Ultimate magazine theme for WordPress.

money tips ಮನೆಯಲ್ಲಿ ಈ ಸಣ್ಣ ಪುಟ್ಟ ಬದಲಾವಣೆ ಮಾಡಿ ನೋಡಿ. ಅದೃಷ್ಟ ನಿಮ್ಮ ಮನೆ ಬಾಗಿಲಿಗೆ.

0 91

money tips ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಒಂದು ಸಂಚಿಕೆಯಲ್ಲಿ ಗ್ರಹಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ.

ನಾವು ಗ್ರಹಗಳ ಸಂಚಾರ ಹಾಗೂ ಅವುಗಳ ದೋಷದ ವಿಚಾರವಾಗಿ ನೆಗ್ಲೆಟ್ ಮಾಡಬಾರದು, ಇನ್ನು ಗ್ರಹಗಳಲ್ಲಿ ಮಂಗಳ ಗ್ರಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಂಗಳವನ್ನು ಕೆಂಪು ಗ್ರಹ ಎನ್ನಲಾಗಿದೆ. ಈ ಕೆಂಪು ಗ್ರಹಕ್ಕೆ ಅಡುಗೆಮನೆಗೂ ವಿಶೇಷ ಸಂಬಂಧವಿದೆ ಎನ್ನುತ್ತಾರೆ ವಾಸ್ತು ತಜ್ಞರು.ಅಡುಗೆ ಮನೆ ಹೇಗಿದೆ ಅನ್ನೋದರ ಮೇಲೆ ನಮ್ಮ ಮೇಲೆ ಕುಜ ಗ್ರಹದ ಪ್ರಭಾವ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ ಎಂದು ಹೇಳಲಾಗುತ್ತದೆ.ಮಂಗಳ ಗ್ರಹದ ದೋಷಕ್ಕೆ ನಾವು ಅಡಿಗೆ ಮನೆ ವಿಚಾರದಲ್ಲಿ ಮಾಡುವ ತಪ್ಪುಗಳು ಸಹ ಕಾರಣವಾಗುತ್ತದೆ ಎನ್ನಲಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ನಾವು ಅಡಿಗೆ ಮನೆಯ ವಿಚಾರದಲ್ಲಿ ಕೆಲ ಮಿಸ್ಟೇಕ್ ಮಾಡಬಾರದು.

ಇನ್ನು ಮಂಗಳವಾರವನ್ನ ಮಂಗಳಗ್ರಹದ ವಾರ ಎನ್ನಲಾಗುತ್ತದೆ. ಹಾಗಾಗಿ ದಿನ ನಾವು ಅಡುಗೆ ಮನೆ ವಿಚಾರದಲ್ಲಿ ಯಾವುದಾದರೂ ಬದಲಾವಣೆ ಮಾಡಿದರೆ ಅದರಿಂದ ಮಂಗಳನ ಆಶೀರ್ವಾದ ಸಿಗುತ್ತದೆ ಎನ್ನಲಾಗಿದೆ.

ಪೊರಕೆ ಇಡಬಾರದು : ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಪೊರಕೆ ಇಡಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ನಾವು ಕೊರತೆಯಿಂದ ಇಡೀ ಮನೆಯನ್ನ ಸ್ವಚ್ಛ ಮಾಡುತ್ತೇವೆ. ಅದರಲ್ಲಿ ಎಲ್ಲಾ ರೀತಿಯ ಕೊಳೆಗಳು ಇರುತ್ತವೆ. ಆದ್ದರಿಂದ ನಮಗೆ ಆರೋಗ್ಯದ ಸಮಸ್ಯೆಗಳು ಸಹ ಬರುವ ಸಾಧ್ಯತೆ ಇದೆ ಅಲ್ಲದೆ, ಅಡುಗೆ ಮನೆಯಲ್ಲಿ ಪೊರಕೆ ಇಟ್ಟರೆ ಅದರಿಂದ ಮಂಗಳನಿಗೆ ಸಹ ಕೋಪ ಬರುತ್ತದೆ. ಹಾಗಾಗಿ ಮಂಗಳವಾರ ಅಡುಗೆಮನೆಯಿಂದ ಪೊರಕೆಯನ್ನು ತೆಗೆದುಬಿಡಿ.

ಕನ್ನಡಿ ಇರಬಾರದು : ಅಡುಗೆ ಮನೆಯಲ್ಲಿ ಅಪ್ಪಿ ತಪ್ಪಿಯು ಕನ್ನಡಿ ಇರಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಅಡುಗೆ ಮನೆಯಲ್ಲಿ ಬೆಂಕಿ ಇರುತ್ತದೆ. ಅಲ್ಲಿ ನಾವು ಕನ್ನಡಿ ಇದ್ದರೆ ಅದರ ಬೆಂಕಿಯ ಜ್ವಾಲೆಗಳು ಸಹ ಕಾಣಿಸಬಹುದು. ಇದರಿಂದ ಯಾವುದಾದರೂ ಅನಾಹುತ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ನೀವು ಕನ್ನಡಿಯನ್ನು ಇಟ್ಟಿದ್ದರೆ ಅದನ್ನು ಮಂಗಳವಾರ ತೆಗೆದುಬಿಡಿ, ಅದರಿಂದ ಯಾವುದೇ ಸಮಸ್ಯೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ.

ಔಷಧಗಳು : ಹಾಗೆಯೇ, ಮತ್ತೊಂದು ಮುಖ್ಯವಾದ ಅಂಶ ಎಂದರೆ ಅಡುಗೆ ಮನೆಯಲ್ಲಿ ಔಷಧಿಗಳನ್ನು ಇರಬಾರದು. ಅಡುಗೆ ಮನೆಯಲ್ಲಿ ವಿವಿಧ ಬ್ಯಾಕ್ಟೀರಿಯಗಳು ಇರುತ್ತವೆ ಅದರಿಂದ ಔಷಧಿಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಹಾಗಾಗಿ ಸಣ್ಣ ಮಾತ್ರೆಯನ್ನು ಸಹ ನೀವು ಅಡುಗೆ ಮನೆಯಲ್ಲಿ ಇರಲೇಬೇಡಿ.

ಹಳೆಯ ಪಾತ್ರೆ : ಅಡುಗೆ ಮನೆಯಲ್ಲಿ ಅನೇಕ ಪಾತ್ರೆಗಳು ಹಾಗೂ ವಸ್ತುಗಳಿರುತ್ತವೆ, ಆದರೆ ಅವುಗಳು ಸಹ ಸ್ವಚ್ಛವಾಗಿರಬೇಕು. ಮುಖ್ಯವಾಗಿ ಅಡುಗೆ ಮನೆಯಲ್ಲಿ ಹಳೆಯ ಪಾತ್ರೆಗಳು ಉರಿದು ಹೋದ ಹಾಗೂ ತುಕ್ಕು ಹಿಡಿದ ಪಾತ್ರೆಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಅಲ್ಲವೇ ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಸಹ ಬರುವ ಸಾಧ್ಯತೆ ಇರುತ್ತದೆ.

ಹಾಳಾದ ಆಹಾರ: ಅಡುಗೆ ಮನೆಯಲ್ಲಿ ನೀವು ಹಾಳಾದ ಹಾಗೂ ಬಹಳ ಹಿಂದಿನ ಆಹಾರಗಳನ್ನು ಇಡಬಾರದು. ಇದರಿಂದ ಅನ್ನಪೂರ್ಣೇಶ್ವರಿ ದೇವಿಗೆ ಕೋಪ ಬರುತ್ತದೆ. ಇದರಿಂದ ನಿಮಗೆ ಬಹಳಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಈ ಆಹಾರಗಳಿಂದ ನಿಮ್ಮ ಆರೋಗ್ಯ ಸಹ ಹಾಳಾಗುವುದರಿಂದ ನೀವು ಇವುಗಳನ್ನು ಇಡದಿರುವುದು ಬಹಳ ಮುಖ್ಯ. ಅಡುಗೆ ಮನೆಯಲ್ಲಿ ಉಪ್ಪು, ಅರಿಶಿಣ, ಅಕ್ಕಿ, ಗೋದಿ ಹಿಟ್ಟು ಮತ್ತು ಎಣ್ಣೆ ಈ ವಸ್ತುಗಳು ಎಂದಿಗೂ ಖಾಲಿ ಆಗಬಾರದು ಈ ವಸ್ತುಗಳನ್ನು ಖಾಲಿ ಆದರೆ ಅದರಿಂದ ಆರ್ಥಿಕ ಸಮಸ್ಯೆಗಳು ಬರುತ್ತವೆ. ಅಲ್ಲದೇ ಇದರಿಂದ ನೀವು ನಿಮ್ಮ ಜೀವನದಲ್ಲಿ ಕೊರತೆಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು

Read more

Leave A Reply

Your email address will not be published.