Ultimate magazine theme for WordPress.

Shastra Kannada ಯಾರು ಎಷ್ಟೇ ಕೇಳಿದರೂ  

0 4,908

Shastra Kannada Do not give only these four things to anyone ದಾನಗಳಲ್ಲೇ ಅತೀ ಶ್ರೇಷ್ಠದಾನ ನೇತ್ರದಾನ, ರಕ್ತದಾನ, ಅನ್ನದಾನ ಮತ್ತು ವಿದ್ಯಾದಾನವೆಂದು ಹೇಳುತ್ತೇವೆ. ಈ ದಾನಗಳನ್ನು ಮಾಡುವುದರಿಂದ ನಿಮ್ಮ ಜೀವನ ಉದ್ದಾರವಾಗುವುದರ ಜೊತೆಗೆ ನಿಮ್ಮ ಏಳು ತಲೆಮಾರಿನ ಜನರು ಒಳ್ಳೆಯ ಜೀವನವನ್ನು ನಡೆಸಲು ದೇವರು ಕರುಣಿಸುತ್ತಾನೆ. ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ದಟ್ಟ ದರಿದ್ರ ಬರುತ್ತದೆ.

ಕೆಲವೊಂದು ವಸ್ತುಗಳಲ್ಲಿ ಲಕ್ಷ್ಮಿದೇವಿಯ ಅಂಶವಿರುತ್ತದೆ. ಇಂತಹ ವಸ್ತುಗಳನ್ನು ನೀವೇನಾದರೂ ದಾನ ಮಾಡಿದ್ದಲ್ಲಿ ನಿಮ್ಮ ಒಳ್ಳೆಯ ಸಮಯವನ್ನು ನೀವು ಕೆಲವು ವಸ್ತುಗಳನ್ನು ಯಾರಿಗೆ ಕೊಡುತ್ತೀರೋ ಅವರಿಗೆ ಪಲಾಯನ ಮಾಡಿಸಿದ ರೀತಿಯಾಗುತ್ತದೆ. ಆ ವಸ್ತುಗಳು ಯಾವುವು ಎಂದರೆ ಗಡಿಯಾರವನ್ನು ಬೇರೆಯವರಿಗೆ ಕೊಡುತ್ತೀರಿ ಆದರೇ ಆ ಒಳ್ಳೆಯ ಸಮಯವನ್ನು ನೀವು ಬೇರೆಯವರಿಗೆ Shastra

ಕೊಟ್ಟಂತೆ ಆಗುತ್ತದೆ. ಗಡಿಯಾರವು ಮಹಾಲಕ್ಷ್ಮಿ ಮತ್ತು ಲಕ್ಷ್ಮಿನಾರಾಯಣರ ಸ್ವರೂಪವಾಗಿದೆ. ಸಮಯವೆನ್ನುವುದು ಭಗವಂತನ ಸಂಕೇತವಾಗಿರುವುದರಿಂದ ಅದನ್ನು ಯಾರಿಗೂ ದಾನವಾಗಿ ಕೊಡಬೇಡಿ. ಎರಡನೇಯದಾಗಿ ಕಸಪೊರಕೆಯನ್ನು ಬೇರೆಯವರಿಗೆ ಕೊಡಬಾರದು. ಮನೆಯಲ್ಲಿರುವ ಲಕ್ಷ್ಮಿಯನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ. Shastra

ನಿಮ್ಮ ಮನೆಯಲ್ಲಿರುವ ಪೊರಕೆಯನ್ನು ನಿಮ್ಮ ಮನೆಯಲ್ಲಿರುವ ಸದಸ್ಯರು ಮಾತ್ರ ಕಸ ಗುಡಿಸಬೇಕು. ಹೊರಗಡೆಯಿಂದ ಬಂದ ವ್ಯಕ್ತಿಗಳು ಅಥವಾ ಅತಿಥಿಗಳು ನಿಮ್ಮ ಪೊರಕೆಯಿಂದ ಗುಡಿಸಿದರೆ ನಕಾರಾತ್ಮಕತೆ ಬರುತ್ತದೆ. ಅತಿಥಿಗಳು ತಿಂದಂತಹ ತಟ್ಟೆಯನ್ನು ಅವರ ಕೈಯಿಂದ ಎತ್ತಿಸಬೇಡಿ. ಅತಿಥಿಗಳು ತಾವು ತಿಂದಂತಹ ತಟ್ಟೆಯನ್ನು ಎತ್ತಿದರೇ ಮಹಾಲಕ್ಷ್ಮಿ ನಿಮ್ಮ ಮನೆಯಿಂದ ಹೊರಹೋಗಬಹುದು.

ಅರಿದ ಬಟ್ಟೆಯನ್ನು ದಾನ ಮಾಡಬಾರದು. ಅರಿದ ಅಥವಾ ಮಾಸಿದ ಬಟ್ಟೆಯನ್ನು ಬೇರೆಯವರಿಗೆ ಕೊಟ್ಟರೇ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುತ್ತದೆ. ಉಪ್ಪನ್ನು ಯಾರಿಗೂ ದಾನವಾಗಿ ಕೊಡಬೇಡಿ. ಉಪ್ಪಿನಕಾಯಿ, ಖಾರದಪುಡಿ ಅಂದರೆ ಅಚ್ಚಖಾರದ ಪುಡಿಯನ್ನು ಕೊಡಬಾರದು ಕೊಟ್ಟರೇ ದರಿದ್ರ ಬರುತ್ತದೆ. ಇಂತಹ ವಸ್ತುಗಳನ್ನು ನಿಮ್ಮ ಮನೆಯಲ್ಲಿ ದಾನವಾಗಿ ಕೊಡದಿದ್ದರೇ ಒಳ್ಳೆಯದು. Shastra

Leave A Reply

Your email address will not be published.