Ultimate magazine theme for WordPress.

ಮೇಷ ರಾಶಿ ನವೆಂಬರ್ ತಿಂಗಳ ಫಲ

0 9,617

ಮೇಷರಾಶಿಯವರಿಗೆ ನವೆಂಬರ್ ತಿಂಗಳು ಯಾವ ರೀತಿಯಾಗಿ ಫಲಿಸುತ್ತದೆ? ಅನುಕೂಲಕರವಾದ ದಿನಾಂಕಗಳು ಯಾವುವು? ಯಾವ ದಿನಗಳಲ್ಲಿ ಜಾಗ್ರತೆಯಿಂದ ಇರಬೇಕು? ಯಾವೆಲ್ಲಾ ಶುಭಫಲಗಳು ಪ್ರಾಪ್ತಿಯಾಗುತ್ತದೆ? ಯಾವ ವಿಚಾರದಲ್ಲಿ ಯಶಸ್ಸನ್ನು ಪಡೆಯುತ್ತೀರಾ? ನವೆಂಬರ್ ತಿಂಗಳಿನಲ್ಲಿ ಲಾಭ ನಷ್ಟ ಹೇಗಿರುತ್ತದೆಂಬುದನ್ನು ನವೆಂಬರ್ ತಿಂಗಳ ಮಾಸ ಭವಿಷ್ಯದಲ್ಲಿ ತಿಳಿಸಿಕೊಡುತ್ತೇವೆ.

ಮೇಷರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಅಷ್ಟಮ ಸ್ಥಾನದಲ್ಲಿ ಗ್ರಹಗಳ ಸಂಚಾರ ಹೆಚ್ಚಾಗಿರುವುದರಿಂದ ಮೇಷರಾಶಿಯವರಿಗೆ ಸಾಮಾನ್ಯ ಫಲಗಳು ಪ್ರಾಪ್ತಿಯಾಗುತ್ತದೆ. ವೃತ್ತಿ ಮತ್ತು ವ್ಯಾಪಾರ ಕೆಲವು ದಿನಗಳು ಪರವಾಗಿಲ್ಲವೆನ್ನುವಂತೆ ಇರುತ್ತದೆ. ಮೇಷರಾಶಿಯವರಿಗೆ ಮನೋಬಲ ಕಡಿಮೆ ಇರುತ್ತದೆ. ಇದ್ದಕ್ಕಿದ್ದಂತೆ ಕೋಪ ಬರುವುದು, ಸ್ಥಿರತೆ ಇಲ್ಲದೇ ಇರುವುದು ಆಗುತ್ತದೆ.

ಆದ್ದರಿಂದ ಆದಷ್ಟು ಮೇಷರಾಶಿಯವರು ಮನಸ್ಸನ್ನು ಸ್ಥಿಮಿತತೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು, ಇಲ್ಲವೇ ವಿರೋಧಗಳು ಹೆಚ್ಚಾಗುತ್ತದೆ ಎಚ್ಚರಿಕೆ ವಹಿಸಿ. ಹಾಗೆಯೇ ಮನೆಯಿಂದ ಹೊರಗಡೆ ಹೊರಡುವಾಗ ವಾಹನ ಚಲಾವಣೆಯಲ್ಲಿ ಬಹಳ ಜಾಗೃತೆಯಿಂದ ಇರುವುದು ಮತ್ತು ಪ್ರತಿನಿತ್ಯ ಇಷ್ಟದೇವರನ್ನು ನೆನಸಿಕೊಂಡು ಮನೆಯಿಂದ ಹೊರಗಡೆ ಹೋಗಬೇಕು.

ದುರ್ಗಾದೇವಿಯ ಮಂತ್ರವನ್ನು ಜಪಿಸಬೇಕು. ಶತೃಗಳಿಂದ ಈ ತಿಂಗಳು ಊಹಿಸದೇ ರೀತಿಯಲ್ಲಿ ತೊಂದರೆಗಳು ಆಗಬಹುದು. ಮೇಷರಾಶಿಯವರಿಗೆ ಸ್ತ್ರೀಯರಿಗೆ ಈ ತಿಂಗಳು ತೊಂದರೆಗಳು ಹೆಚ್ಚಾಗುವಂತಹ ಸಾಧ್ಯತೆಗಳು ಕಂಡುಬರುತ್ತಿದೆ ಆದ್ದರಿಂದ ಮೇಷರಾಶಿಯ ಪುರುಷರು ಅಥವಾ ಸ್ತ್ರೀಯರಾಗಿರಬಹುದು ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ಅಪವಾದಗಳು ಈ ತಿಂಗಳು ಉಂಟಾಗಬಹುದು. ನೀವು ಯಾರನ್ನು ಹೆಚ್ಚಾಗಿ ಯಾರನ್ನು ನಂಬುತ್ತೀರೋ ಅವರು ಮೋಸ ಮಾಡುವ ಸಾಧ್ಯತೆಗಳು ಈ ತಿಂಗಳಿನಲ್ಲಿದೆ. ನಂಬಿರುವಂತೆ ನಟಿಸುತ್ತಾ ಈ ನವೆಂಬರ್ ತಿಂಗಳನ್ನು ಕಳಿಯಬೇಕು. ಹಾಗೆಯೇ ಕಷ್ಟದಿಂದಲೇ ಫಲಗಳನ್ನು ಪಡೆಯುವಂತಹ ಈ ತಿಂಗಳು ಆಗಿರುತ್ತದೆ. ಈ ತಿಂಗಳಿನಲ್ಲಿ 2, 10,11, 12, 15,21,25

ನೇ ತಾರೀಖು ಮುಖ್ಯವಾದ ಕೆಲಸಗಳನ್ನು ಮಾಡಿಕೊಳ್ಳಬಹುದು ಶುಭ ದಿನವಾಗಿರುತ್ತದೆ. ಹಾಗೆಯೇ 4, 5,6,7,14,17,23 ಮತ್ತು 24ನೇ ತಾರೀಖಿನಂದು ಸ್ವಲ್ಪ ಜಾಗ್ರತೆಯಿಂದ ಇರಬೇಕಾಗುತ್ತದೆ. ಸಮಸ್ಯೆಗಳ ಜೊತೆಗೆ ಅದನ್ನ ಎದುರಿಸುವಂತಹ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಮಿತ್ರರ ಸಂಖ್ಯೆಯು ಈ ತಿಂಗಳು ಹೆಚ್ಚಾಗಲಿದೆ. ಬಹಳ ದಿನಗಳಿಂದ ನಡೆಯಬೇಕಿದ್ದ

ಕೆಲಸಗಳು ಮತ್ತು ವ್ಯವಹಾರಗಳು ನಡೆಯುತ್ತದೆ. ಮೇಷರಾಶಿಯವರಿಗೆ ಎಷ್ಟೇ ಒತ್ತಡವಿದ್ದರೂ ಸಹನೆಯಿಂದ ಇರಬೇಕಾಗುತ್ತದೆ. ಹೊಸದಾಗಿ ವ್ಯಾಪಾರ, ವ್ಯವಹಾರ, ಉದ್ಯೋಗದಲ್ಲಿ ಏಳಿಗೆಯನ್ನ ಕಾಣಬೇಕು ಅಥವಾ ಹೊಸದಾಗಿ ಕೆಲಸಗಳನ್ನ ಆರಂಭಿಸಬೇಕೆಂದರೆ ಈ ತಿಂಗಳು ಒಳ್ಳೆಯ ಅವಕಾಶಗಳು ಸಿಗುತ್ತದೆ. ಆದಷ್ಟು ಈ ತಿಂಗಳು ಚಟಗಳಿಂದ ದೂರವಿರಿ,

ಇಲ್ಲದಿದ್ದರೇ ಅನಾರೋಗ್ಯದ ಸಮಸ್ಯೆ ಕಾಡಬಹುದು. ಜೊತೆಗೆ ಈ ತಿಂಗಳು ಖರ್ಚಾಗುತ್ತದೆ. ಈ ತಿಂಗಳು ನಿಮಗೆ ಜನರು ಸಹಾಯ ಮಾಡುತ್ತಾರೆ. ರಾಜಕೀಯ ರಂಗದಲ್ಲಿ ಇರುವವರಿಗೆ ಕೊನೆಯ ಕ್ಷಣದಲ್ಲಿ ಲಾಭಗಳು ಉಂಟಾಗುತ್ತದೆ. ಹಣ ಬಂದರೂ ಈ ರಾಶಿಯವರಿಗೆ ಟೆನ್ಷನ್ ಗಳು ಹೆಚ್ಚಾಗಿರುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಮನಸ್ಸಿನಲ್ಲಿ ನಾನಾ ಗೊಂದಲಗಳು ಉಂಟಾಗುತ್ತದೆ.

ಏಕಾಗ್ರತೆಯಿಂದ ಪ್ರಯತ್ನ ಪಟ್ಟರೇ ಮಾತ್ರ ವಿದ್ಯಾರ್ಥಿಗಳಿಗೆ ಫಲ ಸಿಗುತ್ತದೆ. ಕುಟುಂಬದ ಜೊತೆ ಮನಸ್ಸಿನ ಭಾವನೆಯನ್ನ ವ್ಯಕ್ತ ಪಡಿಸಲು ಮತ್ತು ಅವರ ಜೊತೆ ಪ್ರಯಾಣ ಮಾಡಲು, ಪ್ರೀತಿಯನ್ನ ಹಂಚಲು ಪ್ರಯತ್ನವನ್ನು ಮಾಡಲಿದ್ದೀರಿ. ಬರಬೇಕಾದ ಹಣ ಸರಿಯಾಗಿ ಸಮಯಕ್ಕೆ ಬಾರದೇ ಸ್ವಲ್ಪ ಚಿಂತೆಗೆ ಸಿಲುಕಿಕೊಳ್ಳುವ ಪರಿಸ್ಥಿತಿಗಳು ಎದುರಾಗುತ್ತದೆ

ಹಾಗೂ 2 ಹಾಗೂ 4ನೇ ವಾರದಲ್ಲಿ ಉದ್ಯೋಗದ ಲಾಭಗಳು ಪ್ರಾಪ್ತಿಯಾಗುತ್ತದೆ. ವಿಶೇಷವಾಗಿ ಈ ತಿಂಗಳು ನಿಮಗೆ ಹಣಕಾಸು ಬಂದರೂ ಕೂಡ ಅದಕ್ಕೆ ತಕ್ಕಂತೆ ಚಿಂತೆಗಳು ಮತ್ತು ಒತ್ತಡಗಳು ಹೆಚ್ಚಾಗುತ್ತದೆ. ಆದರೇ ಈ ತಿಂಗಳನ್ನ ತಾಳ್ಮೆಯಿಂದ ಕಳೆಯಬೇಕು ಮತ್ತು ಸುಬ್ರಹ್ಮಣ್ಯ ದೇವರ ಆರಾಧನೆಯನ್ನು ಮಾಡಬೇಕು.

ಓಂ ಸ್ಕಂದಾಯ ನಮಃ ಎಂಬ ಮಂತ್ರವನ್ನು ಜಪಿಸಿ ದೇವರ ಪೂಜೆಯನ್ನು ಮಾಡಬೇಕು. ರಾಹುಕಾಲದಲ್ಲಿ ಸುಬ್ರಹ್ಮಣ್ಯನ ಆಲಯದಲ್ಲಿ ದೀಪಾರಾಧನೆಯನ್ನು ಮಾಡಿ ಮತ್ತು ದೀಪಾವಳಿಯ ಹಬ್ಬದಂದು ಲಕ್ಷ್ಮಿದೇವಿಯನ್ನು ನೆನೆದು ಉಪಾವಾಸವನ್ನು ಮಾಡಿದರೇ ಮೇಷರಾಶಿಯವರಿಗೆ ಶುಭಫಲಗಳು ಪ್ರಾಪ್ತಿಯಾಗುತ್ತದೆ. ಮನಸ್ಸಿನ ಗೊಂದಲಗಳು ದೂರವಾಗುತ್ತದೆ.

Leave A Reply

Your email address will not be published.