Ultimate magazine theme for WordPress.

moles astrology ಗರುಡ ಮಚ್ಚೆ ಎಂದರೇನು? 

0 101

moles astrologyನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಗರುಡ ಮೆಚ್ಚಗೂ ಹಾಗೂ ಹುಣ್ಣಿಮೆಗೆ ಇರುವ ಸಂಬಂಧವೇನು ಎಂಬುದನ್ನು ತಿಳಿಸಿಕೊಡುತ್ತೇವೆ. ಮಚ್ಚೆಗಳ ಬಗ್ಗೆ ನಿಮಗೆ ಕೆಲವೊಂದಿಷ್ಟು ಮಾಹಿತಿಗಳನ್ನು ತಿಳಿಸಿಕೊಡುತ್ತೇನೆ ಈ ಮಚ್ಚೆಗಳು ಮನುಷ್ಯ ಶರೀರದ ಮೇಲೆ ಸಾಮಾನ್ಯವಾಗಿರುತ್ತದೆ ಈ ಮಚ್ಚೆಗಳು ಮನುಷ್ಯನ ಸ್ವಭಾವವನ್ನು ಭವಿಷ್ಯದ ವಿಷಯಗಳನ್ನು ಕೂಡ ಸೂಚಿಸುವಂತಹ ಒಂದು ಸಂಕೇತ ಇರುವುದು ಒಂದು ಆಶ್ಚರ್ಯಕರ ಸಂಗತಿ ಮನುಷ್ಯನ ಶರೀರದ ಮೇಲೆ ಮೂಡುವಂತಹ

ಈ ಮಚ್ಚೆಗೆ ಹಿಂದಿನಿಂದಲೂ ಒಂದು ವಿಶೇಷದವಾದಂತಹ ಅರ್ಥವನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ. ಹಾಗೆ ಜ್ಯೋತಿಷ್ಯದ ಪ್ರಕಾರ ಕೂಡ ಶರೀರದ ಮೇಲಿರುವಂತಹ ವ್ಯಕ್ತಿಯ ಅಭಿವೃದ್ಧಿಗೆ ಹಾಗೆ ಆ ವ್ಯಕ್ತಿಯ ಪತನಕ್ಕೂ ಕೂಡ ಕಾರಣವಾಗುತ್ತದೆ. ಆ ಕಪ್ಪು ಚುಕ್ಕೆ ವ್ಯಕ್ತಿಯ ವ್ಯಕ್ತಿತ್ವಕ್ಕೂ ಕೂಡ ಕಾರಣವಾಗುತ್ತದೆ, ನಮ್ಮ ಮೈಯಲ್ಲಿರುವಂತಹ ಮಚ್ಚೆಗಳು ಏನೆಲ್ಲ ಹೇಳುತ್ತವೆ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ ಈ ಈ ಮಚ್ಚೆಯಲ್ಲಿ ವ್ಯಕ್ತಿಯ ಅದೃಷ್ಟವೂ ಕೂಡ ಅಡಗಿರುತ್ತದೆ.

ಆದರೆ ಯಾವ ಜಾಗದಲ್ಲಿ ಮಚ್ಚೆ ಇದ್ದರೆ ಒಳಿತಾಗುತ್ತದೆ ಯಾವ ಜಾಗದಲ್ಲಿ ಮಚ್ಚೆ ಇದ್ದರೆ ಕೆಡಕಾಗುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರತಿಳಿಸಿದೆ. ಹಾಗೆ ಮಚ್ಚೆಯಲ್ಲಿ ಬಹಳ ವಿಧಗಳು ಕೂಡ ಇದೆ ಕೆಲವು ಮಚ್ಚೆ ಗಳನ್ನು ಸರ್ಪ ಮಚ್ಚೆಗಳು ಎಂದು ಹೇಳುತ್ತಾರೆ, ಇನ್ನು ಕೆಲವು ಮಚ್ಚೆಗಳನ್ನು ಗರುಡ ಮಚ್ಚೆಗಳು ಎಂದು ಕರೆಯುತ್ತಾರೆ, ಇನ್ನೂ ಕೆಲವು ಮಚ್ಚೆಗಳಿಗೆ ಮೀನು ಮಚ್ಚೆಗಳು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಹುಟ್ಟಿನ ಮಚ್ಚೆ ಹಾಗೆಯೇ ಹುಟ್ಟಿನ ಮಚ್ಚೆ ಕೂಡ ಇರುತ್ತದೆ.

ಸಾಮಾನ್ಯವಾಗಿ ಹುಟ್ಟಿನ ಮಚ್ಚೆ ಶರೀರದ ಯಾವುದಾದರೂ ಒಂದು ಭಾಗದಲ್ಲಿ ಇದ್ದೇ ಇರುವಂತದ್ದು, ಇದು ಕೆಲವರಿಗೆ ಕಪ್ಪು ಬಣ್ಣದಲ್ಲಿ ಇರುತ್ತದೆ ಕೆಲವರಿಗೆ ಕೆಂಪು ಬಣ್ಣದಲ್ಲಿರುತ್ತದೆ ಇನ್ನು ಕೆಲವರಿಗೆ ಹಸಿರು ಬಣ್ಣದಲ್ಲಿರುತ್ತದೆ. ಸ್ನೇಹಿತರೆ ಈ ದಿನ ನಾನು ಹೇಳುತ್ತಿರುವುದು ಗರುಡ ಮಚ್ಚೆ ಬಗ್ಗೆ ನಮ್ಮ ಪುರಾಣದ ಪ್ರಕಾರ ಗರುಡ ವಿಷ್ಣುವಿನ ವಾಹನ ಗರುಡ ಮಚ್ಚೆ ಇರುವಂತವರು ಶಕ್ತಿಶಾಲಿ ಆಗಿರುತ್ತಾರೆ. ಕಷ್ಟಗಳನ್ನು ಎದುರಿಸುವಂತಹ ವ್ಯಕ್ತಿತ್ವ ಇವರದಾಗಿರುತ್ತದೆ, ಹಾಗೆಯೇ ಗರುಡನಂತೆ ಸ್ವಾಮಿನಿಷ್ಠರು, ಹಾಗೆಯೇ ಮಚ್ಚೆ ಇರುವವರು ಅದೃಷ್ಟವಂತರು ಅಂತ ಕೂಡ ಹೇಳಬಹುದು, ಇವರಿಗೆ ಲಕ್ಷ್ಮಿ ಅನುಗ್ರಹ ಇರುತ್ತದೆ.

ಹಾಗಾಗಿ ಗರುಡ ಮಚ್ಚೆ ಇರುವವರು ಹಣಕಾಸಿನಲ್ಲಿ ಬಲಶಾಲಿಗಳಾಗಿರುತ್ತಾರೆ. ಸ್ನೇಹಿತರೆ ಸಾಮಾನ್ಯವಾಗಿ ಗರುಡ ಮಚ್ಚೆ ಪುರುಷರಲ್ಲಿ ಇರುತ್ತದೆ ಅದರಲ್ಲೂ ಕೈಯಲ್ಲಿ ತೊಡೆಯ ಭಾಗದಲ್ಲಿ ಬೆನ್ನಿನ ಭಾಗದಲ್ಲಿ ಇವು ಕಾಣಿಸಿಕೊಳ್ಳುತ್ತದೆ. ಬಲಭಾಗದ ತೊಡೆಯ ಮೇಲೆ ಬಂದರೆ ದೈವಿ ಭಕ್ತರು ಅಂತ ಹೇಳಿ ಕರೆಯಬಹುದು ಜೊತೆಗೆ ಇವರು ಬಹಳಷ್ಟು ಸೂಕ್ಷ್ಮ ವ್ಯಕ್ತಿಗಳು ಅಂದರೆ ದೊಡ್ಡ ಪಕ್ಷಿ ಹೇಗೆ ಮೇಲೆ ಹಾರುತ್ತಾ ಭೂಮಿ ಮೇಲೆ ಇರುವಂತಹ ಪ್ರಾಣಿ ಪಕ್ಷಿಗಳನ್ನು ಹೇಗೆ ವೀಕ್ಷಣೆ ಮಾಡುತ್ತೋ ಅಷ್ಟು ತೀಕ್ಷ್ಣ ವಾಗಿರುತ್ತದೆ

ಇವರ ದೃಷ್ಟಿ, ನೇರ ನುಡಿ ಇವರದಾಗಿರುತ್ತದೆ, ಕಷ್ಟಗಳನ್ನು ಸಹಿಸುವ ತಾಳ್ಮೆ ಇರುತ್ತದೆ ಕಾಲುಗಳು ಬಹಳ ಪ್ರಬಲವಾಗಿರುತ್ತದೆ ಇವರಿಗೆ, ಪ್ರಯಾಣ ಮಾಡುವ ಆಸೆಯನ್ನು ಹೊಂದಿರುತ್ತಾರೆ ಸದಾ ಕಾಲ ಸಂಚಾರವನ್ನು ಮಾಡುತ್ತಿರುತ್ತಾರೆ ದುಷ್ಟಪುಷ್ಟವಾದ, ಬಲಿಷ್ಠವಾದಂತ ದೇಹ ಇವರಿಗೆ ಇರುತ್ತದೆ ಕಣ್ಣಿನ ಮೇಲಿರುವ ಹುಬ್ಬು ದಪ್ಪವಾಗಿರುತ್ತದೆ. ಗುರು ಹಿರಿಯರ ಮೇಲೆ ಗೌರವವು ಕೂಡ ಹೆಚ್ಚಾಗಿರುತ್ತದೆ ಇವರಿಗೆ. ಗರುಡ ಮಚ್ಚೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಎತ್ತರದ ಹುದ್ದೆಯಲ್ಲಿ ಇರುತ್ತಾರೆ,

ಕೆಲಸ ಕಾರ್ಯಗಳನ್ನು ತುಂಬಾ ಹಠದಿಂದ ಮಾಡುತ್ತಾರೆ ಮಾನಸಿಕವಾಗಿ ತುಂಬಾ ಬಲಶಾಲಿಗಳಾಗಿರುತ್ತಾರೆ. ಏನು ಸ್ತ್ರೀಯರಿಗೆ ಗರುಡ ಮಚ್ಚೆ ಎಡ ಭಾಗದಲ್ಲಿ ಇದ್ದರೆ ಉತ್ತಮ ಎಂದು ಹೇಳುತ್ತಾರೆ ಏಕೆಂದರೆ ಎಡ ಭಾಗದಲ್ಲಿರುವಂತಹ ಗರುಡ ಮಚ್ಚೆ ಇರುವಂತಹ ಮಹಿಳೆಯರು ತುಂಬಾ ಧೈರ್ಯಶಾಲಿಗಳು, ಮನೆಯಲ್ಲಿ ಇವರದ್ದೇ ಯಜಮಾನಿಕೆ ಇಡೀ ಸಂಸಾರದ ಆಗುಹೋಗುಗಳನ್ನು ನಿಭಾಯಿಸುವ ಶಕ್ತಿ ಇವರಿಗೆ ಇರುತ್ತದೆ. ಇಂತಹ ವ್ಯಕ್ತಿಗಳು ಮಾತಿನಲ್ಲೂ ಕೂಡ ಬಹಳ ಚತುರರಾಗಿರುತ್ತಾರೆ, ಲಕ್ಷ್ಮಿ ಕಳೆಯುವರ ಮುಖದಲ್ಲಿ ಇರುತ್ತದೆ ಇಂತಹ ಸ್ತ್ರೀಯರನ್ನು ವಿವಾಹವಾಗುವಂತಹ ತುಂಬಾ

ಶ್ರೇಯಸ್ಸು ಎಂದು ಹೇಳಬಹುದು ಹಾಗೆಯೇ ಗಂಡು ಮಕ್ಕಳಿಗೆ ಬಲಭಾಗದಲ್ಲಿ ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಗರುಡ ಮಚ್ಚೆ ಇದ್ದರೆ ತುಂಬಾ ಒಳ್ಳೆಯದು. ಅದರಲ್ಲೂ ಗಂಡು ಮಕ್ಕಳಿಗೆ ಬಲಬದಿ ಭುಜದಲ್ಲಿ ಬಲ ಹೊಟ್ಟೆಯಲ್ಲಿ ಮಹಾದಾನಿಗಳಾಗಿರುತ್ತಾರೆ ಅನ್ನದಾನ, ಹಾಗೂ ಸಮಾಜ ಸೇವಕನಾಗಿ ಕೆಲಸವನ್ನು ನಿರ್ವಹಿಸುತ್ತಾ ಇರುತ್ತಾರೆ. ಹೆಣ್ಣು ಮಕ್ಕಳಿಗೆ ದೇಹದ ಎಡ ಭಾಗದಲ್ಲಿದ್ದರೆ ಶ್ರೇಯಸ್ಸು ಬೆನ್ನಿನ ಮೇಲೆ ಇದ್ದರೆ ತವರಿಗೆ ಕೀರ್ತಿಯನ್ನು ತರುತ್ತಾರೆ ಹೊಕ್ಕಳಿನಿಂದ ಮೇಲ್ಭಾಗದಲ್ಲಿದ್ದರೆ ಸಂಸಾರವಂತೆ.

ದೈವಿಕ ಭಕ್ತಿ ಸಾತ್ವಿಕ ಗುಣಗಳನ್ನು ಹೊಂದಿರುತ್ತಾರೆ ದೇವರಾದ ಆರಾಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಜೊತೆಗೆ ಕುಟುಂಬದ ಕಣ್ಮಣಿ ಎಂದು ಎನಿಸಿಕೊಳ್ಳುತ್ತಾರೆ ಏಕೆಂದರೆ ಸಂಸಾರವನ್ನು ಇವರು ಬಹಳ ಸೂಕ್ಷ್ಮ ದೃಷ್ಟಿಯಿಂದ ಗಮನವನ್ನು ಹರಿಸುತ್ತಾ ಇರುತ್ತಾರೆ, ಹಾಗಾಗಿ ಗರುಡ ಮಚ್ಚೆ ಸ್ತ್ರೀಯರಿಗೆ ಇರಲಿ ಪುರುಷರಿಗಿರಲಿ ಅಂತಹವರನ್ನು ವಿವಾಹವಾಗುವುದು ಶ್ರೇಯಸ್ಸುಕರ ಸಾಂಸಾರಿಕ ಜೀವನ ಹಣಕಾಸಿನ ಜೀವನ ತುಂಬಾ ಉತ್ಕೃಷ್ಟಕರವಾಗಿರುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಇನ್ನೊಂದು ವಿಶೇಷ ಏನೆಂದರೆ ಗರುಡ ಮಚ್ಚೆ ಇರುವವರನ್ನು ಸರ್ಪ ನೋಡಿದರೆ ಅದು ಅಲ್ಲಿಂದ ಜಾರಿ ಹೋಗುತ್ತದೆ ಅವರ ಎದುರಿಗೆ ಬರುವುದಿಲ್ಲ ಏಕೆಂದರೆ ಗರುಡ ಮತ್ತು ಸರ್ಪ ಪರಸ್ಪರ ವೈರಿಗಳು ಗರುಡ ಮಚ್ಚೆ ಇರುವವರು ದಾರಿಯಲ್ಲಿ ನಡೆದುಕೊಂಡು ಹೋದರೂ ಕೂಡ ಸರ್ಪ ಆ ದಾರಿಯಲ್ಲಿ ಬರಲ್ಲ ಅಂತ ಹೇಳುತ್ತಾರೆ. ಏಕೆಂದರೆ ಆ ನಡೆದುಕೊಂಡು ಹೋಗಿರುವವರ ಪ್ರಭಾವ ಸ್ವಲ್ಪ ಸಮಯವಾದರೂ ಕೂಡ ಇರುತ್ತದೆ, ಹಾಗಾಗಿ ಸರ್ಪ ದಾರಿಯಲ್ಲಿ ಬರಲ್ಲ.

ವಿಷ ಜಂತುಗಳಿಂದ ಗರುಡ ಮಚ್ಚೆ ಇರುವವರಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ ಸಾಮಾನ್ಯವಾಗಿ ಹಾವು ಚೇಳಿನ ವಿಷ ಇವರ ದೇಹಕ್ಕೆ ಬೇಗ ಏರಲ್ಲ ಎಂದು ಹೇಳುತ್ತಾರೆ. ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಗರುಡ ಮಚ್ಚೆ ಇರುವವರು ಹುಣ್ಣಿಮೆಯ ದಿನ ಸರ್ಪವನ್ನು ನೋಡಿದರೆ ಸರ್ಪದ ಶಾಪಕ್ಕೆ ಗುರಿ ಆಗುತ್ತಾನೆ ಎಂದು ಹೇಳಲಾಗಿದೆ. ಏಕೆಂದರೆ ಹುಣ್ಣಿಮೆಯ ದಿನ ಸರ್ಪಗಳಿಗೆ ವಿಶೇಷವಾದಂತಹ ಶಕ್ತಿ ಇರುತ್ತದೆ ಹಾಗೆಯೆ ತಮ್ಮ ದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಹುಣ್ಣಿಮೆಯ ದಿನ ಗರುಡ ಮಚ್ಚೆ ಇರುವವರನ್ನು ನೋಡುವುದಕ್ಕಾಗಿ ಕಾಯುತ್ತಾ ಇರುತ್ತವೆ.

ಮನುಷ್ಯ ನೋಡಿದರೆ ಸರ್ಪದ ಶಾಪ ಬರುತ್ತದೆ, ಹಾಗೆಯೇ ಸರ್ಪಗಳು ಮನುಷ್ಯನನ್ನು ನೋಡಿದರೆ ಮನುಷ್ಯನಿಂದ ಆಗುವ ತೊಂದರೆಗಳು ಸರ್ಪಗಳಿಗೆ ಬರಲ್ಲ. ಸಾಮಾನ್ಯವಾಗಿ ಇದು ಹುಣ್ಣಿಮೆಯ ದಿನ ಗರುಡ ಮಚ್ಚೆ ಇರುವಂತಹ ವ್ಯಕ್ತಿ ಸರ್ಪ ಇವು ಎರಡು ಭೇಟಿ ಆಗಲ್ಲ ಅಂತ ಹೇಳುತ್ತಾರೆ. ಇನ್ನು ಸಾಮಾನ್ಯವಾಗಿ ಮೈಮೇಲೆ ಗರುಡ ಮಚ್ಚೆ ಗರುಡ ಪಕ್ಷಿಯ ಕೊಕ್ಕಿನ ಆಕಾರದಲ್ಲಿ ಇರುತ್ತದೆ, ರೆಕ್ಕೆಯ ಆಕಾರದಲ್ಲಿ ಇರುತ್ತೆ, ಕಾಲಿನ ಆಕಾರದಲ್ಲಿ ಇರುತ್ತದೆ, ಇನ್ನೂ ಕೆಲವರಿಗೆ ಇಡೀ ಪಕ್ಷಿಯ ಆಕಾರದಲ್ಲಿ ಇರುತ್ತದೆ ಇದನ್ನು ನಾವು ಸಾಮಾನ್ಯವಾಗಿ ನೋಡಬಹುದು. ಇಂತಹವರನ್ನು ಮದುವೆಯಾಗುವುದು ಕೂಡ ಅದೃಷ್ಟ ಎಂದು ಹೇಳಬಹುದು

ಹಾಗಾಗಿ ಗರುಡ ಮಚ್ಚೆ ಇರುವವರು ವಿಷ್ಣುವಿನ ಆರಾಧನೆಯನ್ನು ಮಾಡಬೇಕು,ವಿಷ್ಣುವಿನ ದೇವಾಲಯದಲ್ಲಿ ಭಗವಂತನ ದರ್ಶನವನ್ನು ಮಾಡುವಂತದ್ದು, ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡುವಂಥದ್ದು, ವಿಷ್ಣುವಿನ ಸ್ತೋತ್ರವನ್ನು ಪಠಣೆ ಮಾಡುವುದು ಉತ್ತಮ. ಗರುಡ ಮತ್ತೆ ಇರುವಂತಹವರು ಸುದರ್ಶನ ಹೋಮವನ್ನು ಮಾಡಿಸುವುದು ಶ್ರೇಯಸ್ಕರ ಎಂದು ಹೇಳುತ್ತಾರೆ. ಮಧ್ಯ ಮಾಂಸವನ್ನು ತ್ಯಜಿಸಿ ಭಗವಂತನ ಸೇವೆಗೆ ತೊಡಗಿಸಿಕೊಳ್ಳುವುದು ಶ್ರೇಷ್ಠ. ಏಕೆಂದರೆ ಇವರಿಗೆ ಗರುಡ ಮಚ್ಚೆ ಇರುವುದರಿಂದ ಭಗವಂತನ ಸೇವೆ ಮಾಡುವುದು ಅಪೂರ್ವ ಆದ ಅವಕಾಶ ಏಕೆಂದರೆ

ಎಲ್ಲರಿಗೂ ಕೂಡ ಗರುಡ ಮಚ್ಚೆ ಶರೀರದಲ್ಲಿ ಕಾಣಿಸಿಕೊಳ್ಳುವುದಿಲ್ಲ, ಯಾರ ಶರೀರದಲ್ಲಿ ಗರುಡ ಮಚ್ಚೆ ಇರುತ್ತದೆ ಅವರ ಮಾತುಗಳು ನಿಜವಾಗಿರುತ್ತದೆ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ನಾಲಿಗೆ ಮೇಲೆ ಯಾವುದಾದ್ರೂ ಮುಚ್ಚೆ ಅಥವಾ ಗರುಡ ಇದ್ದರೂ ಕೂಡ ಅವರ ಮಾತುಗಳು ನಿಜವಾಗುತ್ತದೆ ಅನ್ನುವ ನಂಬಿಕೆ ಕೂಡ ನಮ್ಮ ಹಿರಿಯರಲ್ಲಿ ಇದೆ. ಸ್ನೇಹಿತರೆ ಗರುಡ ಮಚ್ಚೆ ಇರುವವರನ್ನು ವಿವಾಹವಾಗುವುದು, ಅಂಥವರ ಜೊತೆ ಸ್ನೇಹವನ್ನು ಬೆಳೆಸುವುದು, ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುವುದರಿಂದ ತುಂಬಾ ಶ್ರೇಯಸ್ಸು ಸಿಗುತ್ತದೆ, ಹಾಗೂ ಅಭಿವೃದ್ಧಿಯನ್ನು ಕಾಣಲು ಸಹ ಸಾಧ್ಯವಾಗುತ್ತದೆ.ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಹಾಗೂ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು

Leave A Reply

Your email address will not be published.