Ultimate magazine theme for WordPress.

pooja room as per vastuದೇವರ ಮನೆಯಲ್ಲಿ ಈ ವಸ್ತು ಇರಬಾರದು

0 539

pooja room as per vastu ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುವನ್ನು ಇಡಬಾರದು. ಇಟ್ಟರೇ ಕಷ್ಟಗಳು ತಪ್ಪಿದ್ದಲ್ಲ ಎನ್ನುವ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರು ತಮ್ಮ ದೇವರ ಕೋಣೆಯಲ್ಲಿ ತಮಗೆ ಇಷ್ಟವಾದ ದೇವರ ಫೋಟೋಗಳು, ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತಿರುತ್ತಾರೆ. ಶಾಸ್ತ್ರಗಳ ಪ್ರಕಾರ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೇ ಎಷ್ಟೂ ಒಳ್ಳೆಯದಾಗುತ್ತದೆಯೋ ಹಾಗೆಯೇ ಕೆಲವೊಂದು ವಸ್ತುಗಳನ್ನು ಇಟ್ಟರೇ ಕೆಟ್ಟದ್ದು ಆಗುತ್ತದೆ. ಕೆಲವು ವಸ್ತುಗಳನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟಿದ್ದೇ ಆದ್ದಲ್ಲಿ ಮನೆಯಲ್ಲಿ ನೆಗೆಟಿವಿಟಿ, ಜಗಳ, ಕಿರಿಕಿರಿ ಹೆಚ್ಚಾಗುತ್ತದೆ. ಮೊದಲಿಗೆ ಮನೆಯಲ್ಲಿ ಮತ್ತು ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ತಿಳಿಸುತ್ತೇವೆ.

1 ಈಗಿನ ಕಾಲದಲ್ಲಿ ನಾವು ಹಿತ್ತಾಳೆ, ಬೆಳ್ಳಿ ದೀಪಗಳನ್ನು ಬಳಸುತ್ತೀವಿ. ಆದರೇ ಹಳೆಯ ಕಾಲದಲ್ಲಿ ಮಣ್ಣಿನ ದೀಪವನ್ನು ಬೆಳಗುತ್ತಿದ್ದರು. ಈ ಮಣ್ಣಿನ ದೀಪದಲ್ಲಿ ಭೂತಾಯಿಯ ಅಂಶವಿರುವುದರಿಂದ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಮಣ್ಣೀನ ದೀಪಗಳನ್ನು ಬೆಳಗುವುದಿರಿಂದ ನಮ್ಮ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ದೇವರ ಆಶೀರ್ವಾದ ಬೇಗನೆ ಸಿಗುತ್ತದೆ. ಬೆಲ್ಲದ ದೀಪವನ್ನು ಹಚ್ಚುವುದರಿಂದ ವಿಶೇಷ ಫಲಗಳು ಸಿಗುತ್ತವೆ ಎಂದು ಹಿರಿಯರು ಹೇಳುತ್ತಿದ್ದರು.

ಸ್ವಸ್ತಿಕ್ ಚಿಹ್ನೆ ತುಂಬಾನೇ ಶುಭ ಎಂದು ಹೇಳುತ್ತಾರೆ. ಈ ಚಿಹ್ನೆಯನ್ನು ದೇವರ ಮನೆಯಲ್ಲಿ ಬರೆಯುವುದರಿಂದ ಮನೆಯಲ್ಲಿ ಯಾವಾಗಲೂ ಪಾಸಿಟಿವ್ ವೈಬ್ರೇಷನ್ ಸೇರುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಓಡಿಹೋಗುತ್ತವೆ. ಹಾಗಾಗಿ ದೇವರ ಮನೆಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಕಡ್ಡಾಯವಾಗಿ ಬರೆಯಬೇಕು.

ದೇವರ ಮನೆಯಲ್ಲಿ ಕಳಸ ಇರಲೇಬೇಕು. ಕಳಸ ಲಕ್ಷ್ಮಿದೇವಿಯ ಪ್ರತೀಕ. ಯಾರ ಮನೆಯಲ್ಲಿ ಕಳಸವಿರುತ್ತದೆಯೋ ಆ ಮನೆಗೆ ಲಕ್ಷ್ಮಿ ಅತೀ ಶೀಘ್ರದಲ್ಲಿ ಪ್ರವೇಶ ಮಾಡುತ್ತಾಳೆಂದು ಭಗವಂತ ಶ್ರೀಕೃಷ್ಣ ಹೇಳುತ್ತಾರೆ.

ಲಕ್ಷ್ಮಿದೇವಿಗೆ ಪ್ರಿಯವಾದ ವಸ್ತು ಶಂಖ. ಈ ಒಂದು ವಸ್ತು ದೇವರ ಮನೆಯಲ್ಲಿದ್ದರೇ ಅತೀ ಶುಭ. ಮನೆಯಲ್ಲಿ ಶಂಖವಿದ್ದರೇ ಲಕ್ಷ್ಮಿದೇವಿ ಬೇಗನೆ ಬರುತ್ತಾಳೆ. ನಾವು ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಮತ್ತು ಏನು ತೊಂದರೆಯಾಗುತ್ತದೆ ಎಂದು ತಿಳಿಯೋಣ. pooja room

ಗಣೇಶನ ವಿಗ್ರಹ ಮತ್ತು ಪೋಟೋವನ್ನು ಬೆಸ ಸಂಖ್ಯೆಯಲ್ಲಿಡಬಾರದು. ಬೆಸ ಸಂಖ್ಯೆ ಎಂದರೆ 1, 3, 5 ಈ ತರಹ ಗಣೇಶನ ಪೋಟೋ ಅಥವಾ ವಿಗ್ರಹ ಮನೆಯಲ್ಲಿಡಬಾರದು. ನಿಮ್ಮ ಮನೆಯಲ್ಲಿ ಎರಡು ಗಣೇಶ ಫೋಟೋ ಅಥವಾ ವಿಗ್ರಹವಿದ್ದರೇ ನಿಮಗೆ ಒಳ್ಳೆಯ ಫಲಗಳು ಸಿಗುತ್ತವೆ.

ಗಣೇಶನ ಮೂರ್ತಿಯನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಮುಖ್ಯ ಪ್ರವೇಶದಲ್ಲಿ ಇಟ್ಟಿರುತ್ತಾರೆ. ಆ ಗಣೇಶನ ಮುಖ ಹೊರಗಡೆ ನೋಡುವ ರೀತಿ ಇರಬಾರದು. pooja room ಈ ರೀತಿ ಇದ್ದರೇ ಕೆಟ್ಟ ಫಲಗಳನ್ನು ಅನುಭವಿಸಬೇಕಾಗುತ್ತದೆ. ದಯವಿಟ್ಟು ಈ ತಪ್ಪನ್ನು ಮಾಡಬೇಡಿ.

ನಿಮ್ಮ ದೇವರಮನೆಯ ಕಳಸದ ಕೆಳಗೆ ಅಕ್ಕಿ ಕಾಳುಗಳನ್ನು ಹಾಕಿರುತ್ತೀರ ಮತ್ತು ಅಕ್ಷತೆ ಎಂದು ಒಂದು ಬಟ್ಟಲಿನಲ್ಲಿಟ್ಟಿರುತ್ತೀರಿ. ಅದು ಹೊಡೆದಿರಬಾರದು ಅಥವಾ ನುಚ್ಚು ಅಕ್ಕಿ ಆಗಿರಬಾರದು. ಆ ಅಕ್ಕಿ ಕಾಳು ಪರಿಶುದ್ಧವಾಗಿರಬೇಕು.

ನೀವು ದೇವರ ಮನೆಯಲ್ಲಿ ನಿಮ್ಮ ಪೂರ್ವಜರ ಫೋಟೋವನ್ನು ಇಟ್ಟಿದ್ದರೆ ಆ ಫೋಟೋವನ್ನು ಕೂಡಲೇ ಅಲ್ಲಿಂದ ತೆಗೆಯಬೇಕು. ಏಕೆಂದರೆ ದೇವರ ಮನೆಯಲ್ಲಿ ದೇವರ ಫೋಟೋ ಬಿಟ್ಟು ಬೇರೆ ಯಾವುದೇ ತರಹದ ಫೋಟೋಗಳನ್ನು ಇಡಬಾರದು. pooja room

ದೇವರ ಮನೆಯಲ್ಲಿ ಶನಿದೇವರ ಫೋಟೋ ಅಥವಾ ಭೈರವನ ಫೋಟೋವನ್ನು ಇಟ್ಟು ಪೂಜೆ ಮಾಡಬಾರದು. ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಶನಿದೇವರು ಮತ್ತು ಭೈರವನ ಪೂಜೆಯನ್ನು ಮಾಡಬಾರದು.

ನಿಂತಿರುವ ಲಕ್ಷ್ಮಿ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬಾರದು. ಈ ರೀತಿಯ ಫೋಟೋ ಇದ್ದರೇ ತಕ್ಷಣವೇ ತೆಗೆದು ಹಾಕಿ. ಮನೆಯಲ್ಲಿ ಕುಳಿತಿರುವ ಲಕ್ಷ್ಮಿ ಫೋಟೋವನ್ನು ಮಾತ್ರ ಪೂಜಿಸಬೇಕು.
ನಿಮ್ಮ ದೇವರ ಮನೆಯಲ್ಲಿ ಇಡಲೇಬೇಕಾದ ಅವಶ್ಯಕ ವಸ್ತುಗಳೆಂದರೆ

ಗಂಗಾಜಲ: ಈ ಗಂಗಾಜಲ ಎಷ್ಟು ಪವಿತ್ರ ಎಂದು ನಿಮಗೆ ಗೊತ್ತಿದೆ. ಇದನ್ನು ದೇವರ ಮನೆಯಲ್ಲಿ ಇಡುವುದರಿಂದ ನೀವು ಮಾಡಿರುವಂತಹ ಎಷ್ಟೋ ಪಾಪಗಳಿಗೆ ಪ್ರಾಯಶ್ಚಿತ್ತ ಸಿಗುತ್ತದೆ.

ನೀವು ಪೂಜೆಮಾಡುವಾಗ ಯಾವುದಾದರೂ ಒಂದು ವಸ್ತುವನ್ನು ತರುವುದಕ್ಕೆ ಮರೆತುಬಿಟ್ಟಿದ್ದರೇ ಹೂ ಮತ್ತು ಅಕ್ಷತೆಯನ್ನು ದೇವರಿಗೆ ಒಟ್ಟಿಗೆ ಅರ್ಪಿಸಬೇಕು. ಆಗ ದೇವರು ಪೂಜೆ ಮಾಡುವಾಗ ಆಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುತ್ತಾನೆ. pooja room

ನಿಮ್ಮ ಮನೆಗೆ ಲಕ್ಷ್ಮಿದೇವಿ ಪ್ರವೇಶ ಮಾಡಬೇಕೆಂದು ಬಯಸುತ್ತಿದ್ದರೇ ನಾವು ಹೇಳುವಂತಹ ಈ ಸಣ್ಣ ಉಪಾಯವನ್ನು ಮಾಡಿಕೊಂಡು ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಬಹುದು. ಅದೇನೆಂದರೆ ಪ್ರತೀ ಶುಕ್ರವಾರ ಲಕ್ಷ್ಮಿದೇವಿ ಪೂಜೆ ಮಾಡುವಾಗ ಒಂದು ಕಮಲದ ಹೂವನ್ನು ಲಕ್ಷ್ಮಿದೇವಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿ ಸದಾ ವಾಸಮಾಡುತ್ತಾಳೆ.

Leave A Reply

Your email address will not be published.