Ultimate magazine theme for WordPress.

Kannada Actors ಮೃತಪಟ್ಟಿದ್ದು ಹೇಗೆ? ಯಾವಾಗ?

0 147

Kannada Actors and Actress Who Passed Away Too Soon ಕನ್ನಡ ಚಿತ್ರರಂಗದಲ್ಲಿ ಕಡಿಮೆ ವರ್ಷ ಬದುಕಿದ ನಟ ನಟಿಯರು ಯಾರು? ಅವರೆಷ್ಟು ವರ್ಷ ಬದುಕಿದ್ದರು ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕನ್ನಡದ ಕೋಕಿಲಾ, ಅಪರಿಚಿತಾ ಸೇರಿದಂತೆ ಕನ್ನಡ ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತೆ ಶೋಭಾ ಬದುಕಿದ್ದು 18 ವರ್ಷ ಮಾತ್ರ. ಇವರು 1980ರಲ್ಲಿ ಚೆನ್ನೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು.

ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ನಿವೇದಿತಾ ಜೈನ್ ಬದುಕಿದ್ದಿದ್ದು ಕೇವಲ 19 ವರ್ಷ. ಇವರು 1998ರಲ್ಲಿ ಮನೆಯ ಮಹಡಿಯ ಮೇಲೆ ಕ್ಯಾಟ್ ವಾಕ್ ಪ್ರಾಕ್ಟಿಸ್ ಮಾಡುವಾಗ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡರು ಅಂದರೆ ನಂಬಲು ಕಷ್ಟವಾಗುತ್ತದೆ. ಕನ್ನಡದ ಕೆಲವೊಂದು ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಜಯಶ್ರೀ ಬದುಕಿದ್ದಿದ್ದು ಬರೀ 21 ವರ್ಷ. Kannada Actors

ಇಷ್ಟು ಚಿಕ್ಕವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಕನ್ನಡದ ಮತ್ತೊಬ್ಬ ಉದಯೋನ್ಮುಖ ನಟಿಯಾಗಿದ್ದ ಚೇತನಾ ರಾಜ್ ಬದುಕಿದ್ದಿದ್ದು 21 ವರ್ಷ ಮಾತ್ರ. 2022ರಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋದಾಗ ಪ್ರಾಣವನ್ನೇ ಕಳೆದುಕೊಂಡಿದ್ದು ನಿಜಕ್ಕೂ ಶಾಕ್ ಆಗುತ್ತದೆ. ಪ್ಯಾಟಿ ಕಂ ಹಳ್ಳಿ ಲೈಫ್ ಖ್ಯಾತಿಯ ನಟಿ ಮತ್ತು ಮಾಡೆಲ್ ಮೆಬಿನಾ ಮೈಕಲ್ ಬದುಕಿದ್ದಿದ್ದು 23 ವರ್ಷ ಮಾತ್ರ. Kannada Actors

2020ರಲ್ಲಿ ಕಾರು ಅಪಘಾತದಲ್ಲಿ ಇವರು ಮೃತಪಟ್ಟರು. ಕನ್ನಡದ ಉದಯೋನ್ಮುಖ ನಟಿಯರಲ್ಲಿ ಒಬ್ಬರಾಗಿದ್ದ ರೇಖಾ ಸಿಂಧು ಬದುಕಿದ್ದಿದ್ದು ಕೇವಲ 23 ವರ್ಷ. 2017ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಬದುಕಿದ್ದಿದ್ದು ಕೇವಲ 25 ವರ್ಷ.

ಇವರು 2013ರಲ್ಲಿ ಮನೆಯ ಮಹಡಿಯಿಂದ ಬಿದ್ದು ಪ್ರಾಣವನ್ನು ಕಳೆದುಕೊಂಡರು. ಚೌಕಟ್ಟು, ಫನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸೌಜನ್ಯ ಬದುಕಿದ್ದಿದ್ದು ಕೇವಲ 25 ವರ್ಷ ಮಾತ್ರ. ಇವರು 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕನ್ನಡದ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುನಿಲ್ 30 ವರ್ಷ ಬದುಕಿದ್ದರು. 1994ರಲ್ಲಿ ಬಾಗಲಕೋಟೆಯಿಂದ ಬೆಂಗಳೂರಿಗೆ ಸಂಚರಿಸುವಾಗ ಭೀಕರ ಕಾರು ಅಪಘಾತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. Kannada Actors

ಕನ್ನಡದ ಕೆಲವೊಂದು ಸಿನಿಮಾ ಮತ್ತು ಟಿ.ವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಹೇಮಶ್ರೀ ಬದುಕಿದ್ದಿದ್ದು 30 ವರ್ಷ. ಇವರು 2012ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಕನ್ನಡದ ಉದಯೋನ್ಮುಖ ನಟ ಉದಯ್ ಅಥವಾ ರಾಘವ್ ಉದಯ್ ಬದುಕಿದ್ದಿದ್ದು 30 ವರ್ಷ. 2016ರಲ್ಲಿ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು.

ಕನ್ನಡದ ಮತ್ತೊಬ್ಬ ಉದಯೋನ್ಮುಖ ನಟ ಅನಿಲ್ ಬದುಕಿದ್ದಿದ್ದು ಕೇವಲ 31 ವರ್ಷ. ಇವರನ್ನು ಕೂಡ ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. ನಟಿ ಮತ್ತು ಬಿಗ್ಬಾಸ್ನ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಬದುಕಿದ್ದಿದ್ದು ಕೇವಲ 31 ವರ್ಷ. ಖಿನ್ನತೆಯಿಂದ ಬಳಲುತ್ತಿದ್ದ ಇವರು 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. Kannada Actors

ಹೆಸರಿಗೆ ತಕ್ಕಂತೆ ಸುಂದರವಾಗಿದ್ದ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಗೆದ್ದಿದ್ದ ನಟಿ ಸೌಂದರ್ಯ ಬದುಕಿದ್ದಿದ್ದು 32 ವರ್ಷ ಮಾತ್ರ. 2004ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಲಘುವಿಮಾನ ದುರಂತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. ಬಾಲನಟಿಯಾಗಿ ಕನ್ನಡ ಚಿತ್ರಕ್ಕೆ ಪ್ರವೇಶ ಮಾಡಿ ನಂತರ ನಾಯಕಿಯಾಗಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮಂಜುಳ 32 ವರ್ಷ ಮಾತ್ರ ಬದುಕಿದ್ದರು.

1986ರಲ್ಲಿ ಅಡುಗೆ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. ಕನ್ನಡದ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನವೀನ್ ಮಯೂರ್ ಬದುಕಿದ್ದಿದ್ದು ಕೇವಲ 32 ವರ್ಷ. ಜ್ಯಾಂಡಿಸ್ನಿಂದ ಬಳಲುತ್ತಿದ್ದ ಇವರು 2010ರಲ್ಲಿ ನಿಧನರಾದರು. ಬಾಲಾಜಿ ಫೋಟೋ ಸ್ಟುಡಿಯೋ ಸೇರಿದಂತೆ ಅಗ್ನಿಸಾಕ್ಷಿ ಧಾರವಾಹಿಗಳಲ್ಲಿ ನಟಿಸಿದ್ದ ನಟ ಸಂಪತ್ ಜಯರಾಮ್ ಬದುಕಿದ್ದಿದ್ದು 32 ವರ್ಷ ಮಾತ್ರ. ಇವರು ತಮ್ಮ ನಿವಾಸದಲ್ಲಿ 2023ರಲ್ಲಿ ಆತ್ಮಹತ್ಯೆಗೆ ಶರಣಾದರು.

ಕನ್ನಡದ ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಬದುಕಿದ್ದಿದ್ದು ಕೇವಲ 36 ವರ್ಷ. 1990ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇವರನ್ನ ಕಳೆದುಕೊಳ್ಳಬೇಕಾಯಿತು. ಕನ್ನಡದ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಬದುಕಿದ್ದು ಕೇವಲ 36 ವರ್ಷ. ಹೃದಯಸ್ತಂಭನದಿಂದ 2020ರಲ್ಲಿ ಸಾವನ್ನಪ್ಪಿದರು. 60, 70 ದಶಕದ ಪ್ರಸಿದ್ಧ ನಟಿ ಕಲ್ಪನಾ ಬದುಕಿದ್ದಿದ್ದು 36 ವರ್ಷ.

ಇವರು 1979ರಲ್ಲಿ 56 ನಿದ್ರೆ ಮಾತ್ರೆಯನ್ನ ಸೇವನೆ ಮಾಡಿ ಸಾವನ್ನಪ್ಪಿದರು ಎಂಬುದು ಶ್ಯಾಕ್ ಆಗುತ್ತದೆ. 80ರ ದಶಕದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿದ್ದ ಸಿಲ್ಕ್ ಸ್ಮಿತಾ ಬದುಕಿದ್ದಿದ್ದು 36 ವರ್ಷ. ಇವರು 1996ರಲ್ಲಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಬದುಕಿದ್ದಿದ್ದು 38 ವರ್ಷ ಮಾತ್ರ. Kannada Actors

ಇವರು 2021ರಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದರು. ಅಪೂರ್ವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿ ಬಳಿಕ ಕಿಸ್ಮತ್ ಸಿನಿಮಾ ಮೂಲಕ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸ್ಪಂದನಾ ವಿಜಯ್ ರಾಘವೇಂದ್ರ ಬದುಕಿದ್ದಿದ್ದು 44 ವರ್ಷ ಮಾತ್ರ. ಕೆಲವು ವರದಿಗಳ ಪ್ರಕಾರ 42 ವರ್ಷ. ಇವರು 2023ರಲ್ಲಿ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಾಗ ಹೃದಯಘಾತ ಸಂಭವಿಸಿ ನಿಧನರಾದರು.

ಇವರು ನಟ ವಿಜಯ್ ರಾಘವೇಂದ್ರರವರ ಪತ್ನಿ. ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಬುಲೆಟ್ ಪ್ರಕಾಶ್ ಬದುಕಿದಿದ್ದು 44 ವರ್ಷ. ಇವರು ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು 2020ರಲ್ಲಿ ನಿಧನರಾದರು. ನಟಿ, ನಿರ್ದೇಶಕಿ, ನಿರ್ಮಾಪಕಿ, ಹಿನ್ನೆಲೆ ಗಾಯಕಿ ಮತ್ತು ಡ್ಯಾನ್ಸರ್ ಸಾವಿತ್ರಿ ಗಣೇಶನ್ 45 ವರ್ಷ ಬದುಕಿದ್ದರು.

ಮಹಾನಟಿ ಸಾವಿತ್ರಿ ಖ್ಯಾತಿಯ ಇವರು ಕನ್ನಡದ ತಾಯಿಗೆ ತಕ್ಕ ಮಗ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲರ ನೆಚ್ಚಿನ ನಟ, ಹಿನ್ನೆಲೆ ಗಾಯಕ, ನಿರ್ಮಾಪಕ, ಎಲ್ಲರ ಅಪ್ಪು ಡಾ. ಪುನಿತ್ ರಾಜ್ ಕುಮಾರ್ ಬದುಕಿದ್ದಿದ್ದು ಕೇವಲ 46 ವರ್ಷ ಮಾತ್ರ. ಇವರು ಹೃದಯಸ್ತಂಭನದಿಂದ 2021ರಲ್ಲಿ ನಮ್ಮಿಂದ ದೂರವಾದರು. ನಟ, ನಿರ್ದೇಶಕ ಬರಹಗಾರ ಪಿ.ಎನ್. ಸತ್ಯ ಬದುಕಿದ್ದಿದ್ದು 46 ವರ್ಷ. ಇವರು ಕ್ಯಾನ್ಸರ್ ಕಾಯಿಲೆಯಿಂದ 2018ರಲ್ಲಿ ಸಾವನ್ನಪ್ಪಿದರು. ನಟ, ನಿರ್ದೇಶಕ, ಬರಹಗಾರ ಪಿ.ಎನ್. ಸತ್ಯ ಬದುಕಿದ್ದು 46 ವರ್ಷ ಮಾತ್ರ. ಕ್ಯಾನ್ಸರ್ನಿಂದ ಬಳಲುತಿದ್ದ ಇವರು 2018ರಲ್ಲಿ ನಿಧನರಾದರು.

Leave A Reply

Your email address will not be published.