Ultimate magazine theme for WordPress.

Eat Gulkand ವಾರಕ್ಕೆ ಒಂದು ಬಾರಿ ಗುಲ್ಕನ್ ತಿಂದರೆ ಏನಾಗುತ್ತೆ

0 6,140

Eat Gulkand health tips in kannadatopten ಗುಲ್ಕನ್‌ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ದೇಹವನ್ನು ತಂಪುಮಾಡಲು ಗುಲ್ಕನ್‌ ತಿನ್ನುವುದರಿಂದ ತುಂಬಾ ಒಳ್ಳೆಯದು. ತಿನ್ನಲು ರುಚಿ, ದೇಹಕ್ಕೆ ತಂಪು ನೀಡಬಲ್ಲದು. ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯಕರವಾದ ಜಾಮ್. ಗುಲ್ಕನ್‌ಅನ್ನು ನಿಯಮಿತವಾಗಿ ಸೇವಿಸುವುದರಿಂದ

ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು. ಕೆಲವರು ಬಾಯಿಯ ಅಲ್ಸರ್‌ ನಿವಾರಿಸಲು ಬಳಸುತ್ತಾರೆ. ಇದು ರಕ್ತ ಶುದ್ಧಿ ಮಾಡಿ ಚರ್ಮದಲ್ಲಿ ಸುಕ್ಕು, ಮಡಿವೆ, ಕಪ್ಪುಕಲೆಗಳು ಮೂಡದ ಹಾಗೆ ನೋಡಿಕೊಳ್ಳುತ್ತದೆ. ಹಾಗೆ ಆರಿಸಿದ ತಾಜಾ ಗುಲಾಬಿ ಎಲೆಗಳನ್ನ ಅಂದರೆ ಎಸಳುಗಳನ್ನ ತೆಗೆದುಕೊಂಡು ಅದಕ್ಕೆ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ ಗುಲ್ಕನ್‌ ತಯಾರಿಕೆಯಲ್ಲಿ ಶುಂಠಿಯನ್ನು ತಪ್ಪದೇ ಬಳಸುತ್ತಾರೆ. Eat Gulkand

ಇಂತಹ ಗುಲ್ಕನ್‌ ಪ್ರತಿನಿತ್ಯ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ದೂರವಿರಬಹುದು. ಜೊತೆಗೆ ದೇಹವನ್ನು ತಂಪಾಗಿಸುತ್ತದೆ. ಇದೊಂದು ಒಳ್ಳೆ ಆಂಟಿ ಆಕ್ಸಿಡೆಂಟ್‌ ಹೀಗಾಗಿ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡಲು ಸಹಕಾರಿಯಾಗಿದೆ. ಗುಲ್ಕನ್‌ ಶೀತ ಪದಾರ್ಥ ಆದ್ದರಿಂದ ಕೈಕಾಲು ಉರಿ, ನಿಶ್ಯಕ್ತಿ ಈ ತರಹದ ನೋವನ್ನು ಕಡಿಮೆ ಮಾಡುತ್ತದೆ.

ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಶಮನ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್‌ ಸೇವಿಸುವುದರಿಂದ ಬಹಳಷ್ಟು ಉತ್ತಮ ಎಂದು ಹೇಳಬಹುದು. ಗುಲ್ಕನ್‌ ದೇಹದಲ್ಲಿರುವ ರಕ್ತವನ್ನು ಶುದ್ಧೀಕರಿಸುವುದಲ್ಲದೇ ಅಶಕ್ತಿಯನ್ನು ದೂರಮಾಡುವಂತದ್ದು ಗುಲ್ಕನ್‌ ದೇಹದಲ್ಲಿನ ಅನಾವಾಶ್ಯಕ ಅಂಶಗಳನ್ನು ಹೊರ ಹಾಕುತ್ತದೆ. Eat Gulkand

ಬೇಸಿಗೆ ಕಾಲದಲ್ಲಿ ಗುಲ್ಕನನ್ನು ಸೇವಿಸುವುದರಿಂದ ಉಷ್ಣ ಅಥವಾ ಮೂಗಿನಲ್ಲಿ ರಕ್ತಬರುವುದನ್ನು ತಡೆಗಟ್ಟಬಹುದು. ಫೈಬರ್‌ ಅಂಶವನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ನನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರವಾಗುತ್ತದೆ. ನರಮಂಡಲವನ್ನು

ಒಳ್ಳೆ ಸ್ಥಿತಿಯಲ್ಲಿಡಲು ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಮನೆಯಿಂದ ಹೊರಗೆ ಹೋಗುವಾಗ ಮುಂಚೆ ಎರಡು ಚಮಚ ಗುಲ್ಕನ್‌ ತಿಂದು ಹೊರಟರೆ ಸನ್‌ಸ್ಟ್ರೋಕ್‌ ಆಗುವುದನ್ನ ತಪ್ಪಿಸಿಕೊಳ್ಳಬಹುದು. ಹೀಗೆ ಗುಲ್ಕನ್‌ ಹಲವು ಬಗೆಯಲ್ಲಿ ಪ್ರಯೋಜನಕಾರಿಯಾಗಿದೆ. Eat Gulkand

Leave A Reply

Your email address will not be published.