Ultimate magazine theme for WordPress.

why rolex ಈ ವಾಚ್ ತಾಖತ್ತು ಎಂಥದ್ದು ಗೊತ್ತಾ

0 220

why rolex watches so expensive ನಿಖಿರವಾದ ಸಮಯವನ್ನು ತೋರಿಸುವ ಏಕೈಕ ಕೈ ಗಡಿಯಾರಗಳು ಎಂದರೆ ಅದು ರೋಲೆಕ್ಸ್ ವಾಚ್ ಗಳು. ಇದರ ಪ್ರಾರಂಭಿಕ ಬೆಲೆ ನಾಲ್ಕರಿಂದ ಐದು ಲಕ್ಷಗಳಷ್ಟು, ಇದನ್ನು ಖರೀದಿ ಮಾಡಲು ಮೂರರಿಂದ ನಾಲ್ಕು ವರ್ಷ ಕಾಯಬೇಕು. ಯುಎಇಯ ರಾಜಮನೆತನದವರು ಕೂಡ ಈ ಒಂದು ವಾಚ್ ಖರೀದಿ ಮಾಡಲು ಕಾಯಲೇಬೇಕು. ಏಕೆ ಈ ವಾಚ್

ಬಹಳ ಬೇಗ ಕೈಗೆ ಸಿಗುವುದಿಲ್ಲವೆಂದರೆ ಮೌಂಟ್ ಎವರೆಸ್ಟ್ನಂತಹ ಎತ್ತರದ ಪ್ರದೇಶದಲ್ಲೂ ಮತ್ತು ಸಮುದ್ರದ ಆಳದಲ್ಲೂ ನಿಖರವಾದ ಸಮಯವನ್ನು ಈ ವಾಚ್ ತೋರಿಸುತ್ತದೆ. ತಮ್ಮ ವಾಚ್ ನ ಬಾಳಿಕೆಯನ್ನು ಸಾಭೀತು ಪಡಿಸಿವೆ. ಈ ವಾಚ್ ನ ಕತೆ 1905ರಿಂದಲೇ ಪ್ರಾರಂಭವಾಗುತ್ತದೆ. ಹಾನ್ಸ್ ವಿಲ್ಸ್ಡಾರ್ಫ್ ಮತ್ತು ಆಲ್ಫ್ರೆಡ್ ಡಾವಿಸ್ ಸೇರಿಕೊಂಡು ಲಂಡನ್ ನಲ್ಲಿ ವಿಲ್ಸ್ಡಾರ್ಫ್ ಮತ್ತು ಡಾವಿಸ್ ಎಂಬ ಕಂಪನಿಯನ್ನು ಪ್ರಾರಂಭಿಸುತ್ತಾರೆ.

ಅಲ್ಲಿ ಕೈಗಡಿಯಾರಗಳನ್ನು ತಯಾರಿಸಿ ಆಭರಣದ ಅಂಗಡಿಗೆ ಕಳುಹಿಸುತ್ತಿದ್ದರು. ನಂತರ ಆಭರಣದ ಅಂಗಡಿಯ ಮಾಲೀಕರು ತಮ್ಮ ಹೆಸರನ್ನು ಹಾಕಿಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆದರೇ ರಿಸ್ಟ್ ವಾಚ್ ನಿಖರವಾಗಿ ಸಮಯವನ್ನು ತಿಳಿಸುತ್ತಿರಲಿಲ್ಲ. ಹಾಗಾಗಿ ಆ ಕಾಲದಲ್ಲಿ ಪಾಕೆಟ್ ವಾಚ್ ಅನ್ನು ಬಳಸುತ್ತಿದ್ದರು. ಆದರೇ ಪಾಕೆಟ್ ವಾಚ್ ಗಳು ನೀರಿನಲ್ಲಿ ಬಿದ್ದರೆ ಹಾಳಾಗುತ್ತಿದ್ದವು. ಎತ್ತರಕ್ಕೆ ಹೋದರೇ ಆ ಕೈಗಡಿಯಾರಗಳು ಕೆಲಸ ಮಾಡುತ್ತಿರಲಿಲ್ಲ. ಸಮಯ ನೋಡಲು ಬೇರೆ ಏನು ಇಲ್ಲದೇ ಇದನ್ನು ಬಳಸುತ್ತಿದ್ದರು. why rolex

ಈ ರಿಸ್ಟ್ ವಾಚ್ ಗಳನ್ನ ದೊಡ್ಡ ದೊಡ್ಡ ಶ್ರೀಮಂತರು ಆಭರಣದ ರೀತಿ ಕಟ್ಟಿಕೊಳ್ಳುತ್ತಿದ್ದರು. ಮಣಿಕಟ್ಟಿನ ಗಡಿಯಾರ ಪ್ಯಾಕೆಟ್ ಗಡಿಯಾರಕ್ಕಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ತಿಳಿದ ಹಾನ್ಸ್ ಮತ್ತು ಡಾವಿಸ್ ಆಭರಣ ಮಾತ್ರವಲ್ಲದೇ ನಿಖರವಾಗಿ ಸಮಯ ತಿಳಿಸುವಂತೆ ತಯಾರಿಸಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಇವರು ನೂರಕ್ಕೂ ಹೆಚ್ಚು ಕೈಗಡಿಯಾರ ತಯಾರಕರನ್ನು ಭೇಟಿ ಮಾಡಿದರು. ಮತ್ತು ಪರಿಣಿತರಿಂದ ತರಬೇತಿಯನ್ನು ಪಡೆದರು. why rolex

ಕೊನೆಗೆ ಸರಿಯಾಗಿ ಸಮಯವನ್ನು ತೋರಿಸುವ ಕೈಗಡಿಯಾರವನ್ನು ತಯಾರಿಸಿದರು. ನಂತರ ಆಭರಣದ ಅಂಗಡಿಗೆ ಪೂರೈಸಿ ಹಣವನ್ನು ಗಳಿಸುತ್ತಿದ್ದರು. ನಂತರ ಮಾರುಕಟ್ಟೆಯಲ್ಲಿ ಅವರ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರು. ಅವರ ವಾಚ್ ಗಳನ್ನು ಜನರು ತುಂಬಾ ಇಷ್ಟಪಡುತ್ತಿದ್ದರು. ಇವರು ತಮ್ಮ ಸ್ವಂತ ಬ್ರ್ಯಾಂಡ್ ನಿಂದ ವಾಚ್ ಗಳನ್ನು ನಾವೇ ಬಿಡುಗಡೆ ಮಾಡಬಾರದು ಎಂದು ಯೋಚಿಸಿ, ತಮ್ಮದೇ ಆದ ಬ್ರ್ಯಾಂಡ್ ನೊಂದಿಗೆ ಕೈ ಗಡಿಯಾರವನ್ನು ಮಾರಾಟ ಮಾಡಲು ಶುರು ಮಾಡಿದರು.

ಆಗ ಅವರ ಕಂಪನಿಯ ಹೆಸರನ್ನು 1908ರಲ್ಲಿ ರೋಲೆಕ್ಸ್ ಎಂದು ಬದಲಾಯಿಸಿದರು. 1908ರಲ್ಲಿ ತಮ್ಮ ಕಂಪನಿಯ ಮುಖ್ಯ ಕಛೇರಿಯನ್ನ ಶುರು ಮಾಡಿದರು. ಇವರ ಗುರಿ ಸಮಯದ ನಿಖರತೆ ಆಗಿರುವುದರ ಜೊತೆಗೆ ವಾಚ್ ಅನ್ನು ಗಟ್ಟಿಮುಟ್ಟಾಗಿ ತಯಾರು ಮಾಡುವಲ್ಲಿ ಗಮನ ಅರಿಸಿದರು ಅಂದರೆ ನೀರು, ಧೂಳು, ಪರಿಸರದ ಇತರ ಬಾಹ್ಯ ಅಂಶಗಳಿಂದ ಗಡಿಯಾರಗಳು ಹಾಳಾಗದಂತೆ ಗಮನ ಅರಿಸಿದ್ದರು. ಸಾಕಷ್ಟು ಆವಿಷ್ಕಾರಗಳ ನಂತರ ರೋಲೆಕ್ಸ್ ಅವರು 1926ರಲ್ಲಿ ರೋಲೆಕ್ಸ್ ಓಯ್ಸಟೆರ್ ಎಂಬ ಕೈಗಡಿಯಾರವನ್ನು ಹೊರತಂದರು. why rolex

ಇದು ವಿಶ್ವದ ಮೊದಲ ವಾಟರ್ ಪ್ರೂಫ್ ಆಗಿತ್ತು. ಆ ಕಾಲದಲ್ಲಿ ವಾಟರ್ ಪ್ರೂಫ್ ವಾಚ್ ಒಂದು ದೊಡ್ಡ ಆವಿಷ್ಕಾರವಾಗಿತ್ತು. ಈ ರೋಲೆಕ್ಸ್ ಓಯ್ಸಟೆರ್ನ ಗುಣಮಟ್ಟವನ್ನು ಸಾಬೀತು ಪಡಿಸಲು ಅವಕಾಶವೂ ಸಿಕ್ಕಿತು. 1927 ಅಕ್ಟೋಬರ್ ನಲ್ಲಿ ಮರ್ಸಿಡಿಸ್ ಕ್ಲಿಟಲ್ಸ್ ಎಂಬ ಈಜುಗಾರ್ತಿ ವಿಶ್ವದಾಖಲೆ ಮಾಡಲು ಹೊರಟಿದ್ದಳು. ಈಕೆ 34 ಕಿಲೋಮೀಟರ್ ಈಜು ಹೊಡೆದಳು.

ಈ ಸಮಯದಲ್ಲಿ ಈಜುವ ಸಮಯವನ್ನು ಲೆಕ್ಕ ಹಾಕಲು ರೋಲೆಕ್ಸ್ ಆಕೆಗೆ ವಾಟರ್ ಪ್ರೂಫ್ ಕೈಗಡಿಯಾರವನ್ನು ಆಕೆಗೆ ಕೊಟ್ಟಿತು. ಆಕೆ ಅದನ್ನು ರೇಷ್ಮೆ ರಿಬ್ಬನ್ ಗೆ ಹಾಕಿ ತನ್ನ ಕುತ್ತಿಗೆಗೆ ಧರಿಸಿದ್ದಳು. ಆಕೆ ಬೆಳಿಗ್ಗೆ 7:30ಕ್ಕೆ ಈಜಲು ಶುರು ಮಾಡಿ 10 ಗಂಟೆಗಳ ಕಾಲ ಈಜಿ ಸಂಜೆ ಒಳಗೆ ಪ್ರಾನ್ಸ್ ಅನ್ನು ತಲುಪಿದ್ದಳು. ಗಂಟೆ ಗಟ್ಟಲೇ ಆ ವಾಚ್ ನೀರಿನಲ್ಲಿ ಇದ್ದರೂ ಆ ವಾಚ್ ನಲ್ಲಿ ಒಂದು ಸೆಕೆಂಡ್ ಟೈಂ ಕೂಡ ವ್ಯತ್ಯಾಸವಾಗಲಿಲ್ಲ. ಈ ವಿಶ್ವದಾಖಲೆ ಕ್ಲಿಟಲ್ಸ್ ಮಾತ್ರವಲ್ಲ ರೋಲೆಕ್ಸ್ ವಾಚ್ ಗೂ ಭರ್ಜರಿ ಜಯವನ್ನು ತಂದುಕೊಟ್ಟಿತು. why rolex

ಈ ವಾಚ್ ಜಲನಿರೋಧಕ ಸಾಮರ್ಥ್ಯವನ್ನು ಸಾಬೀತು ಪಡಿಸಿತು. ಅಂದಿನಿಂದ ಕ್ಲಿಟಲ್ಸ್ ಜೊತೆಗೆ ರೋಲೆಕ್ಸ್ ವಾಚ್ಗಳು ಕೂಡ ಪತ್ರಿಕೆಯಲ್ಲಿ ಪ್ರಕಟವಾದವು. ಇದರಿಂದ ಕಂಪನಿಗೆ ಉಚಿತ ಪ್ರಚಾರ ಸಿಕ್ಕಿತು. 1945ರಲ್ಲಿ ರೋಲೆಕ್ಸ್ ತನ್ನ ಕೈಗಡಿಯಾರಗಳಿಗೆ ಹೊಸದಾಗಿ ದಿನಾಂಕವನ್ನು ತೋರಿಸುವುದನ್ನು ಸೇರಿಸಿತು ಮತ್ತು ಎಲ್ಲಾ ರೀತಿಯ ಪರಿಸರದಲ್ಲಿ ನಿಖರವಾಗಿ ಸಮಯವನ್ನು ತೋರಿಸುವ ಸುಧಾರಣೆಯನ್ನು ಮಾಡಿತು.

1953ರಲ್ಲಿ ಸರ್ ಹೆಡ್ಮನ್ ಹಿಲ್ಲರಿ ಮತ್ತು ತೇನ್ಸಿಂಗ್ ರವರು ವಿಶ್ವದ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಮೂಲಕ ವಿಶ್ವದಾಖಲೆ ಮಾಡಲು ಹೊರಟಿದ್ದರು. ರೋಲೆಕ್ಸ್ ಕಂಪನಿಯು ಈ ರೋಲೆಕ್ಸ್ ವಾಚ್ ಅನ್ನು ಕಟ್ಟಿತು. ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಿಶ್ವದಾಖಲೆ ಮಾಡಿದರು ಅವರ ಜೊತೆಗೆ ರೋಲೆಕ್ಸ್ ಕೂಡ ವಿಶ್ವದಾಖಲೆ ಆಯಿತು.

ಏಕೆಂದರೆ ಈ ಕಂಪನಿಯ ಗಡಿಯಾರ ಅಷ್ಟು ಎತ್ತರದಲ್ಲೂ ಕೂಡ ಮೈಕೊರೆಯುವ ಚಳಿಯಲ್ಲಿ, ಒತ್ತಡದ ವಾತಾವರಣದಲ್ಲಿ ನಿಖರವಾದ ಸಮಯವನ್ನು ತಿಳಿಸಿತು. ಈ ರೀತಿಯಾಗಿ ಕಂಪನಿಗೆ ಯಶಸ್ಸು ಆಯಿತು ಜೊತೆಗೆ ಹೊಸ ಹೊಸ ಬ್ರ್ಯಾಂಡ್ ಅನ್ನು ತಯಾರು ಮಾಡಲು ಶುರು ಮಾಡಿತು. ಜಲಾಂತರ್ಗಾಮಿ ಯ ಮೂಲಕ ಸಮುದ್ರದ ಆಳಕ್ಕೆ ಇಳಿದರೂ ಸರಿಯಾದ ನಿಖರವಾಗಿ ಸಮಯವನ್ನು ತಿಳಿಸುವಂತಹ ವಾಚ್ ಇದಾಗಿತ್ತು. ಆದರೇ 1960 ಜುಲೈ 6ರಂದು ಹಾನ್ಸ್ ವಿಲ್ಸ್ಡಾರ್ಫ್ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು. why rolex

ನಂತರ ಇವರ ಕಂಪನಿ ಅವರ ಹೆಸರಿನ ಎನ್ಜಿಓ ಅವರ ಕೈ ಸೇರಿತು. ಇವತ್ತಿಗೂ ಈ ಎನ್ಜಿಓ ಈ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದೆ. ಈ ಕಂಪನಿಯು ಖಾಸಗಿ ಕಂಪನಿಯ ಕೈನಲ್ಲಿ ಇಲ್ಲ. ಈ ಕಂಪನಿಯು ತನ್ನ ಲಾಭದ ಶೇ 90ರಷ್ಟನ್ನು ದೇಣಿಗೆಯಾಗಿ ಕೊಡುತ್ತಿದೆ. ಕಂಪನಿಯು ತನ್ನ ಕೈಗಡಿಯಾರಕ್ಕೆ ಗಣ್ಯವರ್ಗವನ್ನ ಗುರಿಯಾಗಿರಿಸಿಕೊಂಡಿದೆ.

ಈ ಗಡಿಯಾರವನ್ನು ಭಾವನೆ ಮತ್ತು ಯಶಸ್ಸು ಎಂದು ಲಿಂಕ್ ಮಾಡಿದರು. ಜೀವನದಲ್ಲಿ ಏನಾದರೂ ದೊಡ್ಡದಾಗಿ ಏನಾದರೂ ಸಾಧಿಸುವವರ ಕೈಯಲ್ಲಿ ಕೇವಲ ಕೈ ಗಡಿಯಾರ ಅಲ್ಲ ನಿಮ್ಮ ಯಶಸ್ಸನ ಪದಕ ಎಂದು ಪ್ರಚಾರ ಮಾಡಿದರು. ಇದು ಜನರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು ಮತ್ತು ಸೀಮಿತ ಪೂರೈಕೆ ತಂತ್ರದ ಮೂಲಕ ತಮ್ಮ ಕಂಪನಿಯ ಮಹತ್ತ್ವವನ್ನು ತೋರಿಸಲಾಯಿತು. why rolex

ಈ ವಾಚ್ ಆನ್ ಲೈನ್ ನಲ್ಲಿ ಸಿಗುವುದಿಲ್ಲ. ಕೇವಲ ಒಬ್ಬರಿಗೆ ಒಂದೇ ವಾಚ್ ಮಾತ್ರ ಬುಕ್ ಮಾಡಬೇಕು, ಅದು ನಮ್ಮ ಕೈ ಸೇರಲು ಮೂರು ನಾಲ್ಕು ವರ್ಷ ಬೇಕು. ಈ ಎಲ್ಲಾ ಕಾರಣಗಳು ರೋಲೆಕ್ಸ್ ಅನ್ನು ಜನಪ್ರಿಯಗೊಳಿಸಿವೆ. ರೋಲೆಕ್ಸ್ ಪ್ರತಿಯೊಂದು ವಾಚ್ ತಯಾರು ಮಾಡವ ಸಂದರ್ಭದಲ್ಲೂ ಗುಣಮಟ್ಟಕ್ಕೆ ಮಹತ್ತ್ವ ವನ್ನು ಕೊಡುತ್ತದೆ. ಈ ವಾಚ್ ತಯಾರಿಸಲು ಬಳಸುವ ವಸ್ತುಗಳು ತುಂಬಾ ದುಬಾರಿಯಾಗಿವೆ.

Leave A Reply

Your email address will not be published.