Ultimate magazine theme for WordPress.

lakshmi ಈ ಸಮಯದಲ್ಲಿ ಮಾತ್ರ ಕಸಗುಡಿಸಿ 

0 9,490

lakshmi dhan akarshan in astrology kannada ಯಾವ ಸಮಯದಲ್ಲಿ ಮನೆಯಲ್ಲಿ ಕಸ ಗುಡಿಸಿದರೆ ಶ್ರೀಮಂತಿಕೆ ಬರುತ್ತೆ ಗೊತ್ತಾ ಲಕ್ಷ್ಮಿ ಮನೆಯ ಒಳಗಡೆ ನಡೆದು ಬರುತ್ತಾಳೆ. ಅದೃಷ್ಟ ಖುಲಾಯಿಸುತ್ತದೆ. ಅಂತಹ ಕುತೂಹಲಕಾರಿ ಮತ್ತು ರಹಸ್ಯ ಸಂಗತಿಗಳನ್ನು ತಿಳಿಸಿಕೊಡುತ್ತೇನೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಪೊರಕೆ ಇರುತ್ತೆ. ಪೊರಕೆ ಇಲ್ಲದ ಮನೆ ಇಲ್ಲ ಅಂದರೆ ಅತಿಶಯೋಕ್ತಿಯೇನಲ್ಲ.

ಏಕೆಂದರೆ ಪ್ರತಿಯೊಬ್ಬರು ಸದಾ ಸ್ವಚ್ಛತೆಯನ್ನು ಬಯಸುತ್ತಾರೆ. ಮನೆಯನ್ನು ಸ್ವಚ್ಛವಾಗಿಡುವುದಕ್ಕೆ ಪ್ರತಿದಿನ ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಅಂದರೆ ವಾಸ್ತುಪ್ರಕಾರ ಮನೆಯನ್ನು ಗುಡಿಸೋಕೆ ವಿಶೇಷ ಸಮಯವಿದೆ. ಆ ಸಮಯದಲ್ಲಿ ಕಸಗುಡಿಸಿದರೆ ಮಾತ್ರ ಶ್ರೀಮಂತಿಕೆ ಬರುತ್ತದೆ ಎಂಬ ರಹಸ್ಯ ಹಲವಾರು ಜನರಿಗೆ ತಿಳಿದಿಲ್ಲ. ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ಬಹಳ ಮಹತ್ತ್ವವಿದೆ. lakshmi

ಪ್ರತಿ ಮಹಿಳೆಯು ಪ್ರತಿದಿನ ಬೆಳಿಗ್ಗೆ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುತ್ತಾರೆ. ಈಗಂತು ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುತ್ತಾರೆ. ಬೆಳಿಗ್ಗೆ ಸಂಜೆ ಬಿಡುವೇ ಇರುವುದಿಲ್ಲ. ಹೀಗಾಗಿ ರಾತ್ರಿವೇಳೆ ಪೊರಕೆ ಇಡಿದು ಕಸಗುಡಿಸುತ್ತಾರೆ. ಯಾರು ಕೂಡ ರಾತ್ರಿ ಹೊತ್ತು ಮನೆ ಸ್ವಚ್ಛ ಮಾಡಬಾರದು. ಹೀಗೆ ಮಾಡಿದರೆ ಸಮಸ್ಯೆಗಳು ತಪ್ಪಿದ್ದಲ್ಲ ಹೇಳುತ್ತಾರೆ ವಾಸ್ತುತಜ್ಞರು.

ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಪೊರಕೆಯನ್ನು ಲಕ್ಷ್ಮಿದೇವಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಲಕ್ಷ್ಮಿದೇವಿಗೆ ಇಂತಹ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ ಇನ್ನು ಸಮಯ ಅಥವಾ ಸಂದರ್ಭವಿಲ್ಲದೇ ಗುಡಿಸುವುದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆಂದು ಹಿರಿಯರು ಹೇಳುತ್ತಾರೆ. ವಾಸ್ತುಶಾಸ್ತ್ರ ಸೂಚಿಸಿದ ಸಮಯದಲ್ಲಿ ಮಾತ್ರ ಮನೆಯ ಕಸ ಗುಡಿಸಬೇಕು ಎಂಬುದು ತಜ್ಞರ ಮಾತು. lakshmi

ಮೊದಲಿಗೆ ಮುಖ್ಯಬಾಗಿಲಿನಿಂದ ಮನೆಯನ್ನು ಸ್ವಚ್ಛಗೊಳಿಸಿ ತಾಯಿ ಲಕ್ಷ್ಮಿ ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಒಳ ಮನೆಯಿಂದ ಮುಖ್ಯದ್ವಾರದ ಮೂಲಕ ಹೊರಕೆ ಹಾಕುತ್ತೇವೆ. ಆದರೆ ಲಕ್ಷ್ಮಿಯನ್ನ ಮೆಚ್ಚಿಸೋಕೆ ಬಯಸಿದರೆ ನಿಮ್ಮ ಮನೆಯ ಮುಖ್ಯದ್ವಾರದಿಂದ ಆರಂಭಿಸಿ ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು. ಅದೇ ರೀತಿ ಹಣದ ಹೊಳೆ ಹರಿಯಬೇಕು ಅಂದರೆ ಹೀಗೆ ಮಾಡಿ

ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ಉಳಿಯುತ್ತಾಳೆಂಬ ನಂಬಿಕೆ ಇದೆ. ಹಾಗಾಗ್ಗಿಯೇ ಪ್ರತಿದಿನ ಮನೆಯನ್ನ ಸ್ವಚ್ಛಗೊಳಿಸಬೇಕು. ಮನೆಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡಬೇಕು. ಕಾಲಿಗೆ ಸಿಕ್ಕುವಂತೆ ಕಸವೆಸಿಯಬಾರದು. ಮನೆಯು ಚೊಕ್ಕವಾಗಿದ್ದರೆ ಮನೆಯ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಮನೆಯಲ್ಲಿ ಸದಾ ಹಣ ತುಂಬಿರುತ್ತದೆ. ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಪ್ರತಿ ಮೂಲೆಯನ್ನು ಸ್ವಚ್ಛಗೊಳಿಸಿ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಪೀಠೋಪಕರಣಗಳು, ಸೋಫಾಗಳು, ಹಾಸಿಗೆಗಳು ಸಹ ಕಾಲಕಾಲಕ್ಕೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮನೆಯ ಮೂಲೆಗಳಲ್ಲಿ ದೇವರು ಮತ್ತು ದೇವತೆಗಳು ನೆಲೆಸಿದ್ದಾರೆಂದು ನಂಬಲಾಗಿದೆ. lakshmi

ಆದ್ದರಿಂದ ಮೂಲೆ ಮೂಲೆಗಳಲ್ಲೂ ಕೂಡ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಮನೆಯ ಸ್ನಾನ ಗೃಹ ಮತ್ತು ಬಾಲ್ಕನಿಯನ್ನು ಸ್ವಚ್ಛಗೊಳಿಸಬೇಕು. ನಿಮ್ಮ ಸ್ನಾನಗೃಹವು ಕೊಳಕ್ಕಾಗಿದ್ದರೆ ರಾಹು ತೊಂದರೆಗಳಾಗುವುದು ಕೆಟ್ಟ ಸ್ಥಿತಿಯಲ್ಲಿರುವ ರಾಹು ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೇ ಚಾವಣಿಯ ಮೇಲೆ ಕೊಳಕು ಯಾವುದೇ ರೀತಿಯ ಕಪ್ಪಾಗಿದ್ದರೇ ಲಕ್ಷ್ಮಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.

ಮನೆ ಕೊಳಕಾಗಿದ್ದರೆ ವಾಸ್ತುದೋಷ ನಿಮ್ಮನ್ನು ಕಾಡುತ್ತದೆ. ಸೂರ್ಯಾಸ್ತದ ನಂತರ ಕಸ ಗುಡಿಸಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಅಂದರೆ ಸಂಜೆ 6 ಗಂಟೆಯ ನಂತರ ಕಸ ಗುಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಸಂಜೆ ದೀಪ ಹಚ್ಚುವ ವೇಳೆ ಲಕ್ಷ್ಮಿ ಮನೆಗೆ ಬರುವ ಹೊತ್ತು.

ಹೊರಗೆ ಕೆಲಸ ಮಾಡುವವರು ಮಾಡಿದ ಕೆಲಸಕ್ಕೆ ಹಣವನ್ನು ಮನೆಗೆ ತರುವವರು. ಆ ಸಮಯದಲ್ಲಿ ಮನೆ ಸ್ವಚ್ಛವಾಗಿರಬೇಕು. ಹಾಗಂತ ಲಕ್ಷ್ಮಿ ಮನೆಗೆ ಬರುವ ವೇಳೆಯಲ್ಲಿ ಕಸ ಗುಡಿಸುತ್ತಿದ್ದರೆ ಆಕೆ ಒಳಗಡೆ ಪ್ರವೇಶಿಸುವುದೇ ಇಲ್ಲ. ರಾತ್ರಿ ವೇಳೆ ಮನೆ ಗುಡಿಸುವುದರಿಂದ ಮನೆಯ ಆರ್ಥಿಕ ಸ್ಥಿತಿ ಕುಂಠಿತಗೊಂಡು ಮನೆಯಲ್ಲಿ ಉದ್ವಿಗ್ನ ಸ್ಥಿತಿ ಉಳಿಯುತ್ತದೆ. lakshmi

ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಬಾರದು. ಏಕೆಂದರೆ ಲಕ್ಷ್ಮಿ ಮನೆಗೆ ಬರುವ ಸಮಯವೆಂದು ಪರಿಗಣಿಸಲಾಗುತ್ತದೆ. ಇಂತಹ ಸಮಯದಲ್ಲಿ ಕಸವನ್ನು ಹೊರಗಡೆ ಹಾಕಿದರೆ ಬಂದ ಲಕ್ಷ್ಮಿ ವಾಪಸ್ಸು ಹೋಗುತ್ತಾಳೆ ಎಂಬ ನಂಬಿಕೆ ಇದೆ. ಇದನ್ನು ಹೊರತಾಗಿ ಬ್ರಹ್ಮ ಮುಹೂರ್ತದಲ್ಲೂ ಪೊರಕೆಯಿಂದ ಮನೆಯನ್ನು ಗುಡಿಸಬಾರದೆಂದು ಹೇಳಲಾಗುತ್ತದೆ.

ಇನ್ನು ದಿನಕ್ಕೆ ಒಟ್ಟು 4 ಬಾರಿ ಮನೆ ಗುಡಿಸಬಹುದೆಂದು ವಾಸ್ತುಶಾಸ್ತ್ರ ಹೇಳುತ್ತದೆ. ಮನೆಯನ್ನು ಗುಡಿಸಲು ಉತ್ತಮ ಸಮಯ ಬೆಳಿಗ್ಗೆವೆಂದು ತಜ್ಞರು ಹೇಳುತ್ತಾರೆ. ಆದರೆ ಸಂಜೆಯ ವೇಳೆ ಮನೆಯನ್ನು ಸ್ವಚ್ಛಗೊಳಿಸುವುದು ಸೂಕ್ತವಲ್ಲವೆಂದು ಸೂಚಿಸುತ್ತದೆ. ಪೊರಕೆಯನ್ನು ಪದೇಪದೇ ಕಸಗುಡಿಸಲು ಉಪಯೋಗಿಸಬಾರದು. ಬೆಳಗ್ಗೆ ಒಂದು ಬಾರಿ ಕಸಗುಡಿಸಿದ ನಂತರ ಸಂಜೆವರೆಗೂ ಸ್ವಲ್ಪ ಕಸ ಇದ್ದರೂ ಕೂಡ ಪದೇ ಪದೇ ಪೂರ್ತಿಯಾಗಿ ಮನೆಯನ್ನು ಗುಡಿಸಬಾರದು.

ಒಂದು ವೇಳೆ ಸ್ವಚ್ಛ ಮಾಡಬೇಕಾದರೆ ಕಸ ಚೆಲ್ಲಿದ ಸ್ಥಳದಲ್ಲಿ ಮಾತ್ರ ಕಸಗುಡಿಸಬೇಕು. ಇನ್ನು ಮಧ್ಯಾಹ್ನ 12ಗಂಟೆಯಿಂದ 4 ಗಂಟೆಯವರೆಗೂ ಪೊರಕೆಯಿಂದ ಯಾವುದೇ ಕಾರಣಕ್ಕೂ ಕಸ ಗುಡಿಸಬಾರದು. ಇದನ್ನು ಲಕ್ಷ್ಮಿಅಸತ್ತ್ವವೆಂದು ಹೇಳಲಾಗುತ್ತದೆ. ಇದು ಮನೆಗೆ ಅಶುಭದಾಯಕ. ನಿಮ್ಮ ಮನೆಗೆ ಶ್ರೇಯಸ್ಕರವಲ್ಲ. ಧನಲಕ್ಷ್ಮಿ ಒಲಿಯುವುದಿಲ್ಲವೆಂದು ಹೇಳಲಾಗುತ್ತದೆ.

ಹಾಗಾಗಿ ಎಷ್ಟೇ ಕಸವಿದ್ದರೂ ಕೂಡ 12 ಗಂಟೆಯ ಮೊದಲು ಹಾಗೂ 4 ಗಂಟೆಯ ನಂತರ ಕಸ ಗುಡಿಸಬೇಕು. ತುಂಬಾ ಕಸ ಹರಡಿದ್ದರೆ ಒಂದು ಬಟ್ಟೆಯಿಂದ ಅಥವಾ ಯಾವುದಾದರೂ ಒಂದು ವಸ್ತುವಿನಿಂದ ತೆಗಿಯಬೇಕು. ಸಾಯಂಕಾಲ 6 ಗಂಟೆಯ ನಂತರ ಕಸ ಗುಡಿಸಬಾರದು ಹಾಗೂ ಪೊರಕೆಯನ್ನು ಕೈಯಲ್ಲಿರಬಾರದು. 6 ಗಂಟೆಯ ಒಳಗಡೆ ಕಸ ಗುಡಿಸುವ

ಕೆಲಸವನ್ನು ಮುಗಿಸುವುದರಿಂದ ಲಕ್ಷ್ಮಿದೇವಿಯ ಸಂಪೂರ್ಣ ಅನುಗ್ರಹ ದೊರೆಯುತ್ತದೆ. ಇನ್ನು ಕೆಲವರು ಮನೆಯಲ್ಲಿರುವ ಪತಿಯು ಹೊರಗಡೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಹೊರಟು ಹೋದ ಮೇಲೆ ಕಸವನ್ನು ಗುಡಿಸಿ ಸ್ವಚ್ಛಮಾಡುತ್ತಾರೆ. ಈ ರೀತಿ ಮಾಡುವುದು ತಪ್ಪು ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಗಂಡ ಅಥವಾ ನಿಮ್ಮ ಪತ್ನಿ ಮಾಡುವ ಕೆಲಸದಲ್ಲಿ ಯಾವುದೇ ಜಯ ಸಿಗುವುದಿಲ್ಲ.

ಎಲ್ಲಾ ಕೆಲಸದಲ್ಲೂ ಅಪಜಯವೆನ್ನುವುದು ಕಟ್ಟಿಟ್ಟ ಬುತ್ತಿ. ಹಾಗಾಗಿ ಗಂಡ ಕೆಲಸಕ್ಕೆ ಹೋಗುವ ಸಮಯದಲ್ಲಿ ಅಥವಾ ಕೆಲಸಕ್ಕೆ ಹೋದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು. ಇಂತಹ ಕೆಲವು ನಿಯಮಗಳನ್ನು ನೀವು ಕಸಗುಡಿಸುವುದರಲ್ಲಿ ಪಾಲನೆ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಯಾವಾಗಲೂ ಇರುತ್ತೆ.

ಇನ್ನು ಯಾವ ಮನೆ ಸದಾ ಕಸ ಕಡ್ಡಿಯಿಂದ ತುಂಬಿರುತ್ತೋ ಅಂತಹ ಮನೆಯಲ್ಲಿ ಪ್ರತಿನಿತ್ಯ ಜಗಳ-ಕಿರಿಕಿರಿ, ತೊಂದರೆಗಳು ಎದುರಾಗುತ್ತಿರುತ್ತದೆ. ಪೊರಕೆಯನ್ನು ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿಡಬಾರದು ಏಕೆಂದರೆ ಇದು ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ದೊಡ್ಡತಪ್ಪು. ಪೊರಕೆಯನ್ನು ಅಡುಗೆ ಮನೆಯಲ್ಲಿಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ.

ನೀವು ಮಲಗೋ ಬಾಗಿಲ ಬಳಿ ಇಟ್ಟು ಮಲಗಿದರೆ ನಕಾರಾತ್ಮಕ ಶಕ್ತಿ ನಿಮ್ಮ ಮನೆಯ ಒಳಗಡೆ ಪ್ರವೇಶಿಸುತ್ತದೆ. ಹಾಗೆಯೇ ಮನೆಗೆ ಬರುವ ಅತಿಥಿಗಳಿಗೆ ಪೊರಕೆ ಕಾಣುವಂತೆ ಇರಬಾರದು. ಮನೆಯ ಪಶ್ಚಿಮ ದಿಕ್ಕಿನಲ್ಲಿ ಪೊರಕೆ ಇಟ್ಟರೆ ಬಹಳ ಒಳ್ಳೆಯದು. ನೀವು ಬಳಸುತ್ತಿರುವ ಪೊರಕೆ ತುಂಬಾ ಹಳೆಯದಾಗಿದ್ದರೆ ಹೊಸ ಪೊರಕೆಯನ್ನು ತರಬೇಕು.

ಹಳೆಯದಾದ ಪೊರಕೆಯನ್ನು ಬಹಳ ದಿನ ಬಳಸಬಾರದು. ಹೊಸ ಪೊರಕೆ ತರುವುದಕ್ಕ ಸೂಕ್ತವಾದ ವಾರವೆಂದರೆ ಶನಿವಾರ. ಯಾವುದೇ ಕಾರಣಕ್ಕೂ ಮಂಗಳವಾರ ಮತ್ತು ಗುರುವಾರ ಹೊಸ ಪೊರಕೆಯನ್ನು ತರಬಾರದು. ಹಾಗೆಯೇ ಮರೆತು ಕೂಡ ಪೊರಕೆಯನ್ನು ಕಾಲಿನಿಂದ ತುಳಿಯುವುದು, ಕಾಲಿನಿಂದ ಒದೆಯುವುದು ಮಾಡಬೇಡಿ. ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯನ್ನು ಅವಮಾನಿಸಿದಂತಾಗುತ್ತದೆ.

ಇದರಿಂದ ದಾರಿದ್ರ್ಯ ಬರುವ ಸಾಧ್ಯತೆ ಇರುತ್ತೆ. ಹೊಸ ಮನೆಗೆ ಹೋಗುತ್ತಿದ್ದರೆ ಯಾವುದೇ ಕಾರಣಕ್ಕೂ ಹಳೇ ಪೊರಕೆಯನ್ನು ಉಪಯೋಗಿಸಬೇಡಿ. ಹೊಸ ಪೊರಕೆಯನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು ಏಕೆಂದರೆ ಹೀಗೆ ಮಾಡುವುದರಿಂದ ಹಳೆಯ ಮನೆಯ ದಾರಿದ್ರ್ಯವನ್ನು ಹೊಸ ಮನೆಗೆ ತಂದಂತಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಪೊರಕೆಯನ್ನು ಕಾಣದಂತೆ ಮರೆಮಾಡಬೇಕು.

ಪೊರಕೆಯನ್ನು ಯಾವಾಗಲೂ ನೆಲೆದ ಮೇಲೆ ಮಲಗಿಸಿ ಇಡಬೇಕು. ಪೊರಕೆಯನ್ನು ಎಂದಿಗೂ ನಿಂತಿರುವಂತೆ ಇಡಬಾರದು. ಅಡುಗೆ ಮನೆ ಮತ್ತು ದೇವರ ಕೋಣೆಯಲ್ಲೂ ಇಡಬಾರದು. ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಇಲ್ಲಿದಿದ್ದರೆ ಇದು ಬಡತನಕ್ಕೆ ಕಾರಣವಾಗುತ್ತದೆ.

ಈ ಮೇಲಿನ ಕ್ರಮಗಳನ್ನು ಅನುಸರಿಸಿದರೆ ಶ್ರೀ ಮಹಾಲಕ್ಷ್ಮಿಯ ಕೃಪೆಗೆ ನೀವು ಪಾತ್ರರಾಗುತ್ತೀರಿ. ಇನ್ನು ವಾಸ್ತುಪಂಡಿತರ ಪ್ರಕಾರ ಕೃಷ್ಣ ಪಕ್ಷದಲ್ಲಿ ಹೊಸ ಪೊರಕೆಯನ್ನು ಖರೀದಿಸಬೇಕಂತೆ. ಶುಕ್ಲಪಕ್ಷದಲ್ಲಿ ಹೊಸ ಪೊರಕೆ ಸರಿಯಲ್ಲವಂತೆ. ಯಾವತ್ತಿಗೂ ಕೂಡ ಹಾಸಿಗೆ ಕೆಳಗಡೆ ಪೊರಕೆ ಇಡಬೇಡಿ. ಹಾಗೆಯೇ ಸೂರ್ಯಾಸ್ತದ ಬಳಿಕ ಯಾವತ್ತಿಗೂ ಪೊರಕೆಯನ್ನು ದಾಟಬೇಡಿ.

ಪೊರಕೆ ಹಳೆಯದಾಗಿದ್ದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗಡೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮಿದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೇ ಲಕ್ಷ್ಮಿ ಮನೆಯಿಂದ ಹೊರಗಡೆ ಹೋಗುತ್ತಾಳೆ. ಸ್ನೇಹಿತರೇ ಯಾವ ಸಮಯದಲ್ಲಿ ಕಸ ಗುಡಿಸಿದರೆ ಶ್ರೀಮಂತಿಕೆ ಬರುತ್ತೆ ಗೊತ್ತಾ ಲಕ್ಷ್ಮಿ ಮನೆ ಒಳಗಡೆ ನಡೆದು ಬರುತ್ತಾಳೆ. ಅದೃಷ್ಟ ಖುಲಾಯಿಸುತ್ತದೆ.

Leave A Reply

Your email address will not be published.