Ultimate magazine theme for WordPress.

SriKrishna 4 ಹವ್ಯಾಸಗಳನ್ನು ರೂಢಿಸಿಕೊಂಡರೆ 

0 5,838

SriKrishna Secrets to attract wealth in kannadatopten ಸ್ನೇಹಿತರೇ ನಾವು ಯಾವ ಯಾವ ಮಾತುಗಳನ್ನು ಪದೇ ಪದೇ ಆಡುತ್ತೀವೋ, ಯಾವ ಯಾವ ಕೆಲಸಗಳನ್ನು ಪದೇ ಪದೇ ಮಾಡುತ್ತೀವೋ ಅವುಗಳೇ ನಮ್ಮ ದೈನಂದಿನ ಜೀವನದಲ್ಲಿ ರೂಢಿಗಳಾಗಿರುತ್ತದೆ. ರೂಢಿಗಳಲ್ಲಿ ಒಂದು ಒಳ್ಳೆಯದ್ದು, ಇನ್ನೊಂದು ಕೆಟ್ಟದ್ದು ಎಂದು ಎರಡು ರೀತಿಯಾಗಿರುತ್ತದೆ. ಈ ರೂಢಿಗಳು ನಮ್ಮ ಆರೋಗ್ಯ, ವ್ಯವಹಾರ, ನೌಕರಿ,

ಕೌಟುಂಬಿಕ ಜೀವನ ಹೀಗೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ನಾವು ಒಳ್ಳೆಯ ಹವ್ಯಾಸ ಮತ್ತ ರೂಢಿಗಳನ್ನು ಮೈಗೂಡಿಸಿಕೊಂಡರೇ ಜೀವನದಲ್ಲಿ ಉನ್ನತಿ ಮತ್ತು ಅಭಿವೃದ್ಧಿಯಾಗುತ್ತದೆ. ಅದೇ ರೀತಿ ಕೆಟ್ಟ ಹವ್ಯಾಸಗಳು ಹಾಗೂ ರೂಢಿಗಳು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ದೇವರ ಪೂಜೆಯನ್ನು ಮಾಡುತ್ತೇವೆ. SriKrishna

ಆದರೇ ಇಂದಿನ ಯಾಂತ್ರಿಕ ಯುಗದಲ್ಲಿ ದೇವರ ಪೂಜೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಆಗದೇ ಇರಬಹುದು. ಅದರೇ ದೇವರು ಕಠಿಣ ಉಪಾವಾಸದಿಂದ, ಪೂಜೆಯಿಂದ ದೇವರು ಪ್ರಸನ್ನನಾಗುವುದಿಲ್ಲ. ನಮ್ಮ ಒಳ್ಳೆಯ ಕೆಲಸ ಮತ್ತು ಕಠಿಣ ಪರಿಶ್ರಮದಿಂದ ದೇವರು ಒಲಿಯುತ್ತಾನೆ. ಸ್ವಚ್ಛಮನಸ್ಸಿನಿಂದ ದೇವರ ಕೃಪೆ, ಆಶೀರ್ವಾದ ಪಡೆಯಬೇಕೆಂದರೆ SriKrishna

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದರಿಂದ ಭಗವಂತನ ಕೃಪೆ ನಮ್ಮ ಮೇಲೆ ಆಗುತ್ತದೆ. ಭಗವಂತನ ಆಶೀರ್ವಾದ ನಮ್ಮ ದೊರೆತರೇ ಜೀವನದ ಎಲ್ಲಾ ಭೋಗಭಾಗ್ಯಗಳು ನಮಗೆ ಸಿಗುತ್ತದೆ. ಇಂದಿನ ಲೇಖನದಲ್ಲಿ ಭಗವಂತನಾದ ಶ್ರೀಕೃಷ್ಣ ಹೇಳಿರುವ ನಾಲ್ಕು ಹವ್ಯಾಸಗಳನ್ನು ತಿಳಿಸಿಕೊಡುತ್ತೇವೆ.

ಭಗವಂತನಿಗಿಂತ ಯಾರು ದೊಡ್ಡವರಲ್ಲ, ನಮ್ಮ ಕುಟುಂಬದ ಸುಖ, ಶಾಂತಿ, ನೆಮ್ಮದಿ, ಸಂಮೃದ್ಧಿಗಾಗಿ ಕುಲದೇವರ ಕೃಪೆ ಬೇಕೇ ಬೇಕು. ನಮಗೆ ಪೂಜೆ ಮಾಡಲು ಸಮಯದ ಅಭಾವವಿದ್ದರೂ ತೊಂದರೆ ಇಲ್ಲ. ಆದರೇ ಕುಲದೇವರ ಸ್ಮರಣೆ ಅತೀ ಅವಶ್ಯಕ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕುಲದೇವರ ಸ್ಮರಣೆ ಮಾಡುವುದನ್ನು ತಪ್ಪಿಸಬಾರದು. ಕುಲದೇವರ ವಾರದ ದಿನ ಕುಲದೇವರ ಸ್ಮರಣೆ ಮಾಡಿ, ಕುಲದೇವರ ಆಶೀರ್ವಾದ ಸಿಗುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. SriKrishna

ಸ್ನಾನ ಮಾಡದೇ ಅಡುಗೆ ಮನೆಗೆ ಪ್ರವೇಶ ಮಾಡುವುದು ಸರಿಯಲ್ಲವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಮತ್ತು ಸಮಯದ ಅಭಾವದಿಂದಿ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೆಳಗಿನ ನಿತ್ಯಕರ್ಮವನ್ನು ಮುಗಿಸಿ, ಕೈಕಾಲುಗಳನ್ನು ತೊಳೆದುಕೊಂಡೇ ಅಡುಗೆಮನೆಗೆ ಪ್ರವೇಶ ಮಾಡಬೇಕು. ನಂತರ ಹೊಲೆಗೆ ನಮಸ್ಕರಿಸಿ ಹೊಲೆ ಹಚ್ಚಬೇಕು. ಇದರಿಂದ ಅಗ್ನಿದೇವ ಮತ್ತು ಮಾತ ಅನ್ನಪೂರ್ಣೇಶ್ವರಿಯ ಆಶೀರ್ವಾದವು ಸಿಗುತ್ತದೆ.

ವಿನಾ ಕಾರಣ ಯಾರ ಮನಸ್ಸನ್ನು ನೋಯಿಸಬಾರದು. ಕೆಟ್ಟ ಶಬ್ಧಗಳಿಂದ ನಿಂದಿಸಬಾರದು. ಹಿರಿಯರಿಗೆ ಅವಮಾನಿಸಬಾರದು. ಸ್ತ್ರೀಯರಿಗೆ ಎಂದೂ ಮನಸ್ಸು ನೋಯಿಸಬಾರದು. ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಮನೆಗೆ ಅಸಹಾಯಕರು ಮತ್ತು ಭಿಕ್ಷುಕರು ಬಂದರೇ ಅವರಿಗೆ ಸಹಾಯ ಮಾಡಬೇಕು. ಪಶುಪ್ರಾಣಿಗಳನ್ನು ಗೌರವದಿಂದ ಕಾಣಬೇಕು. ಅವುಗಳಿಗೆ ನೋವಾಗುವಂತಹ ಯಾವ ಕೆಲಸಗಳನ್ನು ಮಾಡಬಾರದು. ಹಸಿದು ಬಂದ ವ್ಯಕ್ತಿಗಳಿಗೆ ಮತ್ತು ಪ್ರಾಣಿಗಳಿಗೆ ಅನ್ನ ನೀಡಿ. ಇಂತಹ ಹವ್ಯಾಸಗಳನ್ನು ಬೆಳೆಸಿಕೊಂಡರೆ ಭಗವಂತನ ಕೃಪೆ ನಿಮ್ಮ ಮೇಲೆ ಇರುತ್ತದೆ.SriKrishna

ನೀವು ನಡೆಯುವಾಗ ಸಣ್ಣ ಪುಟ್ಟ ಜೀವ ಜಂತುಗಳು ಸಿಕ್ಕಿ ಸಾಯದಂತೆ ನೋಡಿಕೊಳ್ಳಿ. ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಭಗವಂತನ ಹೆಸರನ್ನು ಹೇಳಿ ಹೊರಗಡೆ ಹೋಗಬೇಕು. ನಡೆಯುವಾಗ ಪ್ರತೀ ಹೆಜ್ಜೆಯಲ್ಲೂ ಗಮನವಿರಲಿ. ಚಿಕ್ಕ ಜೀವಜಂತುಗಳು ನಮ್ಮ ಕಾಲ ಕೆಳಗೆ ಸಿಕ್ಕಿ ಸಾಯಬಾರದು ಹಾಗೇ ನೋಡಿಕೊಳ್ಳಿ. ನಾಲ್ಕು ಜಾಗ ಕೂಡುವ ಜಾಗದಲ್ಲಿ ಮಂತ್ರಿಸಿದ ನಿಂಬೆಹಣ್ಣು, ಮೊಟ್ಟೆ ಹೀಗೆ ಕೆಲವು ವಸ್ತುಗಳನ್ನು ಹಾಕಿರುತ್ತಾರೆ. ಅದನ್ನು ದಾಟಬಾರದು ಎಚ್ಚರವಿರಲಿ. ಈ ನಾಲ್ಕು ಹವ್ಯಾಸಗಳನ್ನು ಬೆಳೆಸಿಕೊಂಡರೇ ಭಗವಂತನ ಆಶೀರ್ವಾದ ನಮಗೆ ಸಿಗುತ್ತದೆ ಜೊತೆಗೆ ಜೀವನದ ಎಲ್ಲಾ ಭೋಗಭಾಗ್ಯಗಳು ಸಿಗುತ್ತದೆ.

Leave A Reply

Your email address will not be published.