Ultimate magazine theme for WordPress.

diabetes ಕಡಿಮೆ ಕಾರ್ಬ್ ಆಹಾರದಲ್ಲಿ ಏನು ತಿನ್ನಬೇಕು

0 382

diabetes Can diabetes be reversed ನಾರಾಯಣ ನೇತ್ರಾಲಯದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ಕಣ್ಣಿನ ತಜ್ಞರಾದ ಡಾ|| ಕೆ. ಭುಜಂಗ ಶೆಟ್ಟಿಯರು ಮಧುಮೇಹದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಅದೇನೆಂದರೆ ಮಧುಮೇಹವು ನಮ್ಮ ತಪ್ಪಾದ ಡಯಟ್ ನಿಂದ ಬಂದಿದೆ. ಅಂದರೆ ನಾವು ಊಟ ಮಾಡಿದ್ದು ತಪ್ಪಾಗಿದ್ದರಿಂದ ಈ ಸಮಸ್ಯೆ ಬಂದಿದೆ. ನಾವು ಸರಿಯಾದ ಆಹಾರ ತೆಗೆದುಕೊಂಡರೆ

ಆ ಸಮಸ್ಯೆಯನ್ನ ಸರಿಮಾಡಿಕೊಳ್ಳಬಹುದು. ಡಾ|| ಭುಗಂಗಶೆಟ್ಟಿಯವರ ಪ್ರಕಾರ ಶುಗರ್ ಕಂಟ್ರೋಲ್ ಮಾಡುವ ವಿಧಾನ ಹೀಗಿದೆ ನಾವು ತುಂಬಾ ವರ್ಷದಿಂದ ಸಕ್ಕರೆಯನ್ನ ತಿಂದಿದ್ದರಿಂದ ಸಕ್ಕರೆ ಮತ್ತು ಅಕ್ಕಿ, ರಾಗಿ ಗೋಧಿ ಅಥವಾ ಜೋಳ ಸಿರಿಧಾನ್ಯಗಳು ಮತ್ತು ಓಟ್ಸ್ ಇವುಗಳಲ್ಲಿ ಶೇ80ರಷ್ಟು ಕಾರ್ಬೋಹೈಡ್ರೇಟ್ಸ್ ಇದೆ. ಎಷ್ಟೋ ಜನರು ಸಕ್ಕರೆಯ ಆಹಾರ ಪದಾರ್ಥವನ್ನ ಉಪಯೋಗಿಸುತ್ತಿಲ್ಲ diabetes

ಆದರೂ ಶುಗರ್ ಕಂಟ್ರೋಲ್ ಇಲ್ಲ ಎನ್ನುತ್ತಾರೆ ಆದರೇ ನಾವು ಬೆಳಿಗ್ಗೆಯಿಂದ ಅಕ್ಕಿ, ರಾಗಿ ಗೋಧಿ ಅಥವಾ ಜೋಳ ಸಿರಿಧಾನ್ಯಗಳು ಮತ್ತು ಓಟ್ಸ್ಗಳನ್ನ ತಿನ್ನುತ್ತಿರುತ್ತೀವಿ. ಹಾಗಾಗಿ ನೀವು ಏನೇ ಮಾತ್ರೆ ತೆಗೆದುಕೊಂಡರು ನಿಮ್ಮ ಶುಗರ್ ಕಂಟ್ರೋಲ್ಗೆ ಬರುವುದಿಲ್ಲ. ಹಿರಿಯರು ಹೇಳಿದಂತೆ ಊಟಬಲ್ಲವನಿಗೆ ರೋಗವಿಲ್ಲವೆಂದು ತಪ್ಪಾದ ಆಹಾರ ಕ್ರಮವನ್ನು ಅನುಸರಿಸಿದರೆ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ.

ಮೊದಲು ತಪ್ಪನ್ನ ಕಂಡುಹಿಡಿಯಬೇಕು. ಸ್ವೀಟ್ ಅನ್ನು ಸೇವನೆ ಮಾಡಬಾರದು. ಸಕ್ಕರೆ, ಬೆಲ್ಲ ಮತ್ತು ಜೇನು ಎಲ್ಲವೂ ಸಕ್ಕರೆ ಅಂಶವಿರುವ ಪದಾರ್ಥಗಳೇ ಆಗಿರುತ್ತವೆ. ಇವುಗಳನ್ನ ಯಾವುದೇ ಕಾರಣಕ್ಕೂ ಸೇವಿಸಬಾರದು. ಅಕ್ಕಿ, ರಾಗಿ ಗೋಧಿ ಅಥವಾ ಜೋಳ ಸಿರಿಧಾನ್ಯಗಳು ಮತ್ತು ಓಟ್ಸ್ ಇವುಗಳಲ್ಲೂ ಸಕ್ಕರೆ ಅಂಶ ಇರುವುದರಿಂದ ಇವುಗಳನ್ನ ಬಿಡಬೇಕು. diabetes

ಮತ್ತೆ ಏನು ತಿನ್ನಬೇಕು ಎಂಬುದನ್ನ ಭುಜಂಗ ಶೆಟ್ಟಿಯವರು ತಿಳಿಸಿಕೊಡುತ್ತಾರೆ. ಆರೋಗ್ಯಕರವಾದ ಫ್ಯಾಟ್ಸ್ ಅನ್ನು ತಿನ್ನಬೇಕು. ಹಿಂದೆ ಕೊಬ್ಬಿನ ಆಹಾರವನ್ನ ಸೇವನೆ ಮಾಡಬೇಡಿ ದಪ್ಪ ಆಗುತ್ತೀರ ಎಂದು ಹೇಳಿದ್ದೆವು ಆದರೇ ಅದು ಈಗ ತಪ್ಪು ಎಂದು ಸಾಬೀತಾಗಿದೆ. ಅನಾರೋಗ್ಯಕರವಾದ ಆಹಾರ ಎಂದರೆ ಇತ್ತೀಚೆಗೆ ಬಂದಿರುವ ಸಂಸ್ಕರಿಸಿದ ಎಣ್ಣೆಗಳು ನಮ್ಮ ದೇಹಕ್ಕೆ ಅನಾರೋಗ್ಯವನ್ನು ಉಂಟುಮಾಡುತ್ತದೆ.

ಆ ಕೊಬ್ಬನ್ನು ಬಿಟ್ಟು, ನ್ಯಾಚುರಲ್ ಫ್ಯಾಟ್ ಅನ್ನು ತೆಗೆದುಕೊಳ್ಳಿ ಅವುಗಳೆಂದರೆ ತುಪ್ಪ, ಬೆಣ್ಣೆ, ಗಾಣದ ಎಣ್ಣೆಗಳು, ಕೆಮಿಕಲ್ ಮುಕ್ತ ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಅದನ್ನು ನೀವು ಎಷ್ಟು ಬೇಕಾದರೂ ಸೇವನೆ ಮಾಡಬಹುದು. ನೀವು ಹೆಚ್ಚು ಸೇವನೆ ಮಾಡಿದರೂ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ನಿಮ್ಮ ತೂಕವೂ ಸಹ ಕಡಿಮೆಯಾಗುತ್ತದೆ. ತರಕಾರಿಗಳನ್ನ ತಿನ್ನಬೇಕು diabetes

ಆದರೇ ಸಕ್ಕರೆ ಅಂಶವಿರುವ ತರಕಾರಿಗಳನ್ನ ಸೇವನೆ ಮಾಡಬಾರದು. ಆಲೂಗೆಡ್ಡೆಯನ್ನ ಕಡಿಮೆಮಾಡಬೇಕು ಭೂಮಿಯ ಒಳಭಾಗದಲ್ಲಿ ಬೆಳೆಯುವ ತರಕಾರಿಯನ್ನ ಆದಷ್ಟೂ ಕಡಿಮೆ ಮಾಡಿ, ಭೂಮಿಯ ಮೇಲ್ಭಾಗದಲ್ಲಿ ಬೆಳೆಯುವ ತರಕಾರಿಯನ್ನ ಎಷ್ಟು ಬೇಕಾದರೂ ತಿನ್ನಬಹುದು. ಹಣ್ಣುಗಳಲ್ಲೂ ಕೂಡ ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ ಆದಷ್ಟು ಹಣ್ಣುಗಳನ್ನು ಕೂಡ ಅವಾಯ್ಡ್ ಮಾಡಬೇಕಾಗುತ್ತದೆ.

ಇವೆಲ್ಲವನ್ನೂ ಬಿಟ್ಟ ಮೇಲೆ ಏನನ್ನು ತಿನ್ನಬೇಕು ಎಂಬ ಪ್ರಶ್ನೆ ಮೂಡುತ್ತದೆ. ನೀವು ಸಸ್ಯಹಾರಿಗಳಾಗಿದ್ದರೇ ನೀವು ಸಸ್ಯಹಾರಿಗಳಾಗೇ ಇರಿ, ಮಾಂಸಹಾರಿಗಳಾಗಿದ್ದರೇ ಮಾಂಸಹಾರಿಗಳೇ ಆಗಿರಿ ತೊಂದರೆ ಇಲ್ಲ. ನಿಮಗೆ ಬೇಕಾಗಿರುವ ತರಕಾರಿಗಳನ್ನ ಕಟ್ಟುಮಾಡಿ ಎಣ್ಣೆ, ಬೆಣ್ಣೆ ಹಾಕಿ ಹುರಿದು ತಿನ್ನಿರಿ, ಪ್ರತಿಯೊಂದು ಊಟಕ್ಕೆ ಮುನ್ನ ಹುರಿದ ತರಕಾರಿಗಳನ್ನು ಒಂದು ಬಟ್ಟಲು ಸೇವಿಸಿ. diabetes

ತೆಂಗಿನಕಾಯಿಯನ್ನ ಎಷ್ಟು ಬೇಕಾದರೂ ತಿನ್ನಬಹುದು. ಹೂಕೋಸು, ಎಲೆಕೋಸು ಮತ್ತು ಬ್ರೋಕೋಲಿಯಿಂದ ಅನ್ನವನ್ನ ಮಾಡಬಹುದು, ಜುಕಿನಿಯಿಂದ ಅನ್ನವನ್ನ ಮಾಡಿ ಸೇವನೆ ಮಾಡಿದರೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ನಮಗೆ ಹಸಿವಿದ್ದರೇ ಮಾತ್ರ ತಿನ್ನಬೇಕು. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ತೂಕ ಕಡಿಮೆಯಾಗುತ್ತದೆ, ಶುಗರ್ ಕಡಿಮೆಯಾಗುತ್ತದೆ, ಬಿಪಿ ಮತ್ತು ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಪ್ರತಿದಿನ ಈ ರೀತಿಯ ಆಹಾರವನ್ನು ಸೇವನೆ ಮಾಡಿ, diabetes

ಶುಗರ್ ಲೆವೆಲ್ ಅನ್ನು ಪ್ರತಿದಿನ ಟೆಸ್ಟ್ ಮಾಡಿಕೊಳ್ಳಿ, ನೀವು ತಿನ್ನುವ ಆಹಾರ ಮತ್ತು ಶುಗರ್ ಲೆವೆಲ್ ಎಲ್ಲವನ್ನು ಪಟ್ಟಿಮಾಡಿಕೊಳ್ಳಿ ನಂತರ ನಿಮ್ಮ ವೈದ್ಯರಿಗೆ ತೋರಿಸಿ, ಅವರೇ ನೀವು ಸೇವನೆ ಮಾಡುವ ಮಾತ್ರೆಯನ್ನ ಕಡಿಮೆ ಮಾಡುತ್ತಾರೆ. ಈ ರೀತಿಯಾಗಿ ಫಾಲೋ ಮಾಡಿದರೇ ನಿಮ್ಮ ಶುಗರ್, ಬಿಪಿ, ಕೊಲೆಸ್ಟ್ರಾಲ್ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ.

ಇದರಜೊತೆಗೆ ಪ್ರತಿದಿನ ವ್ಯಾಯಾಮ ಮಾಡಬೇಕು ಇಲ್ಲವೇ 40 ನಿಮಿಷ ವೇಗದ ನಡಿಗೆಯನ್ನ ಅಭ್ಯಾಸ ಮಾಡಿಕೊಳ್ಳಿ. ತಪ್ಪದೇ ದೈಹಿಕ ವ್ಯಾಯಾಮ ಬೇಕಾಗುತ್ತದೆ. ಭುಜಂಗ ಶೆಟ್ಟಿಯವರ ಮಾತಿನ ಪ್ರಕಾರ ಅವರು ಸಂಜೆ 6 ಗಂಟೆಗೆ ಊಟವನ್ನ ಮುಗಿಸುತ್ತಾರೆ. 14 ಗಂಟೆಗಳ ಕಾಲ ದೇಹಕ್ಕೆ ರೆಸ್ಟ್ ಸಿಗುತ್ತದೆ ಬೆಳಿಗ್ಗೆ 8 ಗಂಟೆಗೆ ಟಿಫನ್ ತಿನ್ನುತ್ತಾರೆ.

ಹೆಚ್ಚು ಒತ್ತಡವಿದ್ದರೂ ಶುಗರ್ ಲೆವೆಲ್ ಜಾಸ್ತಿಯಾಗುತ್ತದೆ, ಆದಷ್ಟೂ ಮಟ್ಟಿಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಒಳ್ಳೆಯ ನಿದ್ದೆಯನ್ನ ಮಾಡಿದರೇ ಒಳ್ಳೆಯ ಫಲಿತಾಂಶ ಬರುತ್ತದೆ. ಲೋ ಶುಗರ್ ಆಗದಂತೆ ಗಮನ ವಹಿಸಿ ನಿಮ್ಮ ಡಾಕ್ಟರ್ ಹತ್ತಿರ ಸಲಹೆಯನ್ನ ಪಡೆಯಿರಿ. ಮಾಂಸಹಾರಿಗಳು ಮೊಟ್ಟೆ, ಮೀನು, ಕೋಳಿಗಳಲ್ಲಿ ಸಕ್ಕರೆ ಅಂಶವೇ ಇಲ್ಲ ಎಷ್ಟು diabetes

ಬೇಕಾದರೂ ತಿನ್ನಬಹುದು ಏನೂ ತೊಂದರೆಯಾಗುವುದಿಲ್ಲ. ಭುಜಂಗ ಶೆಟ್ಟಿಯವರು ನಾರಾಯಣ ನೇತ್ರಾಲಯದ ವತಿಯಿಂದ ಒಂದು ರೆಸಿಪಿ ಬುಕ್ ಅನ್ನು ಬಿಡುಗಡೆ ಮಾಡಿದ್ದಾರೆ ಆ ಬುಕ್ನಿಂದ ಸುಲಭವಾಗಿ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ನಾರಾಯಣ ವೆಬ್ಸೈಟ್ನಲ್ಲಿ Liberation from Diabetes ಎಂಬ ಪುಸ್ತಕವನ್ನು ಡೌನ್ಲೌಡ್ ಮಾಡಿಕೊಳ್ಳಿ ಉಚಿತವಾಗಿ ಸಿಗುತ್ತದೆ.

Leave A Reply

Your email address will not be published.