಿಲ್ಲ ಕುಬೇರನ ಮನೆ ನಿಮ್ಮದಾಗುತ್ತದೆ ನೀವು ಪ್ರತಿದಿನ ಪೂಜೆ ಮಾಡುತ್ತಿರೊ ಇಲ್ಲವೋ ಆದರೆ ಮನೆಯಲ್ಲಿ ದೇವರ ಮನೆ ಇರಲೇಬೇಕು, ಇದರಿಂದ ಮನೆಗೆ ಯಾವಾಗಲೂ ಶ್ರೀರಕ್ಷೆ ಇರುತ್ತದೆ

ನೀವು ಕೈಗೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ನೀವು ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲು ನಿರ್ಧರಿಸಿದ್ದರೆ ಅದಕ್ಕೆ ನಮಗೆ ಒಂದು ಸರಿಯಾದ ಮಾಹಿತಿ ಬೇಕು ಮನೆಯಲ್ಲಿ ದೇವರ ಮನೆ ಇದ್ದರೆ ಯಾವಾಗಲೂ ಪಾಸಿಟಿವ್ ಎನರ್ಜಿ ಇರುತ್ತದೆ, ಜನರ ಕೆಟ್ಟ ದೃಷ್ಟಿ ಮನೆಗೆ ಬೀಳುವುದಿಲ್ಲ ಜೊತೆಗೆ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಶಾಂತತೆಯಿಂದ ಧ್ಯಾನ ಪೂಜೆ ಮಾಡಲು ಸಾಧ್ಯವಾಗುತ್ತದೆ

ಮನೆಯಲ್ಲಿ ದೇವರ ಕೋಣೆಯನ್ನು ಯಾವ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನು ಎಲ್ಲರೂ ತಿಳಿದಿರಬೇಕು. ವಾಸ್ತು ಪ್ರಕಾರ ಪೂಜಾ ಕೋಣೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು ಪೂಜೆ ಮಾಡುವಾಗ ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ ಇದರಿಂದ ಮನೆಯ ಸುಖ ಶಾಂತಿ ಸಮೃದ್ಧಿ ನೆಮ್ಮದಿಯಿಂದ ಕೂಡಿರುತ್ತದೆ.

ಒಂದು ವೇಳೆ ನಿಮಗೆ ಈಶಾನ್ಯ ದಿಕ್ಕಿನಲ್ಲಿ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಪೂರ್ವ ದಿಕ್ಕಿನಲ್ಲಾದರೂ ಮಾಡಬಹುದು ಇನ್ನೂ ನೈರುತ್ಯ, ಆಗ್ನೇಯ, ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ದೇವರ ಕೋಣೆಯನ್ನು ನಿರ್ಮಾಣ ಮಾಡಬಾರದು ಏಕೆಂದರೆ ದಕ್ಷಿಣ ಯಮನ ದಿಕ್ಕು ಹಾಗಾಗಿ ಅಲ್ಲಿ ಯಾವತ್ತೂ ಮಂದಿರ ನಿರ್ಮಾಣ ಮಾಡಬಾರದು. ಮಾಡಿದಾದಲ್ಲಿ ಅದರಿಂದ ದುರ್ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಅಷ್ಟೇ ಅಲ್ಲ ಮಾನಸಿಕ ಶಾಂತಿ,ನೋವು ಸತ್ಯದಿ ನಿಮ್ಮನ್ನು ಕಾಡುತ್ತಲೇ ಇರುತ್ತವೆ.

ವಾಸ್ತು ಪ್ರಕಾರ ಪೂಜಾ ಕೋಣೆ ಯಾವಾಗಲೂ ಶಾಂತಿಯಿಂದ ಕೂಡಿರುವಂತಹ ಸ್ಥಳವಾಗಿದೆ ಹಾಗಾಗಿ ಅದರ ಬಣ್ಣವು ಶಾಂತವಾಗಿರಬೇಕು, ಆದ್ದರಿಂದ ನೀವು ಪೂಜಾ ಕೋಣೆಯಲ್ಲಿ ಬಿಳಿ, ಹಳದಿ, ತಿಳಿ ನೀಲಿ, ಕಿತ್ತಳೆ ಬಣ್ಣದಂತಹ ಪೈಂಟನ್ನು ಮಾಡಬಹುದು. ಇದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಭಕ್ತಿಯಿಂದ ಪೂಜಿಸಲು ಸಾಧ್ಯವಾಗುತ್ತದೆ ಇದರಿಂದ ದೇವರನ್ನು ಒಲಿಸಿಕೊಳ್ಳುವುದು ಸುಲಭ

ಲಕ್ಷ್ಮಿ ದೇವಿ ನಿಮ್ಮ ಭಕ್ತಿಗೆ ಪ್ರತ್ಯಕ್ಷಳಾಗುವುದು ಖಚಿತ. ಇನ್ನು ನೀವು ಎಲ್ಲೆಲ್ಲಿ ಪೂಜಾಮಂದರಿಗಳನ್ನು ನಿರ್ಮಾಣ ಮಾಡಬಾರದು ಎಂಬುದನ್ನು ತಿಳಿಸಿಕೊಡುತ್ತೇವೆ, ಪಟ್ಟಣಗಳಲ್ಲಿ ಜನರು ಹೆಚ್ಚಾಗಿ ಒಂದು ಕೋಣೆ ಇರುವ ಮನೆಯಲ್ಲಿ ವಾಸಿಸುತ್ತಾರೆ,

ಹಾಗಾಗಿ ಮನೆಯಲ್ಲಿ ಹೆಚ್ಚು ಜಾಗ ಇಲ್ಲದೆ ಇರುವ ಕಾರಣ ತಮ್ಮ ಬೆಡ್ರೂಮ್ ನಲ್ಲಿ ದೇವರಕೋಣೆಗಾಗಿ ಒಂದಷ್ಟು ಜಾಗವನ್ನು ಮೀಸಲಿಟ್ಟು ಅಲ್ಲಿಯೇ ದೇವರನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ, ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ದೇವರನ್ನಿಟ್ಟು ಅಥವಾ ಮಂದಿರವನ್ನು ಮಾಡಲೇಬಾರದು ಹಾಗೆ ಮಾಡುವ ಪರಿಸ್ಥಿತಿ ಏನಾದರೂ ಬಂದಲ್ಲಿ ನಾಲಕ್ಕು ಕಡೆ ಸ್ಕ್ರೀನ್ ಹಾಕಿ ಮಂದಿರ ಮುಚ್ಚಿರುವಂತೆ ನೋಡಿಕೊಳ್ಳಿ. ಇನ್ನು ಕೆಲವರು ಮನೆಯ ಮೆಟ್ಟಿಲುಗಳ ಕೆಳಗೆ ಖಾಲಿ ಜಾಗ ಇದೆ ಎಂದು ಅಲ್ಲೇ ದೇವರಿಗೆ ಮಂದಿರವನ್ನು ನಿರ್ಮಾಣ ಮಾಡುತ್ತಾರೆ ನೀವು ಮಾಡುತ್ತಿರುವುದು ದೊಡ್ಡ ತಪ್ಪು ಮೆಟ್ಟಿಲುಗಳಲ್ಲಿ ರಾಹುವಿನ ಸ್ಥಳವಿದೆ ಹಾಗಾಗಿ ನೀವು ಮಂದಿರವನ್ನು ಅಲ್ಲಿ ನಿರ್ಮಿಸಲೇಬಾರದು

ಒಂದು ವೇಳೆ ನಿರ್ಮಾಣ ಮಾಡಿದ್ದೆ ಆದಲ್ಲಿ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ. ದೇವರ ಕೋಣೆ ಹೇಗಿದ್ದರೆ ಆ ಮನೆಗೆ ಲಕ್ಷ್ಮಿ ದೇವಿ ಬರುತ್ತಾಳೆ ಎಂಬುದನ್ನು ತಿಳಿದುಕೊಳ್ಳೋಣ ಇದನ್ನು ಪಾಲಿಸಿದರೆ ಕುಬೇರನಂತೆ ನೀವು ಶ್ರೀಮಂತರಾಗುವುದು ಖಚಿತ ಮನೆಯಲ್ಲಿ ದೇವರ ಕೋಣೆ ಇರುವುದು ಒಂದು ಪಾಸಿಟಿವ್ ಎನರ್ಜಿಯನ್ನು ನೀಡುತ್ತದೆ ದೇವರನ್ನು ಮನೆಯಲ್ಲಿ ಇಟ್ಟಿದ್ದೀವಿ ಎಂದಾದರೆ ದಿನದಲ್ಲಿ ಒಂದು ಬಾರಿಯಾದರೂ ಅಗರಬತ್ತಿ, ಆರತಿ, ದೀಪಾ, ಕರ್ಪೂರವನ್ನು ಹಚ್ಚಿ ಪೂಜಿಸುತ್ತೇವೆ ಪೂಜಿಸಲೇಬೇಕು

ಇದರಿಂದ ನಮ್ಮ ದಿನ ಉತ್ತಮವಾಗಿರುತ್ತದೆ ಅಷ್ಟೇ ಅಲ್ಲ ಮನಸ್ಸು ಶಾಂತ ರೀತಿಯಿಂದ ಇರುತ್ತದೆ, ಸಂತೋಷವಾಗಿರಲು ಸಾಧ್ಯವಾಗುತ್ತದೆ. ಇದೆಲ್ಲಾ ನಿಮಗೆ ಗೊತ್ತೇ ಇದೆ, ಇದರ ಜೊತೆ ಜೊತೆಗೆ ಪೂಜಾ ಮಂದಿರಿಗಳಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಲಕ್ಷ್ಮೀದೇವಿ ಸಂತೋಷದಿಂದ ನಿಮ್ಮನ್ನು ಆಶೀರ್ವದಿಸುತ್ತಾಳೆ, ಇದರಿಂದ ನಿಮ್ಮ ಬಳಿ ಇರುವ ಹಣ ಹೆಚ್ಚಾಗುವುದಲ್ಲದೆ ನೀವು ಕುಬೇರರಾಗುವುದು ಖಚಿತ. ಹಾಗಾದ್ರೆ ಆ ವಸ್ತುಗಳು ಯಾವುವು ಇದನ್ನ ಇಡೋದ್ರಿಂದ ಏನಾಗುತ್ತದೆ ಅನ್ನೋದನ್ನ ನೋಡೋಣ ಮೊದಲನೆಯದಾಗಿ ನವಿಲುಗರಿ.

ಹೌದು ನವಿಲುಗರಿಯನ್ನು ದೇವರ ಕೋಣೆಯಲ್ಲಿ ಇಡುವುದು ಶುಭ ವಾಸ್ತು ಶಾಸ್ತ್ರದಲ್ಲಿ ನವಿಲುಗರಿಗೆ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ ವಾಸ್ತು ಪ್ರಕಾರ ನವಿಲುಗರಿ ದೇವರ ಮನೆಯಲ್ಲಿ ಇದ್ದರೆ ಪಾಸಿಟಿವ್ ಎನರ್ಜಿ ಹೆಚ್ಚತ್ತದೆ ನಿನ್ನ ಕೃಷ್ಣನಿಗೂ ನವಿಲುಗರಿ ಎಂದರೆ ತುಂಬಾನೆ ಇಷ್ಟ ಎನ್ನುವುದು ನಿಮಗೆ ಗೊತ್ತೇ ಇದೆ ಹಾಗಾಗಿ ಪೂಜಾ ಕೋಣೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಆವರಿಸುತ್ತದೆ.

ಜೊತೆಗೆ ಶ್ರೀ ಕೃಷ್ಣನ ಕೃಪೆಯು ಸದಾ ನಿಮ್ಮ ಮೇಲಿರುತ್ತದೆ ಇಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುವುದೇ ಇಲ್ಲ. ದೇವರ ಮನೆಯಲ್ಲಿ ಇಡಬೇಕಾದ ಮತ್ತೊಂದು ವಸ್ತು ಎಂದರೆ ಶಂಖ, ಪ್ರತಿದಿನ ದೇವರ ಪೂಜೆ ಮಾಡುವಾಗ ಶಂಕದ ಪೂಜೆಯನ್ನು ಕೂಡ ಮಾಡಬೇಕು , ಪ್ರತಿದಿನ ಪೂಜೆಯನ್ನು ಮಾಡುವಾಗ ಶಂಕವನ್ನು ಊದಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಉದ್ಭವಿಸುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ

ಹಾಗಾಗಿ ಶಂಖವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದನ್ನು ಮರೆಯಬೇಡಿ ಹಿಂದೂ ಪುರಾಣಗಳಲ್ಲಿ ಅಗ್ನಿ ಮತ್ತು ಗಂಗಾಜಲಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ ಜೀವನದ ಹೆಚ್ಚಿನ ಆಚರಣೆಗಳಲ್ಲಿ ಗಂಗಾಜಲವನ್ನು ಬಳಕೆ ಮಾಡಲಾಗುತ್ತದೆ ಈ ಗಂಗಾಜಲ ಎಷ್ಟೊಂದು ಪವಿತ್ರ ಎಂದರೆ ಯಾವತ್ತೂ ಕೂಡ ಇದು ಹಾಳಾಗುವುದಿಲ್ಲ ಹಾಗಾಗಿ ದೇವರ ಕೋಣೆಯಲ್ಲಿ ಗಂಗಾಜಲಕ್ಕೆ ಮುಖ್ಯಸ್ಥಾನವನ್ನು ನೀಡಲಾಗಿದೆ ಪೂಜಾ ಸ್ಥಳದಲ್ಲಿ ಗಂಗಾಜಲಕ್ಕೆ ಸ್ಥಾನವನ್ನು ನೀಡಿದರೆ ಲಕ್ಷ್ಮೀದೇವಿ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ ನಿಮಗೆ ಆರ್ಥಿಕ ಸಮಸ್ಯೆಯಾಗಲಿ ಆರೋಗ್ಯ ಸಮಸ್ಯೆಯಾಗಲಿ ಯಾವುದು ಕೂಡ ಕಾಡುವುದಿಲ್ಲ

ಇನ್ನು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಮತ್ತೊಂದು ಉಪಾಯ ಏನೆಂದರೆ ನಿಮ್ಮ ದೇವರ ಕೋಣೆಯಲ್ಲಿ ಲಕ್ಷ್ಮಿ ಆಕರ್ಷಣೆಯ ಬೇರು ತಾಮ್ರ ಕಡ್ಡಿ ಸೊಪ್ಪು ದುಷ್ಟನಾಶಿನಿ ಸೊಪ್ಪು ಇವುಗಳನ್ನು ತರಿಸಿ ಪೂಜೆ ಮಾಡುವುದರಿಂದ ನಿನ್ನ ಮನೆ ಕುಬೇರನ ಮನೆ ಆಗುತ್ತದೆ. ಹಾಗೂ ಆದಾಯ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತದೆ ನೀವು ಶ್ರೀಮಂತರಾಗುತ್ತೀರಾ.
ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದಲ್ಲಿ ದಯವಿಟ್ಟು ನಮ್ಮ ಒಂದು ಪೇಜ್ ಅನ್ನು ಲೈಕ್ ಮಾಡಿ ಓಂ ಶ್ರೀ ಲಕ್ಷ್ಮಿ ದೇವಿಯೇ ನಮಃ ಕಮೆಂಟ್ ಮಾಡಿ ಶೇರ್ ಮಾಡಿ ಎಲ್ಲರಿಗೂ ಒಳ್ಳಯದಾಗಲಿ ಧನ್ಯವಾದಗಳು.

Leave A Reply

Your email address will not be published.