Ultimate magazine theme for WordPress.

Gourd Bottle ಸೋರೆಕಾಯಿ ನೀವು ತಿನ್ನುತ್ತಿದ್ದೀರಾ ?

0 4,801

Gourd Bottle Are You Eating Gourd Bottle ತಿಳಿಹಸಿರು ಬಣ್ಣದ ಸೋರೆಕಾಯಿ ಶೇ 96ರಷ್ಟು ನೀರು ತುಂಬಿಕೊಂಡಿರುತ್ತದೆ. ಒಳಗಡೆ ಬಿಳಿಭಾಗದ ಬೀಜಗಳಿರುತ್ತವೆ. ಬೀಜಗಳನ್ನು ಬಿಟ್ಟು ಸೋರೆಕಾಯಿಯನ್ನು ನಾವು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯ ಅತ್ಯುತ್ತಮವಾಗಿರುತ್ತದೆ.

ಯಾಕೆ ಅನ್ನುತ್ತೀರ ಸೋರೆಕಾಯಿಯಲ್ಲಿರುವ ಖನಿಜ, ಲವಣ, ವಿಟಮಿನ್‌ ದೇಹಕ್ಕೆ ಬೇಕಾಗಿರುವ ರೂಪದಲ್ಲಿ ಸಿಗುತ್ತವಂತೆ ಇದರಲ್ಲಿ ಸಾಕಷ್ಟು ನಾರಿನಾಂಶ ಹೊಂದಿದ್ದು ಸೋರೆಕಾಯಿಯಲ್ಲಿ ವಿಟಮಿನ್‌ ಸಿ, ಇ, ಸೋಡಿಯಂ, ಜಿಂಕ್‌ ಮತ್ತು ಕಬ್ಬಿಣಾಂಶ ಸಂಮೃದ್ಧವಾಗಿರುತ್ತಿದ್ದು ಇದು ಹೊಟ್ಟೆ ಹೋಗಿದ ತಕ್ಷಣ ಈ ಪೌಷ್ಠಿಕಾಂಶಗಳು ರಕ್ತಕ್ಕೆ ಸೇರುವ ರೂಪದಲ್ಲಿ ಇರುತ್ತವಂತೆ Gourd Bottle

ಆದ್ದರಿಂದ ಇದನ್ನು ಯಾರು ಬೇಕಾದರೂ ತಿಂದು ಸುಲಭವಾಗಿ ಅರಗಿಸಿಕೊಳ್ಳುವಂತಹ ತರಕಾರಿ. ಇನ್ನು ಆದಿಮಾನವ ಬಳಸಲು ಶುರು ಮಾಡಿದ ತರಕಾರಿಗಳಲ್ಲಿ ಇದು ಒಂದು ಎಂತಲೂ ಹೇಳಬಹುದು. ಮೂಲವಾಗಿ ಇದು ಆರಂಭವಾಗಿದ್ದು ಆಪ್ರಿಕಾದಲ್ಲಿ ಅಂದರೆ ಆಫ್ರಿಕಾದಲ್ಲಿ ಈ ಸೋರೆಕಾಯಿಯ ಬೆಳೆಯನ್ನು ಬೆಳೆಯುತ್ತಿದ್ದರೂ ಎಂದು ಹೇಳಲಾಗುತ್ತದೆ. Gourd Bottle

ಇನ್ನು ಸೋರೆಕಾಯಿ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು ಒಂದು ಸೋರೆಕಾಯಿ ಒಂದನ್ನು ತುರಿದು ರಸಹಿಂಡಿ ನಿಂಬೆರಸದೊಂದಿಗೆ ಕುಡಿದರೆ ಎಷ್ಟೋ ರೋಗಗಳು ಕಡಿಮೆಯಾಗುತ್ತದೆ. ತುಂಬಾ ಬೇದಿ ವಾಂತಿ ಆದಾಗ ಸುಸ್ತು, ದಾಹ, ಈ ಜ್ಯೂಸ್‌ನಿಂದ ಕಡಿಮೆಯಾಗುತ್ತದೆ. ದೇಹಕ್ಕೆ ತುಂಬ ಉಷ್ಣ ಆಗಿದ್ದು ಉರಿಮೂತ್ರ ಆದಾಗ ಇಂತಹ ಜ್ಯೂಸ್‌ ಕುಡಿಯುವುದರಿಂದ ಬಹುಬೇಗ ಕಡಿಮೆಯಾಗುತ್ತದೆ.

ಉರಿ ಮತ್ತು ಸುಸ್ತು ಕೂಡ ಕಡಿಮೆಯಾಗುತ್ತದೆ. ಇನ್ನು ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸೋರೆಕಾಯಿ ತಿನ್ನುವುದರಿಂದ ಕಡಿಮೆಯಾಗುತ್ತದೆ. ಹೊಟ್ಟೆ ನೋವು ಅಜೀರ್ಣ, ಅಲ್ಸರ್‌ ಸೋರೆಕಾಯಿ ತಿನ್ನುವುದರಿಂದ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಫೈಲ್ಸ್‌ ನಂತಹ ರೋಗಗಳು ಕಡಿಮೆಯಾಗುತ್ತವೆ. ಮುಖ್ಯವಾಗಿ ಫಿಡ್ಸ್‌ ಮತ್ತು ಹುಚ್ಚು ಅಥವಾ Gourd Bottle

ಇನ್ನು ಯಾವುದೇ ನರಕ್ಕೆ ಸಂಬಂಧಪಟ್ಟ ತೊಂದರೆ ಕಾಡುತ್ತಿದ್ದರೆ ಸೋರೆಕಾಯಿ ಉಪಯೋಗಿಸುವುದು ಅತ್ಯುತ್ತಮ ಎಂದು ಹೇಳಲಾಗುತ್ತದೆ. ಇನ್ನು ಸೋರೆಕಾಯಿಯಲ್ಲಿರುವ ಪೋಷಕಾಂಶಗಳ ಬಗ್ಗೆ ಕೇಳಿದರೆ ನಿಜವಾಗಲೂ ನೀವು ಆಶ್ಚರ್ಯಪಡುತ್ತೀರ. ಇದರಿಂದ ವಿಟಮಿನ್‌ ಸಿ ಅಧಿಕವಾಗಿದ್ದು, ವಿಟಮಿನ್‌ ಬಿ, ಸೋಡಿಯಂ, ಪೊಟಾಸಿಯಂ, ಜಿಂಕ್‌ ಮತ್ತುಆಂಟಿಆಕ್ಸಿಡೆಂಟ್‌ಗಳು ಸಂಮೃದ್ಧಿಯಾಗಿವೆ.

ಪ್ರತಿಸಲ ಈ ಸೋರೆಕಾಯಿಯ ರಸ ಕುಡಿಯುವುದರಿಂದ ಬಹಳಷ್ಟು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಮೂಗಿನಲ್ಲಿ ರಕ್ತ ಬರುವ ಸಮಸ್ಯೆಯನ್ನು ಸೋರೆಕಾಯಿಯ ರಸ ಕಡಿಮೆ ಮಾಡುತ್ತದೆ. ಹಸಿ ಶುಂಠಿಯ ರಸ ಬೆರೆಸಿ ಕುಡಿಯುವುದು ಬಹಳ ಜನರಿಗೆ ಗೊತ್ತಿರುವ ಒಂದು ಟ್ರೀಟ್‌ಮೆಂಟ್‌, ಇನ್ನು ಶುಗರ್‌ ಕಂಟ್ರೋಲ್‌ ಬರುವುದಲ್ಲದೇ ಶರೀರದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಇನ್ನು ಅಷ್ಟೇ ಹೃದಯಕ್ಕೆ ತುಂಬಾ ಉಪಯುಕ್ತ ತರಕಾರಿ. ಗರ್ಭಿಣಿ ಸ್ತ್ರೀಯರು ಸೇವಿಸುವುದರಿಂದ ಗರ್ಭಿಣಿಯರಿಗು ಮತ್ತು ಗರ್ಭದಲ್ಲಿರುವ ಶಿಶುವಿಗೆ ಉತ್ತಮವಾದ ತರಕಾರಿ ಎಂದು ಹೇಳಲಾಗುತ್ತದೆ. ಇದು ಶಿಶುವಿನ ಬೆಳೆವಣಿಗೆಗೆ ಬೇಕಾಗಿರುವ ವಿಟಮಿನ್‌ ಮಿನರಲ್‌ ಆಂಟಿ ಆಕ್ಸಿಡೆಂಟ್ಸ್‌ಗಳು, ಫೈಬರ್‌ಅನ್ನು ನೀಡುತ್ತದೆ. ಅಷ್ಟೇ ಅಲ್ಲದೇ ಶಿಶುವಿನ ಬಲವರ್ಧನೆಗೆ Gourd Bottle

ಬೇಕಾಗಿರುವ ಫೋಲಿಕ್‌ ಆಮ್ಲ ಇರುವುದರಿಂದ ಬ್ರೈನ್‌ ಡೆವಲ್ಪ್ಮೆಂಟ್‌ ಗೆ ಸಹಾಯವನ್ನು ಒದಗಿಸುತ್ತದೆ. ಅದಲ್ಲದೆ ಇದರಲ್ಲಿರುವ ಐರನ್‌, ಮ್ಯಾಗ್ನೇಷಿಯಂ, ಜಿಂಕ್‌ ನಾರ್ಮಲ್‌ ಡೆಲಿವರಿಯಾಗುವಂತೆ ಗರ್ಭಿಣಿಗೆ ಸಹಾಯ ಮಾಡುತ್ತದೆ. ಇನ್ನು ಹೆಚ್ಚಾಗಿ ಮಗುವಿಗೆ ಯಾವುದೇ ಅಡ್ಡಿ ಆತಂಕ ಪಡಿಸದೇ ಸುಖಪ್ರಸವವಾಗುತ್ತದೆ. ಸಾಮಾನ್ಯವಾಗಿ ನಿದ್ರಾಹೀನತೆ ಬಳಲುತ್ತಿರುವವರು ರಾತ್ರಿ ಹೊತ್ತು

ಈ ಸೋರೆಕಾಯಿಯ ರಸವನ್ನು ಕುಡಿಯುವುದರಿಂದ ಸುಖನಿದ್ರೆಯನ್ನು ಹೊಂದಬಹುದು. ಇನ್ನು ಇಲ್ಲಿ ಅಂದರೆ ಎಳ್ಳೆಣ್ಣೆಯಲ್ಲಿ ಈ ಸೋರೆಕಾಯಿಯ ರಸವನ್ನು ಹಾಕಿ ತಲೆಗೆ ಮಸಾಜ್‌ ಮಾಡಿಕೊಳ್ಳುವುದರಿಂದ ಸುಖನಿದ್ರೆ ಬರುತ್ತದೆಂದು ಹೇಳಲಾಗುತ್ತದೆ. ಇನ್ನು ದಂತ ಎಲುಬುಬಳಿಗೆ ಇದು ಸ್ಟ್ರಾಂಗ್‌ ಮಾಡುತ್ತದೆ. ಇದರಲ್ಲಿ ಮೆಗ್ನೇಷಿಯಂ, ಪಾಸ್‌ಪರಸ್‌, ಜಿಂಕ್‌ ಕಾಪರ್‌,

ಮ್ಯಾಂಗನೇಟ್‌ ಮೂಳೆಗಳನ್ನು ಉಕ್ಕಿನಂತೆ ತಯಾರಿಸುತ್ತದೆ. ಸೋರೆಕಾಯಿ ರಸ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಪ್ರಶಾಂತತೆಯನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ ಕಿಡ್ನಿಗಳಿಗೆ ಒಳ್ಳೆಯ ಆರೋಗ್ಯ ನೀಡುವುದಲ್ಲದೆ ಕಿಡ್ನಿ ಸರಿಯಾಗಿ ಕೆಲಸ ಮಾಡುವಂತೆ ಇದರಲ್ಲಿನ ಅಧಿಕ ನೀರು ಸಹಾಯ ಮಾಡುತ್ತದೆ. ಯಾರಾದರೂ ಯೂರಿನಲ್‌ ಇನ್ಫ್ವೆಕ್ಷನ್ಸ್‌ನಿಂದ ಬಳಲುತ್ತಿದ್ದರೆ ಅಂತಹವರು Gourd Bottle

ಸೋರೆಕಾಯಿಯ ರಸವನ್ನು ಹೆಚ್ಚು ಬಳಸುವುದರಿಂದ ಬಹುಬೇಗ ಇದರಿಂದ ಹೊರಬರಬಹುದು. ಶರೀರದಲ್ಲಿರುವ ವ್ಯರ್ಥ ಪದಾರ್ಥಗಳನ್ನು ಹೊರ ಹಾಕಲು ಇದು ಬಹಳ ಸಹಾಯಕಾರಿ. ಹೊಟ್ಟೆಯಲ್ಲಿರುವ ಉರಿ ಸಮಸ್ಯೆ ಇರುವವರು ಹೆಚ್ಚು ಸೋರೆಕಾಯಿ ತಿನ್ನುವುದರಿಂದ ಬಹು ಬೇಗ ಉರಿ ಕಡಿಮೆಯಾಗುತ್ತದೆ. ಇನ್ನು ಜ್ಯಾಂಡಿಸ್‌, ಈ ಜ್ಯಾಂಡಿಸ್‌ ರೋಗವನ್ನು ಕಡಿಮೆ ಮಾಡಲು ಸೋರೆಕಾಯಿ ಅತ್ಯುತ್ತಮ.

ಲಿವರ್‌ ಫಂಕ್ಷನ್‌ ಸರಿಯಾಗಿರಲು ಉತ್ತಮ ಆಹಾರವೆನ್ನಬಹುದು. ಮಲಬದ್ಧತೆ ಸಮಸ್ಯೆ ಮಲಮೂತ್ರ ವಿಸರ್ಜನೆ ತೊಂದರೆ ಇದ್ದಲ್ಲಿ ಸೋರೆಕಾಯಿಯ ರಸವನ್ನು ಹೆಚ್ಚು ಸೇವಿಸುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇನ್ನು ಇದರಲ್ಲಿ ವಿಟಮಿನ್‌ ಸಿ, ಜಿಂಕ್‌ ಹೆಚ್ಚಾಗಿರುವುದರಿಂದ ಶರೀರದ ಮೇಲೆ, ಮುಖದ ಮೇಲೆ ಹಚ್ಚುವುದರಿಂದ ಮೊಡವೆಗಳು, ಕಪ್ಪುಮಚ್ಚೆಗಳು ತೊಲಗಿ ಹೋಗುತ್ತವೆ.

ಇನ್ನು ಸೋರೆಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅದರಲ್ಲಿರುವ ನೀರಿನಾಂಶದಿಂದ ತೂಕ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ, ಜೀವಕ್ರಿಯೆ ವೇಗವಂತವಾಗುತ್ತದೆ. ಇನ್ನು ಅಷ್ಟೇ ಅಲ್ಲದೇ ಸೋರೆಕಾಯಿಯ ರಸದಿಂದ ಅಧಿಕ ರಕ್ತದೊತ್ತಡವನ್ನು ನಾವು ನಿಯಂತ್ರಿಸಿಕೊಳ್ಳಬಹುದು. ಹೃದಯಕ್ಕೆ ಸಂಬಂಧಪಟ್ಟ ಯಾವುದೇ ವ್ಯಾದಿಗಳು ಬರದಂತೆ ರಕ್ಷಣೆ ನೀಡುತ್ತದೆ. ಹೀಗೆ ಸೋರೆಕಾಯಿ ತರಕಾರಿಯ ಆರೋಗ್ಯ ರಹಸ್ಯ.

Leave A Reply

Your email address will not be published.