Ultimate magazine theme for WordPress.

Astrology ಮುತ್ತೈದೆಯ ಕಾಲುಂಗುರ ಗಂಡನನ್ನು ಶ್ರೀಮಂತಗೊಳಿಸುತ್ತದೆ. ಹೇಗೆ ಅಂತೀರಾ ಓದಿ.ಹೀಗೆ ದರಿಸಿ ಒಳ್ಳೆಯದಾಗುತ್ತದೆ.

0 113

Kalungura Astrology ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಗಂಡ ಶ್ರೀಮಂತನಾಗಬೇಕೆ ಹಾಗಾದರೆ ಕಾಲುಂಗುರವನ್ನು ಈ ರೀತಿಯಾಗಿ ಧರಿಸಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಇವತ್ತಿನ ಸಂಚಿಕೆಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಹಬ್ಬ ಹರಿ ದಿನಗಳಲ್ಲಿ ಸಿಂಗಾರ ಮಾಡಿಕೊಂಡಿರುವ ಸುಮಂಗಲಿಯರನ್ನು ನೋಡಿದ್ದೀರಾ? ಆ ಅಂದ ಮತ್ತು ಚಂದವನ್ನು ಪದಗಳಲ್ಲಿ ಹೇಳಲು ಅಸಾಧ್ಯ ಅಚ್ಚುಕಟ್ಟಾಗಿ ಉಟ್ಟಿರುವ ಸೀರೆ,ಹಣೆಗೆ ಸಿಂಧೂರ, ಕಣ್ಣಿಗೆ ಕಾಡಿಗೆ,ಕೈ ತುಂಬಾ ಬಳೆ, ಕಾಲಿಗೆ ಕಾಲ್ಗೆಜ್ಜೆ ಹಾಗೂ ಕಾಲುಂಗುರ ಇಷ್ಟೆಲ್ಲಾ ಸಿಂಗಾರ ಮಾಡಿಕೊಂಡು ಮನೆ ತುಂಬಾ ಓಡಾಡುತ್ತಿದ್ದರೆ ಹಬ್ಬ ಇನ್ನಷ್ಟು ಕಳೆ ಬರುತ್ತದೆ

ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ.ಇದನ್ನು ಯಾರು ಬೇಕು ಅವರು ಧರಿಸುವ ಹಾಗಿಲ್ಲ ಪ್ರತಿಯಾಗಿ ಅದು ಮುತ್ತೈದೆಯ ಪ್ರತೀಕ ಕಾಲುಂಗರವನ್ನು ಭಗವಾನ್ ವಿಷ್ಣು ಅವರ ಪತ್ನಿ ಲಕ್ಷ್ಮಿ ದೇವಿಯನ್ನು ಗೌರವಿಸಲು ಧರಿಸಲಾಗಿದೆ ಕಾಲುಂಗುರವನ್ನು ಧರಿಸುವುದರಿಂದ ಮನೆಯ ಅದೃಷ್ಟವೇ ಬದಲಾಗುತ್ತದೆ.

ಕಾಲುಂಗುರವನ್ನು ಧರಿಸುವುದರಲ್ಲಿ ಏನಾದರೂ ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ಇದೇ ಕಾಲುಂಗುರ ನಿಮ್ಮ ಮನೆಗೆ ದರಿದ್ರವನ್ನು ತಂದುಕೊಳ್ಳುತ್ತದೆ. ಅದಕ್ಕೆ ನೀವು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಕಾಲುಂಗುರವನ್ನು ಧರಿಸಬೇಕು.
ಭಾರತದಲ್ಲಿ ಸುಮಂಗಲಿ ಯಾರನ್ನು ಗುರುತಿಸುವುದು ತುಂಬಾ ಸುಲಭ ಅದರಲ್ಲೂ ಹಿಂದೂ ಮಹಿಳೆಯರಂತೂ ಬೆಳ್ಳಿ ಕಾಲುಂಗುರವನ್ನು ಧರಿಸುತ್ತಾರೆ, ಈ ಬೆಳ್ಳಿ ಕಾಲುಂಗುರವನ್ನು ನೋಡಿದ ತಕ್ಷಣ ಅವರು ಸುಮಂಗಲಿಯರು ಎಂದು ಗೊತ್ತಾಗುತ್ತದೆ , ಪುಂಡ ಪೋಕರಿಗಳು ಹೆಣ್ಣು ಮಕ್ಕಳ ತಂಟೆಗೆ ಹೋಗುವ ಮೊದಲು ಅವರ ಕಾಲುಂಗುರವನ್ನು ನೋಡುತ್ತಾರೆ ಒಂದು ಅರ್ಥದಲ್ಲಿ ಹೆಣ್ಣಿಗೆ ಇದು ಒಂದು ರಕ್ಷಾ ಕವಚವು ಆಗಿರುತ್ತದೆ.

ಸನಾತನ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕಾಲು ಬೆರಳಿನ ಉಂಗುರವನ್ನು ಧರಿಸುವುದರಿಂದ ತುಂಬಾ ಮಂಗಳಕರ ಎಂದು ಹೇಳಲಾಗಿದೆ ಹೀಗೆ ಮಾಡುವುದರಿಂದ ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ, ಹಾಗೇನೆ ಕಾಲು ಬೆರಳಿನ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯನ್ನ ಕಡಿಮೆ ಮಾಡುತ್ತದೆ. ಮಹಿಳೆಯರು ಮದುವೆ ಆದ ಕ್ಷಣದಿಂದ ಗಂಡ ಇರುವವರೆಗೂ ಕಾಲುಂಗರವನ್ನು ತಪ್ಪದೇ ಧರಿಸುತ್ತಾರೆ. ಮದುವೆ ಆಗುವ ಮೊದಲು ಇದ್ದ ಹಾಗೆ ಮದುವೆ ನಂತರ ಜೀವನ ಇರುವುದಿಲ್ಲ ಹಾಗಾಗಿ ಇವುಗಳು ಕೂಡ ಒಂದು ಕಾರಣವೇ.

ಮಂಗಳಕರ ಎಂದು ಧರಿಸುವ ಪ್ರತಿಯೊಂದು ವಸ್ತುವಿನಲ್ಲೂ ಗೌಪ್ಯವಾದ ಒಂದೊಂದು ಪ್ರಯೋಜನವು ಅಡಗಿರುತ್ತದೆ ಆದರೆ ಇಂದಿನ ಜನರು ಅದೆಲ್ಲವನ್ನು ನಿರ್ಲಕ್ಷಿಸುವುದೇ ಹೆಚ್ಚಾಗಿದೆ. ಕೇವಲ ಕಾಲುಂಗುರ ಮಾತ್ರ ಅಲ್ಲ ಕೈಯಲ್ಲಿ ಹಾಕುವ ಬಳೆ, ಕುತ್ತಿಗೆಯಲ್ಲಿರುವ ಮಂಗಳಸೂತ್ರ, ಮೂಗಿನ ಬೊಟ್ಟು ಹೀಗೆ ಇನ್ನು ಅನೇಕ ಆಭರಣ ಧರಿಸುವುದರ ಹಿಂದೆ ಅನೇಕ ಅರ್ಥಗಳಿವೆ,ಅದು ನಮಗೆ ಗೊತ್ತಿರುವುದಿಲ್ಲ ಫ್ಯಾಷನ್ ಎಂಬ ಹೆಸರಿನಲ್ಲಿ ನಮಗೆ ಸಂಜೀವಿನಿ ಹಾಗೆ ಇರುವಂತಹ ವಸ್ತುಗಳನ್ನೆಲ್ಲ ಕೂಡ ದೂರ ಇಟ್ಟುಬಿಡುತ್ತೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಕಾಲುಂಗುರ ಚಂದ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿರುತ್ತದೆ ಆದ್ದರಿಂದ ಬೆಳ್ಳಿ ಕಾಲುಂಗುರ ಧರಿಸಿದ್ದೇ ಆದಲ್ಲಿ ನಿಮಗೆ ಶುಭವನ್ನು ತರುತ್ತದೆ. ಹಾಗಾದರೆ ದುಡ್ಡಿದೆ ಎಂದು ಚಿನ್ನದ ಉಂಗುರವನ್ನು ಹಾಕುತ್ತೀವಿ ಎಂದು ಚಿನ್ನದ ಉಂಗುರವನ್ನು ಖರೀದಿಯನ್ನು ಮಾಡಬೇಡಿ, ನೀವು ಧರಿಸುವುದೇ ಆಗಿದ್ದರೆ ಬೆಳ್ಳಿ ಕಾಲುಂಗುರವನ್ನು ಧರಿಸಿ, ಚಿನ್ನದ ಕಾಲುಂಗುರವನ್ನು ಧರಿಸುವುದು ತುಂಬಾ ಕೆಟ್ಟ ಶಕುನವಾಗಿದೆ ಹಾಗೂ ಅದನ್ನು ಧರಿಸುವುದರಿಂದ ಮಹಾಲಕ್ಷ್ಮಿಗೆ ಅವಮಾನ ಮಾಡಿದಂತೆ

ಆದ್ದರಿಂದ ಬೆಳ್ಳಿಯ ಕಾಲುಂಗುರ ಧರಿಸುವುದು ಉತ್ತಮ. ಅದರಲ್ಲೂ ಬೆಳ್ಳಿ ಅತ್ಯಂತ ಅತೇಂದ್ರಿಯ ಅದ್ಭುತ ಗುಣಗಳನ್ನು ಹೊಂದಿದೆ ಇದು ದೇಹದಲ್ಲಿರುವ ನಕಾರಾತ್ಮಕ ಗುಣವನ್ನು ತೆಗೆದುಹಾಕುವ ಶಕ್ತಿಯನ್ನು ಹೊಂದಿದೆ. ಮಾನವನ ದೇಹದಲ್ಲಿ ಪ್ರಾಣ ಮತ್ತು ಜೀವಶಕ್ತಿಯು ಸಮತೋಲನಗೊಂಡಾಗ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಗಳಿಸುತ್ತಾನೆ ಈ ಪ್ರಾಣವು ನಮ್ಮ ಕಾಲು ಬೆರಳುಗಳವರೆಗೂ ಹರಿಯುತ್ತದೆ ಕಾಲುಂಗುರವನ್ನು ಧರಿಸುವುದರಿಂದ ದೇಹದಲ್ಲಿರುವ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಇದು ಪ್ರಾಣವನ್ನು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ ಹೀಗಾಗಿ ಕಾಲುಂಗುರವನ್ನು ಧರಿಸಲು ಯಾವುದೇ ಕಾರಣಕ್ಕೂ ಹಿಂದೆಟು ಹಾಕಬೇಡಿರಿ. ಕೆಲವು ನಂಬಿಕೆಗಳ ಪ್ರಕಾರ ಕಾಲುಂಗುರವನ್ನು ಧರಿಸುವುದರಿಂದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಎದುರಾಗುವ ಯಮನ ನೋವಿನಿಂದ ಕೊಂಚ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಹೆಣ್ಣು ಮಕ್ಕಳ ಪಾದದ ಎರಡನೇ ಬೆರಳಿನ ನರಗಳು ಮಹಿಳೆಯ ಗರ್ಭಾಶಯದೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುತ್ತದೆ,

ಓರ್ವ ಮಹಿಳೆ ಕಾಲುಂಗುರವನ್ನು ಧರಿಸಿದಾಗ ಕಾಲುಂಗುರದ ಮೇಲೆ ಸ್ವಲ್ಪ ಒತ್ತಡ ಬೀಳುತ್ತದೆ ಅವಾಗ ಅದು ಆಕೆಯ ಋತು ಚಕ್ರವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ, ಇದರ ಪರಿಣಾಮ ಆಕೆಯ ಗರ್ಭಾಶಯ ಉತ್ತಮ ಸಂತಾನೋತ್ಪತ್ತಿ ಮಾಡುವಂತೆ ಮಾಡುತ್ತದೆ. ಇದೇ ಬೆಳ್ಳಿ ಕಾಲುಂಗುರ ಮಹಿಳೆಯರಲ್ಲಿ ಲೈಂಗಿಕ ಭಾವನೆಯನ್ನು ಉಂಟುಮಾಡುತ್ತದೆ ಎನ್ನುವ ನಂಬಿಕೆಯು ಇದೆ ಲೈಂಗಿಕತೆಯು ವೈವಾಹಿಕ ಜೀವನದ ಪ್ರಮುಖ ಭಾಗವಾಗಿದೆ ಮಹಿಳೆಗೆ ಲೈಂಗಿಕ ಬಯಕೆ ಅಥವಾ ಬಯಕೆಯ ಕೊರತೆ ಇದ್ದರೆ ಅದು ಅವಳ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ

ಆದ್ದರಿಂದ ವಿವಾಹದ ಮಹಿಳೆಯರು ಬೆಳ್ಳಿಯ ಕಾಲುಂಗುರವನ್ನು ಧರಿಸುವುದಕ್ಕೆ ಇದು ಕೂಡ ಒಂದು ಕಾರಣ ಹಾಗೆಂದು ಯಾವುದೋ ಯಾವುದೋ ಕಾಲುಂಗುರವನ್ನು ಧರಿಸಬೇಡಿ ಹಾಗೆ ಮಾಡಿದ್ದಲ್ಲಿ ನಿಮ್ಮ ಜೀವನದಲ್ಲಿ ಒಂದಾದ ಮೇಲೆ ಒಂದು ಕಂಠಕಗಳು ಅಟ್ಟಿಸಿಕೊಂಡು ಬರುತ್ತವೆ ಜೊತೆಗೆ ಕೆಲವು ತಪ್ಪುಗಳನ್ನು ಮಾಡದೆ ಹೋದಲ್ಲಿ ನಿಮ್ಮ ಇದೇ ಕಾಲುಂಗುರ ನಿಮ್ಮ ಪತಿದೇವರನ್ನು ಕೋಟ್ಯಾಧೀಶರನ್ನಾಗಿ ಮಾಡುತ್ತದೆ.

ನೀವು ಏನು ಮಾಡಬೇಕು ಎಂದರೆ ಯಾವುದೇ ಕಾರಣಕ್ಕೂ ಮುರಿದ ಅಥವಾ ಆಕಾರವನ್ನು ಕಳೆದುಕೊಂಡಂತಹ ಕಾಲುಂಗುರವನ್ನು ಧರಿಸಬೇಡಿ ಅಂತಹ ಕಾಲು ಉಂಗುರಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ . ಮತ್ತು ಧನಾತ್ಮಕ ಕಂಪನಗಳ ಒಳಹರಿವನ್ನು ಕಡಿಮೆ ಮಾಡುತ್ತದೆ ಕಾಲುಂಗುರವನ್ನು ಆಯ್ದುಕೊಳ್ಳುವಾಗ ಬೆಳ್ಳಿಯ ಲೋಹದಿಂದ ತಯಾರಿಸಿರುವ ಕಾಲುಂಗುರವನ್ನು ಮಾತ್ರ ಆರಿಸಿಕೊಳ್ಳಬೇಕು ಕಬ್ಬಿಣ ಮತ್ತು ಉಕ್ಕಿನ ಮಾಡಿದಂತಹ

ಕಾಲುಂಗುರವನ್ನು ಧರಿಸುವುದನ್ನು ತಪ್ಪಿಸಿ ಏಕೆಂದರೆ ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ .
ಕಾಲುಂಗುರ ಕೇವಲ ಆಭರಣವಲ್ಲ ಇದು ಅದೃಷ್ಟದ ಸಂಕೇತವೂ ಆಗಿದೆ, ಹಾಗಾಗಿ ಬೇರೆ ಮಹಿಳೆಯರಿಗೆ ಇವುಗಳನ್ನು ಕೊಡಬೇಡಿ ಅನಗತ್ಯವಾಗಿ ನಿಮ್ಮ ಪಾದಗಳಿಂದ ಕಾಲುಂಗುರವನ್ನು ತೆಗೆಯಬೇಡಿ ಹಾಗೆ ಇವುಗಳನ್ನ ಕಳೆದುಕೊಳ್ಳುವುದು ಕೂಡ ಮಾಡಬೇಡಿ ಇದು ಅಶುಭದ ಸಂಕೇತ. ನೀವು ಕಾಲುಂಗುರವನ್ನು ನಿಮ್ಮ ಕೈಯಾರನೇ ಕಳೆದುಕೊಂಡಿದ್ದೆ ಆದಲ್ಲಿ ಅದು ನೇರವಾಗಿ ನಿಮ್ಮ ಗಂಡನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಮಾಡುತ್ತದೆ ಅಲ್ಲದೆ ವಿವಾಹಿತ ಮಹಿಳೆಯರು ಕಾಲು ಉರವನ್ನು ಧರಿಸುವಾಗ ಶಬ್ದವನ್ನು ಮಾಡದಂತಹ ಕಾಲುಂಗುರವನ್ನು ಧರಿಸಬೇಕು.

ವಾಸ್ತು ಪ್ರಕಾರ ಶಬ್ದ ಮಾಡುವ ಆಭರಣಗಳು ಜೀವನದಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು ಹಾಗೂ ವೇದದಲ್ಲಿ ಸ್ಪಷ್ಟವಾಗಿ ಹೇಳಿರುವುದು ಏನೆಂದರೆ ಮದುವೆಯಾದ ಮಹಿಳೆಯರು ಬೆಳ್ಳಿಯ ಕಾಲುಂಗುರ ಹಾಗೂ ಗೆಜ್ಜೆಗಳನ್ನು ಧರಿಸಬೇಕು ಇದರಿಂದ ಇವರಿಗೆ ಮೂರು ಬ್ರಹ್ಮಗಂಟು ಹಾಕಿರುವ ಪತಿರಾಯನಿಗೆ ಲಾಭ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

ಬೆಳ್ಳಿ ಗೆಜ್ಜೆ ಸದ್ದು ಮಹಾಲಕ್ಷ್ಮಿಯನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗಿದೆ ಅಲ್ಲಿಗೆ ಗೆಜ್ಜೆಯ ಸಪ್ಪಳ ಹಾಗೂ ಬೆಳ್ಳಿಯ ಕಾಲುಂಗುರ ನಿಮ್ಮ ಕಾಲಲ್ಲಿ ಇದ್ದಿದ್ದೇ ಆದಲ್ಲಿ ನಿಮ್ಮ ಪತಿ ಕೋಟ್ಯಾಧಿಪತಿ ಆಗುವುದಂತೂ ಗ್ಯಾರಂಟಿ. ಕೇವಲ ಕಾಲುಂಗುರ ಮಾತ್ರ ಅಲ್ಲ ಹೆಣ್ಣು ಮಕ್ಕಳ ಧರಿಸುವ ಬಳೆ ಕೂಡ ಮುತ್ತೈದೆತನಕ್ಕೆ ಪ್ರತೀಕವಾಗಿದೆ, ಮದುವೆ ನಂತರ ಪ್ರತಿ ಹೆಣ್ಣಿನ ಕೈಗಳಲ್ಲಿ ಮಳೆ ಇದ್ದರೆ ಚಂದ ಇದು ಫ್ಯಾಷನ್ ಎಂಬ ಪದ್ಧತಿ ಅಲ್ಲ ತಲತಲಾಂತರದಿಂದ ಬಂದಂತಹ ಪದ್ಧತಿ ಆಗಿದೆ,

ಮದುವೆಯಾದ ಮಹಿಳೆಯರು ಹಸಿರು ಮತ್ತು ಕೆಂಪು ಬಣ್ಣದ ಬಳೆಯನ್ನು ಧರಿಸಬೇಕು, ಇದು ಸುಖ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿರುತ್ತದೆ. ತುಂಡಾಗಿರುವ ಹಾಗೂ ಬಿರುಕು ಬಿಟ್ಟಂತಹ ಬಳೆಗಳನ್ನು ಧರಿಸಬೇಡಿ ಇದು ನಕಾರಾತ್ಮಕ ಶಕ್ತಿಯನ್ನು ಬೇಗನೆ ಆಕರ್ಷಿಸುತ್ತದೆ, ಬಳೆಗಳ ಧರಿಸುವುದರಿಂದ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು ಮನಸ್ಸು ಕೂಡ ಸದಾ ಶಾಂತವಾಗಿರುತ್ತದೆ.
ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

lakshmi astrology ಜೀವನದಲ್ಲಿ ನೀವು ಮಾಡುವ ಈ ತಪ್ಪುಗಳೇ ತಾಯಿ ಲಕ್ಷ್ಮಿ ಕೋಪಗೊಳ್ಳಲು ಕಾರಣ……

vastu tips ಯಾರೂ ನೋಡದಂತೆ ಅವುಗಳನ್ನು ಮರೆಮಾಡಿ, ಇಲ್ಲದಿದ್ದರೆ ಕಷ್ಟ ತಪ್ಪೋಲ್ಲ

Leave A Reply

Your email address will not be published.