Ultimate magazine theme for WordPress.

KATAKA RASHI ಕಟಕರಾಶಿ ಮಾರ್ಚ್ ತಿಂಗಳ ಭವಿಷ್ಯ 2024

0 157

KATAKA RASHI MARCH THINGALA BHAVISHYA 2024 ಇಸವಿಯ ಮಾರ್ಚ್ ತಿಂಗಳಿನ ಕಟಕ ರಾಶಿಯ ಮಾಸಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ನಿಮ್ಮ ರಾಶಿಯಿಂದ ಅಷ್ಟಮ ಸ್ಥಾನದಲ್ಲಿ ಶುಕ್ರ, ಶನಿ ಮತ್ತು ರವಿಗ್ರಹಗಳು ಇರುತ್ತಾರೆ. ರವಿ 14ನೇ ತಾರೀಖಿನವರೆಗೂ ಸ್ಥಿತನಾಗಿರುತ್ತಾನೆ. ಕಟಕ ರಾಶಿಯವರಿಗೆ ಶುಕ್ರ ಬಾಧಕ ಅಧಿಪತಿ, ಶನಿಗ್ರಹ ಮಾರಕಾಧಿಪತಿ ಮತ್ತು ಅಷ್ಟಮಾಧಿಪತಿಯಾಗಿದ್ಧಾನೆ. ರವಿ ಕುಟುಂಬ ಸ್ಥಾನಾಧಿಪತಿಯಾಗಿದ್ದಾನೆ. ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರ ಮೇಲೆ ಮನೆಯಲ್ಲಿರುವ ಎಲ್ಲರೂ ಅಧಿಕಾರ ಚಲಾಯಿಸುತ್ತಿರುತ್ತಾರೆ.

ಮನೆಯಲ್ಲಿರುವವರೆಲ್ಲರೂ ನನ್ನ ಮಾತೇ ನಡೆಯಬೇಕು ಎಂಬ ಸ್ವಭಾವದವರಾಗಿರುತ್ತಾರೆ. ತಿಂಗಳಿನ ಎರಡನೇ ವಾರದ ವರೆಗೂ ಅಕ್ಕಪಕ್ಕದವರಿಂದ ಕಿರಿಕಿರಿ ಇರುತ್ತದೆ. 16ನೇ ತಾರೀಖು ರವಿ 9ನೇ ಮನೆಗೆ ಹೋಗುತ್ತಾನೆ, ಕುಜನು 16ನೇ ತಾರೀಖು ನಿಮ್ಮ ರಾಶಿಗೆ ಪ್ರವೇಶ ಮಾಡುತ್ತಾನೆ. ಶನಿ ಮತ್ತು ಕುಜ ಸೇರುವುದರಿಂದ ಮತ್ತೆ ಕಲಹ ಹೆಚ್ಚು ಆಗುತ್ತದೆ. ಅಷ್ಟಮ ಶನಿಯ ಪ್ರಭಾವವಿರುವುದರಿಂದ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಶನಿ ಮತ್ತು ರವಿ ಒಟ್ಟಿಗೆ ಇರುವುದರಿಂದ ನಿಮ್ಮ ಬಾಸ್ ಕಡೆಯಿಂದ ಕಿರಿಕಿರಿ ಆಗುತ್ತದೆ. KATAKA RASHI

ಶನಿ ಕುಜ ಮತ್ತು ಶನಿ ರವಿ ಎಲ್ಲಿ ಜೊತೆಯಾಗಿರುತ್ತಾರೋ ಅಲ್ಲಿ ಕಿರಿಕಿರಿ ತಪ್ಪಿದ್ದಲ್ಲ. ಉದ್ಯೋಗ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳದೇ ಸಹನೆಯಿಂದ ಇರಬೇಕು. ಆಸ್ತಿ ತೆಗೆದುಕೊಳ್ಳುವಿಕೆ ಮತ್ತು ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಈ ತಿಂಗಳಿನಲ್ಲಿ ಕುಜ ನಿಮಗೆ ಅಷ್ಟಮ ಸ್ಥಾನದಲ್ಲಿ ಕುಳಿತುಕೊಂಡಿರುವುದರಿಂದ 16ನೇ ತಾರೀಖಿನ ವರೆಗೂ ಮಂಗಳ ಗ್ರಹ ಮಕರದಲ್ಲಿರುತ್ತಾನೆ. ಶುಕ್ರ ನಾಲ್ಕನೇ ಮನೆಯ ಅಧಿಪತಿಯಾಗಿರುವುದರಿಂದ ಇದಕ್ಕೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯಗಳು ಕೂಡ ಈ ತಿಂಗಳು ಆಗುವುದಿಲ್ಲ.

ಕಷ್ಟಪಟ್ಟರೂ ಫಲ ಸಿಗುವುದಿಲ್ಲ. ಶುಕ್ರ 9ನೇ ಮನೆಯಾದ ಮೀನರಾಶಿಗೆ ಹೋಗುತ್ತಾನೆ. ಮೀನಾರಾಶಿ ಶುಕ್ರನ ಉಚ್ಛಕ್ಷೇತ್ರವಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಈ ತಿಂಗಳು ಏನು ಪ್ರಯತ್ನ ಮಾಡುತ್ತೀರೋ ಅದು ನಡೆಯುವುದಿಲ್ಲ. ಮುಂದಿನ ತಿಂಗಳು ಜಯ ಸಿಗುತ್ತದೆ. ಬುಧನು ನೀಚನಾಗಿರುವುದರಿಂದ ಸ್ನೇಹಿತರಲ್ಲೇ ಇರುವ ಹಿತಶತೃಗಳಿಂದ ತೊಂದರೆಗಳು ಆಗುತ್ತದೆ. ಪಂಚಮಾಧಿಪತಿ ಕುಜ 16ನೇ ತಾರೀಖಿನ ವರೆಗೂ ಏಳನೇ ಮನೆಯಲ್ಲಿ ಉಚ್ಛಸ್ಥಾನದಲ್ಲಿರುತ್ತಾನೆ. KATAKA RASHI

ಸ್ವಲ್ಪ ವೈವಾಹಿಕ ಜೀವನದಲ್ಲಿ ಕಲಹವನ್ನುಂಟುಮಾಡುತ್ತಾನೆ. ನಿಮಗೆ ಇಲ್ಲವೇ ನಿಮ್ಮ ಸಂಗಾತಿಗೆ ಸಣ್ಣ ಪುಟ್ಟ ಜಗಳಗಳು ಬರಬಹುದು. ಎಷ್ಟು ಸಾಧ್ಯವೋ ಅಷ್ಟು ಮೌನವಾಗಿರಿ ಮತ್ತು ತಾಳ್ಮೆಯಿಂದಿರಿ ಸರಿ ಹೋಗುತ್ತದೆ. 16ನೇ ತಾರೀಖು ಕಳೆದ ನಂತರ ಶನಿ ಮತ್ತು ಕುಜ ಇಬ್ಬರು ಒಟ್ಟಿಗೆ ಸೇರುವುದರಿಂದ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಜಗಳ, ಕಿರಿಕಿರಿ, ಹಣಕಾಸಿಗೆ ಸಂಬಂಧಪಟ್ಟಂತೆ ನೀವು ಯಾರಿಗೂ ದುಡ್ಡು ಕೊಡಬೇಡಿ ಅದು ನಿಮಗೆ ಮತ್ತೆ ವಾಪಸ್ಸು ಬರುವುದಿಲ್ಲ.

ದುಡ್ಡನ್ನು ಕೇಳಲು ಹೋದರೇ ಅವರೇ ನಿಮ್ಮ ಜೊತೆ ಜಗಳ ಮಾಡುತ್ತಾರೆ. ನೀವು ಬೇರೆಯವರ ಹತ್ತಿರ ಸಾಲವನ್ನು ತೆಗೆದುಕೊಂಡಿದ್ದರೇ ಅವರಿಂದ ನಿಮಗೆ ಕಿರಿಕಿರಿ ಇರುತ್ತದೆ. ಒಂಭತ್ತನೇ ಮನೆಯಲ್ಲಿ ರಾಹು ಇರುವುದರಿಂದ ಧರ್ಮಕಾರ್ಯಗಳನ್ನ ಮುಂದಾಕುತ್ತಾ ಬರುತ್ತಿರುತ್ತೀರಿ. ಆರೋಗ್ಯದ ವಿಷಯದ ಬಗ್ಗೆ ನೋಡುವುದಾದರೇ ಕರ್ಕಾಟಕ ರಾಶಿಯವರಿಗೆ ಚೆನ್ನಾಗಿದೆ. ಕರ್ಮ ಸ್ಥಾನದಲ್ಲಿ ಗುರು ಇರುವುದರಿಂದ ಬೇರೆಯವರ ಕೈ ಕೆಳಗೆ ಕೆಲಸ ಮಾಡುವವರಿಗೆ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದಲ್ಲಿ ಒತ್ತಡ ಬರುತ್ತದೆ ಮತ್ತು ನಿಮ್ಮ ಮಾಲೀಕನಿಂದ ಒತ್ತಡ ಬಂದರೂ ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. KATAKA RASHI

ಸರ್ಕಾರಿ ಉದ್ಯೋಗಿಗಳಿಗೆ 14ನೇ ತಾರೀಕಿನ ತನಕ ಕಿರಿಕಿರಿ ಇರುತ್ತದೆ. 14ನೇ ತಾರೀಖಿನ ನಂತರ ಕಿರಿಕಿರಿಗಳು ದೂರವಾಗಿ ನೆಮ್ಮದಿ ಸಿಗುತ್ತದೆ. ಸ್ವಂತ ಉದ್ಯೋಗ ಮಾಡುವಂತಹವರಿಗೆ ನೀವು ನಿರೀಕ್ಷೆ ಇಟ್ಟುಕೊಂಡಷ್ಟು ಲಾಭ ಸಿಗುವುದಿಲ್ಲ. ಕುಟುಂಬದಲ್ಲಿ ಖರ್ಚು ಇರುವುದರಿಂದ ಬಂದಂತಹ ಹಣ ಉಳಿಯದೇ ಖರ್ಚಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಏನು ಪರಿಹಾರ ಮಾಡಿಕೊಳ್ಳಬೇಕೆಂದರೆ ಪ್ರತೀ ಶುಕ್ರವಾರ ಯಾವುದಾದರೂ ದೇವಸ್ಥಾನಕ್ಕೆ ಅವರೇ ಕಾಳು ಮತ್ತು ಹೆಸರುಕಾಳನ್ನು ದಾನಮಾಡಿ ಮತ್ತು ಪ್ರತೀ ಮಂಗಳವಾರ ತೊಗರಿಬೇಳೆಯನ್ನು ದಾನ ಕೊಡಿ ಇದರಿಂದ ನಿಮ್ಮ ಕೆಲಸದಲ್ಲಿ ಯಾವ ರೀತಿಯ ಅಡೆತಡೆಗಳು ಉಂಟಾಗುವುದಿಲ್ಲ. ಪ್ರತೀ ಭಾನುವಾರ ಗೋಧಿಯನ್ನು ದಾನ ಕೊಡಿ. ಐದು ವಾರ ಈ ದಾನಗಳನ್ನು ಕೊಟ್ಟರೇ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ಒಳಿತಾಗುತ್ತದೆ.

Leave A Reply

Your email address will not be published.