Ultimate magazine theme for WordPress.

ವಾಸ್ತು ಟಿಪ್ಸ್ – ಈ ಐದೂ ವಾಸ್ತುವಿನ ಫೋಟೋ ಮನೆಯಲ್ಲಿಡಿ. ಮನೆಯಲ್ಲಿ ಝಣ ಝಣ ಕಾಂಚಾಣ ಏನೂ ಕಡಿಮೆ ಆಗದು.

0 86

vastu tips ; Keep these five Vastu photos at home. ನಮಸ್ಕಾರ ಸ್ನೇಹಿತರೆ. ಇವತ್ತಿನ ಈ ಸಂಚಿಕೆಯಲ್ಲಿ ಈ ಐದು ವಾಸ್ತು ಫೋಟೋಗಳು ಮನೆಯಲ್ಲಿದ್ದರೆ ಭಾಗ್ಯ ಎನ್ನುವುದು ನಿಮಗೆ ಕುಲಾಯಿಸುತ್ತದೆ, ಎನ್ನುವ ಈ ಮಾಹಿತಿಯನ್ನು ಇಂದಿನ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕೆಲವೊಂದು ಫೋಟೋಗಳು ಮನೆಯಲ್ಲಿದ್ದರೆ ಗುಡ್ ಲಕ್ ತರುತ್ತವೆ ಇನ್ನು ಕೆಲವು ಬ್ಯಾಡ್ ಲಕ್ ತರುತ್ತೇವೆ ಯಾವ್ಯಾವ ಫೋಟೋವನ್ನು ಮನೆಗೆ ತಂದು ಕಷ್ಟವನ್ನು ಮೈಮೇಲೆ ಹಾಕಿಕೊಳ್ಳಬೇಡಿ ಅದರಲ್ಲೂ ಇವತ್ತಿನ ಈ ಸಂಚಿಕೆಯಲ್ಲಿ ಐದು ಫೋಟೋಗಳ ರಹಸ್ಯವನ್ನು ಹೇಳುತ್ತೇವೆ, ಈ 5 ಫೋಟೋದಲ್ಲಿ ಒಂದು ಫೋಟೋ ಆದರೂ ನಿಮ್ಮ ಮನೆಯಲ್ಲಿದ್ದರೆ ಅದೃಷ್ಟ ಎನ್ನುವುದು ಕುಲಾಯಿಸುತ್ತದೆ.

ಮನೆಯಲ್ಲಿ ಹಾಕುವ ಫೋಟೋ ತನ್ನದೇ ಆದ ಪಾಸಿಟಿವ್ ಹಾಗೂ ನೆಗೆಟಿವ್ ವೈಬ್ರೆಷನನ್ನು ತಂದು ಕೊಡುತ್ತದೆ ಮನೆಯಲ್ಲಿ ನೇತುಹಾಕಿರುವ ಫೋಟೋವನ್ನು ಪ್ರತಿದಿನ ಅದೆಷ್ಟು ಬಾರಿ ನೋಡುತ್ತೇವೆ ನಮಗೆ ಗೊತ್ತಿಲ್ಲ ದಿನಕ್ಕೆ 5 ರಿಂದ 10 ಬಾರಿಯಾದರೂ ಆ ಫೋಟೋವನ್ನು ನೋಡುತ್ತೇವೆ ಹಾಗಾಗಿ ಆ ಫೋಟೋ ನಮ್ಮ ಜೀವನದ ಮೇಲೆ ಹಾಗೂ ಜೀವನ ಶೈಲಿಯ ಮೇಲೆ ಅದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ.

ವಾಸ್ತು ಶಾಸ್ತ್ರದಲ್ಲಿ ಹಿಂದೂ ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಫೋಟೋಗಳ ಉಪಯೋಗ ಮತ್ತು ಮಹತ್ವಗಳ ಬಗ್ಗೆ ವಿವರಿಸಲಾಗಿದೆ ನೀವು ಕೂಡ ಅವುಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಭಾಗ್ಯದ ಬಾಗಿಲು ಶೀಘ್ರದಲ್ಲೇ ತೆರೆದುಕೊಳ್ಳುತ್ತದೆ. ಯಾವ ಫೋಟೋದಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಎಂದು ನೋಡೋಣ ಬನ್ನಿ ಸ್ನೇಹಿತರೆ.

ರಾಮನ ದರ್ಬಾರನ ಫೋಟೋ ತರುತ್ತದೆ ಗುಡ್ ಲಕ್, ಭಗವಾನ್ ಶ್ರೀ ರಾಮನನ್ನು ಯುಗಪುರುಷ ಎಂದು ಹೇಳುತ್ತೇವೆ ಹಾಗಾಗಿ ರಾಮನ ಫೋಟೋ ಮನೆಯಲ್ಲಿದ್ದರೆ ತುಂಬಾನೇ ಒಳ್ಳೆಯದು, ಅದರಲ್ಲೂ ರಾಮ ಸೀತೆ ಸಿಂಹಾಸನದಲ್ಲಿ ಆಸೀನರಾಗಿ ಅಕ್ಕ- ಪಕ್ಕದಲ್ಲಿ ಭರತ ಶತ್ರುಘ್ನ ಮತ್ತೊಂದೆಡೆ ಲಕ್ಷ್ಮಣ ಹನುಮಂತ ಕುಳಿತಿರುವ ರಾಮನ ಸ್ಥಾನದ ಫೋಟೋ ಮನೆಯಲ್ಲಿ ಹಾಕುವುದು ಶುಭ.

ಇದನ್ನು ಮನೆಯ ಡ್ರಾಯಿಂಗ್ ರೂಮ್ ನಲ್ಲಿ ಇಡುವುದು, ಇದನ್ನು ಮನೆಯ ಡೈನಿಂಗ್ ರೂಮಿನಲ್ಲಿ ಇಡುವುದು ಇನ್ನೂ ಉತ್ತಮ ಎಂದು ಹೇಳಬಹುದು ಏಕೆಂದರೆ ಇದನ್ನು ನೋಡುತ್ತಿದ್ದರೆ ಮನೆಯ ಸದಸ್ಯರುಗಳ ನಡುವೆ ಪ್ರೀತಿಯು ಹೆಚ್ಚುತ್ತದೆ, ಇದರಿಂದ ಮನೆ ಮಂದಿಯ ಬಾಂಧವ್ಯ ವೃದ್ಧಿಯಾಗುತ್ತದೆ, ಮನೆಯಲ್ಲಿ ಕಲಹಗಳು ಕೂಡ ಕಡಿಮೆಯಾಗುತ್ತವೆ.

ಇನ್ನು ಶ್ರೀಕೃಷ್ಣ ಸುವಿನ ಜೊತೆಯಲ್ಲಿರುವಂತಹ ಫೋಟೋ ಮನೆಯಲ್ಲಿದ್ದರೆ ಆ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತದೆ, ಶ್ರೀ ಕೃಷ್ಣ ಕೈಯಲ್ಲಿ ಕೊಳಲು ಹಿಡಿದು ನುಡಿಸುತ್ತಿರುವಂತಹ ಹಸುವಿನ ಬಳಿ ಕಾಲನ್ನು ಕ್ರಾಸ್ ಮಾಡಿದಂತಿರುವ ಫೋಟೋವನ್ನು ಮನೆಯಲ್ಲಿ ಡ್ರಾಯಿಂಗ್ ರೂಮ್ ಅಥವಾ ದೇವರ ಮನೆಯಲ್ಲಿ ಇಡಬೇಕು.ಇದರಿಂದ ಧನ ಸಂಪತ್ತು ನಿಮ್ಮ ಬಳಿ ಬರುವಂತಹ ಮಾರ್ಗಗಳು ತೆರೆದುಕೊಳ್ಳುತ್ತವೆ, ಅಂದರೆ ಶೀಘ್ರದಲ್ಲಿಯೇ ಶ್ರೀಮಂತರಾಗುತ್ತೀರಿ ಎಂದು ಅರ್ಥ ಇದನ್ನೇ ಅಲ್ಲವೇ ಅದೃಷ್ಟ ಬಾಗಿಲು ತೆರೆಯುವುದು ಅಂತ ಹೇಳುವುದು.

ನಿಮ್ಮ ಮನೆಗೆ ಅದೃಷ್ಟ ತರುವಂತಹ ಇನ್ನೊಂದು ಫೋಟೋ ಯಾವುದೆಂದರೆ ಓಡುತ್ತಿರುವ ಏಳು ಕುದುರೆಗಳ ಫೋಟೋ ಈ ಫೋಟೋವನ್ನು ಅತ್ಯಂತ ಪವರ್ ಫುಲ್ ಫೋಟೋ ಎಂದು ಕೂಡ ಹೇಳಲಾಗುತ್ತದೆ ಹಾಗಿದ್ದಲ್ಲಿ ಈ ಫೋಟೋವನ್ನು ಮನೆಯಲ್ಲಿ ನೇತು ಹಾಕುವುದರಿಂದ ಲಾವ ಏನು ಅನ್ನೋದನ್ನ ನೋಡೋಣ.
ಸಮುದ್ರದ ತಟದಲ್ಲಿ ಓಡುತ್ತಿರುವಂತಹ ಏಳು ಕುದುರೆಗಳ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ, ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯಾದ ಅಭಿವೃದ್ಧಿ ಉಂಟಾಗುತ್ತಿಲ್ಲ ಎಂದಾದಲ್ಲಿ ಈ ಫೋಟೋವನ್ನು ನಿಮ್ಮ ಕಚೇರಿಯ ಪೂರ್ವ ದಿಕ್ಕಿನಲ್ಲಿ ಇಟ್ಟುಕೊಳ್ಳಿರಿ ಇದರಿಂದ ಎಲ್ಲ ಕೆಲಸದಲ್ಲಿ ವೃದ್ಧಿಯಾಗುತ್ತದೆ ಹಾಗೆ ಯಶಸ್ಸು ಕೂಡ ಸಿಗುತ್ತದೆ. ಯಶೋದೆ ಮತ್ತು ಮುದ್ದುಕೃಷ್ಣನ ಫೋಟೋ ಕೂಡ ಮನೆಯಲ್ಲಿರುವುದು ಶುಭ ಫಲಗಳನ್ನು ನೀಡುತ್ತದೆ

ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭಿಣಿ ಮಹಿಳೆಯರು ಇದ್ದರೆ ಹಾಗಾದರೆ ಮಾತೇ ಯಶೋದೆ ಮತ್ತು ಬಾಲ ಕೃಷ್ಣನ ಮುದ್ದಾದ ಫೋಟೋವನ್ನು ಅವರ ರೂಮಿನಲ್ಲಿ ಇಡಿ ಇದರಿಂದ ಕೃಷ್ಣನ ಅದ್ಭುತ ಗುಣವುಳ್ಳಂತಹ ದೈವಿಕ ಶಕ್ತಿ ಉಳ್ಳಂತಹ ಮಗು ಜನಿಸುತ್ತದೆ ಎನ್ನುವ ಒಂದು ನಂಬಿಕೆ ಇದೆ, ಇದರಿಂದ ತಾಯಿ ಮಗುವಿನ ನಡುವೆ ಗಾಢವಾದ ಸಂಬಂಧವು ಬೆಸೆಯುತ್ತದೆ ನಮ್ಮ ಮನೆಯಲ್ಲಿ ಹುಟ್ಟಿರುವಂತಹ ಮಗು ಶ್ರೀಕೃಷ್ಣನ ಪ್ರತೀಕದಂತಿದ್ದರೆ ಇಂತಹ ದೊಡ್ಡ ವಿಚಾರ ಬೇರೊಂದು ಇದೆಯಾ?

ನೀರಿನಲ್ಲಿ ಈಜಾಡುವಂತಹ ರಾಜಹಂಸದ ಫೋಟೋ ಕೂಡ ಮನೆಯಲ್ಲಿದ್ದರೆ ತುಂಬಾನೇ ಒಳ್ಳೆಯದು, ಯಾಕೆಂದರೆ ಮನೆಯ ಗೆಸ್ಟ್ ರೂಮ್ನಲ್ಲಿ ನೀರಿನಲ್ಲಿ ತೇಲುತ್ತಿರುವಂತಹ ರಾಜಹಂಸದ ಫೋಟೋಗಳನ್ನು ಇಡಬೇಕು ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ ಜೊತೆಗೆ ಸುಲಭವಾಗಿ ಧನ ಆಗಮನದ ದಾರಿಗಳು ತೆರೆದುಕೊಳ್ಳುತ್ತವೆ. ಇನ್ನು ಪತಿ ಪತ್ನಿಯರ ನಡುವೆ ಪ್ರೀತಿ ಪ್ರಣಯ ಹೆಚ್ಚಾಗುವುದಕ್ಕೂ ಕೂಡ ಈ ಫೋಟೋಗಳ ಜೊತೆ ಕನೆಕ್ಷನ್ ಎನ್ನುವುದು ಇದೆ.

ದಂಪತಿಗಳ ಬೆಡ್ ರೂಮ್ ನಲ್ಲಿ ಹೂದಾನಿಗಳ ಫೋಟೋ ಅಥವಾ ಫ್ರೆಶ್ ಹೂಗಳನ್ನು ಹೂದಾನಿಯಲ್ಲಿ ಹಾಕಿ ರೂಮಿನಲ್ಲಿ ಇಟ್ಟರೆ ಪತಿ ಪತ್ನಿಯರ ಮನವು ಈ ಹೂವಿನಂತೆ ಸದಾ ಅರಳಿರುತ್ತದೆ ಇದರಿಂದ ಇಬ್ಬರ ನಡುವೆ ಬಾಂಧವ್ಯವು ಹೆಚ್ಚಾಗುತ್ತದೆ, ಜೊತೆಗೆ ರಾಧಾಕೃಷ್ಣರ ಫೋಟೋ ದಂಪತಿಗಳ ಬೆಡ್ ರೂಂನಲ್ಲಿ ಇದ್ದರೆ ಒಳ್ಳೆಯದು. ರಾಧಾಕೃಷ್ಣನ ಫೋಟೋ ಜೊತೆಯಾಗಿ ನೋಡುವುದರ ಜೊತೆಗೆ ಪತಿ ಪತ್ನಿಯರ ನಡುವೆ ಪ್ರೀತಿಯು ಹೆಚ್ಚಾಗುತ್ತದೆ. ಫ್ಯಾಮಿಲಿ ಫೋಟೋವನ್ನು ಮನೆಯಲ್ಲಿ ಡ್ರಾಯಿಂಗ್ ರೂಮ್ ನ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಮನೆಯಲ್ಲಿ ಕ್ಲೇಶ ನಿವಾರಣೆ ಆಗುತ್ತದೆ,

ಮನೆಯ ಎಲ್ಲಾ ಸದಸ್ಯರು ಪ್ರೀತಿಯಿಂದ ಬಾಳುವುದಕ್ಕೆ ಸಹಕಾರಿಯಾಗುತ್ತದೆ. ಮಕ್ಕಳು ಪರೀಕ್ಷೆಯಲ್ಲಿ ಓದಿ ಚೆನ್ನಾಗಿ ಅಂಕಗಳನ್ನು ತೆಗೆದುಕೊಳ್ಳಬೇಕು ಉತ್ತಮ ಶಿಕ್ಷಣವನ್ನು ಪಡೆಯಬೇಕು ಎಂದರೆ ಮನೆಯಲ್ಲಿ ಸರಸ್ವತಿ ದೇವಿಯ ಫೋಟೋ ಇರಲೇಬೇಕು ಈ ಫೋಟೋವನ್ನು ಮನೆಯ ಮಕ್ಕಳ ಓದುವ ಕೋಣೆಯಲ್ಲಿ ಉತ್ತರ ದಿಕ್ಕಿನಲ್ಲಿ ಇಡಬೇಕು, ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಏಕಾಗ್ರತೆಯಿಂದ ಓದಲು ಇದು ಸಹಾಯವಾಗಿರುತ್ತದೆ ಇದರಿಂದ ಮಕ್ಕಳ ಶಿಕ್ಷಣವೂ ಚೆನ್ನಾಗಿ ಇರುತ್ತದೆ.

ಕೈಯಲ್ಲಿ ಕಲಶವನ್ನು ಹಿಡಿದಿರುವಂತಹ ಧನ್ವಂತರಿ ಫೋಟೋ ಮನೆಯಲ್ಲಿದ್ದರೆ ಒಳ್ಳೆಯದು ಇದರಿಂದ ಮನೆಯಲ್ಲಿ ಸಂತೋಷವು ಸದಾ ಇರುತ್ತದೆ, ಮನೆಯಲ್ಲಿ ಹಣದ ಆಗಮನದ ದಾರಿಯು ಸದಾ ತೆರೆದಿರುತ್ತದೆ ಅಂದರೆ ನೀವು ಶ್ರೀಮಂತರಾಗುವುದರಲ್ಲಿ ಸಂಶಯವೇ ಇಲ್ಲ.

ಈ ಸ್ನೇಹಿತರೆ ಈಗ ಯಾವ ಫೋಟೋವನ್ನು ಮನೆಯಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಮಹಾಭಾರತದ ಯುದ್ಧದ ಯಾವುದೇ ಫೋಟೋವನ್ನು ಕೂಡ ಮನೆಯಲ್ಲಿ ಇಡಬಾರದು ಇದು ಮನೆಯಲ್ಲಿ ಇರುವುದೇ ಅಶುಭ ಸೂಚನೆಯನ್ನು ನೀಡುತ್ತದೆ ಇಂತಹ ಫೋಟೋಗಳಿಂದಾಗಿ ಕುಟುಂಬದಲ್ಲಿ ಕಲಹಗಳು, ವಿವಾದ, ಜಗಳಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಹಾಗಾಗಿ ಈ ರೀತಿ ಆಗುವುದನ್ನು ತಪ್ಪಿಸಬೇಕು ಎಂದರೆ ಮನೆಯಲ್ಲಿ ಅಪ್ಪಿ ತಪ್ಪಿಯು ಮಹಾಭಾರತದ ಯುದ್ಧದ ಯಾವುದೇ ಫೋಟೋಗಳನ್ನು ಕೂಡ ಇಡಲೇಬೇಡಿ. ನೀವು ಯಾವುದೇ ಕಾರಣಕ್ಕೂ ಹರಿಯುವ ನದಿ,ಜಲಪಾತ, ಜರಿಯ ಚಿತ್ರಗಳನ್ನು ಮನೆಯಲ್ಲಿ ಇಡಲೇಬೇಡಿ ಯಾಕೆಂದರೆ ಇದರಿಂದ ಅಪಾರವಾದ ಧನ ಹಾನಿಯೂ ಆಗುತ್ತದೆ ಏಕೆಂದರೆ ಹರಿಯುವ ನದಿಯು ರೌದ್ರತೆಯ ಸಂಕೇತವಾಗಿದೆ, ಇದರಿಂದ ಮನಶಾಂತಿ, ನೆಮ್ಮದಿ ಇಲ್ಲದಿರುವುದು ಖಂಡಿತ.

ಸ್ನೇಹಿತರೆ ಮತ್ತೊಂದು ಮುಖ್ಯವಾದ ವಿಷಯವನ್ನು ನೀವು ಗಮನಿಸಬೇಕು ಏನೆಂದರೆ ಮನೆಯಲ್ಲಿ ಯಾವುದೇ ರೀತಿಯ ಯುದ್ಧದ ಫೋಟೋಗಳನ್ನು ಹಾಕಬಾರದು ಇದರಿಂದ ಮನೆಯ ಸದಸ್ಯರುಗಳ ನಡುವೆ ವೈ ಮನಸು ಬೆಳೆಯುತ್ತದೆ ಜಗಳಗಳು ಕೂಡ ಆಗಬಹುದು. ಜೊತೆಗೆ ಅಳುವ ಮಗುವಿನ ಫೋಟೋ ಕೂಡ ಮನೆಯಲ್ಲಿ ಇಡಬಾರದು ಇದರಿಂದ ನೀವು ಮಾನಸಿಕವಾಗಿ ಕುಗ್ಗಿ ಹೋಗುವಂತಹ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಶೋಕವನ್ನು ಹೆಚ್ಚಿಸುವಂತಹ ಯಾವುದೇ ಫೋಟೋವನ್ನು ಹಾಕಲೇಬೇಡ

ಲಕ್ಷ್ಮಿ ದೇವಿಯ ಫೋಟೋ ಮನೆಯಲ್ಲಿದ್ದರೆ ಧನ ಆಗಮನ ಆಗುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ, ಇನ್ನೊಂದು ಮುಖ್ಯವಾದ ವಿಚಾರ ಏನಂದರೆ ಮನೆಯಲ್ಲಿ ಲಕ್ಷ್ಮಿ ದೇವಿ ನಿಂತಿರುವ ಯಾವುದೇ ಫೋಟೋವನ್ನು ಕೂಡ ಇಟ್ಟುಕೊಳ್ಳಬೇಡಿ ಇದರಿಂದ ಮನೆಯಲ್ಲಿ ಹಣವು ಉಳಿಯುವುದೇ ಇಲ್ಲ ಖರ್ಚು ಎನ್ನುವುದು ಹೆಚ್ಚಾಗುತ್ತದೆ, ಹಾಗಾಗಿ ಕುಳಿತುಕೊಂಡಿರುವಂತಹ ಲಕ್ಷ್ಮಿಯ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟುಬಿಡಿ, ಹೊಳೆಯಾಗಿ ಹರಿದು ನಿಮ್ಮನ್ನು ಸೇರುತ್ತದೆ.

ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಸ್ನೇಹಿತರೆ ನಿಮಗೆ ಈಗ ಯಾವ ಫೋಟೋವನ್ನು ಇಡಬೇಕು? ಯಾವ ಫೋಟೋ ಇಡಬಾರದು ಎಂದು ಗೊತ್ತಾಯಿತು ಅಲ್ಲವೇ?
ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ಲಕ್ಷ್ಮಿ ದೇವಿಯೇ ನಮಃ ಎಂದು ಕಮೆಂಟ್ ಮಾಡಿ ಧನ್ಯವಾದಗಳು. ಎಲ್ಲರಿಗೂ ಒಳ್ಳೆದಾಗಲಿ.

lakshmi astrology ಜೀವನದಲ್ಲಿ ನೀವು ಮಾಡುವ ಈ ತಪ್ಪುಗಳೇ ತಾಯಿ ಲಕ್ಷ್ಮಿ ಕೋಪಗೊಳ್ಳಲು ಕಾರಣ

vastu tips ಸಂತೋಷ ಮತ್ತು ಸಮೃದ್ಧಿಗಾಗಿ ಈ ಸರಳ ಸಲಹೆಯನ್ನು ಅನುಸರಿಸಿ

Leave A Reply

Your email address will not be published.