Ultimate magazine theme for WordPress.

chandragrahan 25 ಮಾರ್ಚ 2024 ಚಂದ್ರ ಗ್ರಹಣ  ಗರ್ಭಿಣಿಯರು ಕಂಡಿತ

0 172

march chandragrahan ನಾವು ಈ ಲೇಖನದಲ್ಲಿ 25 ಮಾರ್ಚ್ 2024 ಚಂದ್ರ ಗ್ರಹಣ ಭಾರತದಲ್ಲಿ ಎಷ್ಟು ಗಂಟೆಗೆ ಇದೆ. ಸೂತಕ ಕಾಲದ ಸಮಯ ಗರ್ಭಿಣಿಯರು ಏನು ಮಾಡಬೇಕು ಎಂದು ತಿಳಿಯೋಣ . 25 ಮಾರ್ಚ್ 2024 ಚಂದ್ರಗ್ರಹಣ ಭಾರತದಲ್ಲಿ ಎಷ್ಟು ಗಂಟೆಗೆ ಹಿಡಿಯುತ್ತದೆ , ಸೂತಕ ಕಾಲದ ಸಮಯ ಏನಿದೆ , ಗರ್ಭಿಣಿ ಸ್ತ್ರೀಯರು ಈ ಕೆಲಸವನ್ನು ಖಂಡಿತ ಮಾಡಬೇಕು. ಮಾರ್ಚ್ 25 2024 ರ ವರ್ಷದ ಮೊದಲ ಚಂದ್ರ ಗ್ರಹಣ ಎಷ್ಟು ಗಂಟೆಗೆ ಹಿಡಿಯುತ್ತದೆ

ಇದರ ಪೂರ್ತಿಯಾದ ಮಾಹಿತಿಯನ್ನು ತಿಳಿಸಲಾಗಿದೆ . ಗ್ರಹಣಕ್ಕೆ ವೈಜ್ಞಾನಿಕ ಮತ್ತು ಧಾರ್ಮಿಕ ಎರಡು ರೀತಿಯಾದ ಮಹತ್ವ ಇದೆ . ಇದರ ಪ್ರಭಾವ ಭೂಮಿಯ ಮೇಲಿರುವ ಎಲ್ಲ ಜೀವರಾಶಿಗಳ ಮೇಲೆ ಇರುತ್ತದೆ . ಈ ಒಂದು ಕಾರಣದಿಂದಾಗಿ ಪ್ರತಿ ವರ್ಷ ಬರುವಂತಹ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಕ್ಕೆ ಸಂಬಂಧಪಟ್ಟಂತೆ ಮನುಷ್ಯರಲ್ಲಿ ತುಂಬಾ ಉತ್ಸಾಹ ಮೂಡಿರುತ್ತದೆ . ಗ್ರಹಣದಂತಹ ಭೌಗೋಳಿಕ ಘಟನೆಗಳು ತಮ್ಮ ವೈಜ್ಞಾನಿಕ ಆಧಾರ ಹೊಂದಿರುವುದರ ಜೊತೆಗೆ ಇವುಗಳಿಗೆ ತಮ್ಮದೇ ಆದ ಜ್ಯೋತಿಷ್ಯದ ಮಹತ್ವ ಕೂಡ ಇರುತ್ತದೆ . chandragrahan

ಇದು ವರ್ಷದ ಮೊದಲ ಚಂದ್ರ ಗ್ರಹಣ ಆಗಿದ್ದು , ಮಾರ್ಚ್ 25 2024ರ ಸೋಮವಾರದ ದಿನದಂದು ಹಿಡಿಯುತ್ತದೆ. ಇದು ವರ್ಷದ ಮೊದಲ ಚಂದ್ರ ಗ್ರಹಣ ಆಗಿರುತ್ತದೆ . ಇದು ಪೂರ್ಣಚಂದ್ರ ಗ್ರಹಣ ಆಗಿದೆ . ಹಲವಾರು ದೇಶಗಳ ಮೇಲೆ ಇದರ ಪ್ರಭಾವ ಇರುತ್ತದೆ . ಭಾರತೀಯ ಸಮಯಾನುಸಾರವಾಗಿ 25 ಮಾರ್ಚ್ ದಿನದಂದು ಮುಂಜಾನೆ ಹತ್ತು ಗಂಟೆ 24 ನಿಮಿಷಕ್ಕೆ ಈ ಗ್ರಹಣ ಪ್ರಾರಂಭವಾಗುತ್ತದೆ . ಮತ್ತು ಮಧ್ಯಾಹ್ನ 3 ಗಂಟೆ 2 ನಿಮಿಷದ ವರೆಗೆ ಇದು ಇರುತ್ತದೆ . ಈ ಗ್ರಹಣ ನಮ್ಮ ಭಾರತ ದೇಶದಲ್ಲಿ ಕಾಣುವುದಿಲ್ಲ . chandragrahan

ಆದರೆ ಇದು ಉತ್ತರ ಅಮೆರಿಕಾ , ಏಷ್ಯಾದ ಕೆಲವು ಭಾಗಗಳಾದ ಚೀನಾ, ಜಪಾನ್, ಅಟ್ಲಾಂಟಿಕ್ , ಆಫ್ರಿಕಾ ಯೂರೋಪ್ ನ ಕೆಲವು ಭಾಗಗಳಲ್ಲಿ ಕಾಣುತ್ತದೆ . ಈ ಚಂದ್ರ ಗ್ರಹಣ ತುಂಬಾ ಪ್ರಭಾವಶಾಲಿಯಾದ ಚಂದ್ರ ಗ್ರಹಣ ಆಗಿದೆ . ಈ ಗ್ರಹಣವು ಕನ್ಯಾ ರಾಶಿಯಲ್ಲಿ ಹಿಡಿಯಲಿದೆ . ಕನ್ಯಾ ರಾಶಿ ಇರುವ ಜನರಲ್ಲಿ ಇದರ ಪ್ರಭಾವ ಹೆಚ್ಚಾಗಿರುತ್ತದೆ . ಈ ರಾಶಿ ಹಾಗೂ ನಕ್ಷತ್ರಕ್ಕೆ ಸಂಬಂಧಪಟ್ಟ ಜನರು ಚಂದ್ರ ಗ್ರಹಣದ ಸಮಯದಲ್ಲಿ ಈ ರಾಶಿಯ ಜನರು ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು . ಇದು ವರ್ಷದ ಮೊದಲ ಚಂದ್ರಗ್ರಹಣ . ಅಂದರೆ, ಹಲವಾರು ಪ್ರಕಾರದ ಅಶುಭ ಘಟನೆಗಳನ್ನು ಕೂಡ ತರಲಿದೆ .

ವಿಶೇಷವಾಗಿ ಇದರ ಸೂತಕದ ಕಾಲ ಗ್ರಹಣ ಹಿಡಿಯುವ 9 ಗಂಟೆಯ ಮುನ್ನ ಶುರುವಾಗುತ್ತದೆ . ಇದು ಭಾರತದಲ್ಲಿ ಮುಂಜಾನೆ ಹತ್ತು ಗಂಟೆ 24 ನಿಮಿಷದಲ್ಲಿ ಕಾಣುತ್ತದೆ . ಮತ್ತು ಮಧ್ಯಾಹ್ನ 3 ಗಂಟೆಯವರೆಗೂ ಇರುತ್ತದೆ . ಹಾಗಾಗಿ ಇದು ತುಂಬಾ ಸಮಯದ ವರೆಗೆ ಇರುವ ದೊಡ್ಡದಾದ ಚಂದ್ರ ಗ್ರಹಣ ಆಗಿದೆ . ವಿಶೇಷವಾಗಿ ಗರ್ಭಿಣಿ ಮಹಿಳೆಯರು ಈ ದಿನ ಚಾಕು ಸೂಜಿ ಹರಿತವಾದ ವಸ್ತುಗಳ ಬಳಕೆಯನ್ನು ಮಾಡಬಾರದು . ಅಲ್ಲಿ ಅಡಿಗೆ ಮಾಡುವುದು ಮತ್ತು ಊಟ ಮಾಡುವುದನ್ನು ನಿಷೇಧಿಸಲಾಗಿದೆ . chandragrahan

ಯಾವುದೇ ಕಾರಣಕ್ಕೂ ಮನೆಯನ್ನು ಬಿಟ್ಟು ಆಚೆ ತಿರುಗಾಡಬಾರದು . ಗರ್ಭಿಣಿ ಮಹಿಳೆಯರು ಕೆಲವು ಮಂತ್ರಗಳನ್ನು ಜಪ ಮಾಡಬೇಕು . “ಓಂ ನಮಃ ಶಿವಾಯ ” ಅಥವಾ ಮಹಾ ಮೃತ್ಯುಂಜಯ ಮಂತ್ರ ಆಗಲಿ , ಜೈ ಶ್ರೀ ಕೃಷ್ಣ ಈ ರೀತಿಯ ಮಂತ್ರಗಳನ್ನು ಜಪ ಮಾಡಬಹುದು . ವಿಶೇಷವಾಗಿ ಗರ್ಭಿಣಿ ಮಹಿಳೆಯರು ಎಚ್ಚರಿಕೆಯನ್ನು ವಹಿಸುವುದು ತುಂಬಾ ಪ್ರಮುಖವಾಗಿರುತ್ತದೆ . ಗ್ರಹಣ ಕಾಲದಲ್ಲಿ ಯಾವುದಾದರೂ ಧಾರ್ಮಿಕ ಪುಸ್ತಕಗಳನ್ನು ಓದಬಹುದು . ಆದರೆ ದೇವರ ಕೋಣೆಯಲ್ಲಿ ಪೂಜೆಗಳನ್ನು ಮಾಡಬಾರದು .

ವಿಶೇಷವಾಗಿ ಗ್ರಹಣದ ದಿನ ಚಾಕು ಚೂರಿ ಹರಿತವಾದ ವಸ್ತುಗಳನ್ನು ಉಪಯೋಗ ಮಾಡಬಾರದು . ಗ್ರಹಣ ಮುಗಿದ ನಂತರ ಗರ್ಭಿಣಿ ಸ್ತ್ರೀಯರು ಶುದ್ಧವಾದ ನೀರಿನಿಂದ ಸ್ನಾನ ಮಾಡಿದ ನಂತರ ದಾನ ಧರ್ಮ ಮಾಡಬಹುದು . ಎಳ್ಳನ್ನು ದಾನ ಮಾಡಬೇಕು .ಬೆಲ್ಲ , ಬಟ್ಟೆ ದಾನವಾಗಿ ಕೊಡಬಹುದು . ನಿಮ್ಮ ಕೈಲಾದಷ್ಟು ಖಂಡಿತವಾಗಿ ದಾನ ಧರ್ಮ ಮಾಡಿರಿ . ಇಲ್ಲಿ ದೊಡ್ಡವರಾಗಲಿ ಹಿರಿಯರಾಗಲಿ, ಮಕ್ಕಳನ್ನು , ರೋಗಿಗಳನ್ನು ಬಿಟ್ಟು ಉಳಿದವರು ಗ್ರಹಣದ ನಿಯಮಗಳನ್ನು ಪಾಲಿಸಬೇಕು . ಹೆಚ್ಚಾಗಿ ಗ್ರಹಣದ ಕಾಲದಲ್ಲಿ ಗರ್ಭಿಣಿ ಮಹಿಳೆಯರು ವಿಶೇಷವಾದ ಎಚ್ಚರಿಕೆಯನ್ನು ವಹಿಸುವುದು ತುಂಬಾ ಪ್ರಮುಖವಾಗಿರುತ್ತದೆ. chandragrahan

Leave A Reply

Your email address will not be published.