Ultimate magazine theme for WordPress.

Heart Attack ಇವರಿಗೆ ಆಗಿದ್ದೇನು ಗೊತ್ತಾ? 

0 132

Heart Attack ardiac Arrest Explained ಹೃದಯಘಾತ ಹಾಗೂ ಹೃದಯಸ್ತಂಭನ ಹೃದಯಕ್ಕೆ ಸಂಬಂಧಪಟ್ಟ ಈ ಆರೋಗ್ಯ ಸಮಸ್ಯೆಗಳಿಂದ ನಾವು ಪುನಿತ್ ರಾಜ್ಕುಮಾರ್ ರನ್ನು ಕಳೆದುಕೊಂಡೆವು. ಚಿರಂಜೀವಿ ಸರ್ಜಾ, ವಿಜಯ್ ರಾಘವೇಂದ್ರರ ಪತ್ನಿ ಸ್ಪಂದನಾ ರನ್ನ ಕಳೆದುಕೊಂಡೆವು. ಪ್ರಪಂಚದಲ್ಲಿ ಹೆಚ್ಚು ಜನರನ್ನು ಬಲಿಪಡೆಯುತ್ತಿರುವುದು ಕೂಡ ಇದೇ ಮುಂದೊಂದು ದಿನ ಯಾರಿಗೂ ಬೇಕಾದರೂ ಬರಬಹುದು.

ಹೃದಯಾಘಾತ ಎಂದರೆ ಏನು? ಹೃದಯಸ್ತಂಭನ ಎಂದರೆ ಏನು? ಇದು ಬಂದಾಗ ಏನು ಮಾಡಬೇಕು ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹೃದಯಘಾತವೆಂದರೆ ಮೊದಲು ಹೃದಯದ ಕೆಲಸವನ್ನು ಮೊದಲು ತಿಳಿದುಕೊಳ್ಳಬೇಕು. ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡುವುದು ಹೃದಯದ ಕೆಲಸ. ಲಬ್ಲಬ್ ಎಂಬ ಶಬ್ಧ ರಕ್ತ ಪಂಪ್ ಮಾಡುವಾಗ ಬರುವ ಸೌಂಡ್. Heart Attack

ಹೀಗೆ ಹೃದಯ ಪಂಪ್ ಮಾಡುವ ರಕ್ತವು ಪೈಪ್ ರೀತಿ ಇರುವ ಕೊರೊನರಿ ಆರ್ಟರಿ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಹೃದಯಕ್ಕೂ ಸೇರಿದಂತೆ ಸರಬರಾಜು ಆಗುತ್ತದೆ. ಆದರೇ ಕೆಲವೊಂದು ಬಾರಿ ಹೃದಯದ ಮೇಲೆ ಹರಡಿಕೊಂಡಿರುವ ಕೊರೊನರಿ ಹಾರ್ಟರಿ ಪೈಕಿ ಯಾವುದಾದರೂ ಹಾರ್ಟಿರಿಯೊಳಗೆ ಕೊಲೆಸ್ಟ್ರಾಲ್ ಅಥವಾ ಕೊಬ್ಬು ಬೆಳೆಯಬಹುದು. Heart Attack

ಕೊರೊಟರಿಯ ವಾಲ್ ಸಣ್ಣದಾಗಬಹುದು ಅಥವಾ ಸಂಪೂರ್ಣವಾಗಿ ಬಂದ್ ಆಗಬಹುದು. ಅಲ್ಲಿಂದ ಮುಂದಕ್ಕೆ ಆಕ್ಸಿಜನ್ ಮುಕ್ತ ರಕ್ತ ಸರಿಯಾದ ಪ್ರಮಾಣದಲ್ಲಿ ಹೋಗುವುದಿಲ್ಲ ಅಥವಾ ರಕ್ತ ಸಂಚಾರ ಸಂಪೂರ್ಣವಾಗಿ ಬಂದ್ ಆಗುತ್ತದೆ. ಹೃದಯದ ಯಾವ ಭಾಗಕ್ಕೆ ರಕ್ತ ಪೂರೈಕೆ ಆಗುವುದಿಲ್ಲವೋ ಆ ಭಾಗ ಸಾಯುವುದಕ್ಕೆ ಶುರುವಾಗುತ್ತದೆ. ಇದನ್ನೇ ಹೃದಯಘಾತವೆನ್ನುವುದು.

ಕೊರೊನರಿ ಹಾರ್ಟರಿ ಬಂದ್ ಆಗುವುದಕ್ಕೆ ಕೊಲೆಸ್ಟ್ರಾಲ್ ಬೆಳವಣಿಗೆ ಒಂದೇ ಕಾರಣವಲ್ಲ. ಕೆಲವೊಮ್ಮೆ ತುಂಬಾ ವರ್ಕ್ಹೌಟ್ ಮಾಡಿದಾಗ ಅಥವಾ ಜಿಮ್ ಮಾಡಿದಾಗ ಕೊರೊನರಿ ಹಾರ್ಟರಿಯಲ್ಲಿ ಬಿರುಕು ಕಾಣಿಸಬಹುದು. ಆ ಬಿರುಕನ್ನ ಮುಚ್ಚಲು ದೇಹ ಹೆಪ್ಪಗಟ್ಟಲು ಪ್ಲೇಟೇಟ್ಗಳನ್ನ ಬಿಡುಗಡೆ ಮಾಡುತ್ತದೆ. ಇದರಿಂದ ಬಿರುಕು ಬಿಟ್ಟ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಕೊರೊನರಿ ಹಾರ್ಟರಿ ಬಂದ್ ಆಗಬಹುದು. Heart Attack

ಆಗ ರಕ್ತ ಮುಂದಕ್ಕೆ ಹೋಗದೇ ರಕ್ತ ಸಿಗದ ಹೃದಯದ ಭಾಗ ಸಾಯಲು ಶುರು ಮಾಡುತ್ತದೆ. ಪುನಿತ್ ರಾಜ್ಕುಮಾರ್ ವಿಷಯದಲ್ಲಿ ಹೀಗೆ ಆಗಿರಬಹುದು ಎಂದು ಕೆಲವು ವೈದ್ಯರು ಆ ಸಂದರ್ಭದಲ್ಲಿ ಹೇಳಿದ್ದರು.
ಹೃದಯಘಾತವಾಗುವಾಗ ಚೆಸ್ಟ್ ಪೈನ್ ಕಾಣಿಸಿಕೊಳ್ಳಬಹುದು. ಹೃದಯದ ಮೇಲೆ ಭಾರಿ ಒತ್ತಡ ಬಿದ್ದಂತೆ ಆಗಬಹುದು, ಉಸಿರಾಡಲು ಕಷ್ಟವಾಗಬಹುದು, Heart Attack

ಎಡ ತೋಳು ನೋವು, ಎಡ ದವಡೆ ನೋವು, ಬೆನ್ನು ಅಥವಾ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಬಹುದು. ವಿಪರೀತ ಬೆವರಬಹುದು. ಇಂತಹ ಲಕ್ಷಣ ಕಾಣಿಸಿಕೊಂಡ ತಕ್ಷಣ ಅಥವಾ ಹೃದಯಾಘಾತ ಆಗಿದೆ ಎಂದು ಗೊತ್ತಾದ ತಕ್ಷಣ ವೈದ್ಯರ ಸಲಹೆ ಪಡೆದು ಆಸ್ಪಿರಿನ್ ಮಾತ್ರೆ ತಿನ್ನಬಹುದು. ಈ ಮಾತ್ರೆಯು ರಕ್ತವನ್ನು ತೆಳುಮಾಡುತ್ತದೆ. ಆಗ ಬ್ಲಾಕ್ ಆಗಿರುವ ಕೊರೊನರಿ

ಹಾರ್ಟರಿ ಮೂಲಕ ತೆಳುವಾದ ರಕ್ತವು ಮುಂದಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಆದರೇ ಇದು ತಾತ್ಕಾಲಿಕ ಪರಿಹಾರವಾಗಿದೆ. ಇದರ ಜೊತೆಗೆ ವ್ಯಕ್ತಿಯನ್ನ ಎಷ್ಟುಬೇಗ ಆಗುತ್ತೋ ಅಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಏಕೆಂದರೆ ಸಾಯುತ್ತಿರುವ ಆ ಹೃದಯದ ಭಾಗಕ್ಕೆ ಎಷ್ಟು ಬೇಕೋ ಅಷ್ಟು ಆಕ್ಸಿಜನ್ ಯುಕ್ತ ರಕ್ತ ಸಿಗುವಂತೆ ಮಾಡುತ್ತೀರೋ ಅಷ್ಟು ಒಳ್ಳೆಯದು. Heart Attack

ಇದರಿಂದ ವ್ಯಕ್ತಿಯ ಪ್ರಾಣ ಉಳಿಯುವ ಸಾಧ್ಯತೆ ಇರುತ್ತದೆ. ಹಾರ್ಟ್ ಅಟ್ಯಾಕ್ ಆದಾಗ ಅಥವಾ ಸಾಯುತ್ತಿರುವ ಹೃದಯ ಭಾಗಕ್ಕೆ ರಕ್ತಪೂರೈಕೆ ಆಗದೇ ಇದ್ದಾಗ ಟ್ರೀಟ್ ಮೆಂಟ್ ಕೊಟ್ಟಿಲ್ಲವೆಂದರೆ ಅದು ಹೃದಯಸ್ತಂಭನಕ್ಕೆ ದಾರಿ ಮಾಡಿಕೊಡಬಹುದು. ಸ್ತಂಭನ ಎಂದರೆ ನಿಂತುಬಿಡುವುದು ಎಂದರ್ಥ. ಹಾರ್ಟ್ ಅಟ್ಯಾಕ್ ನಲ್ಲಿ ಹೃದಯ ತನ್ನ ಕೆಲಸವಾದ ರಕ್ತವನ್ನು ಪಂಪ್ ಮಾಡುತ್ತಿರುತ್ತದೆ.

ಆದರೇ ಕೊರೊನರಿ ಹಾರ್ಟ್ರಿ ಬ್ಲಾಕೇಜ್ನಿಂದಾಗಿ ಹೃದಯದ ಯಾವುದೋ ಒಂದು ಭಾಗಕ್ಕೆ ರಕ್ತ ಹೋಗುತ್ತಿರುವುದಿಲ್ಲ, ಆ ಭಾಗ ಸಾಯುತ್ತಿರುತ್ತದೆ. ಹೃದಯ ಸ್ತಂಭನದಲ್ಲಿ ಹೃದಯ ತನ್ನ ಕೆಲಸವನ್ನೇ ನಿಲ್ಲಿಸಿಬಿಡುತ್ತದೆ. ರಕ್ತ ಪಂಪ್ ಆಗುವುದು ಸ್ಟಾಪ್ ಆಗಿಬಿಡುತ್ತದೆ. ದೇಹದ ಯಾವುದೇ ಭಾಗಕ್ಕೂ ಆಕ್ಸಿಜನ್ಯುಕ್ತ ರಕ್ತ ಪೂರೈಕೆಯಾಗುತ್ತಿರುವುದಿಲ್ಲ. Heart Attack

ಇಂತಹ ಹೃದಯಸ್ತಂಭನವನ್ನು ಇಂಗ್ಲಿಷ್ನಲ್ಲಿ ಕಾರ್ಡಿಯಾಕರೆಸ್ಟ್ ಎನ್ನುತ್ತಾರೆ. ಹೃದಯಸ್ತಂಭನವಾಗುವಾಗ ಹೃದಯದ ಬಡಿತ ಇರ್ರೆಗ್ಯುಲರ್ ಆಗಬಹುದು ಅಂದರೆ ನಾರ್ಮಲ್ ಆಗಿ ಲಬ್ ಡಬ್ ಎನ್ನುವ ಬದಲು ವಿಚಿತ್ರವಾಗಿ ಅಥವಾ ವೇಗವಾಗಿ ಬಡಿದುಕೊಳ್ಳಬಹುದು. ಎದೆ ನೋವು ಕಾಣಿಸಿಕೊಳ್ಳಬಹುದು. ಸುಸ್ತು ಆಗಬಹುದು. ಉಸಿರಾಡಲು ಸಮಸ್ಯೆಯಾಗಬಹುದು ಅಥವಾ ಉಸಿರಾಟವೇ ನಿಲ್ಲಬಹುದು.

ಪ್ರಜ್ಞೆ ಕಳೆದುಕೊಳ್ಳಬಹುದು ಇಂತಹ ಸಮಯದಲ್ಲಿ ತುರ್ತು ಚಿಕಿತ್ಸೆ ಸಿಪಿಆರ್ ಮಾಡಿದರೆ ಜೀವ ಉಳಿಸಬಹುದು. ಹೀಗೆ ಮಾಡುವುದರಿಂದ ಸ್ಟಾಪ್ ಆಗಿರುವ ಹೃದಯ ಮತ್ತೆ ಲಬ್ ಡಬ್ ಎಂದು ಬಡಿದುಕೊಳ್ಳಬಹುದು. ತನ್ನ ಕೆಲಸವನ್ನು ಮತ್ತೆ ಶುರುಮಾಡಬಹುದು. ಆದರೇ ಎಲ್ಲಾ ಸಮಯದಲ್ಲೂ ಸಿಪಿಆರ್ ಕೆಲಸ ಮಾಡುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. Heart Attack

ಹೀಗಾಗಿ ವ್ಯಕ್ತಿಯನ್ನ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಸಿಪಿಆರ್ ಮಾಡುವವರು ಒಂದು ವಿಚಾರವನ್ನ ನೆನಪಿಟ್ಟುಕೊಳ್ಳಿ. ಹೃದಯ ಬಡಿತ ನಿಂತಾಗ ಮಾತ್ರ ಸಿಪಿಆರ್ ಮಾಡಿ, ಹೃದಯಬಡಿತ ಇದ್ದಾಗ ಸಿಪಿಆರ್ ಮಾಡಬೇಡಿ. ಹೃದಯಾಘಾತ ಮತ್ತು ಹೃದಯಸ್ತಂಭನಕ್ಕೆ ವಿವಿಧ ಚಿಕಿತ್ಸೆಗಳು ಇವೆ. ಇಸಿಜಿಯ ಮೂಲಕ ಹಾರ್ಟ್ನ ಎಲೆಕ್ಟ್ರಿವಿಟಿ ಅಥವಾ ಹಾರ್ಟ್ಬೀಟ್ ಅನ್ನು ವೈದ್ಯರು ಚೆಕ್ ಮಾಡುತ್ತಾರೆ. ಹೃದಯಬಡಿತ ನಿಂತಿದ್ದರೆ

ಎದೆ ಭಾಗಕ್ಕೆ ಎಲೆಕ್ಟ್ರಿಕ್ ಶ್ಯಾಕ್ ಕೊಟ್ಟು ಅದು ಮತ್ತೆ ಬಡಿದುಕೊಳ್ಳುವಂತೆ ಮಾಡಬಹುದು. ವ್ಯಕ್ತಿಯನ್ನ ಹೈಟೆಕ್ ಕಾರ್ಡಿಯಾ ಸೂಟ್ನಲ್ಲಿ ಮಲಗಿಸಿ ಎಲ್ಲೆಲ್ಲಿ ಕೊರೊನರಿ ಹಾರ್ಟರಿ ಬ್ಲಾಕೇಜ್ ಆಗಿದೆ ಎಂದು ನೋಡುತ್ತಾರೆ. ಬ್ಲಾಕ್ ಆಗಿರುವ ಕೊರೊನರಿ ಹಾರ್ಟರಿ ಅನ್ನು ಆಂಜಿಯೋ ಪ್ಲಾಸ್ಟರಿ ಮೂಲಕ ಓಪನ್ ಮಾಡುತ್ತಾರೆ. ಜಾಲರಿ ಅಂತಹ ಟ್ಯೂಬ್ ಅನ್ನು ಅಳವಡಿಸುತ್ತಾರೆ.

ಇದನ್ನೆ ಸ್ಟಂಟ್ ಎನ್ನುವುದು. ಈ ಸ್ಟಂಟ್ ಪರ್ಮನೆಂಟ್ ಆಗಿ ಕೊರೊನರಿ ಹಾರ್ಟರಿ ಒಳಗೆ ಇರುತ್ತದೆ. ಮತ್ತು ಸರಾಗವಾಗಿ ರಕ್ತ ಸಂಚಾರವಾಗುವಂತೆ ನೋಡಿಕೊಳ್ಳುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕೊರೊನರಿ ಹಾರ್ಟರಿಗೆ ಬೈಪಾಸ್ ಸರ್ಜರಿ ಕೂಡ ಮಾಡುತ್ತಾರೆ. ಅಂದರೆ ದೇಹದ ಬೇರೆ ಭಾಗದಲ್ಲಿರುವ ಕೊರೊನರಿ ಹಾರ್ಟರಿಯ ಒಂದು ತುಂಡನ್ನು ಹಾರ್ಟ್ಗೆ ಜೋಡಿಸಿ ರಕ್ತಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಮಾಡಿಕೊಡುವುದು. ಆದರೇ ಬೈಪಾಸ್ ಸರ್ಜರಿ ಅಪಾಯಕಾರಿ ಹಾಗೂ ಅಪರೂಪ.

Leave A Reply

Your email address will not be published.