Ultimate magazine theme for WordPress.

main door ಹತ್ತಿರ ಈ ವಸ್ತುಗಳನ್ನಿಟ್ಟರೆ ಬಡತನ ಹೋಗೀದಿಲ್ಲಾ

0 23,144

main door vastu tips ಮನೆಯ ಮುಖ್ಯದ್ವಾರದಲ್ಲಿ ಈ ವಸ್ತುಗಳನ್ನು ಇಡಬೇಡಿ. ಲಕ್ಷ್ಮಿದೇವಿಯು ಹಿಂತಿರುಗಿ ಹೋಗುತ್ತಾಳೆ. ಜೀವನದಲ್ಲಿ ಕಷ್ಟಗಳು ತಪ್ಪುವುದಿಲ್ಲ ಎಂಬ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಮನೆಯ ಮುಖ್ಯದ್ವಾರದಲ್ಲಿ ಈ ವಸ್ತುಗಳನ್ನು ಇಡಬೇಡಿ ಇಟ್ಟರೇ ಇಂದೇ ಸರಿಪಡಿಸಿಕೊಳ್ಳಿ. ಮನೆಯ ಒಳಗಡೆ ಧನಾತ್ಮಕ

ಪರಿಣಾಮಗಳನ್ನು ಹೆಚ್ಚಿಸುವುದಕ್ಕೆ ವಾಸ್ತುಶಾಸ್ತ್ರದಲ್ಲಿ ಅನೇಕ ಸಲಹೆಗಳನ್ನು ನೀಡಲಾಗಿದೆ. ವಾಸ್ತುಪ್ರಕಾರ ಮನೆಯಲ್ಲಿರುವ ವಸ್ತುವು ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತಿರುತ್ತದೆ. ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡುತ್ತದೆ. ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ main door

ಮತ್ತು ಮನೆಯಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಮತ್ತೊಂದು ಕಡೆ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಇರಿಸಿದರೆ ಮನೆಯಲ್ಲಿ ಧನಾತ್ಮಕಶಕ್ತಿಯನ್ನು ಕಾಣಬಹುದು. ಮನೆಯಲ್ಲಿ ಸಂತೋಷ ಶಾಂತಿ ನೆಲೆಸುತ್ತದೆ. ವಾಸ್ತುಪ್ರಕಾರ ಮನೆಯ ಮುಖ್ಯಬಾಗಿಲು ಎಲ್ಲಾ ರೀತಿಯ ಅವಕಾಶಗಳನ್ನು ಮನೆಯೊಳಗೆ ತರುವ ಪ್ರಮುಖ ಬಾಗಿಲು. ಸಂತೋಷ, main door

ಸಂಮೃದ್ಧಿ, ವೈಭವ ಎಲ್ಲವನ್ನೂ ಕೂಡ ಮನೆಯೊಳಗೆ ತರುತ್ತದೆ. ಆದರೇ ಮುಖ್ಯದ್ವಾರದ ದಿಕ್ಕು ತಪ್ಪಾಗಿದ್ದರೇ ಅಥವಾ ನಕಾರಾತ್ಮಕತೆಯನ್ನು ಹರಡುವಂತಹ ವಸ್ತುಗಳನ್ನ ಮುಖ್ಯದ್ವಾರದ ಮುಂದೆ ಇರಿಸಿದರೆ ಮನೆಯಲ್ಲಿ ತೊಂದರೆ, ಬಡತನ, ರೋಗಗಳನ್ನು ಅದು ಹೊತ್ತು ತರುತ್ತದೆ. ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವಾಸ್ತುಪ್ರಕಾರ ಮುಖ್ಯಬಾಗಿಲಿನ ಮುಂದೆ ಕೆಲವು ಕೆಲಸಗಳನ್ನು ಮಾಡಬಾರದು.

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಮುಂದೆ ಕೊಳಕು ನೀರು ಸಂಗ್ರಹವಾಗಬಾರದು. ಕೊಳಕು ನೀರು ಹರಿಯುವುದು ಅಶುಭ. ಇದರಿಂದ ವಾಸ್ತುದೋಷ ಉಂಟಾಗುತ್ತದೆ. ಜೊತೆಗೆ ಈ ಕೊಳಕು ನೀರಿನಲ್ಲಿ ಹಲವಾರು ರೀತಿಯ ಬ್ಯಾಕ್ಟೇರಿಯಾಗಳು ಕುಟುಂಬ ಸದಸ್ಯರನ್ನು ಅನಾರೋಗ್ಯಕ್ಕೆ ನೂಕಬಹುದು. ಈ ಕೊಳಕು ನೀರು ಪಶ್ಚಿಮ ದಿಕ್ಕಿನಲ್ಲಿದ್ದರೆ ಧನನಷ್ಟ ಕೂಡ ಆಗಬಹುದು. main door

ಮುಳ್ಳಿನ ಗಿಡಗಳನ್ನ ಮನೆಯ ಮುಂದೆ ನೆಟ್ಟು ಚೆಂದ ಮಾಡಿಕೊಳ್ಳುತ್ತಾರೆ. ಆದರೇ ಹೀಗೆ ಮಾಡಬಾರದು. ಇದು ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಗುವಂತೆ ಮಾಡಿ ಜಗಳ ಮನಸ್ಥಾಪ ಹೆಚ್ಚಾಗುವಂತೆ ಮಾಡುತ್ತೆ. ಜೊತೆಗೆ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತೆ. ಮನೆಯಮುಂದೆ ಮುಳ್ಳಿನ ಗಿಡಗಳ ಬದಲಾಗಿ ತುಳಸಿ ಮತ್ತು ಪರಿಮಳ ಹೂಗಳನ್ನ ಬಳಸಬೇಕು.

ಕಸವನ್ನು ಸುಲಭವಾಗಿ ಎಸೆಯುವುದಕ್ಕೆ ಅನುಕೂಲವಾಗಲಿ ಎಂದು ಕೆಲವರು ಡಸ್ಟ್ಬಿನ್ನ್ನು ಮುಖ್ಯದ್ವಾರದ ಹತ್ತಿರ ಇಡುತ್ತಾರೆ ಅಥವಾ ಮುಖ್ಯದ್ವಾರದ ಅಕ್ಕಪಕ್ಕ ಇಡುತ್ತಾರೆ. ಆದರೆ ವಾಸ್ತುಪ್ರಕಾರ ಇದು ತಪ್ಪು, ಈ ರೀತಿ ಮಾಡೋದರಿಂದ ಹಣದ ನಷ್ಟವಾಗುತ್ತೆ ಹಾಗೂ ಮನೆಯಲ್ಲಿ ಸಾಲ ಹೆಚ್ಚಾಗುತ್ತೆ. ಉತ್ತರ ದಿಕ್ಕು ಲಕ್ಷ್ಮಿದೇವಿಯ ದಿಕ್ಕು ಹಾಗಾಗಿ ಉತ್ತರ ದಿಕ್ಕಲ್ಲಿ ಕಸವನ್ನು ಇಡಬಾರದು.

ಮನೆಯ ಮುಂದೆ ವಿದ್ಯುತ್ ಕಂಬ ಇದ್ದರೆ ವಾಸ್ತು ಪ್ರಕಾರ ಹಾನಿಕಾರಕ, ಕುಟುಂಬ ಸದಸ್ಯರ ಮುಂದೆ ನಿಲ್ಲೋದು ಒಳ್ಳೆಯದಲ್ಲ. ಹಾಗಾಗಿ ಮನೆ ಕಟ್ಟುವ ಸಮಯದಲ್ಲಿ ಇದನ್ನು ನೆನೆಪಿನಲ್ಲಿಟ್ಟುಕೊಳ್ಳಿ. ವಾಸ್ತುಪ್ರಕಾರ ಮುಖ್ಯಬಾಗಿಲಿನ ಹೊಸ್ತಿಲು ಎತ್ತರದ ರಸ್ತೆಗಿಂತ ತಗ್ಗಿನಲ್ಲಿರಬಾರದು. ಇದು ಮನೆಗೆ ಕಷ್ಟತರುತ್ತದೆ. ಹಾಲಿನಂತಹ ಬಿಳಿದ್ರವವು ಯಾವಾಗಲೂ ಹೊರಬರುವ ಸಸ್ಯಗಳನ್ನ ಮನೆಯ ಮುಖ್ಯದ್ವಾರದ ಮುಂದೆ ಎಂದಿಗೂ ನೆಡಬಾರದು. ಮನೆಯ ಮುಖ್ಯದ್ವಾರಕ್ಕೆ

ತಾಯಿ ಲಕ್ಷ್ಮಿ ಚಿತ್ರವನ್ನು ಎಂದಿಗೂ ಹಾಕಬಾರದು. ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ತಾಯಿ ಲಕ್ಷ್ಮಿದೇವಿಯ ಫೋಟೋವನ್ನು ಇಡಬೇಕು. ಲಕ್ಷ್ಮಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಬೀರೂ ಒಳಗೆ ಇಡಬೇಕು. ಏಕೆಂದರೆ ತಾಯಿ ಲಕ್ಷ್ಮಿದೇವಿಯ ಸ್ಥಾನವನ್ನ ಯಾವಾಗಲೂ ಮನೆಯೊಳಗೆ ಪರಿಗಣಿಸಲಾಗುತ್ತದೆ ಹೊರತು ನಿಮ್ಮ ಬಾಗಿಲಿನ ಮೇಲೆ ಮತ್ತು ಮನೆಯ ಹೊರಗಡೆ ಅಲ್ಲ. main door

ಕೆಲವು ಹೆಣ್ಣು ಮಕ್ಕಳು ಸಂಜೆ ಅಥವಾ ರಾತ್ರಿ ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿನ ಮೇಲೆ ಕೂತುಕೊಂಡು ಮಾತನಾಡುತ್ತಿರುತ್ತಾರೆ, ಇದು ತಪ್ಪು. ಹೊಸ್ತಿಲ ಮೇಲೆ ಕೂತುಕೊಂಡರೆ ಮನೆಗೆ ದರಿದ್ರ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ. ಮನೆಯಲ್ಲಿ ಸದಾ ಬಡತನ, ಅನಾರೋಗ್ಯ ತಾಂಡವವಾಡುತ್ತದೆ. ಜನರು ನೇರವಾಗಿ ಹೊರಗಡೆಯಿಂದ ಬಂದು ಮನೆಯ ಮುಖ್ಯಬಾಗಿಲಿನ ಮುಂದೆ ಬಿಡುತ್ತಾರೆ. ನಂತರ ಮನೆಯೊಳಗೆ ಹೋಗುತ್ತಾರೆ. ಮನೆಯ ಮುಖ್ಯದ್ವಾರದ ಮುಂದೆ ಬೂಟುಗಳು, ಚಪ್ಪಲಿಗಳನ್ನು ಬಿಟ್ಟರೇ ಲಕ್ಷ್ಮಿ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಈ ತಪ್ಪುಗಳನ್ನು ಮಾಡಬಾರದು.

Leave A Reply

Your email address will not be published.