Ultimate magazine theme for WordPress.

Reiki Distance ಚಿಕಿತ್ಸೆಯಿಂದ ಎಲ್ಲೋ ಇರುವ ವ್ಯಕ್ತಿಗಳನ್ನು ಗುಣ

0 239

Reiki Distance Healing ರೇಖಿ ದೂರಗಾಮಿ ಚಿಕಿತ್ಸೆಯಿಂದ ಎಲ್ಲೋ ಇರುವ ವ್ಯಕ್ತಿಗಳನ್ನು ಗುಣ ಪಡಿಸಬಹುದು ಇವತ್ತಿನ ಲೇಖನದಲ್ಲಿ ರೇಖಿ ದೂರಗಾಮಿ ಚಿಕಿತ್ಸೆಯ ಬಗ್ಗೆ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಪ್ರಪಂಚದ ಯಾವ ಮೂಲೆಯಲ್ಲಿರುವ ವ್ಯಕ್ತಿ ಅಥವಾ ಸಂದರ್ಭವನ್ನು ಚಿಕಿತ್ಸೆ ಮಾಡಬಹುದಾದಂತಹ ಒಂದು ಅದ್ಭುತವಾದ ತಂತ್ರವಾಗಿದೆ. ಈ ತಂತ್ರದಿಂದ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ, ಉತ್ತಮ ಬಾಂಧವ್ಯವನ್ನು ಪಡೆದುಕೊಳ್ಳಲು

ಹಾಗೂ ಹಿಂದೆ ನಡೆದಿರುವಂತಹ ಎಷ್ಟೋ ಕಹಿ ಘಟನೆಗಳನ್ನು ಮರೆತು ಹೋಗಲು ಮತ್ತು ಭವಿಷ್ಯದ ಎಷ್ಟೋ ಬಯಕೆಗಳನ್ನು ಈಡೇರಿಸಿಕೊಳ್ಳಲು ಇಂದಿನ ಜನ್ಮದ ಪ್ರಾರಾಬ್ಧ ದೋಷಗಳನ್ನು ತೆಗೆಯಲು, ಸುಖಕರ ಪ್ರಯಾಣ ಮಾಡಲು, ಯಾವುದೇ ಮೂಲೆಯಲ್ಲಿರುವ ವ್ಯಕ್ತಿಗೆ ರಕ್ಷಣಾ ಕವಚವನ್ನು, ರಕ್ಷಣಾ ವಲಯವನ್ನು ನಿರ್ಮಿಸಬಹುದಾದಂತಹ, Reiki Distance

ಅದ್ಭುತವಾದಂತಹ ತಂತ್ರ ಈ ರೇಖಿ ದೂರಗಾಮಿ ಚಿಕಿತ್ಸೆಯ ತಂತ್ರ. ಈ ತಂತ್ರವನ್ನು ಯಾರು ಬೇಕಾದರೂ ಕಲಿಯಬಹುದಾಗಿದೆ. ವಿದ್ಯಾರ್ಥಿಗಳಿಂದ ವೃದ್ಧರವರೆಗೂ ಎಲ್ಲಾ ವಯೋಮಾನದವರು ತಮ್ಮ ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ತಂತ್ರವನ್ನು ಉಪಯೋಗ ಮಾಡಬಹುದಾಗಿದೆ. ವಿದ್ಯಾರ್ಥಿಗಳಾದರೇ ಉತ್ತಮವಾದ ಪದವಿಯನ್ನು ಪಡೆದುಕೊಳ್ಳಲು, Reiki Distance

ಪೋಷಕರಾದರೇ ಮಕ್ಕಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲು, ಕೆಲಸ ಮಾಡುವವರು ಆದರೇ ತಮ್ಮ ತಮ್ಮ ಪದವಿಯನ್ನು ಎತ್ತರಕ್ಕೆ ಏರಿಸಿಕೊಳ್ಳಲು, ವೃದ್ಧರಾದರೇ ತಮ್ಮ ಮನಸ್ಥಿತಿಯನ್ನು ಶಾಂತವಾಗಿ ಇಟ್ಟುಕೊಳ್ಳಲು ಹಾಗೂ ಆಧ್ಯಾತ್ಮಿಕ ಹಾದಿಯನ್ನು ಸುಗಮ ಮಾಡಿಕೊಳ್ಳಲು ನಮ್ಮ ಅರಿವಿಗೆ ಬರದ ಎಷ್ಟೋ ರೋಗಗಳನ್ನು ಶಮನ ಮಾಡಿಕೊಳ್ಳಲು ಈ ಡಿಸ್ಟೆನ್ಸ್ ಹೀಲಿಂಗ್ ಪದ್ಧತಿಯು ಫಲಕಾರಿಯಾಗಿರುತ್ತದೆ.

ಈ ಚಿಕಿತ್ಸೆಯನ್ನು ಕಲಿಯಬೇಕಾದರೆ ಸೂಕ್ತ ಸದ್ಭುಗುರುವಿನಿಂದ ಆದೇಶ ಪಡೆದು ರೇಖಿ ಮಾಸ್ಟರ್ ಶಿಪ್ ಪಡೆದಂತಹ ಗುರುಗಳಿಂದ ದೀಕ್ಷಾ ಪದ್ಧತಿಯನ್ನು ಅನುಸರಿಸಿ ಅನುಷ್ಟಾಣಾದ ಪೂರ್ಣಾವಧಿಯನ್ನು ಮುಗಿಸಿದ ನಂತರ ನೀವು ರೇಖಿ ಅಭ್ಯಾಸಿಗಳಾಗಿರುತ್ತೀರಿ. ಈ ರೇಖಿ ಚಿಕಿತ್ಸೆಯಲ್ಲಿ ಮೂರು ಪದವಿಗಳು ಇರುತ್ತವೆ.
ಮೊದಲನೇಯ ಪದವಿಯ ಉದ್ದೇಶ ಸೆಲ್ಫ್ ಹೀಲಿಂಗ್ ಚಿಕಿತ್ಸೆಯು ಚಾಲ್ತಿಗೆ ಬರುತ್ತದೆ. ಇದರಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. Reiki Distance

ಎರಡನೇಯ ಪದವಿಯಲ್ಲಿ ತಮಗೆ ತಾವು ಚಿಕಿತ್ಸೆ ಮಾಡಿಕೊಳ್ಳಲು ಮತ್ತು ಬೇರೆಯವರಿಗೆ ಚಿಕಿತ್ಸೆ ಮಾಡಲು ಭೂತ ಹಾಗೂ ವರ್ತಮಾನ ಕಾಲದ ದೋಷಗಳನ್ನು ಪರಿಹರಿಸಿಕೊಳ್ಳಲು ಭವಿಷ್ಯದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ನಿಗ್ರಹಿಸಲು ಅಧಿಕಾರಿಗಳಾಗಿರುತ್ತೀರಿ.ಮೂರನೇ ಪದವಿಯಲ್ಲಿ ರೇಖಿ ಮಾಸ್ಟರ್ ಶಿಪ್ ಅನ್ನು ಪಡೆಯುತ್ತೀರಿ ಅಂದರೆ ಡಾ. ಮೆಕಾವೋ ಹುಸುವಿಯಾ ಮೂಲ ಶಕ್ತಿಯನ್ನು ಹೊಂದುತ್ತೀರಿ.

ಈ ಮೂರನೆ ಪದ್ಧತಿಯಲ್ಲಿ ಅರ್ಹತೆಯನ್ನು ಹೊಂದಿರುವವರಿಗೆ ದೀಕ್ಷೆ ಕೊಡುವಂತಹ ಅಧಿಕಾರವನ್ನು ಹೊಂದಿರುತ್ತೀರಿ. ಸರಿಯಾದ ದೀಕ್ಷೆ ಇಲ್ಲದೆ ಗುರುವಿನ ಮಾರ್ಗದರ್ಶನ ಇಲ್ಲದೇ ರೇಖಿ ಚಿಕಿತ್ಸೆ ಫಲಕಾರಿಯಾಗದು. ಒಂದು ವೇಳೆ ದೀಕ್ಷೆ ಇಲ್ಲದೇ ಅಭ್ಯಾಸ ಮಾಡಿದ್ದಲ್ಲಿ ಅಡ್ಡ ಪರಿಣಾಮಗಳು ಬರುತ್ತವೆ. ಇಲ್ಲಿ ಗುರುವಿನ ಮಾರ್ಗದರ್ಶನ ಅತ್ಯವಶ್ಯಕವಾಗಿದೆ. ಇದು ರೇಖಿ ದೂರಗಾಮಿ ಚಿಕಿತ್ಸೆ ಅಥವಾ ಡಿಸ್ಟೆಂಟ್ ಅನ್ನು ಪಡೆದುಕೊಳ್ಳಲು ಬೇಕಾದಂತಹ ಪದವಿಗಳ ವಿವರವಾಗಿದೆ. Reiki Distance

Leave A Reply

Your email address will not be published.