Ultimate magazine theme for WordPress.

Money plant ಮನಿಪ್ಲಾಂಟ್ ಸಸ್ಯದ ಚಮತ್ಕಾರಿಕ ಲಾಭಗಳನ್ನು

0 1,420

Money plant vastu shastra tips and details in kannada ಮನಿಪ್ಲಾಂಟ್ ಸಸ್ಯದ ಚಮತ್ಕಾರಿಕ ಲಾಭಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಮ್ಮ ವಾಸ್ತುಶಾಸ್ತ್ರದ ಅನುಸಾರವಾಗಿ ಮನಿಪ್ಲಾಂಟ್ ಸಸ್ಯವನ್ನು ಅತ್ಯಂತ ಶುಭವೆಂದು ತಿಳಿಯಲಾಗಿದೆ. ಈ ಸಸ್ಯದ ಬಗ್ಗೆ ಹಲವಾರು ವಿಷಯಗಳು ಜನಪ್ರಿಯವಾಗಿವೆ ಎಂದರೆ ಇವು ಎಲ್ಲಿ ಇರುತ್ತವೆಯೋ ಅವು ತಮ್ಮೊಡನೆ ಧನಸಂಪತ್ತನ್ನು ತೆಗೆದುಕೊಂಡು ಹೋಗುತ್ತವೆ.

ಎಲ್ಲಿ ಮನಿಪ್ಲಾಂಟ್ ಸಸ್ಯವನ್ನು ಬೆಳೆಸಿರುತ್ತಾರೋ ಅಲ್ಲಿ ಧನಸಂಪತ್ತಿನ ಗಣಿಯಾದ ಲಕ್ಷ್ಮಿದೇವಿಯು ವಾಸಮಾಡುತ್ತಾಳೆ. ಯಾರ ಮನೆಯಲ್ಲಿ ಮನಿಪ್ಲಾಂಟ್ ಸಸ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಮನಿಪ್ಲಾಂಟ್ ಬಗ್ಗೆ ಇರುವ ಅದ್ಭುತ ಲಾಭಗಳೇನೆಂದರೆ ಸ್ನೇಹಿತರೇ ನೀವು ಬೇಗ ಶ್ರೀಮಂತರಾಗಲೂ ಇಷ್ಟಪಡುತ್ತಿದ್ದರೆ Money plant

ನೀವು ಯಾರ ಬಳಿ ಹೋಗಿ ಖರೀದಿ ಮಾಡಿ ಮನಿಪ್ಲಾಂಟ್ ಸಸ್ಯವನ್ನು ತರಬಾರದು, ಶ್ರೀಮಂತ ಮನೆಗಳಲ್ಲಿ ಅಂದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಮತ್ತು ಅವರ ಮನೆಗಳಲ್ಲಿ ಪೂಜೆಯನ್ನು ಮಾಡುತ್ತಿರಬೇಕು. ಅಂತಹ ಮನೆಗಳಿಂದ ಬಳ್ಳಿಯನ್ನು ಕದ್ದು ತಂದು ನೆಡಬೇಕು. ಮೇಲಿನಿಂದ ಸ್ವಲ್ಪ ಕಟ್ಟು ಮಾಡಬೇಕು.ಮೇಲಿನಿಂದ ಸ್ವಲ್ಪ ಕಟ್ಟು ಮಾಡಬೇಕು. Money plant

ಎಲೆಗಳು ಹಚ್ಚ ಹಸಿರು ಆಗಿರಬೇಕು. ನೀರಿನ ಬಾಟಲಿನಲ್ಲಿ ಹಾಕಿ ಇಡಬೇಕು. ಇದರಿಂದ ಬೇರುಗಳು ಒಳಗೆ ಹೋಗುತ್ತವೆ. ಜೊತೆಗೆ ನೆಲದ ಮೇಲೆಯೂ ಹಚ್ಚಬಹುದು. ಈ ರೀತಿ ಕದ್ದು ತಂದಂತಹ ಮನಿಪ್ಲಾಂಟ್ಅನ್ನು ನೆಡುವುದರಿಂದ ಹಣದ ಸಂಮೃದ್ಧಿಯಾಗುತ್ತದೆ. ಯಾವತ್ತಿಗೂ ಖರೀದಿ ಮಾಡಿ ನೆಡಬಾರದು. ಮನಿಪ್ಲಾಂಟ್ ಸಸ್ಯದ ಬೇರುಗಳು ಕಾಣುವ ರೀತಿಯಲ್ಲಿ ಹಚ್ಚಬಾರದು.

ಒಂದು ವೇಳೆ ಬಾಟಲಿನಲ್ಲಿ ಹಾಕಿ ಬೆಳೆಸುತ್ತಿದ್ದರೆ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟಿರಿ. ಕೆಂಪುಬಣ್ಣದ ರಿಬ್ಬನಿಂದ ಬೇರನ್ನು ಮುಚ್ಚಿಕೊಳ್ಳುತ್ತವೆ. ಕೆಂಪುಬಣ್ಣದ ರಿಬ್ಬನ್ ಅಥವಾ ಬಟ್ಟೆಯನ್ನು ಕಟ್ಟುವುದರಿಂದ ಮನಿಪ್ಲಾಂಟ್ನ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಮನಿಪ್ಲಾಂಟ್ ಅನ್ನು ಧನಸಂಪತ್ತಿನ ಪ್ರತೀಕವೆಂದು ಪೂಜೆ ಮಾಡುತ್ತೀರೋ ಅದರಿಂದ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ. Money plant

ಈ ಸಸ್ಯವನ್ನು ಮನೆಯ ಮುಖ್ಯದ್ವಾರದಿಂದ ಅಲ್ಲಿ ಇದನ್ನು ಹಚ್ಚಿರಿ ಮನೆಯಲ್ಲಿ ಸುಖಸಂಮೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ಇದನ್ನು ಟೆರೆಸ್ ಮೇಲೂ ನೆಡಬಹುದು. ಮನೆಯ ಮಧ್ಯ ಕೂಡ ಹಚ್ಚಬಹುದು. ವಾಸ್ತುಶಾಸ್ತ್ರದ ಪ್ರಕಾರ ಮನಿಪ್ಲಾಂಟ್ ನೆಡಲು ದಕ್ಷಿಣ ಪೂರ್ವ ದಿಕ್ಕು ಅಂದರೆ ಆಗ್ನೇಯ ದಿಕ್ಕು ಉತ್ತಮ ಎಂದು ತಿಳಿಯಲಾಗಿದೆ. ಈ ರೀತಿ ಹಚ್ಚಿದಾಗ ಮನೆಯಲ್ಲಿ ಸುಖ ಸಂಮೃದ್ಧಿ ಹೆಚ್ಚಾಗುತ್ತದೆ. ಸಕಾರಾತ್ಮಕ ಶಕ್ತಿಯ ಸಂಚಾರ ಕೂಡ ಬಹಳ ವೇಗವಾಗಿ ಆಗುತ್ತದೆ.

ಈ ದಿಕ್ಕಿನ ದೇವರು ಭಗವಂತನಾದ ಶ್ರೀಗಣೇಶನಾಗಿದ್ದಾನೆ. ಪ್ರತಿನಿಧಿ ಶುಕ್ರನಾಗಿದ್ದಾನೆ. ಹಾಗಾಗಿ ಶ್ರೀಮಂತರಾಗಬೇಕಾದರೆ ಈ ಸಸ್ಯವನ್ನು ಈ ದಿಕ್ಕಿನಲ್ಲಿ ಹಚ್ಚಬಹುದು. ಯಾವಾಗ ಮನೆಯಲ್ಲಿರುವ ಬಳ್ಳಿಯಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ಬರುತ್ತವೆಯೋ ಅಥವಾ ಆಕಸ್ಮಿಕವಾಗಿ ಒಣಗಿ ಹೋದರೆ ನಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗುತ್ತಿದೆ ಎಂದು ತಿಳಿದುಬರುತ್ತದೆ. Money plant

ಹಣ ವ್ಯರ್ಥವಾಗಿ ಖರ್ಚಾಗಬಹುದು. ಇದಕ್ಕೆ ಕಾರಣ ತಪ್ಪಾದ ನೀರು ಬಿದ್ಧಾಗ ಮಾತ್ರ. ಈ ಗಿಡವು ಧನಸಂಪತ್ತನ್ನು ಆಕರ್ಷಣೆ ಮಾಡುವ ಸಸ್ಯವಾಗಿರುವುದರಿಂದ ನೀವು ಇದಕ್ಕೆ ಗೌರವವನ್ನು ಕೊಡಬೇಕು. ಈ ಸಸ್ಯಕ್ಕೆ ನೀವು ಕುಡಿಯುವ ನೀರನ್ನು ಹಾಕಬೇಕು. ಮನಿಪ್ಲಾಂಟ್ ಯಾವಾಗ ಮನೆಯಲ್ಲಿ ಹಚ್ಚ ಹಸಿರಾಗಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿದೇವಿಯು ವಾಸಮಾಡುತ್ತಾಳೆ. ಧನಸಂಪತ್ತಿನ ಆಕರ್ಷಣೆಯಾಗಿ ಯಾವ ಸಮಸ್ಯೆಯೂ ಕಾಡುವುದಿಲ್ಲ. Money plant

ಜೊತೆಗೆ ಮಹಿಳೆಯರು ಋತುಚಕ್ರದ ವೇಳೆ ಮನಿಪ್ಲಾಂಟ್ ಸಸ್ಯಕ್ಕೆ ನೀರನ್ನು ಹಾಕಬಾರದು. ಇದರಿಂದ ಸಸ್ಯಗಳು ಒಣಗಿ ಹೋಗುತ್ತದೆ. ಮನೆಗೆ ಹಣ ಬರುವ ಬದಲಿಗೆ ಹೋಗಲು ಶುರು ಮಾಡುತ್ತದೆ. ಈ ಸಸ್ಯವೂ ಮೇಲ್ಭಾಗಕ್ಕೆ ಬೆಳೆಯುತ್ತಾ ಹೋಗಬೇಕು , ಎಷ್ಟು ಮೇಲೆಕ್ಕೆ ಬೆಳೆಯುತ್ತಾ ಹೋಗುತ್ತದೆಯೋ ಅಷ್ಟೇ ಮನೆಗೆ ಧನಸಂಪತ್ತಿನ ಆಕರ್ಷಣೆಯಾಗುತ್ತದೆ. Money plant

ಮನಿಪ್ಲಾಂಟ್ ಸಸ್ಯದ ಬಾಟಲ್ ಅಥವಾ ಪಾಟ್ನಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಹಾಕಿರಿ. ಇದರಿಂದ ಮನೆಗೆ ಧನದ ಆಕರ್ಷಣೆಯಾಗುತ್ತದೆ. ನಿಮ್ಮ ಮನೆಯಲ್ಲಿರುವ ಮನಿಪ್ಲಾಂಟ್ ಸಸ್ಯವನ್ನು ಬೇರೆಯವರಿಗೆ ಉಡುಗೊರೆಯ ರೂಪದಲ್ಲಿ ಯಾವುದೇ ಕಾರಣಕ್ಕೂ ಕೊಡಬಾರದು, ಕೊಟ್ಟರೆ ನಿಮಗೆ ನಷ್ಟವಾಗುತ್ತದೆ. ಒಂದು ವೇಳೆ ಕೊಡಬೇಕೆಂದರೆ ಹೊರಗಡೆಯಿಂದ ಖರೀದಿ ಮಾಡಿ ಕೊಡಬಹುದು.

ಈ ಸಸ್ಯವನ್ನು ಹಚ್ಚುವುದರಿಂದ ಗುಡ್ಲಕ್ ಹೆಚ್ಚಾಗುವುದರ ಜೊತೆಗೆ ಕಣ್ಣಿಗೆ ತಂಪಾಗುತ್ತದೆ. ಮನೆಯಲ್ಲಿ ಹಚ್ಚುವುದರಿಂದ ಶುಕ್ರನು ಶಕ್ತಿಶಾಲಿಯಾಗುತ್ತಾನೆ. ಒಂದು ವೇಳೆ ಮನಿಪ್ಲಾಂಟ್ ಒಣಗಿದರೆ ಎಲೆಗಳು ಉದುರಲು ಶುರು ಮಾಡಿದರೇ ತಕ್ಷಣವೇ ಅದನ್ನು ತೆಗೆದು ಹಾಕುವುದು ಒಳ್ಳೆಯದು. ಒಂದು ವೇಳೆ ಒಂದೆರೆಡು ಎಲೆಗಳು ಹಳದಿಯಾದರೆ ಅದನ್ನು ಕತ್ತರಿಯಿಂದ ಕತ್ತರಿಸಿ ತೆಗೆದು ಹಾಕಿರಿ.

ಮುಂಜಾನೆ ಎದ್ದಾಗ ಮನಿಪ್ಲಾಂಟ್ ಅನ್ನು ಮೊದಲು ನೋಡಿದರೆ ಶುಭವಾಗಿರುತ್ತದೆ. ಇಡೀ ದಿನ ನಿಮ್ಮ ಮೇಲೆ ಸಕಾರಾತ್ಮಕ ಶಕ್ತಿಯ ಸಂಚಾರವಿರುತ್ತದೆ. ಶುಕ್ರವಾರದ ದಿನ ಮನಿಪ್ಲಾಂಟ್ ಸಸ್ಯದ ಗಿಡವನ್ನು ಹಚ್ಚಬೇಕು. ಈ ದಿನ ಈ ಸಸ್ಯವನ್ನು ನೆಡುವುದರಿಂದ ಎಂದಿಗೂ ಮನೆಯಲ್ಲಿ ಧನಸಂಪತ್ತಿನ ಕೊರತೆಯಾಗುವುದಿಲ್ಲ, ಬ್ಯುಸೆನೆಲ್ ನಲ್ಲೂ ಕೂಡ ಬೆಳವಣಿಗೆ ಕಾಣುತ್ತದೆ. Money plant

ಒಂದು ಮಾಹಿತಿಯ ಪ್ರಕಾರ ಈ ಸಸ್ಯಕ್ಕೆ ನೀರನ್ನು ಹಾಕುವಾಗ ಎರೆಡು ಹನಿಗಳಷ್ಟು ಹಾಲನ್ನು ಸೇರಿಸಿದರೆ ಧನಸಂಪತ್ತಿನ ವೃದ್ಧಿಯಾಗುತ್ತದೆ. ಮನಿಪ್ಲಾಂಟ್ ಅನ್ನು ನೀರಿನಲ್ಲಿ ಹಾಕಿದರೆ ಆ ನೀರನ್ನು ಬದಲಿಸುತ್ತಿರಬೇಕು ಒಂದು ವೇಳೆ ಮಣ್ಣಿನ ಪಾಟ್ನಲ್ಲಿ ಹಾಕಿದರೇ ಒಳ್ಳೆಯ ಮಣ್ಣಿನಲ್ಲಿ ನೆಡಬೇಕು ಈ ರೀತಿ ಸ್ವಚ್ಛತೆಯನ್ನು ಕಾಪಾಡಿಕೊಂಡಿದ್ದೇ ಆದರೇ ಧನಸಂಮೃದ್ಧಿಯಾಗುತ್ತದೆ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮನಿಪ್ಲಾಂಟ್ ಅನ್ನು ಮನೆಯಲ್ಲಿ ಮತ್ತು ಕಛೇರಿಯಲ್ಲಿ ಹಚ್ಚಬಹುದು.

ಚಿಕ್ಕದಾದ ಮನಿಪ್ಲಾಂಟ್ ಅನ್ನು ನೆಡುವುದು ಒಳ್ಳೆಯದು. ಯಾರ ಮನೆಯಲ್ಲಿ ಮನಿಪ್ಲಾಂಟ್ ಹಚ್ಚ ಹಸಿರಾಗಿರುತ್ತದೆಯೋ ಅಂತಹ ಮನೆಯಲ್ಲಿ ಗಂಡ ಹೆಂಡತಿಗೆ ಜಗಳವಾಗುವುದಿಲ್ಲ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮನಿಪ್ಲಾಂಟ್ ಸಸ್ಯಗಳಲ್ಲಿ ಕಪ್ಪು ಚುಕ್ಕಿಗಳು ಹುಟ್ಟುಕೊಂಡಿದ್ದರೆ ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳ ವಾಸವಿದೆ ಎಂದ್ ಅರ್ಥ ಮಾಡಿಕೊಳ್ಳಿರಿ.

ಏಕೆಂದರೆ ಮನಿಪ್ಲಾಂಟ್ ನಕಾರಾತ್ಮಕ ಶಕ್ತಿಯನ್ನು ಎಳೆದು ನಾಶ ಮಾಡುತ್ತವೆ. ಇಂತಹ ಕಪ್ಪು ಬಂದಿರುವ ಎಲೆಗಳನ್ನು ಹೊರಗಡೆ ಹಾಕಿರಿ, ಇದರ ಜೊತೆಗೆ ನಕಾರಾತ್ಮಕತೆ ಕೂಡ ನಾಶವಾಗುತ್ತದೆ. ಒಂದು ಮಾಹಿತಿಯ ಪ್ರಕಾರ ಮನಿಪ್ಲಾಂಟ್ ಸಸ್ಯ ಸ್ವಲ್ಪ ವಿಷಕಾರಿಯಾಗಿರುತ್ತದೆ. ಇಂತಹ ಸಸ್ಯಗಳನ್ನು ಪ್ರಾಣಿಗಳಿಂದ ಸ್ವಲ್ಪ ದೂರನೇ ಇಡಬೇಕು. ಲಕ್ಷ್ಮಿದೇವಿಯನ್ನು ಆಕರ್ಷಣೆ ಮಾಡಲು ಮನಿಪ್ಲಾಂಟ್ ಅನ್ನು ಮನೆಯಲ್ಲಿರಿಸುವುದು ಒಳ್ಳೆಯದು.

Leave A Reply

Your email address will not be published.