Ultimate magazine theme for WordPress.

Shiva ಓಂ ನಮಃ ಶಿವಾಯ ಮಂತ್ರದ ರಹಸ್ಯ ಅರ್ಥ ಲಾಭ ಉತ್ಪತ್ತಿ

0 3,230

Shiva maha puraan kannada ಓಂ ನಮಃ ಶಿವಾಯ ಮಂತ್ರದ ರಹಸ್ಯ ಅರ್ಥ ಲಾಭ ಉತ್ಪತ್ತಿ ತಿಳಿಯಿರಿ ಭಗವಂತನಾದ ಶಿವನಿಗೆ ಸರ್ವಪ್ರಿಯವಾದ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಮಂತ್ರದ ಚಮತ್ಕಾರಿಕ ಪ್ರಭಾವಗಳನ್ನು ತಿಳಿದುಕೊಳ್ಳೋಣ. ಪ್ರತಿದಿನ ಈ ಮಂತ್ರವನ್ನು ಜಪ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಯಾವ ಬದಲಾವಣೆಗಳು ಆಗುತ್ತವೆ. ಈ ಓಂ ನಮಃ ಶಿವಾಯ ಮಂತ್ರವನ್ನ ಸ್ವತಃ ಭಗವಂತನಾದ ಶಿವನು ಮನುಷ್ಯರ ಕಲ್ಯಾಣಕ್ಕಾಗಿ ನೀಡಿದ್ದಾರೆ. ಭಕ್ತರು ಶ್ರದ್ಧೆ, ಭಕ್ತಿಯಿಂದ ಈ ಮಂತ್ರವನ್ನು ಜಪ ಮಾಡುತ್ತಾರೋ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

ಸೃಷ್ಠಿಯ ಎಲ್ಲಾ ಶಕ್ತಿಗಳು ಈ ಮಂತ್ರದಲ್ಲಿದೆ. ಈ ಮಂತ್ರವನ್ನು ಜಪ ಮಾಡುವ ವ್ಯಕ್ತಿಗೆ ಬೇರೆ ಯಾರ ಸಹಾಯದ ಅವಶ್ಯಕತೆ ಇರುವುದಿಲ್ಲ. ಸ್ವತಃ ಭಗವಂತನಾದ ಶಿವನೇ ಆ ಭಕ್ತರನ್ನ ರಕ್ಷಣೆ ಮಾಡುತ್ತಾನೆ. ಈ ಓಂ ನಮಃ ಶಿವಾಯ ಮಂತ್ರದ ಉತ್ಪತ್ತಿ ಹೇಗಾಯಿತು ಎಂದು ತಿಳಿಸಿಕೊಡುತ್ತೇವೆ. ಪೌರಾಣಿಕ ಕತೆಗಳ ಅನುಸಾರವಾಗಿ ಸೃಷ್ಠಿಯ ಪ್ರಾರಂಭದಲ್ಲಿ ಸೃಷ್ಠಿಯ ಮೇಲೆ ಭಗವಂತನಾದ ಶಿವನು ಒಂದು ಸ್ಥಂಭದ ರೂಪದಲ್ಲಿ ಪ್ರಕಟವಾಗಿದ್ದನು. ಈ ಅಗ್ನಿ ಸ್ಥಂಭವೂ ತನ್ನ ಪೂರ್ಣವಾದ ಶಕ್ತಿಯಿಂದ ಬಂದಿತ್ತೋ

ಆ ಅಗ್ನಿ ಸ್ಥಂಭಕ್ಕೆ 5 ಮುಖಗಳಿದ್ದವು. ಆ ಐದು ತತ್ತ್ವಗಳು ಭೂಮಿ, ವಾಯು, ಅಗ್ನಿ, ನೀರು ಮತ್ತು ಆಕಾಶ. ಇವು ಹುಟ್ಟಿದಾಗ ಎಲ್ಲಕ್ಕಿಂತ ಮೊದಲು ಓಂ ಶಬ್ಧವು ಬಂದಿತು. ಉಳಿದ ನಮಃ ಶಿವಾಯ ಶಬ್ಧಗಳು ಈ ಅಗ್ನಿ ಸ್ಥಂಭದ ಐದು ಮುಖಗಳಿಂದ ಉತ್ಪತ್ತಿಯಾದವು. ಓಂ ನಮಃ ಶಿವಾಯ ಮಂತ್ರವನ್ನು ಸೃಷ್ಠಿಯ ಮೊದಲ ಮಂತ್ರವೆಂದು ತಿಳಿಯಲಾಗಿದೆ.

ಯಾವ ವ್ಯಕ್ತಿಗಳು ಏಕಾಗ್ರ ಚಿತ್ತವಾಗಿ ತಮ್ಮ ಜೀವನದಲ್ಲಿ ಪ್ರತಿದಿನ ಈ ಜಪ ಮಾಡುತ್ತಾರೋ ಅವರಿಗೆ ಪರಂಗತಿಯು ಪ್ರಾಪ್ತವಾಗುತ್ತದೆ ಮತ್ತು ಈ ಮಂತ್ರವನ್ನು ಜಪ ಮಾಡುವಾಗ, ಅನುಷ್ಠಾನ ಮಾಡುವಾಗ ಯಾವುದೇ ತಿಥಿ, ಲಗ್ನ, ನಕ್ಷತ್ರ, ವಾರ, ಯೋಗಗಳ ವಿಚಾರ ಮಾಡಬಾರದು. ಅಂದರೆ ಯಾವುದೇ ಸಮಯದಲ್ಲೂ ಈ ಮಂತ್ರವನ್ನು ಜಪಮಾಡಬಹುದು. Shiva

ಯಾವತ್ತಿಗೂ ಈ ಮಂತ್ರವು ಜಾಗೃತ ವ್ಯವಸ್ಥೆಯಲ್ಲಿ ಇರುತ್ತದೆ. ಈ ಮಂತ್ರದಲ್ಲಿರುವ ಐದು ಶಬ್ಧಗಳು ಪಂಚತತ್ವದ ಪ್ರತೀಕವಾಗಿದೆ. ನ ಎನ್ನುವುದು ಪೃತ್ವಿಯ ಪ್ರತೀಕವಾಗಿದೆ. ಮ ಎನ್ನುವುದು ಜಲದ ಪ್ರತೀಕವಾಗಿದೆ. ಶಿ ಎನ್ನುವುದು ಅಗ್ನಿಯ ಪ್ರತೀಕವಾಗಿದೆ. ವ ಎಂದರೆ ವಾಯು, ಯ ಎಂದರೆ ಆಕಾಶದ ಪ್ರತೀಕವಾಗಿದೆ. ಇದೇ ಆ ಐದು ತತ್ತ್ವಗಳು. ಸಂಪೂರ್ಣ ಬ್ರಹ್ಮಾಂಡದ ಮಾನವ ಶರೀರದ ನಿರ್ಮಾಣದ ಮೂಲದಲ್ಲಿದೆ.

ಸೃಷ್ಠಿಯ ಎಲ್ಲಾ ಕಣ ಕಣದಲ್ಲೂ ಇವೆ. ಈ ಮಂತ್ರದ ಪ್ರಭಾವ ಹೇಗಿರುತ್ತದೆಂದರೆ ಈ ಮಂತ್ರವನ್ನು ಜಪ ಮಾಡಿದಾಗ ಸಾಧಕನಿಗೆ ಶಿವನ ದರ್ಶನವಾಗುತ್ತದೆ. ಶಿವನ ಕೃಪೆಗಾಗಿ, ಆಶೀರ್ವಾದಕ್ಕಾಗಿ ಈ ಮಂತ್ರವನ್ನು ಜಪ ಮಾಡಿದರೆ ಜೀವನದಲ್ಲಿ ಚಮತ್ಕಾರಗಳು ನಡೆಯುತ್ತವೆ. ನಿಮ್ಮ ಅವಶ್ಯಕತೆಗಳು ಶಿವನ ಕೃಪೆಯಿಂದ ಈಡೇರುತ್ತದೆ. ಇನ್ನೊಂದು ಈ ಮಂತ್ರದಿಂದ ಸಿಗುವ ಲಾಭವೇನೆಂದರೆ ನಮ್ಮ ಶರೀರದ ಪಂಚತತ್ತ್ವಗಳು ಸಮತೋಲನವಾಗುತ್ತದೆ. ಯಾವ ಪಂಚತತ್ತ್ವಗಳು ಬ್ರಹ್ಮಾಂಡದಲ್ಲಿದೆಯೋ ಅವುಗಳೇ ಮಾನವ ಶರೀರದಲ್ಲಿವೆ. Shiva

ಇವುಗಳಲ್ಲಿ ಮೊದಲನೇ ತತ್ತ್ವ ಪೃಥ್ವಿ ತತ್ತ್ವ ಇದರಿಂದಲೇ ನಮ್ಮ ಶರೀರ ತಯಾರಾಗಿದೆ. ಜಲತತ್ತ್ವ ದಿಂದಲೇ ನಮ್ಮ ಶರೀರದಲ್ಲಿ ಎಷ್ಟೆಲ್ಲಾ ಜಲತತ್ತ್ವಗಳಿವೆಯೋ ಅವೆಲ್ಲವೂ ಜಲತತ್ತ್ವಕ್ಕೆ ಹೊಂದಿಕೊಂಡಿವೆ. ಅಗ್ನಿತತ್ತ್ವವು ನಮ್ಮ ಶರೀರದ ಬಿಸಿಯಾಗಲಿ, ಏನೇ ತಾಪವಿದ್ದರೂ ಅದೆಲ್ಲವೂ ಅಗ್ನಿತತ್ತ್ವಕ್ಕೆ ಹೊಂದಿಕೊಂಡಿವೆ. ವಾಯುತತ್ತ್ವು ನಮ್ಮ ಉಸಿರಾಟವು ವಾಯುತತ್ತ್ವವಾಗಿದೆ. Shiva

ಆಕಾಶ ತತ್ತ್ವವು ನಮ್ಮ ಶರೀರದಲ್ಲಿ ಅಭೌತಿಕ ರೂಪದಲ್ಲಿ ಇರುತ್ತದೆ. ಮನಸ್ಸಿನ ರೂಪದಲ್ಲಿರುತ್ತದೆ. ಆಕಾಶದ ರೀತಿಯೇ ಮನಸ್ಸಿನ ತತ್ತ್ವವು ಕೂಡ ಅನಂತವಾಗಿದೆ. ಈ ಐದು ತತ್ತ್ವಗಳು ನಮ್ಮ ಶರೀರದಲ್ಲಿ ಸಮತೋಲನದಲ್ಲಿರಬೇಕು. ಈವೆಲ್ಲವೂ ವ್ಯಕ್ತಿಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಏನೇ ಮಾನಸಿಕ ತೊಂದರೆಗಳು ಈ ಮಂತ್ರನಿಂದ ನಿವಾರಣೆ ಮಾಡಿಕೊಳ್ಳಬಹುದು. ಎಲ್ಲಾ ನಕಾರಾತ್ಮಕ ಶಕ್ತಿಗಳು ತೊಲಗಿ ಮನುಷ್ಯನ ಮನಸ್ಸಿನಲ್ಲಿ ದಿವ್ಯಶಕ್ತಿಗಳು ಹರಿಯುತ್ತದೆ. Shiva

ಈ ಮಂತ್ರವು ಆತ್ಮವನ್ನ ಎಚ್ಚರಿಸುವ ಕಾರ್ಯವನ್ನು ಮಾಡುತ್ತದೆ. ಈ ಮಂತ್ರವು ವ್ಯಕ್ತಿಯಲ್ಲಿ ಶಿವತತ್ತ್ವವನ್ನು ಹೆಚ್ಚು ಮಾಡುವಂತಹ ಕೆಲಸ ಮಾಡುತ್ತದೆ. ವ್ಯಕ್ತಿಯಲ್ಲಿ ಪರಂಶಾಂತಿಯನ್ನು ತರುತ್ತದೆ. ಬ್ರಹ್ಮಾಂಡದ ಸಾರವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬರುತ್ತದೆ. ಈ ಮಂತ್ರದ ಜಪದಿಂದ ಸಂಪೂರ್ಣ ಗ್ರಹದೋಷಗಳು ಶಾಂತವಾಗುತ್ತದೆ ಮತ್ತು ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ರಾಹು ಶಿವನ ಭಕ್ತನಾಗಿರುವುದರಿಂದ ಈ ಮಂತ್ರವನ್ನು ಜಪ ಮಾಡುವುದರಿಂದ

ರಾಹುವಿಗೆ ಸಂಬಂಧಪಟ್ಟ ಏನೇ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ. ಒಂದು ವೇಳೆ ಕುಂಡಲಿಯಲ್ಲಿ ಕಾಲಸರ್ಪ ದೋಷವಿದ್ದರೂ ಅದು ಕೂಡ ಶಾಂತಗೊಳ್ಳುತ್ತದೆ. ಶನಿಗ್ರಹದ ದುಶ್ಪರಿಣಾಮ ನಿಮಗೇನಾದರೂ ಇದ್ದರೇ ಅದು ಕೂಡ ಪೂರ್ಣವಾಗಿ ಶಾಂತಗೊಳ್ಳುತ್ತದೆ. ಇದಕ್ಕಾಗಿ ತಾಮ್ರದ ಲೋಟದಲ್ಲಿ ಶುದ್ಧವಾದ ನೀರನ್ನು ಹಾಕಿ ಅದಕ್ಕೆ ಗಂಗಾಜಲವನ್ನು ಸೇರಿಸಿ Shiva

ಸ್ವಲ್ಪ ಅಕ್ಷತೆ, ಶುಭ್ರ ಚಂದ್ರವನ್ನು ಸೇರಿಸಿ ಓಂ ನಮಃಶಿವಾಯ ಮಂತ್ರವನ್ನು ಜಪ ಮಾಡುತ್ತಾ ನಿರಂತರವಾಗಿ 21 ದಿನಗಳ ತನಕ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೇ ಎಲ್ಲಾ ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ ಶಿವನ ಅಪಾರ ಕೃಪೆಯು ಕೂಡ ಸಿಗುತ್ತದೆ. ಸಾಮಾನ್ಯವಾಗಿ ನೀವು ಶಿವನನ್ನು ಒಲಿಸಿಕೊಂಡರೇ ಎಲ್ಲಾ ದೇವಾನುದೇವತೆಗಳ ಆಶೀರ್ವಾದವೂ ನಿಮಗೆ ಸಿಗುತ್ತದೆ. ನಿರಂತರವಾಗಿ ಶಿವಲಿಂಗದ ಮೇಲೆ ಜಲವನ್ನು ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿರುವ ತೊಂದರೆಗಳೆಲ್ಲವೂ ನಿವಾರಣೆಯಾಗುತ್ತದೆ. ಯಶಸ್ಸಿನ ದಾರಿ ನಿಮ್ಮದಾಗುತ್ತದೆ. ಸುಖ-ಸಂಪತ್ತು ವೃದ್ಧಿಯಾಗುತ್ತದೆ.

Leave A Reply

Your email address will not be published.