Ultimate magazine theme for WordPress.

Richest Women MLAs ದೇಶದ ಶ್ರೀಮಂತ ದಲಿತ ಶಾಸಕಿ ಯಾರು ಗೊತ್ತಾ?

0 158

who are the Richest Female MLAs of India? ನಮ್ಮ ದೇಶದಲ್ಲಿ ಪುರುಷ ರಾಜಕಾರಣಿಗಳಿಗೆ ಹೋಲಿಸಿದರೆ ಮಹಿಳಾ ರಾಜಕಾರಣಿಗಳು ತುಂಬಾ ಕಡಿಮೆ. ಶ್ರೀಮಂತ ಮಹಿಳಾ ಎಂಎಲ್ಎಗಳು ಯಾರು? ಅವರೆಷ್ಟು ಶ್ರೀಮಂತರು? ಈ ಪಟ್ಟಿಯಲ್ಲಿ ನಮ್ಮ ರಾಜ್ಯದ ಶಾಸಕರು ಎಷ್ಟನೇ ಸ್ಥಾನದಲ್ಲಿ ಬರುತ್ತಾರೆಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ರಜಿನಿ ವಿಡದಲ: ಆಂದ್ರಪ್ರದೇಶದ ಶ್ರೀಮಂತ ಶಾಸಕಿ ರಜಿನಿ ವಿಡದಲ ದೇಶದ ಶ್ರೀಮಂತ ಮಹಿಳಾ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಬಳಿ ಬರೋಬ್ಬರಿ ಸುಮಾರು 128 ರೂಪಾಯಿ ಮೌಲ್ಯದ ಆಸ್ತಿ ಇದೆ. ಇವರು ವೈ ಎಸ್ ಆರ್ ಪಕ್ಷದ ಕಾಂಗ್ರೆಸ್ ನಾಯಕಿ.

ರಿವಾಬಾ ಜಡೇಜಾ: ಗುಜರಾತ್ನ ಶ್ರೀಮಂತ ಶಾಸಕಿ ಕ್ರಿಕೆಟರ್ ರವೀಂದ್ರ ಜಡೇಜಾರವರ ಪತ್ನಿ ರಿವಾಬಾ ಜಡೇಜಾ ದೇಶದ ಎರಡನೇ ಶ್ರೀಮಂತ ಮಹಿಳಾ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ ಸುಮಾರು 97 ಕೋಟಿ ರೂಪಾಯಿ. ಇವರು ಬಿಜೆಪಿ ಶಾಸಕಿ. Richest Women MLAs

ಡೆಲಿಲಾ ಮೈಕಲ್ ಲೋಬೋ: ಗೋವಾದ ಶಾಸಕಿ ಡೆಲಿಲಾ ಮೈಕಲ್ ಲೋಬೋ ದೇಶದ ಮೂರನೇ ಶ್ರೀಮಂತ ಮಹಿಳಾ ಶಾಸಕಿ. ಇವರ ಕುಟುಂಬದ ಬಳಿ 92 ಕೋಟಿ ಮೌಲ್ಯದ ಆಸ್ತಿ ಇದೆ. ಇವರು ಬಿಜೆಪಿ ಶಾಸಕಿ.

ನೈನಾ ಸಿಂಗ್: ಹರಿಯಾಣದ ಶ್ರೀಮಂತ ಶಾಸಕಿ ನೈನಾ ಸಿಂಗ್ ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ಧಾರೆ. ಇವರ ಕುಟುಂಬದ ಒಟ್ಟು ಆಸ್ತಿ 91 ಕೋಟಿ ರೂಪಾಯಿ ಅಷ್ಟು ಇದೆ. ಇವರು ಜನನಾಯಕ್ ಜನತಾಪಾರ್ಟಿಯ ಎಂಎಲ್ಎ. Richest Women MLAs

ಮಾಧುರಿ ಸತೀಶ್ ಮಿಸಲ್: ಮಹಾರಾಷ್ಟ್ರದ ಶ್ರೀಮಂತ ಶಾಸಕಿ ಮಾಧುರಿ ಸತೀಶ್ ಮಿಸಲ್ ಈ ಪಟ್ಟಿಯ 5ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಬಳಿ 88 ಕೋಟಿ ರೂಪಾಯಿಯ ಆಸ್ತಿ ಇದೆ. ಇವರು ಬಿಜೆಪಿ ಎಂಎಲ್ಎ.

ನಿರ್ಮಲ್ ರಾಣಿ: ಹರಿಯಾಣದ ಬಿಜೆಪಿ ಶಾಸಕಿ ನಿರ್ಮಲ್ ರಾಣಿ ಈ ಪಟ್ಟಿಯ 6ನೇ ಸ್ಥಾನದಲ್ಲಿ ಬರುತ್ತಾರೆ. ಇವರ ಕುಟುಂಬದ ಬಳಿ 88 ಕೋಟಿ ಮೌಲ್ಯದ ಆಸ್ತಿ ಇದೆ. Richest Women MLAs

ಜಾಧವ್ ಜಯಶ್ರೀ ಚಂದ್ರಕಾಂತ್: ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಿ ಜಾಧವ್ ಜಯಶ್ರೀ ಚಂದ್ರಕಾಂತ್ ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 86 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

ಪ್ರಮಿಳಾ ಟೋಕಸ್: ದೆಹಲಿಯ ಶ್ರೀಮಂತ ಶಾಸಕಿ ಪ್ರಮಿಳಾ ಟೋಕಸ್ ಈ ಪಟ್ಟಿಯ 8ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 80 ಕೋಟಿ ರೂಪಾಯಿಯಷ್ಟು ಇದೆ. ಇವರು ಆಮ್ ಆದ್ಮಿ ಪಕ್ಷದ ನಾಯಕಿ.

ನೀಲಂ ದೇವಿ: ಬಿಹಾರದ ಶ್ರೀಮಂತ ಶಾಸಕಿ ನೀಲಂ ದೇವಿ ಈ ಪಟ್ಟಿಯ 9ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 80 ಕೋಟಿ ಮೌಲ್ಯದ್ದು ಆಗಿದೆ. ಇವರು ಆರ್ ಜೆ ಡಿ ಪಕ್ಷದ ಶಾಸಕಿ. Richest Women MLAs

ಗೀತಾ ಭರತ್ ಜೈನ್: ಮಹಾರಾಷ್ಟ್ರದ ಪಕ್ಷೇತ್ತರ ಶಾಸಕಿ ಗೀತಾ ಭರತ್ ಜೈನ್ ಈ ಪಟ್ಟಿಯ 10ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 70 ಕೋಟಿ ರೂಪಾಯಿ ಮೌಲ್ಯದ್ದು ಆಗಿದೆ.

ತ್ಸೆರಿಗ್ ಲ್ಹಾಮು: ಅರುಣಾಚಲ ಪ್ರದೇಶದ ಶ್ರೀಮಂತ ಶಾಸಕಿ ತ್ಸೆರಿಗ್ ಲ್ಹಾಮು ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಬರುತ್ತಾರೆ. ಇವರ ಕುಟುಂಬದ ಒಟ್ಟು ಆಸ್ತಿ 62 ಕೋಟಿ ರೂಪಾಯಿಯಷ್ಟು ಇದೆ. ಇವರು ಬಿಜೆಪಿ ಎಂಎಲ್ಎ.

ರಾಣಿ ಪಕ್ಷಲಿಕ ಸಿಂಗ್: ಉತ್ತರ ಪ್ರದೇಶದ ಶ್ರೀಮಂತ ಶಾಸಕಿ ರಾಣಿ ಪಕ್ಷಲಿಕ ಸಿಂಗ್ ಈ ಪಟ್ಟಿಯ 12ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 58 ಕೋಟಿ ರೂ. ಮೌಲ್ಯದ್ದು ಆಗಿದೆ. ಇವರು ಬಿಜೆಪಿ ಎಂಎಲ್ಎ.

ಧನ್ವಾಟಿ ಚಂಡೇಲಾ: ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕಿ ಧನ್ವಾಟಿ ಚಂಡೇಲಾ ಈ ಪಟ್ಟಿಯ 13ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 56 ಕೋಟಿ ರೂಪಾಯಿ ಮೌಲ್ಯದ್ದು ಆಗಿದೆ.

ಶೈಲಿ: ಹರಿಯಾಣಾದ ಕಾಂಗ್ರೆಸ್ ಶಾಸಕಿ ಶೈಲಿ ದೇಶದ ಶ್ರೀಮಂತ ಶಾಸಕಿಯರ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 53 ಕೋಟಿ ಮೌಲ್ಯದ್ದು ಆಗಿದೆ. Richest Women MLAs

ಮಂಜುಳ ಎಸ್: ಕರ್ನಾಟಕದ ಶ್ರೀಮಂತ ಶಾಸಕಿ ಮಂಜುಳ ಎಸ್. ದೇಶದ ಶ್ರೀಮಂತ ಶಾಸಕಿಯರ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಹಾಗೂ ದೇಶದ ಶ್ರೀಮಂತ ದಲಿತ ಮಹಿಳೆ ಎನಿಸಿಕೊಂಡಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 53 ಕೋಟಿ ಮೌಲ್ಯದ್ದು, ಇವರು ಬೆಂಗಳೂರಿನ ಮಹಾದೇವಪುರ ಎಸ್ಸಿ ಕ್ಷೇತ್ರದ ಶಾಸಕಿ.

ಶಶಿಕಲಾ ಜೊಲ್ಲೆ: ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ದೇಶದ 16ನೇ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 52 ಕೋಟಿಯಷ್ಟು ಇದೆ.

ಕಿರಣ್ ಚೌಧ್ರಿ: ಹರಿಯಾಣದ ಕಾಂಗ್ರೆಸ್ ಶಾಸಕಿ ಕಿರಣ್ ಚೌಧ್ರಿ ಈ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 51 ಕೋಟಿಯಷ್ಟು.

ಆದಿರೆಡ್ಡಿ ಭವಾನಿ: ಆಂಧ್ರಪ್ರದೇಶದ ಟಿಡಿಪಿ ಶಾಸಕಿ ಆದಿರೆಡ್ಡಿ ಭವಾನಿ ಈ ಪಟ್ಟಿಯಲ್ಲಿ 18ನೇ ಸ್ಥಾನ ಪಡೆಯುತ್ತಾರೆ. ಇವರ ಕುಟುಂಬದ ಒಟ್ಟು ಆಸ್ತಿ 48 ಕೋಟಿ ರೂಪಾಯಿಯಷ್ಟು ಆಗಿದೆ.

ಜೆನ್ನಿಫರ್ ಮಾನ್ಸರೆಟ್: ಗೋವಾ ಬಿಜೆಪಿ ಶಾಸಕಿ ಜೆನ್ನಿಫರ್ ಮಾನ್ಸರೆಟ್ ಈ ಪಟ್ಟಿಯಲ್ಲಿ 19ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 48 ಕೋಟಿ ರೂಪಾಯಿ.

ರಾಜ್ ಕುಮಾರಿ ದಿಲ್ಲೋನ್: ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕಿ ರಾಜ್ ಕುಮಾರಿ ದಿಲ್ಲೋನ್ ಈ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಪಡೆದಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 48 ಕೋಟಿ ರೂಪಾಯಿಯಷ್ಟು.
ದೇಶದ ಟಾಪ್ ಶ್ರೀಮಂತರ ಶಾಸಕಿಯ ಪಟ್ಟಿಯಲ್ಲಿ ನಯನ ಮೋಟಮ್ಮ, ಲಕ್ಷ್ಮಿ ಹೆಬ್ಬಾಳ್ಕರ್ ಕರೆಮ್ಮ ಈ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆಂದರೆ

ಕನೀಝ್ ಫಾತೀಮಾ: ಕಲ್ಬುರುಗಿ ಉತ್ತರ ಕಾಂಗ್ರೆಸ್ ಶಾಸಕಿ ಕನೀಝ್ ಫಾತೀಮಾ ದೇಶದ 38ನೇ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 18 ಕೋಟಿ ರೂಪಾಯಿಯಷ್ಟು.

ಲಕ್ಷ್ಮಿ ಹೆಬ್ಬಾಳ್ಕರ್: ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಎಂಎಲ್ಎ ಲಕ್ಷ್ಮಿ ಹೆಬ್ಬಾಳ್ಕರ್ ದೇಶದ 48ನೇ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಬಳಿ 13 ಕೋಟಿ ರೂ. ಮೌಲ್ಯದ ಆಸ್ತಿ ಇದೆ.

ರೂಪಕಲಾ ಎಂ: ಕೋಲಾರ ಜಿಲ್ಲೆ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಎಂಎಲ್ಎ ರೂಪಕಲಾ ಎಂ ದೇಶದ 55ನೇ ಶ್ರೀಮಂತ ಶಾಸಕಿಯಾಗಿದ್ಧಾರೆ. ಇವರ ಕುಟುಂಬದ ಬಳಿ 12 ಕೋಟಿ ಮೌಲ್ಯದ ಆಸ್ತಿ ಇದೆ.

ನಯನ ಮೋಟಮ್ಮ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕಿ ದೇಶದ 62ನೇ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಬಳಿ ಸುಮಾರು 10 ಕೋಟಿ ಮೌಲ್ಯದ ಆಸ್ತಿ ಇದೆ.

ಲತಾ ಮಲ್ಲಿಕಾರ್ಜುನ್: ವಿಜಯನಗರ ಜಿಲ್ಲೆ ಹರಪ್ಪನ ಹಳ್ಳಿ ಕ್ಷೇತ್ರದ ಪಕ್ಷೇತ್ತರ ಎಂಎಲ್ ಎ ಲತಾ ಮಲ್ಲಿಕಾರ್ಜುನ್ ದೇಶದ 94ನೇ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 7 ಕೋಟಿ ರೂಪಾಯಿ ಅಷ್ಟು ಆಗಿದೆ.

ಶಾರದ ಪೂರ್ಯಾನಾಯ್ಕ್: ಶಿವಮೊಗ್ಗ ಗ್ರಾಮೀಣ ಎಸ್ಸಿ ಕ್ಷೇತ್ರದ ಜೆಡಿಎಸ್ ಎಂಎಲ್ಎ ಶಾರದ ಪೂರ್ಯಾನಾಯ್ಕ್ ದೇಶದ 190ನೇ ಶ್ರೀಮಂತ ಎಂಎಲ್ಎ ಎನಿಸಿಕೊಂಡಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 3 ಕೋಟಿಯಷ್ಟು ಇದೆ.

ಕರೆಮ್ಮ: ರಾಯಚೂರು ಜಿಲ್ಲೆ ದೇವದುರ್ಗ ಎಸ್ಸಿ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ದೇಶದ ಶ್ರೀಮಂತ ಶಾಸಕಿಯರ ಪಟ್ಟಿಯಲ್ಲಿ 283ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಆಸ್ತಿ 98 ಲಕ್ಷ ಮೌಲ್ಯದ ಆಸ್ತಿ ಇದೆ.

ಭಾಗೀರಥಿ ಮುರುಳ್ಯ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಎಸ್ಸಿ ಕ್ಷೇತ್ರದ ಬಿಜೆಪಿ ಎಂಎಲ್ಎ ಭಾಗೀರಥಿ ಮುರುಳ್ಯ ದೇಶದ ಶ್ರೀಮಂತ ಶಾಸಕಿಯ ಪಟ್ಟಿಯಲ್ಲಿ 343ನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಬಳಿ 28 ಲಕ್ಷದ ಆಸ್ತಿ ಇದೆ. ಈ ಲೇಖನದಲ್ಲಿ ದೇಶದ ಶ್ರೀಮಂತ ಎಂಎಲ್ಎ ಗಳು ಯಾರು ಮತ್ತು ಅದರಲ್ಲಿ ಕರ್ನಾಟಕದ ಮಹಿಳೆಯರು ಎಷ್ಟನೇ ಸ್ಥಾನದಲ್ಲಿದ್ಧಾರೆಂಬುದನ್ನು ತಿಳಿಸಿಕೊಡುವ ಪ್ರಯತ್ನ.

Leave A Reply

Your email address will not be published.