Ultimate magazine theme for WordPress.

Meena Rashi Bhavishya  ಏಪ್ರಿಲ್ ತಿಂಗಳಿನ ಮೀನ ರಾಶಿಯ ಮಾಸ ಭವಿಷ್ಯ

0 163

Meena Rashi Bhavishya ಏಪ್ರಿಲ್ ತಿಂಗಳಿನ ಮೀನ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಏನೆಲ್ಲಾ ಲಾಭಗಳು ಇವೆ? ಯಾವ ಎಚ್ಚರಿಕೆಗಳನ್ನು ಪಾಲಿಸಬೇಕು? ಏನು ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮೀನ ರಾಶಿಯ ಜನ್ಮ ನಕ್ಷತ್ರಗಳು ಪೂರ್ವಭಾದ್ರ ನಕ್ಷತ್ರ ನಾಲ್ಕನೇ ಚರಣಗಳು, ಉತ್ತರ ಭಾದ್ರ ನಕ್ಷತ್ರದ ನಾಲ್ಕು ಪಾದಗಳು, ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿರುವ ರಾಶಿಯೇ ಮೀನರಾಶಿ. ಮೀನರಾಶಿಯವರು ಕಲ್ಪನಾಶೀಲತೆ.

ವಿನಯವಂತಿಕೆ, ನಯ ನಾಜೂಕುತನದಿಂದ ನಡೆದುಕೊಳ್ಳುವಂತಹವರು. ಯಾವುದೇ ವ್ಯವಹಾರ ಮಾಡಿದರೂ ಲೆಕ್ಕಚಾರದಿಂದ ಇರುತ್ತಾರೆ. ಆಲೋಚನೆಗಳನ್ನು ಯಾವಾಗಲೂ ಮಾಡುತ್ತಿರುವಂತಹವರು. ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವಂತಹ ವ್ಯಕ್ತಿಗಳಲ್ಲ. ಕೊನೆಯವರೆಗೂ ಕಷ್ಟದಿಂದ ಹೋರಾಟ ಮಾಡುವಂತಹ ವ್ಯಕ್ತಿಗಳು ಎನ್ನಬಹುದು. ಅನೇಕ ರೀತಿಯ ಮನೋವ್ಯಥೆಗಳು ಇದ್ದರೂ ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲ. ನೀವು ವ್ಯಾಪಾರ ವ್ಯವಹಾರ ಮಾಡುತ್ತಿದ್ದರೇ Meena Rashi

ಸರ್ಕಾರಿ ಮತ್ತು ಅರೆಸರ್ಕಾರಿ ಕೆಲಸದಲ್ಲಿದ್ದರೇ ಸ್ವಂತ ಉದ್ಯೋಗ ಮಾಡುತ್ತಿದ್ದರೇ ಜನರಿಂದ ಮತ್ತು ಹೆಚ್ಚಿನ ಗಣ್ಯರಿಂದ ಪ್ರಮುಖವಾದ ವ್ಯಕ್ತಿಗಳಿಂದ ಒಳ್ಳೆಯ ರೀತಿಯ ಪ್ರಶಂಸೆ ಸಿಗುತ್ತದೆ. ನೀವು ಮಾಡುವ ಕೆಲಸಕ್ಕೆ ಒಳ್ಳೆಯ ಗೌರವ ಸಿಗುತ್ತದೆ. ನೀವು ಶ್ರಮ ಪಟ್ಟು ಕೆಲಸ ಮಾಡುವುದರಿಂದ ಜನರಿಂದ ಗುರುತಿಸಲ್ಪಡುತ್ತೀರಿ. ಬೇರೆಕಡೆಯಿಂದ ಶುಭ ಸಮಾಚಾರವನ್ನು ಕೇಳುತ್ತೀರಿ. ಕೆಲವು ಜನ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಮನೆಯಲ್ಲಿ ಚಿಕ್ಕದಾದ ದೇವತಾಕಾರ್ಯವನ್ನು ಮಾಡುತ್ತೀರಿ.

ಮದುವೆ ಮತ್ತು ಶುಭ ಸಮಾಚಾರಗಳಿಗೆ ಸ್ವಲ್ಪ ಅಲೆದಾಟವಿರುತ್ತದೆ. ಸಮಾರಂಭಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಪ್ರಯಾಣಗಳು ಹೆಚ್ಚು ಇರುತ್ತದೆ ಮತ್ತು ದುಡ್ಡು ಸಹ ಖರ್ಚಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ನೋಡಿಕೊಂಡು ಯೋಜನೆಯನ್ನು ರೂಪಿಸಿಕೊಂಡರೆ ಒಳ್ಳೆಯದು. ನಿಮ್ಮ ಮನೆಗೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ವಸ್ತುವನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಆದರೇ ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ನೋಡಿಕೊಂಡು ಖರ್ಚು ಮಾಡಿದರೇ ಉತ್ತಮ. Meena Rashi

ನಿಮ್ಮ ಹಿರಿಯರ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡುವ ಸಂದರ್ಭಗಳು ಬರುತ್ತದೆ. ವ್ಯಾಪಾರದಲ್ಲಿ ಸ್ವಲ್ಪ ಚೇತರಿಕೆ ಇರುತ್ತದೆ. ನಿಮ್ಮ ವ್ಯಾಪಾರದಲ್ಲಿ ಬದಲಾವಣೆ ಕಂಡುಬರುವುದರಿಂದ ಮನಸ್ಸಿಗೆ ಮಂದಹಾಸವಿರುತ್ತದೆ.
ಯಾರಿಗಾದರೂ ದುಡ್ಡುನ್ನು ವಾಪಸ್ಸು ಕೊಡಬೇಕಾಗಿದ್ದರೇ ಈ ತಿಂಗಳು ಅವರಿಗೆ ಕೊಡಲು ಯೋಜನೆಯನ್ನು ಮಾಡಿಕೊಳ್ಳುತ್ತೀರಿ. ದುಡಿಮೆಯ ದುಡ್ಡಿನಿಂದಲೇ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ಅಧಿಕ ಪರಿಶ್ರಮಪಟ್ಟರೇ ಒಳ್ಳೆಯ ಲಾಭ ಸಿಗುತ್ತದೆ.

ಹೆಚ್ಚು ಸ್ಪರ್ಧೆ ಇರುವುದರಿಂದ ಅದಕ್ಕೆ ಸರಿಯಾಗಿ ಯೋಜನೆಯನ್ನು ಮಾಡಿಕೊಂಡು ಹೆಚ್ಚಿನ ಪರಿಶ್ರಮಪಟ್ಟು ಕೆಲಸ ಮಾಡಿದರೇ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭಗಳು ಸಿಗುತ್ತದೆ. ಸೋದರ ಮಾವ ಮತ್ತು ಬೀಗರ ಕಡೆಯಿಂದ ಸಹಾಯವಾಗುತ್ತದೆ. ಹಿರಿಯರೊಂದಿಗೆ ವಾಗ್ವಾದ ಮತ್ತು ಮನಸ್ತಾಪ ಮಾಡಿಕೊಳ್ಳಬೇಡಿ. ಅವರು ಏನು ಹೇಳುತ್ತಾರೋ ಅದನ್ನು ಕೇಳಿ ಸೂಕ್ತವಾದ ಯೋಜನೆಯನ್ನು ಮಾಡಿಕೊಂಡರೇ ಉತ್ತಮ. ವಿರುದ್ಧವಾದ ತೀರ್ಮಾನವನ್ನು ತೆಗೆದುಕೊಂಡು ಹಿರಿಯರಿಗೆ ನೋವನ್ನುಂಟುಮಾಡಬೇಡಿ. Meena Rashi

ಪತಿ ಪತ್ನಿಯರಲ್ಲಿ ಚಿಕ್ಕದಾದ ಮನಸ್ಥಾಪಗಳು ಇರುತ್ತದೆ, ಸಣ್ಣ ಸಣ್ಣ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಇರುತ್ತದೆ. ಪ್ರೇಮಿಗಳಲ್ಲೂ ಕಿರಿಕಿರಿ ಕಂಡುಬರುತ್ತದೆ. ಅದನ್ನು ಸಮಾಧಾನವಾಗಿ ಶಾಂತವಾಗಿ ಯೋಚನೆ ಮಾಡಿಕೊಂಡು ಅದನ್ನು ಸರಿಮಾಡಿಕೊಳ್ಳಬೇಕು. ಅದನ್ನೇ ಮುಂದುವರೆಸಿಕೊಂಡು ಹೋದರೇ ತೊಂದರೆಯಾಗುತ್ತದೆ ಎಚ್ಚರಿಕೆವಹಿಸಿ. ಹಣಕಾಸಿನ ವಿಷಯದಲ್ಲಿ ಚೇತರಿಕೆ ಸಹಜವಾಗಿ ಕಂಡುಬರುತ್ತದೆ. ಸ್ವಲ್ಪ ಮನಸ್ಥಾಪಗಳನ್ನು ಬಿಟ್ಟರೇ ಪ್ರೇಮಿಗಳಿಗೆ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಗೆಲುವು ಸಿಗುತ್ತದೆ. ವ್ಯಾಪಾರದಲ್ಲಿ ಮಂದಗತಿ ಇರುತ್ತದೆ. Meena Rashi

ಆದರೇ ಏಪ್ರಿಲ್ ತಿಂಗಳಿನಲ್ಲ ಚೇತರಿಕೆ ಕಂಡುಬರುತ್ತದೆ. ಕಲಾವಿದರು ಹೆಚ್ಚಿನ ಪ್ರಯತ್ನಪಟ್ಟರೇ ಒಳ್ಳೆಯ ಅವಕಾಶಗಳು ಸಿಗುತ್ತದೆ. ಟಿ.ವಿ ಮಾಧ್ಯಮ ಮತ್ತು ತೆರೆಮರೆಯ ಕಲಾವಿದರಿಗೆ ಹೆಚ್ಚಿನ ಪರಿಶ್ರಮವನ್ನು ಪಡಬೇಕು. ಈ ತಿಂಗಳಿನಲ್ಲಿ ರಾಜಕಾರಣಿಗಳು ಬ್ಯುಸಿ ಇರುತ್ತಾರೆ. ನಿಮಗಿಂತ ಹೆಚ್ಚಿನ ಸ್ಥಾನದಲ್ಲಿರುವವರು ನಿಮ್ಮನ್ನು ಗುರುತಿಸುತ್ತಾರೆ. ಆರೋಗ್ಯದ ಕಡೆ ಗಮನ ಅರಿಸಿ ಅಲೆದಾಟ ತಿರುಗಾಟವನ್ನು ಕಡಿಮೆ ಮಾಡಿ, ಒಳ್ಳೆಯ ಫಲಗಳು ಸಿಗುತ್ತದೆ. ಒಟ್ಟಾರೆಯಾಗಿ ಮಿಶ್ರಫಲಗಳು ಇವೆ. ಕೆಲವು ಪರಿಹಾರಗಳನ್ನು ಮಾಡಿಕೊಂಡರೇ ಅದ್ಭುತವಾದ ಫಲಗಳು ಸಿಗುತ್ತದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಮಾಡಿಕೊಳ್ಳಿ, ದುರ್ಗಾದೇವಿಯ ಆರಾಧನೆಯಿಂದ ಒಳ್ಳೆಯ ಫಲಗಳು ಸಿಗುತ್ತದೆ. ನಾಗದೇವತೆಗಳಿಗೆ ಕ್ಷೀರಾಭಿಷೇಕ ಮಾಡಿಸಿದರೇ ಒಳ್ಳೆಯ ಫಲಗಳು ಸಿಗುತ್ತದೆ. ನಿಮ್ಮ ಕಾಯಕವನ್ನು ಪ್ರೀತಿಸುವುದರಿಂದ ನಿಮ್ಮ ಜೀವನದಲ್ಲಿ ಸುಖವಾಗಿರುತ್ತೀರಿ.

Leave A Reply

Your email address will not be published.