Ultimate magazine theme for WordPress.

ಪ್ರತಿದಿನ ತಿನ್ನೋ ಅಕ್ಕಿಯಲ್ಲೂ ಇದೆ 

0 1,102

Different varieties of rice in India kannadatopನಾವು ಪ್ರತಿದಿನ ಸೇವಿಸುವ ಅಕ್ಕಿಯಲ್ಲಿ ಎಷ್ಟು ಅಕ್ಕಿಗಳಿವೆ? ರಾಜರಿಗಾಗಿ ಬೆಳೆಯುತ್ತಿದ್ದ ಅಕ್ಕಿ ಯಾವುದು ಗೊತ್ತಾ? ಬ್ರೋನ್ ರೈಸ್ ಬಾಯಿಲ್ಡ್ ರೈಸ್ ಗು ಏನು ವ್ಯತ್ಯಾಸ? ಕಪ್ಪು ಅಕ್ಕಿಯ ಬಗ್ಗೆ ನಿಮಗೆಷ್ಟು ಗೊತ್ತು? ಕಾಡಕ್ಕಿ ಮತ್ತು ಬಿದಿರಕ್ಕಿ ಬಗ್ಗೆ ಕೇಳಿದ್ದೀರ? ಭಾರತದಲ್ಲಿ ಎಷ್ಟು ಬಗೆಯ ಅಕ್ಕಿಗಳನ್ನು ಬೆಳೆಯnಲಾಗುತ್ತದೆ? ಎಲ್ಲವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ನಾವು ಹೆಚ್ಚಾಗಿ ಪಾಲಿಶ್ ಆಗಿರುವ ಬಿಳಿ ಬಣ್ಣದ ಅಕ್ಕಿಯನ್ನೇ ನೋಡಿರುತ್ತೇವೆ. ಹೀಗಾಗಿ ಅವುಗಳ ವ್ಯತ್ಯಾಸ ಗೊತ್ತಾಗುವುದು ಕಷ್ಟ. ಆದರೇ ಭಾರತದಲ್ಲಿ ಸಾವಿರಾರು ಬಗೆಯ ಅಕ್ಕಿಗಳನ್ನ ಬೆಳೆಯಲಾಗುತ್ತದೆ. 1800 ಇಸವಿಯಲ್ಲಿ 1 ಲಕ್ಷ್ ಬಗೆಯ ಅಕ್ಕಿಯನ್ನು ಉತ್ಪಾದಿಸಲಾಗುತ್ತಿತ್ತು. ನಂತರ ಬ್ರಿಟಿಷರ ಕಾಲದಲ್ಲಿ ಈ ಅಕ್ಕಿಯ ವಿಧಗಳು ಕಡಿಮೆಯಾಗುತ್ತಾ ಬಂದವು.

1960ರಲ್ಲಿ 22,500 ಬಗೆಯ ಅಕ್ಕಿಗಳನ್ನ ಬೆಳೆಯಲಾಗುತ್ತಿತ್ತು. ಇಂದು ದೇಶದಲ್ಲಿ 6000 ಬಗೆಯ ಅಕ್ಕಿಗಳನ್ನು ಬೆಳೆಯಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ರೈತರು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಅಕ್ಕಿಗಳನ್ನು ಬೆಳೆಯುತ್ತಾರೆ. ಅವುಗಳ ನಡುವೆ ಸಣ್ಣ ಸಣ್ಣ ಪ್ರಮಾಣದ ವ್ಯತ್ಯಾಸವಿರುತ್ತದೆ. ಅದಕ್ಕೆ ಬೇರೆಯದ್ದೇ ಹೆಸರು ಕೂಡ ಇರುತ್ತದೆ. Different varieties

ವಾಳ್ಯಾ, ಮಲೆನಾಡ ಅಕ್ಕಿ, ಸಣ್ಣಕ್ಕಿ ಹೀಗೆ ಒಂದೊಂದು ಕಡೆ ಒಂದೊಂದು ಬಗೆಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಇವುಗಳನ್ನ ಒಟ್ಟಾರೆಯಾಗಿ ಲೋಕಲ್ ಅಕ್ಕಿ ಎಂದು ಪರಿಗಣಿಸಬಹುದು. ಇದರಲ್ಲಿ ಹಲವು ಕೆಂಪುಬಣ್ಣದಲ್ಲಿದ್ದರೆ ಇನ್ನು ಕೆಲವು ಬಿಳಿ ಬಣ್ಣದ ಅಕ್ಕಿಯಾಗಿರುತ್ತದೆ. ಇನ್ನು ಕೆಲವು ಕೆಂಪು ಮತ್ತು ಬಿಳಿ ಮಿಶ್ರಿತ ಅಕ್ಕಿಯೂ ಇರುತ್ತದೆ.
ನಗರ ಭಾಗದಲ್ಲಿ ಹೆಚ್ಚು ಜನರು ಸೇವಿಸುವ Different varieties

ಅಕ್ಕಿ ಎಂದರೆ ಅದು ಸೋನಾ ಮಸೂರಿ ಅಕ್ಕಿ. ಇದರಲ್ಲೂ ಹಲವು ಬಗೆಯ ಅಕ್ಕಿಗಳು ಇವೆ. ಅದರಲ್ಲಿ ಸ್ಟೀಮ್ ಮತ್ತು ರಾ ರೈಸ್ ತುಂಬಾ ಮುಖ್ಯವಾಗಿವೆ. ಸ್ಟೀಮ್ ರೈಸ್ ಎಂದರೆ ಭತ್ತವನ್ನು ಮೊದಲು ಹವೆಗೆ ಒಳಪಡಿಸಿ ನಂತರ ಮಿಲ್ ಮಾಡಲಾಗುತ್ತದೆ. ಅದೇ ರಾ ರೈಸ್ ಅನ್ನು ಹವೆಗೆ ಒಳಪಡಿಸುವುದಿಲ್ಲ ಅದು ಕಂಪ್ಲೀಟ್ ಹಸಿಯಾಗಿಯೇ ಇರುತ್ತದೆ. ಬಾಸುಮತಿ ಅಕ್ಕಿ ತುಂಬಾ ಉದ್ದವಾದ ಅಕ್ಕಿ.

ಇದನ್ನು ವಿಶೇಷವಾದ ಅಡುಗೆಗಳಾದ ಬಿರಿಯಾನಿ, ಪಲಾವ್ ಗೆ ಬಳಸಲಾಗುತ್ತದೆ. ಇದರಲ್ಲಿ ವಿವಿಧ ಬಗೆಯ ಅಕ್ಕಿಗಳಿವೆ. ಇದರಲ್ಲಿ ಮಾಡಲ್ಪಟ್ಟ ಅನ್ನ ಉದ್ದ ಉದ್ದವಾಗಿ ಇರುತ್ತದೆ. ಜೀರಾ ರೈಸ್ ಗೂ ಒಂದೊಂದು ಕಡೆ ಒಂದೊಂದು ಹೆಸರು ಇದೆ. ಈ ಅಕ್ಕಿ ಪಲಾವ್ ನ ಸ್ಮೆಲ್ ಹೊಂದಿರುತ್ತದೆ ಮತ್ತು ಚಿಕ್ಕ ಚಿಕ್ಕದಾಗಿ ಇರುತ್ತದೆ. ಇದನ್ನು ಸಹ ವಿಶೇಷ ಅಡುಗೆಯಾದ ಬಿರಿಯಾನಿ ಮತ್ತು ಪಲಾವ್ಗೆ ಬಳಸಲಾಗುತ್ತದೆ.

ಯಾವುದೇ ಅಕ್ಕಿಯಾಗಲೀ ಭತ್ತ ಮಿಲ್ಗೆ ಒಳಗಾಗಿ ಪಾಲಿಶ್ ಆಗಿ ಮಾರುಕಟ್ಟೆಗೆ ಬರುವಷ್ಟರಲ್ಲಿ ಹಲವು ಅಕ್ಕಿ ತುಂಡಾಗುತ್ತದೆ, ಅದೇ ನುಚ್ಚಕ್ಕಿ. ಅದನ್ನು ಬೇರ್ಪಡಿಸಿ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಇದನ್ನು ವಿವಿಧ ರೀತಿಯ ತಿಂಡಿ ತಿನಿಸುಗಳಿಗೆ ಬಳಸಲಾಗುತ್ತದೆ. ಇಡ್ಲಿ, ದೋಸೆಗೆ ಎಂತಲೇ ಮಾರುಕಟ್ಟೆಯಲ್ಲಿ ಅಕ್ಕಿ ಸಿಗುತ್ತದೆ. ಇದು ಸ್ವಲ್ಪ ದಪ್ಪವಾಗಿರುತ್ತದೆ. Different varieties

ಇದರಿಂದಲೇ ಹೆಚ್ಚಾಗಿ ಇಡ್ಲಿ ಮತ್ತು ದೋಸೆಯ ಹಿಟ್ಟುಗಳನ್ನು ತಯಾರಿ ಮಾಡಲಾಗುತ್ತದೆ. ಇದರ ಬೆಲೆ ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಕುಚ್ಚಲಕ್ಕಿಯನ್ನು ಬಾಯಲ್ಡ್ ರೈಸ್ ಅಥವಾ ಬೇಯಿಸಿದ ಅಕ್ಕಿ ಎಂದು ಕರೆಯಲಾಗುತ್ತದೆ. ಈ ಅಕ್ಕಿಯ ಭತ್ತವನ್ನು ಮೊದಲಿಗೆ ನೆನಸಿ ನಂತರ ಅರ್ಧಂಬದ್ರ ಬೇಯಿಸಿ ಒಣಗಿಸಲಾಗುತ್ತದೆ.

ನಂತರ ಮಿಲ್ ಮಾಡಲಾಗುತ್ತದೆ. ಕರಾವಳಿ ಭಾಗದಲ್ಲಿ ಎಲ್ಲರೂ ಈ ಅಕ್ಕಿಯನ್ನೇ ಬಳಸುತ್ತಾರೆ. ಜೊತೆಗೆ ಇಡ್ಲಿ ರವೆಯನ್ನು ಕೂಡ ಇದೇ ಅಕ್ಕಿಯಿಂದ ಮಾಡಲಾಗುತ್ತದೆ. ಇದರಲ್ಲಿ ಬಿಳಿ ಮತ್ತು ಕೆಂಪುಬಣ್ಣದ ಅಕ್ಕಿ ಇರುತ್ತದೆ. ರಾಜಮುಡಿ ಅಕ್ಕಿ ಎನ್ನುವುದು ಕಂದು ಮತ್ತು ಕೆಂಪು ಮಿಶ್ರಿತ ಅಕ್ಕಿಯಾಗಿದೆ. ಇದನ್ನು ರಾಜ್ಯದ ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಇದನ್ನು ರಾಯಲ್ ರೈಸ್ ಎಂತಲೇ ಕರೆಯಲಾಗುತ್ತದೆ. ಈ ಹಿಂದೆ ಮೈಸೂರು ಒಡೆಯರಿಗಾಗಿಯೇ ಈ ಅಕ್ಕಿಯನ್ನು ಬೆಳೆಯಲಾಗುತ್ತಿತ್ತು. ಡಯಟ್ ಮಾಡುವವರು ಹೆಚ್ಚಾಗಿ ಬಳಸುವ ಅಕ್ಕಿ ಬ್ರೌನ್ ರೈಸ್. ಇಲ್ಲಿ ಭತ್ತದ ಮೇಲ್ಭಾಗದ ಸಿಪ್ಪೆಯನ್ನು ಮಾತ್ರವೇ ತೆಗೆಯಲಾಗುತ್ತದೆ, ಉಳಿದಂತೆ ಯಾವುದೇ ರೀತಿಯ ಪ್ರೋಸೆಸ್ ಗೆ ಒಳಪಡಿಸುವುದಿಲ್ಲ. ಹೀಗಾಗಿ ಅದರ ಮೇಲ್ಭಾಗ ಬ್ರೌನ್ ಬಣ್ಣದಲ್ಲಿರುತ್ತದೆ.

ಭಾರತದಲ್ಲಿ ಮಣಿಪುರ ಮತ್ತು ತಮಿಳುನಾಡಿನಲ್ಲಿ ಬ್ಲಾಕ್ ರೈಸ್ ಅನ್ನು ಬೆಳೆಯಲಾಗುತ್ತದೆ. ಇದನ್ನು ಪರ್ಪಲ್ ರೈಸ್, ಕಾಲಬಾತಿ ಎಂದು ಕರೆಯಲಾಗುತ್ತದೆ. ಇದರಲ್ಲೂ ಹಲವಾರು ಬಗೆಯ ವಿಧಗಳಿವೆ. ಇದು ಚೀನಾದ ಆಹಾರ ಪದ್ಧತಿಯ ಒಂದು ಭಾಗವಾಗಿದ್ದು, ಮೊದಲೆಲ್ಲಾ ಅಲ್ಲಿನ ರಾಜರು ಬಳಸುತ್ತಿದ್ದರು. ಝಿಜಾನಿಯಾ ಎಂಬ ಜಾತಿಗೆ ಸೇರಿದ ಹುಲ್ಲಿನಿಂದ ಕಾಡುಅಕ್ಕಿ Different varieties

ಅಥವಾ ವೈಲ್ಡ್ ರೈಸ್ ಅನ್ನು ಬೆಳೆಯಲಾಗುತ್ತದೆ. ಉತ್ತರ ಅಮೇರಿಕಾ ಮತ್ತು ಚೀನಾದಲ್ಲಿ ಇದನ್ನು ಸಂಗ್ರಹಿಸಿ ಬಳಸಲಾಗುತ್ತದೆ. ಉತ್ತರ ಅಮೇರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅಕ್ಕಿಯ ಜೊತೆಗೆ ಈ ಹುಲ್ಲಿನ ದಂಟು ಮತ್ತು ಕಾಂಡವನ್ನು ತರಕಾರಿ ರೂಪದಲ್ಲಿ ಅಡುಗೆಯ ರೂಪದಲ್ಲಿ ಬಳಸಲಾಗುತ್ತದೆ.
ಬಿದಿರು 40 50 ವರ್ಷಗಳ ಕಾಲ ಜೀವಂತವಾಗಿರುತ್ತದೆ.

ಕೊನೆಯಲ್ಲಿ ಹೂ ಬಿಟ್ಟು ಅಕ್ಕಿ ಉತ್ಪಾದನೆಯಾಗುತ್ತದೆ. ಇದನ್ನೇ ಬಿದಿರಕ್ಕಿ ಎಂದು ಹೇಳಲಾಗುತ್ತದೆ. ಇದು ನೋಡಲು ಸಾಮಾನ್ಯ ಭತ್ತದಂತೆ ಇರುತ್ತದೆ. ಇದರಿಂದ ಅಕ್ಕಿಯನ್ನು ತೆಗೆಯಲಾಗುತ್ತದೆ. ಇದು ತುಂಬಾ ಅಪರೂಪಕ್ಕೆ ಸಿಗುವುದರಿಂದ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಆದಾಯದ ಮೂಲವಾಗಿದೆ. ಈ ಅಕ್ಕಿಯ ರುಚಿಯು ಸಾಮಾನ್ಯ ಅಕ್ಕಿಗಿಂತ ಸಿಹಿಯಾಗಿರುತ್ತದೆ.

Leave A Reply

Your email address will not be published.