Ultimate magazine theme for WordPress.

Makara ಏಪ್ರಿಲ್ ತಿಂಗಳಿನ ಮಕರ ರಾಶಿಯವರ ಮಾಸ

0 154

Makara Rashi Bhavishya  ಏಪ್ರಿಲ್ ತಿಂಗಳಿನ ಮಕರ ರಾಶಿಯವರ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ. ಮಕರ ರಾಶಿಯವರ ನಕ್ಷತ್ರಗಳು ಉತ್ತರಾಷಾಡ ನಕ್ಷತ್ರದ 2,3, ಮತ್ತು 4ನೇ ಚರಣಗಳು, ಶ್ರಾವಣ ನಕ್ಷತ್ರದ ನಾಲ್ಕು ಪಾದಗಳು, ಧನಿಷ್ಠ ನಕ್ಷತ್ರದ ಮೊದಲ ಎರಡು ಪಾದಗಳು ಸೇರಿರುವುದೇ ಮಕರರಾಶಿ. ಮಕರ ರಾಶಿಯವರು ಯಶಸ್ವಿ ಆಡಳಿತಗಾರರು. ಯಾವುದಾದರೂ ಆಡಳಿತ ವ್ಯವಸ್ಥೆಯನ್ನು ಕೈಗೆ ಕೊಟ್ಟರೇ ಅದನ್ನು ಯಶಸ್ವಿಗೊಳಿಸುವ ಶಕ್ತಿ ಇವರಲ್ಲಿದೆ. ದೊಡ್ಡ ದೊಡ್ಡ ಯೋಜನೆಗಳನ್ನು ನಿರ್ಮಾಣ ಮಾಡುವ ವ್ಯಕ್ತಿತ್ವದವರು ಮತ್ತು ಬುದ್ಧಿವಂತಿಕೆಯಲ್ಲಿ ಬಹಳಷ್ಟು ಲೆಕ್ಕಚಾರಗಳನ್ನು ಇಟ್ಟುಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡುವ ವ್ಯಕ್ತಿಗಳು.

ಮಕರರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಎಷ್ಟೇ ಅಡೆತಡೆಗಳು ಮತ್ತು ತೊಂದರೆಗಳು ಇರಲಿ, ನೋವು, ಒತ್ತಡಗಳಿಗೆ ಬೆಂಬಲ ಸಿಗುತ್ತದೆ. ಮನೆಯ ಹಿರಿಯರಿಂದ, ಗುರುಗಳಿಂದ, ತಂದೆ ತಾಯಿಗಳಿಂದ ಮಾರ್ಗದರ್ಶನ ಸಿಗುವುದರ ಜೊತೆಯಲ್ಲಿ ಹಣಕಾಸಿನ ಸೌಲಭ್ಯಗಳು ಕೂಡ ತುಂಬಾ ಚೆನ್ನಾಗಿ ಕಂಡುಬರುತ್ತದೆ. ಆಪತ್ ಕಾಲದಲ್ಲಿ ನೀವು ಕೂಡಿ ಇಟ್ಟಿರುವಂತಹ ಹಣ ಉಪಯೋಗ ಬರುತ್ತದೆ.

ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ. ಕುಟುಂಬದಲ್ಲಿ ಕೆಲವು ಕಲಹಗಳು ಕಡಿಮೆಯಾಗುತ್ತದೆ. ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತದೆ. ವೈಮನಸ್ಸುಗಳು ಸರಿಯಾಗಿ ಒಂದು ಹದಕ್ಕೆ ಬರುತ್ತದೆ. ಎಲ್ಲರೂ ಪ್ರೀತಿ, ಪ್ರೇಮ, ಸಾಮರಸ್ಯದಿಂದ ಬದುಕುವಂತಹ ಅವಕಾಶಗಳು ನಿಮಗೆ ಸಿಗುತ್ತದೆ. ಯಾರ ಮಧ್ಯದಲ್ಲಾದರೂ ವೈಮನಸ್ಸು ಇದ್ದರೇ ಸರಿಯಾಗಿ ನೆಮ್ಮದಿಯ ಜೀವನ ಕಂಡುಬರುತ್ತದೆ. ಶುಭ ವಾರ್ತೆಗಳಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬೇರೆ ಕಡೆಯಿಂದ ಶುಭ ಸಮಾಚಾರ, ಶುಭ ಸುದ್ಧಿ ಕೇಳುವಂತದ್ದು, Makara Rashi Bhavishya 

ಅದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಕಂಡುಬರುತ್ತದೆ. ಸ್ನೇಹಿತರಿಂದ ಸಹಾಯ ಸಿಗುತ್ತದೆ. ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಕೈ ಜೋಡಿಸುವಂತದ್ದು, ಅದರಿಂದ ಯಶಸ್ವಿಯಾಗುವಂತಹ ಸನ್ನಿವೇಶಗಳು ಬಹಳಷ್ಟು ಜನರಿಗೆ ಕಂಡುಬರುತ್ತದೆ. ನಿಮ್ಮ ಮೇಲಿದ್ದ ಕಿರಿಕಿರಿ ತೊಂದರೆಗಳು ಕ್ರಮೇಣ ಕಡಿಮೆಯಾಗುತ್ತದೆ. ನಿಮ್ಮ ಮೇಲೆ ಇರುವ ಒತ್ತಡ ಕಡಿಮೆಯಾಗಿ ಮಾಡುವಂತಹ ಕೆಲಸಗಳಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಸಂತೋಷದ ವಾತಾವರಣ ಸಹಜವಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳು ಬರುತ್ತದೆ.

ದೊಡ್ಡ ದೊಡ್ಡ ಯೋಜನೆಗಳು ಮತ್ತು ಅವಕಾಶಗಳು ಸೃಷ್ಠಿಯಾಗುತ್ತವೆ. ಕೆಲಸ ಹುಡುಕುವವರಿಗೆ ಅವಕಾಶಗಳು ಚೆನ್ನಾಗಿವೆ. ರಾಜಕಾರಣಿಗಳಿಗೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತವೆ. ರಾಜಕಾರಣಿಗಳಿಗೆ ಸ್ಪರ್ಧೆ ಇರುತ್ತದೆ ಮತ್ತು ಒಳ್ಳೆಯ ಅವಕಾಶಗಳ ಜೊತೆಗೆ ಒಳ್ಳೆಯ ಫಲಗಳು ಸಿಗುತ್ತದೆ. ನಿಮ್ಮ ಕೆಲವೊಂದು ಯೋಚನೆ ಮತ್ತು ಯೋಜನೆಗಳು ಗುಪ್ತವಾಗಿರಬೇಕು. ಯಾರ ಹತ್ತಿರವೂ ಮುಕ್ತವಾಗಿ ಮಾತನಾಡಬೇಡಿ, ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಿ. ಹಣಕಾಸಿನ ಚಿಂತೆ ಮತ್ತು ಒತ್ತಡವಿರುತ್ತದೆ.

ಆದರೇ ಏನೂ ಚಿಂತೆ ಮಾಡದೇ ದೈನಂದಿನ ಕಾಯಕವನ್ನು ಮಾಡಿಕೊಂಡು ಹೋಗಿ ನಿಮ್ಮ ಹಣಕಾಸಿನ ಸಂಕಷ್ಟಗಳು ದೂರವಾಗಿ, ಹಣಕಾಸು, ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಜನಗಳಿಂದ ಪ್ರೀತಿ, ವಿಶ್ವಾಸ, ಮರ್ಯಾದೆ ಸಿಗುತ್ತದೆ. ಹೆಚ್ಚು ಪರಿಶ್ರಮದಿಂದ ಒಳ್ಳೆಯ ಫಲಗಳು ಸಿಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯ ಸಿಗುತ್ತದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸವನ್ನು ಮಾಡುತ್ತಿರುವವರಿಗೆ ಬೇರೆ ಕಡೆಯಿಂದ ಸಹಾಯ ಸಿಗುತ್ತದೆ. ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಲಾಭ ಉಂಟಾಗುತ್ತದೆ. Makara Rashi Bhavishya 

ಇನ್ನು ಸಮಾಜದಲ್ಲಿ ಗೌರವಗಳು ಸಿಗುತ್ತದೆ. ಸಾರ್ವಜನಿಕ ವಲಯಗಳಲ್ಲಿ ಗುರುತಿಸಲ್ಪಡುತ್ತೀರಿ. ಹಣಕಾಸಿನ ಒಳ ಹರಿವು ಹೆಚ್ಚಾಗುತ್ತದೆ. ಪಿತೃ ವರ್ಗದಿಂದ ಧನ ಸಹಾಯ ಸಿಗುತ್ತದೆ. ಸಾಲದ ಬಾಧೆಯಿಂದ ಮುಕ್ತಿಯಾಗುತ್ತದೆ. ಈ ಸಮಯವು ನಿಮಗೆ ಇರುವ ಸಾಲವನ್ನು ತೀರಿಸಲು ಒಳ್ಳೆಯ ಅವಕಾಶವೆಂದು ಹೇಳಬಹುದು. ಜೊತೆಗೆ ವಿದ್ಯಾರ್ಥಿಗಳಿಗೆ ಶುಭಫಲವೆಂದು ಹೇಳಬಹುದು. ಪತಿ, ಪತ್ನಿಯವರಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯವಿರುತ್ತದೆ. ಪ್ರೇಮಿಗಳಿಗೆ ಕಷ್ಟಸುಖವನ್ನು ಹಂಚಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ.

ಚಿಕ್ಕ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯಾಪಾರ ಮಾಡುವವರಿಗೆ ಒಳ್ಳೆಯ ಫಲಗಳು ಸಿಗುತ್ತದೆ. ಸ್ಪರ್ಧೆ ಇರುವುದರಿಂದ ನೀವು ಸಹ ಆರೋಗ್ಯಕರ ಸ್ಪರ್ಧೆ ಮಾಡಬೇಕು. ಆಗ ಮಾತ್ರ ನೀವು ಮಾಡುವ ಉದ್ಯೋಗದಲ್ಲಿ ಸಕ್ಸಸ್ ಎಂಬುದನ್ನು ಕಾಣುತ್ತೀರಿ. ಅನಾವಶ್ಯಕವಾದ ಓಡಾಟಗಳನ್ನು ಮಾಡಬೇಡಿ. ಕಲಾವಿದರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. Makara Rashi Bhavishya 

ಒಟ್ಟಾರೆಯಾಗಿ ಈ ತಿಂಗಳಿನಲ್ಲಿ ಮಕರರಾಶಿಯವರಿಗೆ ಒಳ್ಳೆಯ ರೀತಿಯ ಫಲಗಳು ಇವೆ. ಏಪ್ರಿಲ್ ತಿಂಗಳಿನಲ್ಲಿ ಮಕರ ರಾಶಿಯವರು ಏನೆಲ್ಲಾ ಪರಿಹಾರವನ್ನು ಮಾಡಿಕೊಳ್ಳಬೇಕೆಂದರೆ ಶನಿ ಹಾಗೂ ರಾಹುವಿನ ಮಂತ್ರವನ್ನು ಪಠಣವನ್ನು ಮಾಡಿಕೊಳ್ಳಿ. ಶ್ರೀ ಸುಬ್ರಮಣ್ಯ ಸ್ವಾಮಿಯ ಸೇವೆಯಿಂದ ಬಹಳ ಅನುಕೂಲಕರವಾಗುತ್ತದೆ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ, ಕುಲದೇವರ ಪೂಜೆಯನ್ನು ಮಾಡಿರಿ. ಬಹಳ ಸುಲಭವಾದ ಪರಿಹಾರ ಇದಾಗಿದ್ದು ಅದ್ಭುತವಾದ ಫಲಗಳು ಸಿಗುತ್ತದೆ.

Leave A Reply

Your email address will not be published.