Ultimate magazine theme for WordPress.

Watermelon ಕಲ್ಲಂಗಡಿ ಹಣ್ಣು ನೀವು ತಿನ್ನುತ್ತಿದ್ದೀರಾ ?

0 343

Watermelon Are You Eating Watermelon healthtips in kannadatopten ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು. ಇದನ್ನು ಅತೀ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಅಷ್ಟೇ ಅಲ್ಲದೇ ಫ್ರೂಟ್‌ ಸಲಾಡ್ ಮಾಡಿ ತಿನ್ನುತ್ತಾರೆ. ಆದರೆ ಕಲ್ಲಂಗಡಿ ಸೇವನೆ ಮಾಡುವುದರಿಂದ ಎಷ್ಟೊಂದು ಲಾಭವಿದೆ ಎಂದು ತಿಳಿದಿರುವುದಿಲ್ಲ. ಕಲ್ಲಂಗಡಿಯಲ್ಲಿ ಕ್ಯಾಲ್ಸಿಯಂ, ಮೆಗ್ನೇಷಿಯಂ, ಸಸಾರಜನಕ, ಕಬ್ಬಿಣ ನಿಡಾನ್‌ ವಿಟಮಿನ್‌ ಸಿ ಇದೆ.

ಆದ್ದರಿಂದ ಇದು ಉತ್ತಮ ಆರೋಗ್ಯ ನೀಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ಆರೋಗ್ಯದ ಗುಣಗಳು ಏನು ಎಂದು ನೋಡೋಣ ಇದರಲ್ಲಿ ವಿಟಮಿನ್‌ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಎಲೋಕ್ಟ್ರೋಲೈನ್‌ ಇದ್ದು ದೇಹಕ್ಕೆ ಸೇರಿ ಎಮಿನೋ ಆಸಿಡ್‌ ಆಗಿ ಪರಿವರ್ತನೆಯಾಗುತ್ತದೆ. Watermelon

ಎಮಿನೋ ಆಸಿಡ್‌ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ. ಇದರಲ್ಲಿ ಫಾಲಿಕ್‌ ಇರುವುದರಿಂದ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಹಣ್ಣು ತಿಂದರೆ ಹಲ್ಲು ಮತ್ತು ಒಸಡುಗಳು ಬಲವಾಗುತ್ತವೆ. ಕೆಲವರಿಗೆ ವಸಡುಗಳಲ್ಲಿ‌ ರಕ್ತ ಬರುತ್ತದೆ. ಈ ಹಣ್ಣು ತಿನ್ನುವುದರಿಂದ ವಸಡುಗಳು ಬಲವಾಗಿ ಹಲ್ಲು ಉಜ್ಜುವಾಗ ರಕ್ತ ಬರುವುದಿಲ್ಲ.

ಇದರಲ್ಲಿ ಫಾಲಿಕ್‌ ಆಸಿಡ್‌ ಅಧಿಕವಾಗಿ ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರ. ಅಷ್ಟೇ ಅಲ್ಲದೇ ಖನಿಜಾಂಶಗಳು ಹೆಚ್ಚಾಗಿರುವುದರಿಂದ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಇದನ್ನು ಪ್ರತಿದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಕಿನ್ನತೆ ಮಾಯಾವಾಗುತ್ತದೆ. ಕಲ್ಲಂಗಡಿ ತಿನ್ನುವುದರಿಂದ ರಕ್ತ ಸಂಚಾರ ನಡೆಯುವಂತೆ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. Watermelon

ಇದರಲ್ಲಿ ನೀರಿನ ಅಂಶ ಅಧಿಕವಾಗಿರುವುದರಿಂದ ತೆಳ್ಳಗಾಗಲು ಡಯಟ್‌ ಮಾಡುವವರು ಒಂದು ಹೊತ್ತು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ಇದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುತ್ತದೆ. ತೂಕವು ಕಡಿಮೆಯಾಗುತ್ತದೆ.

ಇನ್ನು ಕಾಲು ಊದುವ ಸಮಸ್ಯೆ ಇರುವವರಿಗೆ ಪ್ರತಿದಿನ ಒಂದು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ನೀರಿನ ಅಂಶ ಅಧಿಕವಾಗಿರುವುದರಿಂದ ದೇಹವನ್ನ ಕ್ಲೆನ್ಸ್‌ ಮಾಡುತ್ತದೆ. ಇದು ನೆರೆಗೆ ಬರುವುದನ್ನು ತಡೆಗಟ್ಟಿ ತಾರುಣ್ಯದ ಚೆಲುವನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಕಬ್ಬಿಣದ ಅಂಶ,

ಮ್ಯಾಗ್ನೀಷಿಯಂ, ಕ್ಯಾಲ್ಸಿಯಂ, ಸತು, ಪೊಟಾಷಿಯಂ, ಅಯೋಡಿನ್‌ ಹೆಚ್ಚಾಗಿರುವುದರಿಂದ ಮೂಳೆಗಳನ್ನ ಬಲವಾಗಿಸುತ್ತದೆ. ಇದರಿಂದ ಸಂಧಿನೋವು ಉಂಟಾಗುವುದಿಲ್ಲ. ತುಂಬಾ ಸುಸ್ತಾದಾಗ ಕಲ್ಲಂಗಡಿ ಹಣ್ಣು ತಿಂದು ನೋಡಿ ದೇಹದಲ್ಲಿ ಚೈತನ್ಯ ಹೆಚ್ಚಿ ಸುಸ್ತು ಮಾಯವಾಗುತ್ತದೆ. ಇದರಲ್ಲಿ ವಿಟಮಿನ್‌ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. Watermelon

ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ಇದು ತಡೆಯುತ್ತದೆ. ಇದರಲ್ಲಿ ವಿಟಮಿನ್‌ ಅಂಶ ಅಧಿಕವಾಗಿದ್ದು ಬೇಸಿಗೆ ದಿನದಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆಗೆ ರಕ್ಷಣೆಯನ್ನು ಮಾಡುವುದಲ್ಲದೇ ಗಾಯವಾಗಿದ್ದರೇ ಬೇಗನೆ ಒಣಗಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌

ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ಪ್ಲೆವಲಾಯನ್ಡ್‌ ಲೈಕೋಪೇನೆ ಬೀಟಾಕೆರೋಟಿನ್‌ ಇನ್ನು ಮುಂತಾದ ಅಂಶಗಳಿವೆ. ಈ ಹಣ್ಣಿನಲ್ಲಿ ಸಿಟ್ರೋಲೈನ್‌ ಅಧಿಕವಿದ್ದು ಇದು ದೇಹದಲ್ಲಿ ನೈಟ್ರಿಕ್‌ ಆಸಿಡ್‌ ಉತ್ಪತ್ತಿಗೆ ಸಹಾಯ ಮಾಡುತ್ತದೆ. ನೈಟ್ರಿಕ್‌ ಆಸಿಡ್‌ ರಕ್ತನಾಳಗಳಿಗೆ ವಿಶ್ರಾಂತಿ ನೀಡುವುದಲ್ಲದೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಷ್ಟೆಲ್ಲಾ ಉಪಯೋಗಯುಕ್ತವಾಗಿರುವ ಈ ಹಣ್ಣನ್ನು ತಿನ್ನುವುದನ್ನ ಮರೆಯಬೇಡಿ.

Leave A Reply

Your email address will not be published.