Ultimate magazine theme for WordPress.

krishna ಭಗವಾನ್ ಕೃಷ್ಣ ಮತ್ತು ಸುದಾಮ

0 129

krishna and sudhama moral stories ಶ್ರೀಮದ್ಭಗವತ್ ಪುರಾಣದಲ್ಲಿ ಶ್ರೀಕೃಷ್ಣ ಮತ್ತು ಸುದಾಮರ ಮಿತೃತ್ವದ ಬಗ್ಗೆ ಸುಂದರ ವರ್ಣನೆ ಇದೆ. ಶ್ರೀಕೃಷ್ಣ ಮತ್ತು ಸುದಾಮ ಸಾಂಧಿಪನಿ ಮುನಿಗಳ ಆಶ್ರಸಮದಲ್ಲಿ ಸಹಪಾಠಿಗಳಾಗಿದ್ದರು. ಅಲ್ಲಿಂದಲೇ ಅವರಿಬ್ಬರ ಮಿತೃತ್ವ ಆರಂಭವಾಯಿತು. ಆದರೇ ಸಮಯಕ್ಕೆ ಅನುಸಾರವಾಗಿ ದ್ವಾರಕೆಯ ರಾಜನಾದನು. ವಿಧಿ ಸುದಾಮನನ್ನು ಬಡವನಾಗಿಯೇ ಇರಿಸುತ್ತದೆ.

ಸುದಾಮ ಬ್ರಾಹ್ಮಣನಾದ ಕಾರಣ ಭಿಕ್ಷೆಯನ್ನು ಮಾಡಿ ತನ್ನ ಪರಿವಾರವನ್ನ ಸಾಕುತ್ತಿದ್ದ. ಶಾಸ್ತ್ರದ ಅನುಸಾರ ಒಬ್ಬ ಬ್ರಾಹ್ಮಣ ಒಂದು ದಿನಕ್ಕೆ ಐದು ಮನೆಯಲ್ಲಿ ಮಾತ್ರ ಭಿಕ್ಷೆಯನ್ನ ಬೇಡಬೇಕು ಅಷ್ಟೆ. ಸುದಾಮ ಒಬ್ಬರ ಮನೆಗೆ ಭಿಕ್ಷೆಗೆ ಹೋಗಿದ್ದಾಗ ಕೀರು, ಪೂರಿಯನ್ನ ಭಿಕ್ಷೆಯಾಗಿ ನೀಡಿದರು. ಆತ ಅತೀ ಪ್ರಸನ್ನನಾಗಿ ತನ್ನ ಮನೆ ಕಡೆಗೆ ಹೋಗುವಾಗ ಮನಸ್ಸಿನಲ್ಲೇ ಯೋಚನೆ ಮಾಡುತ್ತಾನೆ ಐದನೇ ಮನೆಯಿಂದ ಭಿಕ್ಷೆ ಸಿಕ್ಕಿತು,

ಇಲ್ಲವಾದಲ್ಲಿ ನನ್ನ ಮಕ್ಕಳು ನೀರನ್ನು ಕುಡಿದು ಮಲಗಬೇಕಾಗಿತ್ತು. ಈ ದಿನ ನನ್ನ ಹೆಂಡತಿ, ಮಕ್ಕಳು ಕೀರು ಪೂರಿಯನ್ನ ತಿಂದು ತುಂಬಾನೇ ಖುಷಿ ಪಡುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಬರುತ್ತಿದ್ದಾಗ ಆಗ ಒಂದು ನಾಯಿ ಬೊಗಳುತ್ತಾ ಅವನ ಹಿಂದೆ ಬೀಳುತ್ತದೆ. ಸುದಾಮ ಆ ನಾಯಿಯಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಓಡಿಕೊಂಡು ಬರುವಾಗ ಮಣ್ಣಿನ ಭಿಕ್ಷಾಪಾತ್ರೆ ಹೊಡೆದು ಕೆಳಗೆ ಬೀಳುತ್ತದೆ. krishna

ಮತ್ತು ಕೆಳಗೆ ಬಿದ್ದಿರುವ ಕೀರು ಪೂರಿಯನ್ನ ನಾಯಿ ತಿಂದುಬಿಡುತ್ತದೆ. ಅದನ್ನು ನೋಡಿ ಸುಧಾಮ ಬೇಜಾರು ಮಾಡಿಕೊಂಡು ತನ್ನ ಮನೆಗೆ ಹೊರಡುತ್ತಾನೆ. ದ್ವಾರಕೆಯಲ್ಲಿ ಕೂತಿರುವ ಶ್ರೀಕೃಷ್ಣ ಮತ್ತು ರುಕ್ಮಿಣಿ ತಮ್ಮ ದಿವ್ಯದೃಷ್ಠಿಯಿಂದ ಈ ದೃಶ್ಯವನ್ನ ನೋಡುತ್ತಿರುತ್ತಾರೆ. ದೇವಿ ರುಕ್ಮಿಣಿ ದುಃಖದ ಮನಸ್ಸಿನಿಂದ ಹೇಳುತ್ತಾಳೆ ಸುದಾಮ ನಿಮ್ಮ ಪರಮ ಮಿತ್ರ ಅವನ krishna

ಈ ದೌರ್ಭಾಗ್ಯವನ್ನ ನನ್ನಿಂದ ನೋಡಲು ಆಗುತ್ತಿಲ್ಲ ಎಂದಾಗ ಶ್ರೀಕೃಷ್ಣ ನನಗೂ ಸುದಾಮನನ್ನ ನೋಡಿ ಬೇಜಾರಾಗಿದೆ. ರುಕ್ಮಿಣಿ ಹೇಳುತ್ತಾಳೆ ಏಕೆ ಅವನ ಭಾಗ್ಯವನ್ನ ಬದಲಾಯಿಸುತ್ತಿಲ್ಲ ಎಂದಾಗ ಇನ್ನು ಸುದಾಮನನ್ನ ಪರೀಕ್ಷೆ ಮಾಡಲು ಬಯಸುವುದಿಲ್ಲ. ಸಹಾಯ ಮಾಡಲು ಇಷ್ಟಪಡುತ್ತೇನೆ ಎಂದು ಕೃಷ್ಣ ಹೇಳುತ್ತಾನೆ. ಆದರೇ ನನ್ನ ಮಿತ್ರ ತುಂಬಾನೇ ಸ್ವಾಭಿಮಾನಿ.

ಸುದಾಮ ಖಾಲಿ ಕೈನಿಂದ, ದುಃಖದಿಂದ ಎಲ್ಲಾ ವಿಷಯವನ್ನು ಹೆಂಡತಿ ಮಕ್ಕಳಿಗೆ ಎಲ್ಲವನ್ನು ಹೇಳುತ್ತಾನೆ. ಆದರೇ ಪತ್ನಿ ಸುಶೀಲ ತನ್ನ ದೌರ್ಭಾಗ್ಯದಿಂದ ಬೇಸತ್ತು ಸುದಾಮನಿಗೆ ಬೈಯಲು ಶುರುಮಾಡುತ್ತಾನೆ. ಸುದಾಮ ಮತ್ತು ಸುಶೀಲ ದೇವರ ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇಟ್ಟು ಪೂಜಿಸುತ್ತಿರುತ್ತಾರೆ. ಆ ಮೂರ್ತಿಗೆ ಅಕ್ಕಿಯ ಒಂದು ಕಾಳನ್ನು ಅರ್ಪಣೆ ಮಾಡಿ ಅವರಿಗೆ ನೈವೇದ್ಯ ಇಡುತ್ತಾರೆ.

ಶ್ರೀಕೃಷ್ಣ ತನ್ನ ಅರಮನೆಯಲ್ಲಿ ಒಂದು ಅಕ್ಕಿ ಕಾಳನ್ನು ಸ್ವೀಕರಿಸಿ ಸುದಾಮನ ಭಕ್ತಿಗೆ ಪ್ರಸನ್ನನಾಗುತ್ತಾನೆ. ರುಕ್ಮಿಣಿ ಸ್ವಯಂ ಲಕ್ಷ್ಮಿದೇವಿಯ ಅವತಾರದಲ್ಲಿ ಸುದಾಮನ ಮನೆಯಲ್ಲಿ ಪ್ರಕಟವಾಗುತ್ತಾಳೆ. ಸಾಕ್ಷಾತ್ ಮಹಾಲಕ್ಷ್ಮಿಯ ದರ್ಶನ ಪಡೆದು ಭಾವುಕಳಾಗುತ್ತಾಳೆ. ಲಕ್ಷ್ಮಿ ಸ್ವರೂಪಳಾದ ರುಕ್ಮಿಣಿಯು ನಿಮ್ಮ ಭಾಗ್ಯವನ್ನ ಬದಲಾಯಿಸಲು ಬಂದಿದ್ದೀನಿ, krishna

ನಿಮ್ಮ ಬಡತನವನ್ನು ದೂರಮಾಡುತ್ತೀನಿ ಎಂದು ಹೇಳಿದಾಗ ಸುಶೀಲ ನಮ್ಮಂಥ ಭಕ್ತರಿಗೆ ನಿಮ್ಮ ದರ್ಶನವೇ ಹೆಚ್ಚು. ಈ ಕೆಲಸ ಶ್ರೀಕೃಷ್ಣನದು. ಅವರು ನನ್ನ ಗಂಡನ ಮಿತ್ರ. ನೀವು ಒಂದು ವೇಳೆ ನನ್ನ ಗಂಡನ ದರಿದ್ರವನ್ನು ದೂರ ಮಾಡಿದರೇ ಅದರಿಂದ ನನ್ನ ಸ್ವಾಮಿಯ ಭಕ್ತಿಗೆ ಆಘಾತವಾಗುತ್ತದೆ ಮತ್ತು ಅವರು ನನಗೆ ಶಪಥ ಮಾಡಿದ್ದಾರೆ. ಶ್ರೀಕೃಷ್ಣನೇ ನಮಗೆ ಸಹಾಯ ಮಾಡುತ್ತಾನೆಂದು ಹೇಳುತ್ತಾಳೆ.

ರುಕ್ಮಿಣಿ ನಾನು ಭಗವಂತ ಶ್ರೀಕೃಷ್ಣನ ಆಜ್ಞೆಯಿಂದ ಬಂದಿದ್ದೇನೆ ಎಂದು ಹೇಳಿದಾಗ ಸುಶೀಲ ಕ್ಷಮಿಸಿ ನಿಮ್ಮ ಸಹಾಯವನ್ನ ನಾನು ಪಡೆಯಲು ಸಾಧ್ಯವಾಗುವುದಿಲ್ಲ ಎಂದಾಗ ರುಕ್ಮಿಣಿ ದೇವಿ ಆಶೀರ್ವಾದ ಮಾಡಿ ಹೋಗುತ್ತಾಳೆ. ಈ ದಿವ್ಯ ಘಟನೆ ತಿಳಿದ ಸುಧಾಮ ಆಶ್ಚರ್ಯ ಒಂದು ಕಡೆ ಮತ್ತೊಂದು ಕಡೆ ಹೆಂಡತಿಯನ್ನು ಬೈಯುತ್ತಾನೆ. krishna

ಲಕ್ಷ್ಮಿದೇವಿಯನ್ನು ವಾಪಸ್ಸು ಕಳಿಸಿದ್ದೀಯ ಇದರಿಂದ ದೇವಿಗೆ ಕೋಪಬರಬಹುದು. ಒಂದು ವೇಳೆ ನಾನು ಪಡೆದುಕೊಂಡಿದ್ದಿದ್ದರೇ ಆಗ ನಿಮ್ಮ ಮಿತ್ರನಿಗೆ ಅವಮಾನ ಮಾಡಿದಂತೆ ಆಗುತ್ತಿತ್ತು. ನಾನು ನಿಮ್ಮ ವಿಶ್ವಾಸವನ್ನ ಇನ್ನು ದೃಢಪಡಿಸಿದ್ದೀನಿ ಎಂದು ಸುಶೀಲ ಹೇಳುತ್ತಾಳೆ. ನಂತರ ಸುದಾಮ ಕ್ಷಮೆಯನ್ನ ಕೇಳಲು ಶ್ರೀಕೃಷ್ಣನ ಬಳಿ ಹೋಗಲು ನಿರ್ಧರಿಸುತ್ತಾನೆ. ಜೊತೆಗೆ ಅವಲಕ್ಕಿಯನ್ನು ತೆಗೆದುಕೊಂಡು ಹೋಗುತ್ತಾನೆ.

ಶ್ರೀಕೃಷ್ಣ ಮತ್ತು ರುಕ್ಮಿಣಿ ಸುದಾಮನಿಗೋಸ್ಕರ ಕಾಯುತ್ತಿರುತ್ತಾರೆ. ಸುದಾಮ ಹಳ್ಳಿಗರ ಹತ್ತಿರ ದಾರಿಯನ್ನ ಕೇಳುತ್ತಾನೆ ಮತ್ತು ಶ್ರೀಕೃಷ್ಣ ನನ್ನ ಮಿತ್ರ ಎಂದಾಗ ಸುದಾಮನನ್ನ ಅಪಹಾಸ್ಯ ಮಾಡುತ್ತಾ ಕಲ್ಲಿನಿಂದ ಹೊಡೆದು ಅಲ್ಲಿಂದ ಅವನನ್ನ ಓಡಿಸುತ್ತಾರೆ. ಶ್ರೀಕೃಷ್ಣನನ್ನ ನೆನೆಸಿಕೊಂಡು ನನ್ನ ಮೇಲೆ ದಯೆ ಬರುವುದಿಲ್ಲವಾ ನನ್ನ ಭಕ್ತಿಯನ್ನ ಎಷ್ಟು ಪರೀಕ್ಷೆ ಮಾಡುತ್ತೀಯ,

ನೀನು ನನ್ನ ಗೆಳೆಯ ಗೆಳೆತನದ ಮರ್ಯಾದೆಯನ್ನ ಉಳಿಸುವುದು ನಿನ್ನ ಕೈಯಲ್ಲಿದೆ ಎಂದು ಹೇಳಿಕೊಳ್ಳುತ್ತಾನೆ. ಈ ಸುದಾಮನ ಭಾವುಕತೆಯ ಕೂಗನ್ನ ಕೇಳಿ ಶ್ರೀಕೃಷ್ಣನ ಕಣ್ಣಿನಲ್ಲಿ ನೀರು ಬರುತ್ತದೆ. ರುಕ್ಮಿಣಿ ಶ್ರೀಕೃಷ್ಣ ಬಳಿ ಸುದಾಮ ವಾಪಸ್ಸು ಮನೆಗೆ ಹೋದರೇ ಎಂದಾಗ ಶ್ರೀಕೃಷ್ಣ ಸೇನಾಧಿಪತಿಯನ್ನ ಕರೆದು ಸುದಾಮನ ಸ್ವಾಗತ ಸತ್ಕಾರಕ್ಕೆ ತಯಾರಿ ಮಾಡಿಕೊಳ್ಳಲು ಹೇಳುತ್ತಾನೆ. ಸುದಾಮ ದ್ವಾರಕೆಯ ಮುಖ್ಯದ್ವಾರದ ಹತ್ತಿರ ಹೋಗುತ್ತಾನೆ.

ಶ್ರೀಕೃಷ್ಣ ಬರಿಗಾಲಿನಲ್ಲೇ ಸುದಾಮನನ್ನ ಭೇಟಿಯಾಗಲು ಓಡಿ ಬರುತ್ತಾನೆ. ಇಬ್ಬರು ಭೇಟಿಯಾಗಿ ಶ್ರೀಕೃಷ್ಣ ಹೇಳುತ್ತಾನೆ ಮಿತ್ರ ನೀನು ನನ್ನ ಬಳಿ ಬರಲು ತಡ ಮಾಡಿಬಿಟ್ಟೆ ಎಂದಾಗ ದೇವರ ಆಜ್ಞೆ ಇಲ್ಲದೇ ಭಕ್ತ ದೇವಸ್ಥಾನದ ದ್ವಾರವನ್ನ ತಲುಪಲು ಸಾಧ್ಯವಿಲ್ಲ, ನೀನು ನಮ್ಮ ಸ್ನೇಹಕ್ಕೆ ಬೆಲೆ ಕೊಟ್ಟೆ ಎಂದು ಸುದಾಮ ಹೇಳಿದಾಗ ಶ್ರೀಕೃಷ್ಣ ಸುದಾಮನನ್ನ ಗಟ್ಟಿಯಾಗಿ ಅಪ್ಪಿಕೊಂಡು ಮಿತೃತ್ವದ ಧರ್ಮವನ್ನು ನಿಭಾಯಿಸುತ್ತಾನೆ.

ಸನ್ಮಾನದ ಜೊತೆಗೆ ಸುದಾಮನನ್ನ ರಥದಲ್ಲಿ ಕೂರಿಸಿಕೊಂಡು ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಅರಮನೆಯಲ್ಲಿ ಸುದಾಮನನ್ನ ಭವ್ಯವಾಗಿ ಸ್ವಾಗತಿಸುತ್ತಾರೆ. ಶ್ರೀಕೃಷ್ಣ ಸುದಾಮನನ್ನ ತನ್ನ ಹಾಸನದಲ್ಲಿ ಕೂರಿಸಿ ಸ್ವತಃ ತಾನೇ ತನ್ನ ಮಿತ್ರನ ಪಾದವನ್ನು ತೊಳೆಯುತ್ತಾನೆ. ರುಕ್ಮಿಣಿ ಸ್ವಾದಿಷ್ಟವಾದ ಬೋಜನವನ್ನ ಬಡಿಸುತ್ತಾಳೆ. ದ್ವಾರಕೆಯಲ್ಲಿ ಈ ರೀತಿಯ ಸತ್ಕಾರ ನಡೆಯುತ್ತದೆಂದು ಯಾವತ್ತೂ ಕನಸ್ಸಿನಲ್ಲೂ

ಅಂದುಕೊಂಡಿರಲಿಲ್ಲ, ನಾನೇ ಇಲ್ಲಿಗೆ ಬರಲು ಸಂಕೋಚ ಪಡುತ್ತಿದ್ದೆ ಅದರೇ ನೀನೇ ಮಿತ್ರಧರ್ಮವನ್ನು ಸದಾ ಪಾಲಿಸಿದ್ದೆ. ಶ್ರೀಕೃಷ್ಣ ಮತ್ತು ರುಕ್ಮಿಣಿ ಸುದಾಮನಿಗೆ ಅಮೂಲ್ಯ ಉಡುಗೊರೆಯನ್ನ ಕೊಟ್ಟಿ, ರಥದಲ್ಲಿ ಸೈನಿಕ ಸುರಕ್ಷೆಯ ಜೊತೆ ಮತ್ತೆ ಹಳ್ಳಿಗೆ ಬಂದಾಗ ತನ್ನ ಕುಟುಂಬವನ್ನ ನೋಡಿದಾಗ ಆಶ್ಚರ್ಯಚಕಿತನಾಗುತ್ತಾನೆ. ಸುದಾಮನ ಸಣ್ಣ ಹುಲ್ಲಿನ ಗುಡಿಸಲು ದೊಡ್ಡ ಅರಮನೆಯಾಗಿತ್ತು. ಇಡೀ ಹಳ್ಳಿ ಸ್ವರ್ಗದ ತರಹ ಇತ್ತು. ಹಳ್ಳಿಯ ಜನರು ಸುದಾಮನಿಗೆ ಜೈಕಾರ ಹಾಕುತ್ತಾರೆ.

Leave A Reply

Your email address will not be published.