Ultimate magazine theme for WordPress.

Vidur niti krishna ಈ 3 ಲಕ್ಷಣಗಳು ಇರುತ್ತವೆ

0 190

Vidur niti krishna ವಿಧುರರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಮಹಾಭಾರತ ಕಾಲದ ಎಲ್ಲಕ್ಕಿಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇವರು ಹಸ್ತಿನಾಪುರ ಸಾಮ್ರಾಜ್ಯದ ಮಹಾಮಂತ್ರಿ ಮತ್ತು ಕೌರವ ಮತ್ತು ಪಾಂಡವರ ಚಿಕ್ಕಪ್ಪ ಆಗಿದ್ದರು. ಇವರನ್ನು ಧರ್ಮರಾಜನ ಅವತಾರವೆಂದು ತಿಳಿಯಲಾಗಿದೆ. ವ್ಯಕ್ತಿಗಳ ಈ ಮೂರು ಲಕ್ಷಣಗಳು ಇದ್ದರೇ ಅವರು ಖಂಡಿತವಾಗಿ ಶ್ರೀಮಂತರಾಗುತ್ತಾರೆ

ಮತ್ತು ಜಗತ್ತಿನಲ್ಲಿ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ. ನಿಮ್ಮಲ್ಲೂ ಇಂತಹ ಲಕ್ಷಣಗಳು ಇದ್ದರೇ ನೀವು ಸಹ ಶ್ರೀಮಂತರಾಗಬಹುದು. ವಿಧುರರು ಬುದ್ಧಿವಂತ ವ್ಯಕ್ತಿಗಳ ಜೊತೆಗೆ ಮೂರ್ಖ ವ್ಯಕ್ತಿಗಳ ಲಕ್ಷಣಗಳನ್ನು ತಿಳಿಸಿದ್ದಾರೆ. ವಿಧುರರು ಸರಳವಾದ ಭಾಷೆಯಲ್ಲಿ ಮೂರ್ಖ ಮತ್ತು ವಿದ್ವಾನ್ ವ್ಯಕ್ತಿಗಳ ಬಗ್ಗೆ ತಿಳಿಸಿದ್ದಾರೆ. ಹೇಗೆ ಒಬ್ಬ ಮೂರ್ಖ ವ್ಯಕ್ತಿಯು ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ? Vidur niti

ಬುದ್ಧಿವಂತ ವ್ಯಕ್ತಿಯು ಹೇಗೆ ತನ್ನ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ವಿಧುರರು ಹೇಳಿದ ಈ ಮೂರು ಲಕ್ಷಣಗಳನ್ನು ಅಳವಡಿಸಿಕೊಂಡರೆ ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ನೀವು ಕೆಲವು ಸಲ ಇಂತಹ ವ್ಯಕ್ತಿಗಳನ್ನು ಭೇಟಿ ಮಾಡಿರಬಹುದು. ಆಕಸ್ಮಿಕವಾಗಿ ಅವರು ಶ್ರೀಮಂತರಾಗುತ್ತಾರೆ. ಅವರ ಹಿಂದೆ ಈ ಮೂರು ಲಕ್ಷಣಗಳೇ ಇರುತ್ತವೆ. Vidur niti

ಕಾರ್ಯವನ್ನು ಗುಪ್ತವಾಗಿರಿಸುವುದು: ಯಾವ ವ್ಯಕ್ತಿ ತಮ್ಮ ಕಾರ್ಯಗಳನ್ನು ಗುಪ್ತವಾಗಿ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಾರೋ ಖಂಡಿತವಾಗಿ ಆ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ತಮ್ಮ ಕಾರ್ಯವನ್ನು ಗುಪ್ತವಾಗಿ ಇಟ್ಟುಕೊಂಡು ಆ ಕಾರ್ಯದಲ್ಲಿ ಬೇರೆಯವರಿಗೆ ಅನುಮಾನವೂ ಸಹ ಬರುವುದಿಲ್ಲ. ಅಂತಹವರ ಕಾರ್ಯವು ಸಿದ್ಧಿಯಾಗುತ್ತದೆ. Vidur niti

ಅವರಿಗೆ ಆ ಕೆಲಸದ ಫಲ ಖಂಡಿತವಾಗಿಯೂ ಸಿಗುತ್ತದೆ. ಒಂದು ವೇಳೆ ಹೊಸ ಕಾರ್ಯವನ್ನು ಪ್ರಾರಂಭಿಸಲು ಇಷ್ಟಪಡುತ್ತಿದ್ದರೆ ಅಥವಾ ವ್ಯವಸಾಯ ಮಾಡಲು ಹೋಗುತ್ತಿದ್ದರೆ ಆ ವ್ಯವಸಾಯ ಪ್ರಾರಂಭ ಮಾಡುವ ಮುನ್ನ ಬೇರೆಯವರ ಬಳಿ ಅದರ ಬಗ್ಗೆ ಹೇಳಬೇಡಿ. ನಿಮ್ಮ ಯೋಜನೆಗಳನ್ನು ಯಾವತ್ತಿಗೂ ಗುಪ್ತವಾಗಿರಿಸಿಕೊಳ್ಳಿರಿ. ಅದರ ಬಗ್ಗೆ ಯಾವತ್ತಿಗೂ ಬೇರೆಯವರಿಗೆ ಹೇಳಬಾರದು. Vidur niti

ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ. ಯಾವ ಜನರು ಕಾರ್ಯ ಪ್ರಾರಂಭವಾಗುವ ಮುನ್ನವೇ ಎಲ್ಲರಿಗೂ ಹೇಳುತ್ತಾರೋ, ಜನರಿಂದ ಹೊಗಳಿಕೆ ಸಿಗಲಿ ಎಂದು ಇಷ್ಟಪಡುತ್ತಿರುತ್ತಾರೆ. ಮತ್ತು ತಮ್ಮನ್ನು ತಾವು ಬುದ್ಧಿವಂತರು ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಯೋಜನೆಗಳನ್ನು ಎಲ್ಲರಿಗೂ ಹೇಳಿಬಿಡುತ್ತಾರೆ. ಅಂತಹ ವ್ಯಕ್ತಿಗಳಿಗೆ Vidur niti

ಯಾವುದೇ ಕಾರ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ. ಹಾಗಾಗಿ ನಿಮ್ಮ ಏನೇ ಯೋಜನೆಗಳಿದ್ದರೇ ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು. ಯಾವಾಗ ತಾವೂ ಯಶಸ್ವಿಯಾಗುತ್ತೀರೋ ಅದು ತಾನಾಗಿಯೇ ಎಲ್ಲರಿಗೂ ಗೊತ್ತಾಗುತ್ತದೆ. ಜೊತೆಗೆ ನೀವು ಯಾವುದಾದರೂ ಹೊಸ ವಸ್ತುಗಳನ್ನು ಖರೀದಿ ಮಾಡುತ್ತಿದ್ದರೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಹೇಳಬಾರದು.

ತಮ್ಮ ವ್ಯವಹಾರದ ಬಗ್ಗೆ ಗೊತ್ತಾಗದಂತೆ ಇರಬೇಕು: ವಿಧುರರ ಮಾತಿನಂತೆ ಯಾವ ವ್ಯಕ್ತಿಯನ್ನು ನೋಡಿದಾಗಲೂ ಅವರ ವ್ಯವಹಾರವೂ ಬೇರೆಯವರಿಗೆ ಗೊತ್ತಾಗುವುದಿಲ್ಲವೋ ಅಂತಹ ವ್ಯಕ್ತಿಗಳು ತುಂಬಾ ಬುದ್ಧಿವಂತರು. ಇಂತಹವರು ಜಗತ್ತಿನಲ್ಲಿ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ. ಒಬ್ಬ ಮನುಷ್ಯರು ಹೇಗಿರಬೇಕೆಂದರೆ ಅವರನ್ನು ನೋಡಿದಾಗ ಯಾರಿಗೂ ಸಹ ಅನುಮಾನ ಬರಬಾರದು. Vidur niti

ಜನರು ನಿಮ್ಮನ್ನು ನೋಡಿದಾಗ ನಿಮ್ಮ ಮಾನಸಿಕ ಬಗ್ಗೆಯಾಗಲೀ, ನಿಮ್ಮ ಪರಿಸ್ಥಿತಿಯ ಬಗ್ಗೆಯಾಗಲೀ, ನಿಮ್ಮ ವಿಚಾರದ ಬಗ್ಗೆ ಅವರಿಗೆ ಗೊತ್ತಾಗಬಾರದು. ಆಗ ಮಾತ್ರ ನೀವು ತುಂಬಾ ಬುದ್ಧಿವಂತ ವ್ಯಕ್ತಿಯಾಗಿರುತ್ತೀರ. ಯಾರೂ ತಮ್ಮ ವ್ಯವಹಾರದ ಬಗ್ಗೆ ಬೇರೆಯವರಿಗೆ ಗೊತ್ತಾಗಲೂ ಬಿಡುತ್ತಾರೋ ಅಂತಹವರ ಯೋಚನೆಗಳು ತುಂಬಾನೇ ಚಿಕ್ಕದಾಗಿರುತ್ತವೆ. ದುಬಾರಿಯಾಗಿರುವ,

ಹೊಳೆಯುತ್ತಿರುವ ಬಟ್ಟೆಗಳನ್ನು ಧರಿಸಿಕೊಂಡು, ಬಂಗಾರದ ಒಡವೆಗಳನ್ನು ಧರಿಸಿಕೊಂಡು ತಮ್ಮನ್ನು ಶ್ರೀಮಂತರೆಂದು ತೋರಿಸಿಕೊಳ್ಳುತ್ತಾರೆ. ಅಥವಾ ದೊಡ್ಡದಾಗಿರುವ ಮಾತುಗಳನ್ನಾಡಿ ತಮ್ಮನ್ನು ತಾವು ಶ್ರೀಮಂತರೆಂದು ತೋರಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಯಾವತ್ತಿಗೂ ಯಶಸ್ವಿಯಾಗುವುದಿಲ್ಲ.

ಬುದ್ಧಿವಂತ ವ್ಯಕ್ತಿಗಳ ವಸ್ತ್ರವನ್ನು ನೋಡಿ ಅವರ ಬಗ್ಗೆ ಯಾರಿಗೂ ಅಂದಾಜಿಸಲಾಗುವುದಿಲ್ಲ. ಅವರೊಂದಿಗೆ ಮಾತನಾಡಿದರೂ ಸರಿ ಅವರ ಬಗ್ಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಗಳು ಜಗತ್ತಿನಲ್ಲಿ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ. ಏಕೆಂದರೆ ಅಂತಹ ಜನರು ತಮ್ಮ ಬಗ್ಗೆ ಬೇರೆಯವರಿಗೆ ಗೊತ್ತಾಗುವುದಿಲ್ಲ. ಜನರು ಇಂತಹ ವ್ಯಕ್ತಿಗಳ ಬಗ್ಗೆ ತಪ್ಪುಗಳನ್ನು ಮಾತನಾಡುವುದಿಲ್ಲ.

ಸಲಹೆಯನ್ನು ಕೊಡುವುದು: ವಿಧುರರು ಹೇಳುತ್ತಾರೆ. ಒಬ್ಬ ಬುದ್ಧಿವಂತ ವ್ಯಕ್ತಿಯಲ್ಲಿ ಈ ಲಕ್ಷಣಗಳು ಇರುತ್ತವೆ. ಬೇರೆಯವರಿಗೆ ಕೇಳದೇ ಯಾವುದೇ ರೀತಿಯ ಸಲಹೆಗಳನ್ನು ಕೊಡುವುದಿಲ್ಲ. ಒಬ್ಬ ಮೂರ್ಖ ವ್ಯಕ್ತಿಯು ಚಿಕ್ಕ ಚಿಕ್ಕ ಮಾತುಗಳ ಮೇಲೆ ಬೇರೆಯವರಿಗೆ ಹಲವಾರು ಸಲಹೆಗಳನ್ನು ಶುರು ಮಾಡುತ್ತಾನೆ. ಇವರು ಯಾವಾಗಲೂ ಬೇರೆಯವರ ತಪ್ಪುಗಳನ್ನು ತೆಗೆಯುತ್ತಿರುತ್ತಾರೆ.

ಅವರ ಮೇಲೆ ತಮ್ಮ ಮಾತುಗಳನ್ನು ಏರುತ್ತಾರೆ. ಬುದ್ಧಿವಂತ ವ್ಯಕ್ತಿಗಳು ಬೇರೆಯವರ ತಪ್ಪುಗಳನ್ನು ಹೇಳುವುದಿಲ್ಲ. ಬೇರೆಯವರಿಗೆ ಸಲಹೆಗಳನ್ನು ಕೊಡಲು ತಾವೇ ಮುಂದು ಹೋಗುವುದಿಲ್ಲ. ಒಂದು ವೇಳೆ ಇವರ ಬಳಿ ಸಲಹೆಗಳನ್ನು ಕೇಳಲು ಬಂದರೂ ಕಡಿಮೆ ಮಾತುಗಳಲ್ಲಿ ಸರಿಯಾದ ಸಲಹೆಗಳನ್ನು ಕೊಡಲು ಪ್ರಯತ್ನ ಮಾಡುತ್ತಾರೆ. ಸಲಹೆಯನ್ನು ಕೊಡಲು ಅಂತಹವರು ಅದಕ್ಕೆ ಯೋಗ್ಯವಾಗಿರಬೇಕು.

ಮೂರ್ಖರಿಗೆ ಸಲಹೆಗಳನ್ನು ಕೊಟ್ಟರೆ ಅವರು ನಿಮಗೆ ಹಾನಿ ಮಾಡಬಹುದು. ಒಬ್ಬ ಬುದ್ಧಿವಂತ ವ್ಯಕ್ತಿಯ ಸಲಹೆಗಳು ತುಂಬಾ ಉಪಯೋಗಕಾರಿಯಾಗಿರುತ್ತದೆ. ಯಾವ ವ್ಯಕ್ತಿಗೆ ಅನುಭವವನ್ನು ಪಡೆದುಕೊಂಡಿರುತ್ತಾರೋ ಅಂತಹವರ ಬಳಿ ಸಲಹೆಗಳನ್ನು ಪಡೆದುಕೊಳ್ಳಬೇಕು. ಬುದ್ಧಿವಂತ ಜನರು ಗೌಪ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಬೇರೆಯವರ ರಹಸ್ಯಗಳನ್ನು ಗುಪ್ತವಾಗಿ ಇಡುತ್ತಾರೆ.

ಯಾವುದಾದರೂ ವ್ಯಕ್ತಿಗಳು ಇವರಿಗೆ ರಹಸ್ಯವಾದ ವಿಷಯಗಳನ್ನು ಹೇಳಿದರೇ ಇವರು ಜೀವನವಿಡೀ ಗುಪ್ತವಾಗಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ಎಲ್ಲರೂ ನಂಬುತ್ತಾರೆ. ಬುದ್ಧಿವಂತ ವ್ಯಕ್ತಿಗಳು ಇತರರಿಗೆ ಅವಮಾನ ಮತ್ತು ಮೋಸ ಮಾಡುವುದಿಲ್ಲ. ನಿಮ್ಮಲ್ಲಿ ಇಂತಹ ವ್ಯಕ್ತಿತ್ವವಿದ್ದರೇ ನೀವು ಖಂಡಿತವಾಗಿಯೂ ಬುದ್ಧಿವಂತರು ಮತ್ತು ಶ್ರೀಮಂತರಾಗುವಿರಿ.

Leave A Reply

Your email address will not be published.