Ultimate magazine theme for WordPress.

Money Plant ನ್ನು ಮನೆಯ ಯಾವ ದಿಕ್ಕಿನಲ್ಲಿ ಇರಿಸಿದರೆ ಧನ

0 10,719

Money Plant Vastu in Kannada ಮನೀಪ್ಲಾಂಟ್‌ ಬೆಳೆಸುವಾಗ ತಪ್ಪದೇ ಈ ನಿಯಮಗಳನ್ನು ಪಾಲಿಸಬೇಕು. ಇದರಿಂದ ಅದೃಷ್ಠದ ಬಾಗಿಲು ತೆರೆದುಕೊಳ್ಳುತ್ತದೆ. ಮನೆಯನ್ನು ಸುಂದರಗೊಳಿಸಲು ಅನೇಕ ರೀತಿಯ ಸಸ್ಯಗಳನ್ನು ಮನೆಯ ಪರಿಸರದಲ್ಲಿ ಬೆಳೆಸುತ್ತಾರೆ. ವಿಶೇಷವಾಗಿ ಮನೆಯ ಪರಿಸರದಲ್ಲಿ ಬೆಳೆಸುವ ಕೆಲವು ಗಿಡಗಳು ಕೂಡ ವಿಭಿನ್ನ ಪ್ರಭಾವಗಳನ್ನು ಹೊಂದಿರುತ್ತದೆ.

ಅದರಲ್ಲೂ ವಾಸ್ತುಶಾಸ್ತ್ರದಲ್ಲಿ ಅನುಸಾರವಾಗಿ ಒಂದು ವಿಶೇಷ ಗಿಡವು ನಿಮ್ಮ ಮನೆಯ ಪರಿಸರವನ್ನು ಸುಂದರಗೊಳಿಸುವುದಲ್ಲದೇ ನಿಮ್ಮ ಆರ್ಥಿಕ ಸಂಮೃದ್ಧಿಗೂ ಕಾರಣವಾಗುತ್ತದೆ. ಆದರೆ ಕೆಲವರು ಮನೆಯ ಕ್ಷೋಭೆ ಹೆಚ್ಚಿಸಲು ಬಯಸುತ್ತಾದರೂ ಅದು ನಿಯಮಾನುಸಾರವಾಗಿ ಇರುವುದಿಲ್ಲ. ಹೀಗಾಗಿ ಇದು ಕೆಲ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗಬಹುದು.

ಹೌದು ಈಗ ನಾವು ತಿಳಿಸುತ್ತಿರುವುದು ಎಲ್ಲರ ಮನೆಯಲ್ಲು ಸರ್ವೇಸಾಮಾನ್ಯವಾಗಿ ಕಂಡುಬರುವ ಮನಿಪ್ಲಾಂಟ್‌ನ ಕುರಿತಾಗಿದ್ದು ಇದಕ್ಕೆ ವಾಸ್ತುಶಾಸ್ತ್ರದಲ್ಲಿ ಮಹತ್ತ್ವದ ಸ್ಥಾನವನ್ನು ನೀಡಲಾಗಿದೆ. ಅದಲ್ಲದೆ ಇದು ಅತ್ಯಂತ ಪ್ರಭಾವಶಾಲಿ ಗಿಡವೂ ಆಗಿದೆ. ಈ ಗಿಡವನ್ನು ನಾವು ನಿಯಮಾನುಸಾರ ಮನೆಯಲ್ಲಿ ಬೆಳೆಸಿದರೆ ಖಂಡಿತವಾಗಿ ಧನಧಾನ್ಯದಿಂದ ಸಂಪನ್ನರಾಗುವುದಷ್ಟೇ Money Plant

ಅಲ್ಲದೇ ನಮಗೆ ಅಂಟಿಕೊಂಡಿರುವ ದೃರಾದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿ ಮನೀಪ್ಲಾಂಟ್‌ ಬೆಳೆಸುವಾಗ ವಾಸ್ತುಶಾಸ್ತ್ರದಲ್ಲಿ ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಈ ವಾಸ್ತು ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ನಾವು ಹೇಗೆ ಧನ ಸಂಮೃದ್ಧಿಯನ್ನು ಹೊಂದಬಹುದಾಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮನೆಯಲ್ಲಿ ಮನೀಪ್ಲಾಂಟ್‌ನ್ನು ನಿಯಮಾನುಸಾರ ಬೆಳೆಸಿದರೆ ಅನೇಕ ಲಾಭಗಳು ಉಂಟಾಗುತ್ತವೆ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರ ಹೆಸರಿನಲ್ಲೇ ಇರುವಂತೆ ಇದು ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸದೃಢತೆಯನ್ನು ಕರುಣಿಸುವುದಲ್ಲದೇ ಜೊತೆಗೆ ಆತನ ಅದೃಷ್ಠದಲ್ಲಿ ಹೊಸ ಹೊಳಪು ಉಂಟುಮಾಡುತ್ತದೆ. ಜೊತೆಗೆ ಮನೀಪ್ಲಾಂಟ್‌ ಇರುವ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. Money Plant

ಹೀಗಾಗಿ ಮನೀಪ್ಲಾಂಟ್‌ ಸಸ್ಯಕ್ಕೆ ವಾಸ್ತುಶಾಸ್ತ್ರದಲ್ಲಿ ಅದೃಷ್ಟದ ಸಸ್ಯ ಎಂದು ಹೇಳಲಾಗಿದೆ. ಇನ್ನು ವಾಸ್ತುಶಾಸ್ತ್ರದ ಅನುಸಾರ ಮನೀಪ್ಲಾಂಟ್‌ ಗಿಡವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಬೆಳೆಸುವುದು ಉತ್ತಮವೆಂದು ತಿಳಿಸಲಾಗಿದೆ. ಆಗ್ನೇಯ ದಿಕ್ಕಿನಲ್ಲಿ ಮನೀಪ್ಲಾಂಟ್‌ ನೆಟ್ಟಿ ಬೆಳೆಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುವುದರೊಂದಿಗೆ ಆರ್ಥಿಕ ಸ್ಥಿತಿಯಲ್ಲೂ ಸುಧಾರಣೆ ಕಂಡುಬರುತ್ತದೆ.

ಇದರ ಜೊತೆಗೆ ಮನೀಪ್ಲಾಂಟ್‌ ಸಸ್ಯವನ್ನು ಸೌತ್‌ ಈಸ್ಟ್‌ ದಿಕ್ಕಿನಲ್ಲಿ ಇರಿಸುವುದು ಕೂಡ ಅತ್ಯುತ್ತಮ ಶುಭಕರವೆಂದು ನಂಬಲಾಗಿದೆ. ಮಾನ್ಯತೆಯ ಅನುಸಾರ ಸೌತ್‌ ಈಸ್ಟ್‌ ಭಗವಾನ್‌ ಗಣೇಶನಿಗೆ ಸಂಬಂಧಿಸಿದ ದಿಕ್ಕಾಗಿದೆ. ಮನೀಪ್ಲಾಂಟ್‌ ಗಿಡವನ್ನು ಧನ ಮತ್ತು ಉತ್ತಮ ಭಾಗ್ಯದ ಪ್ರತೀಕವೆಂಬ ಮಾನ್ಯತೆಯೂ ಇದ್ದು ಹೀಗಾಗಿ ಇಲ್ಲಿ ಮನೀಪ್ಲಾಂಟ್‌ ಇರಿಸುವುದು ವ್ಯಕ್ತಿಯ ಭಾಗ್ಯವನ್ನು ತೆರೆಯುತ್ತದೆ. Money Plant

ಇನ್ನು ವಾಸ್ತುಶಾಸ್ತ್ರದಲ್ಲಿ ಮನೀಪ್ಲಾಂಟ್‌ ಗಿಡವನ್ನು ಎಂದಿಗೂ ನಾರ್ತ್‌ ಈಸ್ಟ್‌ ದಿಕ್ಕಿನಲ್ಲಿ ಇರಿಸಬಾರದು. ಹೀಗೆ ಮಾಡುವುದರಿಂದಾಗಿ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವಗಳು ಉಂಟಾಗುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಈ ದಿಕ್ಕಿನ ಪ್ರತಿನಿಧಿತ್ವವನ್ನು ದೇವ ಗುರು ಬೃಹಸ್ಪತಿ ದೇವನು ಮಾಡುತ್ತಾನೆ.ಆದರೆ ಶುಕ್ರಗ್ರಹ ಮತ್ತು ಗುರುಗ್ರಹ ಬೃಹಸ್ಪತಿ ದೇವರೀರ್ವರು ವಿರೋಧಿ ಸ್ವಭಾವದ ಗ್ರಹಗಳಾಗಿದ್ದಾರೆ. Money Plant

ಶುಕ್ರಗ್ರಹವು ಐಶ್ವರ್ಯ, ಆರೋಗ್ಯದ ಪ್ರತೀಕವಾಗಿದ್ದು ಹೀಗಾಗಿ ಮನೀಪ್ಲಾಂಟ್‌ ಗಿಡವನ್ನು ನಾರ್ತ್‌ ಈಸ್ಟ್‌ ದಿಕ್ಕಿನಲ್ಲಿ ಇರಿಸಿದರೆ ಅದು ಹಾನಿಕಾರಕವಾಗಿರುತ್ತದೆ. ಇದರ ಜೊತೆಗೆ ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮನೀಪ್ಲಾಂಟ್‌ ಗಿಡವನ್ನು ಬೆಳೆಸುವುದು ಅಥವಾ ಇರಿಸುವುದು ಮಾಡಬಾರದು. ಮನೆಯ ಈ ಮೂಲೆಯಲ್ಲಿ ಮನೀಪ್ಲಾಂಟ್‌ ಗಿಡವನ್ನು ಇರಿಸಿದರೆ ನಿಮಗೆ ಮಾನಸಿಕ ಒತ್ತಡ ಉಂಟಾಗುತ್ತದೆ.

ಜೊತೆಗೆ ಮನೆಯ ಸದಸ್ಯರಲ್ಲಿ ಬೇಧಗಳು ಉಂಟಾಗುತ್ತದೆ. ಹೀಗಾಗಿ ತಪ್ಪಿಯು ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮನೀಪ್ಲಾಂಟ್‌ ಸಸ್ಯವನ್ನು ನೆಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮನೀಪ್ಲಾಂಟ್‌ ಬಳ್ಳಿಯು ನೆಲವನ್ನು ಸ್ಪರ್ಶಿಸಲು ಪ್ರಾರಂಭಿಸಿದರೆ ಅದು ಅಶುಭ ಸಂಕೇತವೆಂದು ಹೇಳಲಾಗುತ್ತದೆ. ನೆಲವನ್ನು ಸ್ಪರ್ಶಿಸುವ ಮನೀಪ್ಲಾಂಟ್‌ ಎಲೆಗಳು ಸಂತೋಷ ಮತ್ತು ಸಂಮೃದ್ಧಿಗೆ ಅಡೆಗಡೆಗಳನ್ನು ಒಡ್ಡುತ್ತವೆ.

ಅಂದರೆ ಮನೀಪ್ಲಾಂಟ್‌ ಗಿಡವು ಬಳ್ಳಿಯ ರೀತಿಯಲ್ಲಿ ಬೆಳೆಯುವ ಗಿಡವಾಗಿದ್ದು ಇದು ಯಾವಾಗಲೂ ಮೇಲ್ಮುಖವಾಗಿಯೇ ಸಾಗಬೇಕು. ಒಂದು ವೇಳೆ ನೆಲದ ಕಡೆಗೆ ಮುಖಮಾಡಿ ಬೆಳೆದರೆ ಇದರ ಬಳ್ಳಿಗಳು ನೆಲವನ್ನು ಸ್ಪರ್ಶಿಸುವ ಮೂಲಕ ನರಾರಾತ್ಮಕತೆಗೆ ಕಾರಣವಾಗುತ್ತವೆ. ಹೀಗಾಗಿ ಮನೀಪ್ಲಾಂಟ್‌ ಗಿಡವನ್ನು ಮೇಲಕ್ಕೇರುವಂತೆ ಬೆಳೆಸಬೇಕು. ವಾಸ್ತುಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಮನೀಪ್ಲಾಂಟ್‌ ಗಿಡವನ್ನು Money Plant

ಇಡುವುದು ಮಂಗಳಕರವೆಂದು ಹೇಳಲಾಗಿದೆ. ಇದರಿಂದ ಆರ್ಥಿಕ ಸ್ಥಿತಿಯು ಸುಧಾರಣೆಗೊಳ್ಳುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಮನೀಪ್ಲಾಂಟ್‌ನ್ನು ಅಗ್ಗ ಅಥವಾ ಕೋಲಿನ ಸಹಕಾರದಿಂದ ಮೇಲಕ್ಕೆ ಎತ್ತಿಕಟ್ಟಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಾನ ಸನ್ಮಾನ ಪ್ರತಿಷ್ಠೆ ಹೆಚ್ಚಾಗುತ್ತದೆ. ಮತ್ತು ಧನ ಸಂಪತ್ತು ಕೂಡ ವೃದ್ಧಿಗೊಳ್ಳುತ್ತದೆ.

ಇನ್ನು ವಾಸ್ತುಶಾಸ್ತ್ರದ ಅನುಸಾರ ಮನೀಪ್ಲಾಂಟ್‌ ಗಿಡದ ಎಲೆಗಳು ಒಣಗಿದ್ದರೆ ಅದು ಹಳದಿ ಬಣ್ಣಕ್ಕೆ ತಿರುಗಿದ್ದರೆ ತಕ್ಷಣ ಅವುಗಳನ್ನು ತೆಗೆದು ಬಿಡಬೇಕು. ಇದರ ಜೊತೆಗೆ ಮತ್ತೊಂದು ಮಾನ್ಯತೆಯ ಪ್ರಕಾರ ಮನೀಪ್ಲಾಂಟ್‌ ಗಿಡಕ್ಕೆ ಭಾನುವಾರದ ದಿನದಂದು ಎಂದಿಗೂ ನೀರಿನ್ನು ಹಾಕಬಾರದು. ವಾಸ್ತುಶಾಸ್ತ್ರದ ಮಾಹಿತಿ ಪ್ರಕಾರ ಮನೀಪ್ಲಾಂಟ್‌ ಗಿಡಕ್ಕೆ ನೀರನ್ನು ಹಾಕುವಾಗ ನೀರಿನ ಜೊತೆಯಲ್ಲಿ ಸ್ವಲ್ಪ ಹಾಲನ್ನು ಸೇರಿಸಿಕೊಳ್ಳಬೇಕು.

ಹಾಲು ಮಿಶ್ರಿತ ನೀರಿನಿಂದಲೇ ಗಿಡಕ್ಕೆ ನೀರು ಹಾಕಬೇಕು ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಇನ್ನು ಇದರ ಜೊತೆಗೆ ವಾಸ್ತುಶಾಸ್ತ್ರದಲ್ಲಿ ತಿಳಿಸಿರುವಂತೆ ಮನೀಪ್ಲಾಂಟ್‌ ಗಿಡವನ್ನು ಎಂದಿಗೂ ಮನೆಯ ಹೊರಗಡೆ ಇರಿಸಬಾರದು. ಇದನ್ನು ಸದಾ ಮನೆಯ ಒಳಭಾಗದಲ್ಲಿ ಬೆಳೆಸಿಕೊಳ್ಳಬೇಕು. ಜೊತೆಗೆ ಮನೀಪ್ಲಾಂಟ್‌ ಗಿಡವನ್ನು ಜನರ ನೇರದೃಷ್ಠಿಗೆ ಬೀಳದಂತೆ ಇರಿಸಬಾರದು. Money Plant

ವಾಸ್ತುಶಾಸ್ತ್ರದ ಪ್ರಕಾರ ಕೆಲ ಜನರ ಕೆಟ್ಟದೃಷ್ಠಿಯು ಇದರ ಮೇಲೆ ಬೀಳುವುದರಿಂದಾಗಿ ಇದು ಒಣಗಲು ಪ್ರಾರಂಭಗೊಳ್ಳುತ್ತದೆ. ಹೀಗಾಗಿ ಮನೀಪ್ಲಾಂಟ್‌ ಗಿಡಗಳು ಮನೆಯ ಒಳಗಡೆ ಮತ್ತು ಜನರ ಕೆಟ್ಟದೃಷ್ಠಿಗೆ ಬೀಳದಂತೆ ಇರಿಸುವುದು ಉತ್ತಮ. ವಾಸ್ತುಶಾಸ್ತ್ರದ ಪ್ರಕಾರ ತಪ್ಪು ದಿಕ್ಕಿನಲ್ಲಿ ಮನೀಪ್ಲಾಂಟ್‌ ಗಿಡವನ್ನು ಇಡುವುದು ಅಥವಾ ಬೆಳೆಸುವುದು ಮಾಡಿದರೆ ಇದರಿಂದಾಗಿ ಆರ್ಥಿಕ ಸಂಕಷ್ಟಗಳು ಎದುರುಗೊಳ್ಳುತ್ತವೆ. ಇದರ ಜೊತೆ ಜೊತೆಗೆ ಮನೆಯಲ್ಲಿ ಸುಖ ಸಂತೋಷ ಸಂಮೃದ್ಧಿಯ ಕೊರತೆ ಉಂಟಾಗುತ್ತದೆ. ಹೀಗಾಗಿ ಮನೀಪ್ಲಾಂಟ್‌ ಗಿಡವನ್ನು ವಾಸ್ತುನಿಯಮಗಳಿಗೆ ಅನುಸಾರವಾಗಿಯೇ ಇರಿಸಬೇಕು ಇದರಿಂದ ಇದರ ಶುಭಫಲಗಳ ಪ್ರಾಪ್ತಿ ಉಂಟಾಗುತ್ತದೆ.

Leave A Reply

Your email address will not be published.