Ultimate magazine theme for WordPress.

ladies finger ಈ ಐದೂ ಪದಾರ್ಥಗಳನ್ನು ಬೆಂಡೆಕಾಯಿಯ ಜೊತೆ ಎಂದಿಗೂ ತಿನ್ನಬೇಡಿ.

0 78

ladies finger health benefits ನಮಸ್ಕಾರ ವೀಕ್ಷಕರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಪದಾರ್ಥಗಳನ್ನು ತಿನ್ನಬೇಕು ಅದರಿಂದ ಆಗುವ ಪರಿಣಾಮ ಹಾಗೂ ದುಷ್ಪರಿಣಾಮಗಳನ್ನು ನಿಮಗೆ ತಿಳಿಸಿ ಕೊಡುತ್ತೇವೆ.
ಸ್ನೇಹಿತರೆ ಆಯುರ್ವೇದ ಪ್ರಕಾರ ಕೆಲವೊಂದು ಆಹಾರಗಳು ನಮ್ಮ ಆರೋಗ್ಯದ ಮೇಲೆ ವಿರುದ್ಧ ಪ್ರಭಾವವನ್ನು ಬೀರುತ್ತವೆ ನಮ್ಮ ಆರೋಗ್ಯಕ್ಕೆ ಸರಿಯಾದಂತಹ ಪದಾರ್ಥಗಳನ್ನು ನಾವು ಸೇವಿಸಬೇಕು. ವಾತಾ,ಪಿತ್ತಾ ಮತ್ತು ಕಸ ಈ ಮೂರು ಯಾವಾಗಲೂ ಕೂಡ ಸಮವಾಗಿರುವಂತಹ ಪದಾರ್ಥಗಳನ್ನು ತಿನ್ನುವಂತೆ ನೋಡಿಕೊಳ್ಳಬೇಕು ಈ ಮೂರರಲ್ಲಿ ಅಸಮತೋಲನ ಉಂಟಾದಾಗ ನಮಗೆ ಆರೋಗ್ಯ ಹದಗಡಲು ಪ್ರಾರಂಭವಾಗುತ್ತದೆ, ಸ್ನೇಹಿತರೆ ಈ ಒಂದು ತರಕಾರಿ ಆದ ಬೆಂಡೆಕಾಯಿಯ ಜೊತೆಗೆ ಈ ಒಂದು ಐದು ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು

ಬೆಂಡೆಕಾಯಿ ಜೊತೆಗೆ ಆ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಈಗ ನಾವು ತಿಳಿದುಕೊಳ್ಳೋಣ ಬೆಂಡೆಕಾಯಿಯ ಜೊತೆಗೆ ಯಾವ ಪದಾರ್ಥವನ್ನು ತಿನ್ನಬಾರದು ಎಂದು ಹಾಗಾದರೆ ಆ ಪದಾರ್ಥ ಯಾವುದು ಎಂದರೆ ಹಾಲು, ಹಾಲು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಗೊತ್ತಿದೆ ಇದನ್ನು ಸೇವಿಸುವುದರಿಂದ ನಮ್ಮ ಮೂಳೆಗಳು ತುಂಬಾ ಬಲಶಾಲಿಯಾಗುತ್ತವೆ, ಆದರೆ ಹಾಲನ್ನ ಬೆಂಡೆಕಾಯಿ ಸೇವನೆ ಮಾಡುವಾಗ ಮಾಡಬಾರದು

ಯಾಕೆಂದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ಹಾಲಿನಲ್ಲಿ ಮತ್ತು ಬೆಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಅಂಶ ಇದೆ ಆದರೆ ಈ ಬೆಂಡೆಕಾಯಿಯಲ್ಲಿ ಆಕ್ಸಲೆಟ್ ಎಂಬಂತಹ ಇನ್ನೊಂದು ಅಂಶ ಇದೆ ಇವೆರಡೂ ಸೇರಿದಾಗ ಆಕ್ಸಲೆಟ್ ಇದು ಕ್ಯಾಲ್ಸಿಯಂ ಜೊತೆ ಸೇರಿ ಬೈಂಡ್ ಆಗಿ ಒಂದು ಕಾಂಪ್ಲೆಕ್ಸ್ ರಚನೆಗೊಳ್ಳುತ್ತದೆ ಅದನ್ನು ನಾವು ಕ್ಯಾಲ್ಸಿಯಂ ಆಕ್ಸಲೇಟ್ಸ್ ಎಂದು ಕರಿತೀವಿ.

ಇದು ನಮ್ಮ ದೇಹದಲ್ಲಿ ಸುಲಭವಾಗಿ ಅಬ್ಸರ್ವ್ ಆಗುವುದಿಲ್ಲ ಇದರಿಂದ ನಮ್ಮ ಕಿಡ್ನಿಯಲ್ಲಿ ಸ್ಟೋನ್ ಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲುಗಳಾಗಲು ಕಾರಣ ಈ ಕ್ಯಾಲ್ಸಿಯಂ ಆಕ್ಸಲೆಟ್ ಅಂತ ಹೇಳುತ್ತಾರೆ . ಆಯುರ್ವೇದ ಪ್ರಕಾರ ಹೇಳುವುದಾದರೆ ಈ ಬೆಂಡೆಕಾಯಿಯಲ್ಲಿ ಇರುವಂತಹ ನೋಳೆ ನಮ್ಮ ದೇಹಕ್ಕೆ ಕಫವನ್ನು ತರುತ್ತದೆ ಆಯುರ್ವೇದದಲ್ಲಿ ಹಾಲಿನ ಜೊತೆ ಬೆಂಡೆಕಾಯಿಯನ್ನು ಸೇರಿಸುವುದು ವಿರುದ್ಧ ಎಂದು ಹೇಳಬಹುದು. ಈ ಎರಡು ಪದಾರ್ಥಗಳು ನಮ್ಮ ದೇಹದ ಒಂದು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ , ಇವೆಲ್ಲದಕ್ಕೂ ಪರಿಹಾರ ಏನೆಂದರೆ ಹಾಲು ಮತ್ತು ಬೆಂಡೆಕಾಯಿಯನ್ನು ಸೇವನೆ ಮಾಡದಿರುವುದು.
ಮತ್ತೊಂದು ಪದಾರ್ಥ ಯಾವುದೆಂದರೆ ಟೀ – ತುಂಬಾ ಜನಕ್ಕೆ ಒಂದು ಅಭ್ಯಾಸ ಇರುತ್ತದೆ ಪ್ರತಿ ಸಮಯಕ್ಕೂ ಟೀ ಅನ್ನು ಸೇವಿಸುವುದು. ಅದರಲ್ಲೂ ಬೆಂಡೆಕಾಯಿ ಸೇವನೆ ಮಾಡಿದ ಮೇಲೆ ಟೀಯನ್ನು ಕುಡಿಯಲೇಬಾರದು ಏಕೆಂದರೆ ಟಿ ಎಲ್ಲಿ ಟ್ಯಾನಿನ್ಸ್ ಎನ್ನುವ ಒಂದು ಅಂಶ ಇರುತ್ತದೆ, ವೈಜ್ಞಾನಿಕವಾಗಿ ಹೇಳಬೇಕು ಎಂದರೆ ಈ ಟ್ಯಾನಿನ್ ಎಂಬುದು ಪ್ರೋಟೀನ್ ಮತ್ತು ನ್ಯೂಟ್ರಿಷಿಯಂಟ್ ಜೊತೆಗೆ ರಿಯಾಕ್ಟ್ ಆಗಿರುತ್ತದೆ ಯಾವಾಗ ಇದು ನಮ್ಮ ದೇಹದಲ್ಲಿ ಬೈಂಡ್ ಆಗಿರುತ್ತದೆ ಅವಾಗ ಅಬ್ಸರ್ವೇಷನ್ ಕಡಿಮೆಯಾಗುತ್ತದೆ ಹಾಗೂ ನಮಗೆ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ಸೇರುವುದಿಲ್ಲ.

ಇನ್ನು ಆಯುರ್ವೇದ ಪ್ರಕಾರ ಹೇಳುವುದಾದರೆ ಟೀ ಅಲ್ಲಿರುವ ಟ್ಯಾನಿನ್ ಅಂಶ ಕಫವನ್ನು ಹೆಚ್ಚು ಮಾಡುತ್ತದೆ ಈ ಬೆಂಡೆಕಾಯಿಯಲ್ಲಿ ಕಫದೋಷ ಇದೆ ಇವೆರಡೂ ಸೇರಿದಾಗ ವಾತ ಮತ್ತು ಕಫ ಆರೋಗ್ಯದಲ್ಲಿ ಏರುಪೇರು ಆಗಲು ಆರಂಭವಾಗುತ್ತದೆ. ಹಾಗಾಗಿ ಇದನ್ನು ಆದಷ್ಟು ನಾವು ತಡೆಯಲು ಪ್ರಯತ್ನಿಸಬೇಕು
ಇನ್ನು ಮೂರನೇ ಪದಾರ್ಥ ಎಂದರೆ ರೆಡ್ ಮೀಟ್ – ಅಂದರೆ ಮಾಂಸಹಾರ ನಾವು ಬೆಂಡೆಕಾಯಿ ಜೊತೆ ಮಾಂಸಹಾರವನ್ನು ಸೇವನೆ ಮಾಡಬಾರದು, ಏಕೆಂದರೆ ಮಾಂಸಹಾರ ಜೀರ್ಣವಾಗುವುದು ತುಂಬಾ ಸಮಯ ತೆಗೆದುಕೊಳ್ಳುತ್ತದೆ,ಹಾಗಾಗಿ ಬೆಂಡೆಕಾಯಿಯನ್ನು ಮಾಂಸದ ಜೊತೆ ಸೇವಿಸುವುದರಿಂದ ತುಂಬಾ ದೊಡ್ಡ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಮಾಂಸಹಾರ ಬೇಗನೆ ಜೀರ್ಣಕ್ರಿಯೆ ಆಗುವುದಿಲ್ಲ, ಇವೆರಡು ಪದಾರ್ಥಗಳನ್ನು ಒಟ್ಟಿಗೆ ಸೇರಿಸಿದಾಗ ಜೀರ್ಣಕ್ರಿಯೆನ್ನುವುದು ನಿಧಾನವಾಗುತ್ತದೆ. ಇನ್ನು ಆಯುರ್ವೇದ ಪ್ರಕಾರ ಇದು ನಮ್ಮ ದೇಹದಲ್ಲಿ ಪಿತ್ತ ಮತ್ತು ಕಸವನ್ನು ಹೆಚ್ಚಿಸುತ್ತದೆ. ಇದರಿಂದ ಚರ್ಮದ ಕಾಯಿಲೆಗಳು ಆರಂಭವಾಗುತ್ತದೆ ಜೀರ್ಣಕ್ರಿಯ ಆಗುವುದಿಲ್ಲ,ಸೋಮಾರಿತನ, ಇವೆಲ್ಲವೂ ಆಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಮನೆಯಲ್ಲಿ ನಾವು ಅಡುಗೆ ಮಾಡುವಾಗ ಮಾಂಸ ಹಾಡ ಜೊತೆ ಬೆಂಡೆಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು.

ಇದರಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸಹಾಯಕವಾಗುತ್ತದೆ ಮತ್ತೊಂದೇನೆಂದರೆ ಬೆಂಡೆಕಾಯಿಯನ್ನು ನಾವು ಮೂಲಂಗಿ ಜೊತೆ ಕೂಡ ಸೇವಿಸಬಾರದು, ಮೂಲಂಗಿನ ನಾವು ಸಾಂಬಾರ್ ಮಾಡ್ತೀವಿ ಆದರೆ ಬೆಂಡೆಕಾಯಿ ಜೊತೆ ತಿನ್ನಬಾರದು ಏಕೆಂದರೆ ಮೂಲಂಗಿ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಅನ್ನು ಉಂಟುಮಾಡುತ್ತದೆ ಏಕೆಂದರೆ ಇದರಲ್ಲಿ ಸೆಲ್ಫರ್ ಕಂಟೈನಿಂಗ್ ಕಾಂಪೌಂಡ್ಸ್ ಇರುತ್ತದೆ ಇದು ನಮ್ಮ ದೇಹದಲ್ಲಿ ಜೀರ್ಣ ಕ್ರಿಯೆಯನ್ನು ತಡೆಗಟ್ಟುತ್ತದೆ.

ಇವೆರಡನ್ನು ತಿನ್ನುವುದರಿಂದ ಹೊಟ್ಟೆ ನೋವು ಬರುವುದು,ಹೊಟ್ಟೆ ಉಬ್ಬರಿಸಿದ ಹಾಗೆ ಹೊಟ್ಟೆ ಬಾರಾದ ಹಾಗೆ ಅಜೀರ್ಣ ಆಗುವ ಸಾಧ್ಯತೆ ತುಂಬಾ ಇರುತ್ತದೆ.ಇನ್ನೊಂದು ಪದಾರ್ಥ ಯಾವುದು ಅಂದ್ರೆ ಹಾಗಲಕಾಯಿ, ಹಾಗಲಕಾಯಿ ಎಲ್ಲರಿಗೂ ಗೊತ್ತೇ ಇರುತ್ತದೆ ಇದು ತುಂಬಾ ಕಹಿಯಾದ ಪದಾರ್ಥ ಕಹಿ ಕೂಡ ಧರ್ಮವನ್ನು ಹೊಂದಿರುತ್ತದೆ ಇದರಲ್ಲಿ ಆಂಟಿ ಡಯಾಬಿಟಿಸ್ ಕೂಡ ಇದೆ. ಡಯಾಬಿಟಿಸ್ ಇರುವವರಿಗೆ ಇದು ತುಂಬಾ ಒಳ್ಳೆಯದು ಈ ಹಾಗಲಕಾಯಿ ನಮ್ಮ ದೇಹದಲ್ಲಿ ಕೂಲಿಂಗ್ ಎಫೆಕ್ಟ್ ಹೆಚ್ಚಿಸುತ್ತದೆ

ನಾವು ಯಾವಾಗ ಬೆಂಡೆಕಾಯಿಯ ಜೊತೆ ಹಾಗಲಕಾಯಿಯನ್ನು ಮಿಕ್ಸ್ ಮಾಡಿ ತಿನ್ನುತ್ತೇವೋ ಅವಾಗ ಈ ಕೂಲಿಂಗ್ ಎಫೆಕ್ಟ್ ಎನ್ನುವುದು ಅದು ಇನ್ನೂ ಜಾಸ್ತಿ ಆಗುತ್ತದೆ. ಅಂದರೆ ಆಯುರ್ವೇದ ಪ್ರಕಾರ ಹೇಳುವುದಾದರೆ ನಮ್ಮ ದೇಹದಲ್ಲಿ ಕಫವನ್ನು ಹೆಚ್ಚು ಮಾಡುತ್ತದೆ,ಹಾಗಾಗಿ ನಾವು ಹಾಗಲಕಾಯಿ ಮತ್ತು ಬೆಂಡೆಕಾಯಿಯನ್ನು ಮಿಕ್ಸ್ ಮಾಡಿ ತಿನ್ನಲೇಬಾರದು. ಇದರಿಂದ ಇದ್ದಕ್ಕಿದ್ದ ಹಾಗೆ ಸುಸ್ತಾಗುವುದು ಜೀರ್ಣಕ್ರಿಯೆ ಆಗದಿರುವುದು ತಲೆ ಸುತ್ತುವುದು ಹಲವಾರು ಸಮಸ್ಯೆಗಳನ್ನು ನಾವು ಕಾಣಬಹುದು.

ನಾವು ನಾವು ತಿನ್ನುವ ಆಹಾರದಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟಾಗುತ್ತಿದ್ದರೆ ಅಂತಹ ಪದಾರ್ಥಗಳನ್ನು ನಾವು ಸೇರಿಸಬಾರದು ಇವುಗಳನ್ನು ಬೇರೆ ಬೇರೆಯಾಗಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು.ಇವುಗಳೆಲ್ಲವನ್ನು ಬೇರೆ ಬೇರೆಯಾಗಿ ಸಮಪ್ರಮಾಣದಲ್ಲಿ ತಿನ್ನುವುದರಿಂದ ವಿಟಮಿನ್ಸ್ ಗಳನ್ನು ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಪಡೆದುಕೊಳ್ಳಬಹುದು. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ, ಧನ್ಯವಾದಗಳು

Read more

Leave A Reply

Your email address will not be published.