Ultimate magazine theme for WordPress.

Drink it instead of tea coffee ಸುಸ್ತು ನಿಶಕ್ತಿ ಬಲಹೀನತೆಗೆ ರಾಮಬಾಣ

0 19,774

Drink it instead of tea coffee ಇಂದಿನ ಲೇಖನದಲ್ಲಿ ಒಂದು ಚೂರ್ಣದ ಬಗ್ಗೆ ತಿಳಿಸಿಕೊಡುತ್ತೇವೆ. ಏನೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ, ಸುಸ್ತು, ನಿಶ್ಯಕ್ತಿಯಾಗುವುದು, ಇಡೀ ದಿನ ಚುರುಕಾಗಿರಲು ಆಗುವುದಿಲ್ಲ, ಮುಖದಲ್ಲಿ ಕಳೆಯೂ ಇರುವುದಿಲ್ಲ. ಇದಕ್ಕೆ ಕಾರಣ ರಕ್ತಹೀನತೆ ಇರುತ್ತದೆ. ರಕ್ತ ಹೀನತೆ ಇದ್ದರೇ ಸ್ವಲ್ಪ ಕೆಲಸ ಮಾಡಿದರೂ ಸುಸ್ತು ಆಗುತ್ತದೆ. ಕೆಲವರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ.

ಚಿಕ್ಕ ಪುಟ್ಟ ವಿಷಯಗಳಿಗೆ ಒತ್ತಡಕ್ಕೆ ಒಳಗಾಗುತ್ತಿದ್ದರೇ ಇದು ಕೂಡ ನಮ್ಮ ದೇಹದ ಜೀವಕೋಶಗಳಿಗೆ ನೇರವಾಗಿ ಹಾನಿಯನ್ನು ಉಂಟುಮಾಡುತ್ತದೆ. ನಮ್ಮ ದೇಹಕ್ಕೆ ನ್ಯೂಟ್ರಿಯನ್ಸ್ ಸಿಗದೇ ಇದ್ದರೂ ಸುಸ್ತಾಗುತ್ತದೆ. ಇಂತಹ ಸಮಸ್ಯೆಗಳು ಇದ್ದಾಗ ಸ್ವಲ್ಪ ದೂರ ನಡೆದರೂ ಕೈಕಾಲು ನೋವು ಬರುತ್ತಿರುತ್ತದೆ. ಈ ಲೇಖನದಲ್ಲಿ ತಿಳಿಸಿರುವ ಈ ಮನೆಮದ್ದಿನಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. Drink it

ಈ ಮನೆಮದ್ದಿನ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಈ ಮನೆಮದ್ದನ್ನು ಮಾಡುವ ವಿಧಾನ ಹೇಗೆಂದರೆ ಅಶ್ವಗಂಧವೂ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ನಮ್ಮ ಮಾಂಸಖಂಡಗಳಿಗೆ ಶಕ್ತಿಯನ್ನು ಕೊಡುತ್ತದೆ. ಆಯುರ್ವೇದದ ಅಂಗಡಿಗಳಲ್ಲಿ ಅಶ್ವಗಂಧದ ಪೌಡರ್ ಸಿಗುತ್ತದೆ. ಇಲ್ಲವೇ ಅಶ್ವಗಂಧದ ಬೇರನ್ನು ತಂದು ಪೌಡರ್ ಮಾಡಿಕೊಳ್ಳಬಹುದು. Drink it

100 ಗ್ರಾಂ ನಷ್ಟು ಅಶ್ವಗಂಧದ ಬೇರನ್ನು ತೆಗೆದುಕೊಂಡು ಬನ್ನಿ, ನಂತರ ಇನ್ನೊಂದು ಪದಾರ್ಥವನ್ನು ಸೇರಿಸಬೇಕು ಅದು ಶತಾವರಿ. ಶತಾವರಿಯು ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ಶಕ್ತಿಯನ್ನು ಕೊಡುತ್ತದೆ. ಶತಾವರಿಯು ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಮಹಿಳೆಯರ ಹಾರ್ಮೋನ್ ಅನ್ನು ಸಮತೋಲನದಲ್ಲಿರಿಸುತ್ತದೆ. Drink it

ಈ ಶತಾವರಿ ಬೇರನ್ನು 100 ಗ್ರಾಂನಷ್ಟು ತಂದು ಅದನ್ನು ಪುಡಿಮಾಡಿಕೊಳ್ಳಬೇಕು. ಬೆಟ್ಟದ ನಲ್ಲಿಕಾಯಿಯೂ ನಮ್ಮ ದೇಹದ ಪ್ರತಿಯೊಂದು ಭಾಗಕ್ಕೆ ಬಹಳ ಉಪಕಾರಿಯಾಗಿದೆ. ನಮ್ಮ ಜೀರ್ಣಶಕ್ತಿ, ಕೂದಲಿನ ಬೆಳವಣಿಗೆ, ಸ್ಕಿನ್, ಕಣ್ಣುಗೆ ಒಳ್ಳೆಯದು. ನಮ್ಮ ದೇಹಕ್ಕೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ ಚಿಕ್ಕಪುಟ್ಟ ಕಾಯಿಲೆಗಳು ನಮ್ಮ ಹತ್ತಿರ ಬರುವುದಿಲ್ಲ. ದೊಡ್ಡ ಕಾಯಿಲೆಗಳು ನಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳುತ್ತದೆ. ಹಿಂದಿನಿಂದಲೂ ಆಯುರ್ವೇದ ಪಂಡಿತರು ಹೇಳುತ್ತಾರೆ. ದಿನಕ್ಕೊಂದು ನಲ್ಲಿಕಾಯಿ ತಿಂದರೇ ಜೀವನಪರ್ಯಂತ ಯಾವುದೇ ಕಾಯಿಲೆಗಳು ಬರುವುದಿಲ್ಲ. ನೆಲ್ಲಿಕಾಯಿಯನ್ನು ತಂದು ಸಣ್ಣದಾಗಿ ಕಟ್ಟುಮಾಡಿಕೊಂಡು Drink it

ಬಿಸಿಲಿನಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ಅಶ್ವಗಂಧ, ಶತಾವರಿ, ನಲ್ಲಿಕಾಯಿಯ ಪೌಡರ್ ಅನ್ನು ಮಿಶ್ರ ಮಾಡಿ ಇಟ್ಟುಕೊಳ್ಳಿ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧಸ್ಪೂನ್ ನಷ್ಟು ಈ ಪೌಡರ್ ಅನ್ನು ಮಿಶ್ರ ಮಾಡಿ. ಪ್ರಾರಂಭದ ಎರಡು ಮೂರು ದಿನ ಅರ್ಧ ಸ್ಪೂನ್ ನಷ್ಟು ಸೇವನೆ ಮಾಡಿ. ಎರಡು ಮೂರು ದಿನದ ನಂತರ ಒಂದು ಸ್ಫೂನ್ ನಷ್ಟು ಸೇವನೆ ಮಾಡಬಹುದು. Drink it

ಈ ಪೌಡರ್ ಗಳು ಎಲ್ಲರ ದೇಹಕ್ಕೆ ಒಗ್ಗುವಂತದ್ದು. ಈ ಪೌಡರ್ ಮಿಶ್ರಿತ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು ಇಲ್ಲವೇ ತಿಂಡಿ ತಿಂದ ನಂತರ ಅರ್ಧ ಗಂಟೆಯಾದ ನಂತರವೂ ತೆಗೆದುಕೊಳ್ಳಬಹುದು. ಪ್ರತಿದಿನ ಸುಸ್ತು ಆಗುತ್ತದೆ ಎನ್ನುವವರು ಪ್ರತಿದಿನ ಎರಡು ಸ್ಫೂನ್ ನಷ್ಟು ತೆಗೆದುಕೊಳ್ಳಬಹುದು. ಈ ಚೂರ್ಣವನ್ನು 13 ವರ್ಷ ಮೇಲ್ಪಟ್ಟವರಿಂದ ವಯಸ್ಸಾದವರು ತೆಗೆದುಕೊಳ್ಳಬಹುದು.

ಈ ಚೂರ್ಣವನ್ನು ಸೇವನೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. ನಿಮಗೆ ನಿದ್ರಾಹೀನತೆ ಇದ್ದರೇ ಅದು ಕೂಡ ಕಡಿಮೆಯಾಗುತ್ತದೆ. ಇನ್ನೊಂದು ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇನೆ. ಕೆಂಪು ದ್ರಾಕ್ಷಿ ಅಥವಾ ಕಪ್ಪು ದ್ರಾಕ್ಷಿಯನ್ನ ರಾತ್ರಿ ನೀರಿನಲ್ಲಿ ನೆನೆಸಿ ಇಟ್ಟು ಬೆಳಿಗ್ಗೆ ಎದ್ದು ಅದರ ನೀರನ್ನು

ಕುಡಿಯುವುದರ ಜೊತೆಗೆ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿನಿತ್ಯ ಹಣ್ಣುಗಳನ್ನ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಎನರ್ಜಿ ಬರುತ್ತದೆ. ದಿನ ಪೂರ್ತಿ ಆಕ್ಟಿವ್ ಆಗಿ ಇರಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಬಿಸಿಲು ಕಾಯುವುದು ಮತ್ತು ಲಘು ವಾಕಿಂಕ್ ಮಾಡುವುದರ ಮೂಲಕ ಆರೋಗ್ಯವಂತರಾಗಬಹುದು.

Leave A Reply

Your email address will not be published.