Ultimate magazine theme for WordPress.

Your fortune ನಿಮ್ಮ ಬೆರಳುಗಳಲ್ಲಿ ಇರುವ ಶಂಖು ಚಕ್ರದ

0 8,481

Your fortune is based on the Sankhu Chakra ಹಸ್ತ ಸಾಮೂದ್ರಿಕ ಶಾಸ್ತ್ರದಲ್ಲಿ ಅಂಗಶಾಸ್ತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆರಳುಗಳಲ್ಲಿನ ಶಂಖ, ಚಕ್ರ, ಚಿಹ್ನೆಗಳ ಮಹತ್ತ್ವವನ್ನು ತಿಳಿಸುತ್ತದೆ. ಬ್ರಹ್ಮನ ಸೃಷ್ಠಿಯಲ್ಲಿ ಪ್ರತಿಯೊಬ್ಬರ ಬೆರಳುಗಳಲ್ಲಿ ಅವರ ಕರ್ಮಾನುಸಾರ ಹಣೆಬರಹದ ಆಧಾರದ ಮೇಲೆ ಅವರ ಭೂತ, ಭವಿಷ್ಯ, ವರ್ತಮಾನ ಭವಿಷ್ಯವನ್ನು ಈ ಬೆರಳುಗಳ ಅಂಗಶಾಸ್ತ್ರದ ಮುಖಾಂತರ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.

ಬೆರಳುಗಳಲ್ಲಿ ಎಷ್ಟು ಶಂಖಗಳಿವೆ, ಎಷ್ಟು ಚಕ್ರಗಳಿವೆ ಎಂಬ ಮಹತ್ತ್ವದ ವಿಚಾರದ ಮೇಲೆ ಅವರ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಆಧುನಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಂಡಿತರು ಹೇಳುವಂತೆ ಒಟ್ಟು ಬೆರಳುಗಳಲ್ಲಿ ಒಂದು ಚಕ್ರವಿದ್ದರೆ ಸುಖವಂತರು, ಯೋಗಪುರುಷರು ಆಗಿದ್ದು, ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಎರಡು ಚಕ್ರವಿದ್ದರೇ ರಾಜ ಮರ್ಯಾದೆ, ಉನ್ನತವಾದ ಪದವಿಗಳನ್ನು ಪಡೆಯುತ್ತಾರೆ. Your fortune

ಸುಖ ಸಂಮೃದ್ಧಿಯಿಂದ ಬಾಳುತ್ತಾರೆ. ಮೂರು ಚಕ್ರಗಳಿದ್ದರೇ ದೊಡ್ಡ ಶ್ರೀಮಂತರಾಗುತ್ತಾರೆ. ಎಲ್ಲಾ ರಂಗಗಳಲ್ಲಿ ಉನ್ನತಿಗೆ ಹೋಗುತ್ತಾರೆ. ನಾಲ್ಕು ಚಕ್ರಗಳಿದ್ದರೇ ದರಿದ್ರವನ್ನು ಮತ್ತು ಸ್ವಲ್ಪ ಕ್ರೂರಿಗಳಾಗಿರುತ್ತಾರೆ. ಕಷ್ಟ ಜೀವನದಲ್ಲಿ ಬೆಳೆಯುತ್ತಾರೆ. ಐದು ಚಕ್ರಗಳಿದ್ದರೇ ಸ್ತ್ರೀಯರ ಸಹವಾಸದಿಂದ ಸರ್ವಸ್ವವನ್ನು ನಾಶ ಮಾಡಿಕೊಳ್ಳುತ್ತಾರೆ. ಮಾನಸಿಕ ಚಂಚಲತೆ ಹೆಚ್ಚಾಗಿರುತ್ತದೆ. Your fortune

ಆರು ಚಕ್ರಗಳಿದ್ದರೆ ಅತಿಯಾದ ಕಾಮದ ಆಸೆಗಳಿಂದ ಕಷ್ಟದಲ್ಲಿ ಬೀಳುತ್ತಾರೆ. ಏಳು ಚಕ್ರಗಳಿದ್ದರೆ ಸುಖ ಸಂಪತ್ತನ್ನು ಪಡೆಯುವರು ಮತ್ತು ಆರೋಗ್ಯದಲ್ಲಿ ಚೆನ್ನಾಗಿರುವರು. ಎಂಟು ಚಕ್ರಗಳಿದ್ದರೇ ಇವರು ನಿರಂತರವಾಗಿ ರೋಗಬಾಧೆಯಿಂದ ನರಳುತ್ತಿರುತ್ತಾರೆ ಮತ್ತು ಮಾನಸಿಕ ನೆಮ್ಮದಿ ಇರುವುದಿಲ್ಲ. ಒಂಭತ್ತು ಚಕ್ರಗಳಿದ್ದರೇ ರಾಜನ ಸಮಾನವಾಗಿರುವರು, ರಾಜ್ಯಬಾರ ಮಾಡುವರು. Your fortune

ಮಂತ್ರಿ ಪದವಿಯನ್ನು ಅಲಂಕರಿಸುವರು. ಹತ್ತು ಚಕ್ರಗಳಿದ್ದರೇ ಮಹಾಯೋಗಿಯಾಗಿ ಕೀರ್ತಿವಂತರಾಗುವರು. ಹಾಗೆಯೇ ಒಟ್ಟು ಬೆರಳುಗಳಲ್ಲಿ ಒಂದು ಶಂಖವಿದ್ದರೇ ಸುಖಸಂತೋಷದಿಂದ ಇರುವರು. ಎರಡು ಶಂಖವಿದ್ದರೇ ದರಿದ್ರವನ್ನು ಅನುಭವಿಸುವರು. ಮೂರು ಶಂಖವಿದ್ದರೇ ರಾಕ್ಷಸ ಗುಣವಿರುವುದು, ಕ್ರೂರತನವಿರುವುದು. ನಾಲ್ಕು ಶಂಖವಿದ್ದರೇ ಸದ್ಗುಣವಂತರು,

ಸುಖಶಾಂತಿಯನ್ನು ಹೊಂದುವರು. ಐದು ಶಂಖವಿದ್ದರೇ ಸಾಧಾರಣ ಜೀವನ ನಡೆಸುವರು. ಆರು ಶಂಖವಿದ್ದರೇ ಮಹಾಬಲಶಾಲಿಯು, ಧೈರ್ಯವಂತರು ಆಗುವರು. ಏಳು ಶಂಖವಿದ್ದರೇ ಉದ್ಯೋಗ, ವ್ಯಾಪಾರ ವೃತ್ತಿಯಲ್ಲಿ ಶ್ರೀಮಂತರಾಗುವರು. ಎಂಟು ಶಂಖವಿದ್ದರೇ ದೊಡ್ಡ ದೊಡ್ಡ ಪದವಿಗಳನ್ನು ಹೊಂದುತ್ತಾರೆ. ಒಂಭತ್ತು ಶಂಖಗಳಿದ್ದರೇ ಪ್ರಜಾಪಾಲನೆ ಮಾಡುತ್ತಾರೆ. ಜನನಾಯಕರು ತುಂಬಾ ಜನ ಇರುತ್ತಾರೆ. ಹತ್ತು ಶಂಖಗಳಿದ್ದರೇ ದೇಶಾಧಿಪತಿ, ಮಹಾಮೇಧಾವಿ, ಅಪೂರ್ವವಾದ ವ್ಯಕ್ತಿಯಾಗುತ್ತಾರೆ.

Leave A Reply

Your email address will not be published.