Ultimate magazine theme for WordPress.

Main Door ಮುಖ್ಯ ದ್ವಾರದ ಮೇಲೆ ಇದನ್ನು ಬರೆಯಿರಿ

0 5,469

Main Door Vastu Tips ನಿಮ್ಮ ತಿಜೋರಿಯಲ್ಲಿ ಹಣ ಯಾವಾಗಲೂ ಹಣ ತುಂಬಿ ತುಳುಕಬೇಕೇ? ಈ ಚಿಕ್ಕ ಕೆಲಸವನ್ನು ಮನೆಯಲ್ಲಿ ಯಾರಿಗೂ ಹೇಳದೇ ಮಾಡಿ. ಹಣ ಯಾರಿಗೆ ಬೇಡ ಹೇಳಿ? ಹಣ ಬರದೇ ಇದ್ದಾಗ ಅಥವಾ ಹಣ ಬರೋ ಎಲ್ಲಾ ದಾರಿಗಳು ಮುಚ್ಚಿ ಹೋದಾಗ ವಾಸ್ತು ದೋಷವನ್ನು ಸರಿಮಾಡಲು ಮುಂದಾಗುತ್ತೇವೆ. ಜ್ಯೋತಿಷಿಗಳನ್ನು ಹುಡುಕಿಕೊಂಡು ಹೋಗುತ್ತೇವೆ.

ಹೀಗೆ ಏನೇನೋ ಉಪಾಯ ಮಾಡಿ ಹಣ ಬರುವ ದಾರಿಯನ್ನು ಓಪನ್ ಮಾಡುವುದಕ್ಕೆ ಹರಸಾಹಸ ಮಾಡುತ್ತೀವಿ. ಎಲ್ಲವೂ ಸರಿಹೋದರೆ ಖುಷಿ ವಿಚಾರವೇ, ಆಗದೆ ಹೋದರೆ ಚಿಂತೆ ಬೇಡ. ನಾವು ಮಾಡೋ ಕೆಲವು ತಪ್ಪುಗಳಿಂದ ಮನೆಯಲ್ಲಿದ್ದ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ. ಹಾಗಾದ್ರೆ ಅವು ಯಾವ ತಪ್ಪುಗಳು ಎಂದು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

ಶ್ರೀ ಲಕ್ಷ್ಮಿ ನಮ್ಮ ಮನೆಯನ್ನು ಬಿಟ್ಟು ಹೊರಟು ಹೋದಳು ಎಂದರೆ ಸುಖ ಸಂತೋಷ ಎಲ್ಲವೂ ಹೊರಟುಹೋಗುತ್ತೆ. ಹಾಗಾಗಿ ಋಷಿ ಮುನಿಗಳು ಹೇಳಿದ ಕೆಲವು ನಿಯಮಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ನಿಯಮಗಳನ್ನು ಪಾಲಿಸಿದರೆ ನೀವು ಸಕಲ ಭೋಗ ಭಾಗ್ಯಗಳನ್ನು ಪಡೆದುಕೊಳ್ಳಬಹುದು. ನಾವು ಹೇಳುವಂತಹ ವಿಷಯ ನಿಮಗೆ ಸಾಮಾನ್ಯವೆನಿಸಿದರೂ Main Door

ಈ ನಿಯಮಗಳನ್ನು ಪಾಲಿಸಿದರೆ ಶ್ರೀ ಮಹಾಲಕ್ಷ್ಮಿಯ ಪ್ರಸನ್ನಳಾಗುತ್ತಾಳೆ. ಮೊದಲಿಗೆ ಊಟಕ್ಕೆ ಮೊದಲು ಅನ್ನಪೂರ್ಣೇಶ್ವರಿಯನ್ನು ನೆನೆದು ಭೋಜನವನ್ನು ಸ್ವೀಕರಿಸಿ. ಅನ್ನ ಪರಬ್ರಹ್ಮ ಸ್ವರೂಪ ಇದು ಕೇವಲ ಊಟವಲ್ಲ ಇದು ಕೇವಲ ಹೊಟ್ಟಯನ್ನು ತುಂಬಿಸುವ ವಸ್ತುವಲ್ಲ ಮನಸ್ಸಿನ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗಾಗಿ ತಿನ್ನುವ ಮೊದಲು ಊಟಕ್ಕೆ ನಮಸ್ಕರಿಸುವುದನ್ನು ರೂಢಿಸಿಕೊಳ್ಳಿ.

ಹೀಗಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಊಟ ಮಾಡುವಾಗ ಶಾಂತಿಯಿಂದ ಸಮಾಧಾನದಿಂದ ಕುಳಿತು ಊಟ ಮಾಡಬೇಕು. ನಿಂತುಕೊಂಡು ಕೈಯಲ್ಲಿ ತಟ್ಟೆ ಹಿಡಿದುಕೊಂಡು ಊಟಮಾಡುವ ಅಭ್ಯಾಸ ನಿಮಗಿದ್ದರೆ ತಕ್ಷಣವೇ ಬಿಟ್ಟುಬಿಡಿ. ಹೀಗೆ ಮಾಡಿದ್ರೆ ಮಹಾಲಕ್ಷ್ಮಿಗೆ ಕೋಪ ಉಂಟಾಗುತ್ತದೆ. ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈತೊಳಿಯಬೇಡಿ ಇದು Main Door

ನಿಮ್ಮ ಜೀವನದ ಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ತಟ್ಟೆಯಲ್ಲಿನ ಎಲ್ಲ ಪದಾರ್ಥಗಳನ್ನ ತಿಂದು ಮುಗಿಸಬೇಕು, ತಟ್ಟೆಯಲ್ಲಿ ಯಾವುದನ್ನೂ ಬಿಡಬಾರದು. ನಿಮಗೆ ಎಷ್ಟು ಬೇಕೋ ಅಷ್ಟನ್ನೇ ಹಾಕಿಕ್ಕೊಂಡು ತಿನ್ನಬೇಕು. ತಟ್ಟೆಯಲ್ಲಿ ಸ್ವಲ್ಪ ಮಿಗಿಸಿ ಇದನ್ನು ಹೆಂಡತಿ ತಿನ್ನುತ್ತಾಳೆ ಎಂದುಕೊಳ್ಳುವುದು ಶ್ರೇಯಸ್ಕರ, ಆದರೆ ನಾವು ತಿಂದು ಬಿಟ್ಟಿದ್ದನ್ನು ಇನ್ನೊಬ್ಬರಿಗೆ ಯಾವತ್ತೂ ಎಂಜಲನ್ನು ಕೊಡಬೇಡಿ.

ಆಹಾರವನ್ನು ವೇಸ್ಟ್ ಮಾಡಬಾರದು. ರಾತ್ರಿಯ ಹೊತ್ತು ಎಲ್ಲಾ ಮುಸುರೆಯನ್ನು ತೊಳೆಯಬೇಕು ಇದರಿಂದ ಸಂವೃದ್ಧಿ ಹೆಚ್ಚುತ್ತೆ. ರಾತ್ರಿ ಎಂಜಲು ತಟ್ಟೆ-ಪಾತ್ರೆಗಳನ್ನು ಹಾಗೇ ಬಿಟ್ಟು ಮಲಗೋದು ಮಹಾಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತದೆ. ಊಟದ ಸಮಯದಲ್ಲಿ ಕೋಪ ತಾಪ ಜಗಳವಾಡೋದು ಅಳೋದು ಮಾಡಬೇಡಿ. ಪ್ರಶಾಂತವಾಗಿ ಊಟ ಮಾಡಿ ನಂತರ ಮಾತನಾಡಿ. ಹಿಟ್ಟನ್ನು ಕಲಸುವಾಗ ಸ್ವಲ್ಪ ಹಾಲನ್ನು

ಹಾಕಿ ನಂತರ ರೊಟ್ಟಿಯನ್ನು ಮಾಡಿ. ಹೀಗೆ ಮಾಡಿದ ರೊಟ್ಟಿಯಿಂದ ಆಶೀರ್ವಾದ ಸಿಗುತ್ತೆ. ಮನೆಯಲ್ಲಿ ಉಪ್ಪಿನ ಡಬ್ಬಿಯಲ್ಲಿ ಲವಂಗವನ್ನು ಹಾಕಿಡಿ ಇದರಿಂದ ಇದ್ದುದರಲ್ಲಿಯೇ ತೃಪ್ತಿ ಸಿಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತೆ. ನಿಮ್ಮ ತಲೆಯನ್ನು ದೇವರ ಮುಂದೆ ಬಾಗಿಸಿ ಮನಸ್ಸಿನಲ್ಲಿ ಪ್ರಾರ್ಥನೆಯನ್ನು ಮಾಡೋದನ್ನ ಮರಿಯಬೇಡಿ. Main Door

ವಾರಕ್ಕೊಮ್ಮ ಅಂದರೆ ಗುರುವಾರದ ದಿನದಂದು ಮನೆಯ ಹತ್ತಿರದ ದೇವಸ್ಥಾನದಲ್ಲಿ ಹಣೆಯನ್ನು ಹಚ್ಚುವುದರಿಂದ ನಿಮ್ಮ ಗುರುವು ಸಂಪ್ರೀತನಾಗುತ್ತಾನೆ. ಮತ್ತು ನವಗ್ರಹದ ಪೀಡೆಯು ದೂರವಾಗುತ್ತದೆ. ಹೀಗೆ ಮಾಡುವುದನ್ನು ನೀವು ರೂಢಿ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಸಂವೃದ್ಧಿಯ ಬೆಳಕು ಬರುತ್ತದೆ ಮತ್ತು ನಿಮಗಿರುವ ದೋಷಗಳಿಂದ ಮುಕ್ತಿ ಪಡೆಯಬಹುದು.

ಇನ್ನು ರಾತ್ರಿಯ ಹೊತ್ತು ಅನ್ನ-ಮೊಸರು ಹಾಗು ತಂಬಿಟ್ಟನ್ನ ತಿನ್ನಲೇ ಬಾರದು. ಹೀಗೆ ಮಾಡೋದು ಶ್ರೀ ಮಹಾಲಕ್ಷ್ಮಿಗೆ ಅವಮಾನ ಮಾಡಿದಂತೆ. ಕೆಲವು ಬಾರಿ ಇದನ್ನು ತಿನ್ನೋದು ಅನಿವಾರ್ಯವಾಗಬಹುದು ಆದರೆ ಇದನ್ನು ತಿನ್ನೋದನ್ನು ಮುಂದೆ ಬಿಟ್ಟುಬಿಡಿ. ನಿಮಗೆ ಹಣದ ತೊಂದರೆಯಿದ್ದರೆ ಯಾವಾಗಲೂ ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.

ಮನೆಯ ನಲ್ಲಿಗಳಿಂದ ಯಾವಾಗಲೂ ನೀರು ಸೋರದಂತೆ ನೋಡಿಕೊಳ್ಳಿ, ಕೂಡಲೇ ರಿಪೇರಿ ಮಾಡಿಸಿಕೊಳ್ಳಿ. ನೀರು ಸೋರಿದ ಹಾಗೇ ನಿಮ್ಮ ಹಣವೂ ಕೂಡಾ ಸೋರಿಹೊಗುತ್ತೆ. ನಿಮ್ಮ ಹಣ ಲೆಕ್ಕವಿಲ್ಲದಷ್ಟು ಖರ್ಚಾಗುತ್ತದೆ. ಮನೆಯನ್ನು ಒರಸುವಾಗ ನೀರಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಒರೆಸಿ. ಇದರಿಂದ ಮನೆಯ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. Main Door

ಗುರುವಾರ ಒಂದನ್ನು ಬಿಟ್ಟು ನೆಲ ಒರೆಸಿ. ಸಾಸಿವೆ ಎಣ್ಣೆಯಲ್ಲಿ ಎರಡು ಲವಂಗವನ್ನು ಹಾಕಿ ದೀಪವನ್ನು ಹಚ್ಚಿ ಅದರ ಹೊಗೆಯನ್ನು ಮನೆಯ ತುಂಬಾ ಹರಡಿ ಇದರಿಂದ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಬಹದು. ಸಾಸಿವೆ ಎಣ್ಣೆಯಲ್ಲಿ ಎರಡು ಲವಂಗವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ಮನ –ಮನೆ ಎರಡೂ ಉಜ್ವಲವಾಗಿ ಬೆಳೆಯುತ್ತದೆ.

ನಿಮ್ಮ ದುಡಿಮೆಯ ಕೆಲವು ಅಂಶವನ್ನು ಅಗತ್ಯವಿರುವವರಿಗೆ ಅವಶ್ಯಕತೆಯಿರುವವರಿಗೆ ದಾನ ಧರ್ಮ ಮಾಡಿ. ಬಡವರಿಗೆ ಅನ್ನವನ್ನು ನೀಡಿ ಅವರ ಹಸಿವನ್ನು ನೀಗಿಸಿ, ಇವು ಅತೀ ಮುಖ್ಯ. ಇದರಿಂದ ನಿಮ್ಮ ದಾರಿದ್ರ್ಯತೆ ದೂರವಾಗಿ ಪುಣ್ಯವು ಒದಗುತ್ತದೆ. ಮನೆಯ ಮುಖ್ಯ ಬಾಗಿಲನ್ನು ಯಾವತ್ತಿಗೂ ಸ್ವಚ್ಛವಾಗಿಡಿ. ಬಾಗಿಲ ಮೇಲೆ ಅರಿಷಿನದಿಂದ ಸ್ವಸ್ತಿಕ್,

ಓಂ ಚಿನ್ಹೆಯನ್ನು ಬಿಡಿಸಿ. ಮನೆಯ ಒಳಗೆ ಬರುತ್ತಿರುವ ಶ್ರೀ ಮಹಾಲಕ್ಷ್ಮಿಯ ಪಾದವನ್ನು ಬರೆಯಬಹುದು. ಸ್ವಸ್ತಿಕ್ ಮಾಡಿದ ನಂತರ ಅಕ್ಕ ಪಕ್ಕದಲ್ಲಿ ಎರಡು ಗೆರೆಗಳನ್ನು ಹಾಕಿ, ಇದರಿಂದ ಮನೆಗೆ ಮಂಗಳವಾಗುತ್ತದೆ. ಅದೃಷ್ಟ ಒಲಿದು ಬರುತ್ತದೆ. ಪ್ರತೀ ರವಿವಾರ ಹಾಗೂ ಸೋಮವಾರ ಮನೆಯ ಮುಂದೆ ಮಾವಿನ ತೋರಣವನ್ನು ಕಟ್ಟಿ, ಹಳೆಯದನ್ನು ತೆಗೆದು ಹೊಸದನ್ನು ಹಾಕಬೇಕು. ನಿಮ್ಮ ತಿಜೋರಿಯಲ್ಲಿ ಯಾವಾಗಲೂ ಹಣ ತುಂಬಿ-ತುಳುಕಲು ಈ ಚಿಕ್ಕ ಕೆಲಸವನ್ನು ಮನೆಯಲ್ಲಿ ಯಾರಿಗೂ ಹೇಳದೇ ಮಾಡಿ.

Leave A Reply

Your email address will not be published.