Ultimate magazine theme for WordPress.

Capricorn ಮಕರ ರಾಶಿ ನವೆಂಬರ್ ತಿಂಗಳ ಭವಿಷ್ಯ ಸ್ತ್ರೀಯರಿಗೆ

0 18,916

Capricorn November 2023 ಈಮಕರ ರಾಶಿ ನವೆಂಬರ್ ತಿಂಗಳ ಭವಿಷ್ಯ ಸ್ತ್ರೀಯರಿಗೆ ವರ್ಷ ಮುಕ್ಕಾಲು ಭಾಗ ಕಳೆದುಹೋಗಿದೆ. ನಮಗೆ ಏಕೆ ಇಷ್ಟೊಂದು ಕಷ್ಟವೆಂದು ಮಕರ ರಾಶಿಯವರು ಯೋಚನೆ ಮಾಡುತ್ತಿದ್ದರೆ ತಪ್ಪದೇ ನವೆಂಬರ್ ತಿಂಗಳಿನ ಮಾಸ ಫಲವನ್ನು ತಿಳಿಯಿರಿ. ಮಕರ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಶುಭ ಫಲ ಹೇಗಿರುತ್ತದೆ? ಯಾವ ದಿನಗಳು ಒಳ್ಳೆಯದು? ಯಾವ ದಿನಾಂಕಗಳು ಅದೃಷ್ಟವನ್ನು ನೀಡುತ್ತದೆ? ಯಾವೆಲ್ಲಾ ವಿಚಾರದಲ್ಲಿ ಯಶಸ್ಸನ್ನು ಕಾಣಬಹುದು? ಯಾವೆಲ್ಲಾ ರಂಗದಲ್ಲಿ ಎಚ್ಚರಿಕೆ ವಹಿಸಬೇಕು?

ಯಾವ ದೇವರನ್ನು ಪೂಜಿಸಬೇಕು ಎಂಬುದೆಲ್ಲಾವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಇಷ್ಟು ದಿನದಿಂದ ಇದ್ದ ಕಷ್ಟಗಳು ಮೋಡದಂತೆ ಕರಗಿ ಹೋಗುತ್ತದೆ. ಎಲ್ಲಾ ಕಷ್ಟಗಳು ದೂರವಾಗುತ್ತದೆ. ಸಮಾಜದಲ್ಲಿ ಹೆಸರು, ಗೌರವ, ಕೀರ್ತಿಯೂ ಹೆಚ್ಚಾಗುತ್ತಾ ಹೋಗುತ್ತದೆ. ನೀವು ಅಂದುಕೊಂಡಂತೆ ನಡೆಯುತ್ತಾ ಹೋಗುತ್ತದೆ. ನಿಮ್ಮ ಮಾತಿಗೆ ತೂಕ ಮತ್ತು ಗೌರವ ಹೆಚ್ಚಾಗುವ ಸಂದರ್ಭಗಳು ಒದಗುತ್ತದೆ. Capricorn

ರಾಜಕೀಯ ನಾಯಕರಿಗೆ ಪದವಿಗಳು ಉಂಟಾಗಲಿದೆ. ಉದ್ಯೋಗ ರಂಗದಲ್ಲಿ ಇರುವಂತಹವರಿಗೆ ಬಡ್ತಿ ಆಗುವ ಅವಕಾಶಗಳು ಉಂಟಾಗುತ್ತದೆ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಮತ್ತು ಪ್ರಮೋಷನ್ ಸಿಗುವ ಅವಕಾಶಗಳು ಲಭ್ಯವಾಗುತ್ತದೆ. ಮನೆಯಲ್ಲಿ ಶುಭಕಾರ್ಯಗಳನ್ನ ನಡೆಸುವಂತಹ ಕೆಲಸಗಳನ್ನು ಮಾಡುತ್ತಿದ್ದರೇ ಈ ತಿಂಗಳಿನಲ್ಲಿ ಒಳಿತಾಗುತ್ತದೆ.

ಪುಣ್ಯಕ್ಷೇತ್ರಗಳನ್ನ ದರ್ಶನ ಮಾಡುವ ಅವಕಾಶಗಳು ಈ ತಿಂಗಳಿನಲ್ಲಿ ಹೆಚ್ಚಾಗಿ ಸಿಗುತ್ತದೆ. ಭಗವಂತನ ಅನುಗ್ರಹಗಳು ಮತ್ತಷ್ಟು ಪ್ರಾಪ್ತಿಯಾಗುತ್ತದೆ. ನಿಮ್ಮ ಮಕ್ಕಳ ಅಭಿವೃದ್ಧಿಗೆ ನೀವು ಮಾಡುವಂತಹ ಅಭಿವೃದ್ಧಿ ಕೆಲಸಗಳು ಅದ್ಭುತವಾಗಿ ಫಲಗಳನ್ನ ನೀಡುತ್ತದೆ. ಸ್ತ್ರೀಯರು ಸೌಖ್ಯವಾಗಿರುತ್ತಾರೆ. ಮಕರ ರಾಶಿಯವರು ಮಾಡುವಂತಹ ಕೆಲಸಕ್ಕೆ ಸ್ತ್ರೀಯರಿಂದ ಅನುಕೂಲತೆಗಳು ಹೆಚ್ಚಾಗಿ ಸಿಗುತ್ತದೆ.

ಈ ತಿಂಗಳು 2, 4,12,14, 19,23 ಮತ್ತು 29ನೇ ತಾರೀಖು ಅತೀ ಮುಖ್ಯವಾದ ಕೆಲಸಗಳನ್ನು ಮಾಡಲು ಸಹಕಾರವನ್ನು ನೀಡುತ್ತದೆ. ಈ ದಿನಾಂಕದಂದು ಮಾಡುವ ಕೆಲಸಗಳು ಅದೃಷ್ಟವನ್ನು ನೀಡುತ್ತದೆ. ಇನ್ನು ಮಧ್ಯಮ ಮತ್ತು ಅಶುಭ ಫಲಗಳನ್ನ ನೀಡುವಂತಹ ದಿನಗಳು 7, 9,16,21,25 ಹಾಗೂ 27 ಈ ದಿನಾಂಕದಂದು ನೀವು ಕೆಲಸ ಕಾರ್ಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನ ಇಡಬೇಕಾಗುತ್ತದೆ. Capricorn

ಮಕರ ರಾಶಿಯವರಿಗೆ ಮಧ್ಯಮ ಫಲಗಳು ಮತ್ತು ಅಶುಭ ಫಲಗಳು ಹೇಗಿರುತ್ತದೆಂದರೆ ನಿಮ್ಮ ಪ್ರೀತಿಸುವವರ ಜೊತೆ ಯಾವುದೇ ಕಾರಣಕ್ಕೂ ಕಲಹಗಳನ್ನ ಮಾಡಿಕೊಳ್ಳಬೇಡಿ. ಇದರಿಂದ ಮನಸ್ತಾಪಗಳು ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮಲ್ಲಿ ಈ ತಿಂಗಳು ದ್ವೇಷ, ಅಸೂಹೆಗಳು ಹೆಚ್ಚಾಗಬಹುದು ಆದ್ದರಿಂದ ತಾಳ್ಮೆಯಿಂದ ಇರಿ. ಶುಭ ಲಾಭಗಳ ಜೊತೆಗೆ ನರದೃಷ್ಠಿ ದೋಷಗಳು ಹೆಚ್ಚಾಗುತ್ತದೆ.

ಬೆಲೆಬಾಳುವ ವಸ್ತುಗಳು, ಬಂಗಾರ, ಡಾಕ್ಯುಮೆಂಟ್ಸ್ ಗಳನ್ನ ಕಳೆದುಕೊಳ್ಳುವ ಅವಕಾಶಗಳು ಇರುವುದರಿಂದ ಎಚ್ಚರದಿಂದ ಇರಿ. ಜಗಳ ಮಾಡುವ ಸ್ವಭಾವವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಕುಟುಂಬದವರ ಜೊತೆ ಬಾಂಧವ್ಯ ಹೆಚ್ಚಿಸಿಕೊಳ್ಳಿ. ಹಣದ ಲಾಭದ ಜೊತೆಗೆ ಈ ತಿಂಗಳು ಖರ್ಚುಗಳು ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಹೆಚ್ಚು ಗಮನ Capricorn

ಕೊಟ್ಟರೂ ಮನೆಯ ಕೆಲವು ಸಮಸ್ಯೆಗಳಿಂದ ವಿದ್ಯೆಯ ಮೇಲೆ ಆಸಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಮಕರ ರಾಶಿಯ ಸ್ತ್ರೀಯರಿಗೆ ಪರ ಪುರುಷರಿಂದ ಮತ್ತು ಹೊರಗಿನವರಿಂದ ಸಮಸ್ಯೆಗಳು ಬರುತ್ತದೆ ಆದ್ದರಿಂದ ಜಾಗ್ರತೆಯಾಗಿರುವುದು ಒಳ್ಳೆಯದು. ವ್ಯಾಪಾರಸ್ಥರಿಗೆ ಅಲ್ಪ ಲಾಭ ಉಂಟಾಗುತ್ತದೆ. ಈ ತಿಂಗಳು ಮಕರ ರಾಶಿಯವರಿಗೆ ಆರೋಗ್ಯ ವೃದ್ಧಿಯಾಗುತ್ತದೆ.

ಅಷ್ಟಮದಲ್ಲಿ ಚಂದ್ರನ ಸಂಚಾರವಿರುವುದರಿಂದ ವಾಹನ ಚಲಾವಣೆಯಲ್ಲಿ ಬಹಳ ಜಾಗ್ರತೆ ವಹಿಸಿ. ಇಷ್ಟು ದಿನ ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸ ಕಾರ್ಯಗಳು ಇನ್ನು ಮುಂದೆ ಶೀಘ್ರವಾಗಿ ನಡೆಯುತ್ತದೆ. ರವಿ ಹಾಗೂ ಕುಜನ ಬಲದಿಂದ ಕೆಲಸಗಳು ಯಶಸ್ವಿಯಾಗುತ್ತದೆ. ಶುಕ್ರ, ಬುಧ ಹಾಗೂ ಚಂದ್ರನ ಬಲದಿಂದ ನಿಮ್ಮ ಮೇಲೆ ಇರುವಂತಹ ನಂಬಿಕೆ ಹೆಚ್ಚಾಗುತ್ತದೆ. Capricorn

ಪ್ರತಿಯೊಂದು ಕೆಲಸದಿಂದ ಆತ್ಮವಿಶ್ವಾಸವೂ ಬೆಳೆಯುತ್ತಾ ಹೋಗುತ್ತದೆ. ಮಕರ ರಾಶಿಯವರಿಗೆ 2023 ವರ್ಷದಲ್ಲಿ ಕಾಣದಂತಹ ಸುಖ, ಸಂತೋಷ ನವೆಂಬರ್ ತಿಂಗಳಿನಲ್ಲಿ ಪ್ರಾಪ್ತಿಯಾಗುತ್ತಾ ಹೋಗುತ್ತದೆ. ಅದೃಷ್ಟದ ಜೊತೆಗೆ ಶುಭಫಲಗಳು ಪ್ರಾಪ್ತಿಯಾಗುತ್ತದೆ. ಕಳೆದುಕೊಂಡ ಹಣವನ್ನು ಮತ್ತೆ ಸಂಪಾದನೆ ಮಾಡುವಂತಹ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳು ಬರುತ್ತದೆ. ಈ ತಿಂಗಳು ಅದೃಷ್ಠವು ಒಲಿದು ಬಂದಿದೆ. ಮಕರ ರಾಶಿಯವರು

ಈ ತಿಂಗಳು ಯಾವ ದೇವರ ಆರಾಧನೆಯನ್ನು ಮಾಡಬೇಕೆಂದರೆ ಶನಿ ದೇವರ ಆರಾಧನೆ ಮತ್ತು ಈಶ್ವರನ ಸ್ಮರಣೆಯನ್ನು ಮಾಡಿ, ಗುರುಗಳ ಸೇವೆಯನ್ನ ಮಾಡಬೇಕು. ಮಕರ ರಾಶಿಯವರಿಗೆ ಏಳುವರೆ ವರ್ಷದ ಶನಿದೋಷಗಳು ಇರುತ್ತದೆ, ಶನಿದೋಷಗಳು ಕಡಿಮೆಯಾಗಿ ಶನಿದೇವರ ಕೃಪಾದೃಷ್ಠಿ ಪ್ರಾಪ್ತವಾಗಲು ತಪ್ಪದೇ ಪ್ರತೀ ಶನಿವಾರದಂದು ದಶರಥ ಶನಿಸ್ತೋತ್ರ ಪಾರಾಯಣವನ್ನ ಮಾಡಿದರೇ ಒಳ್ಳೆಯದು.

ಶನಿದೇವರಿಗೆ ತೈಲಾಭಿಷೇಕ ಮತ್ತು ನವಗ್ರಹಗಳಿಗೆ ಪ್ರತೀ ಶನಿವಾರ ಪ್ರದಕ್ಷಿಣೆ ಹಾಕಿದರೇ ಒಳ್ಳೆಯದು. ಇದರ ಜೊತೆಗೆ ಚಂದ್ರನ ಶಾಂತಿಯನ್ನ ಮಾಡಿಕೊಳ್ಳಬೇಕು. ಈಶ್ವರನ ದರ್ಶನವನ್ನು ಮಾಡಬೇಕು. ದಕ್ಷಿಣ ಮೂತ್ರಿಯ ಆರಾಧನೆಯನ್ನ ಮಾಡಬೇಕು. ದತ್ತಾತ್ರೇಯ ಸ್ವಾಮಿಗಳ ಮುಂದೆ ಕುಳಿತು ಗುರು ಚರಿತ್ರೆಯನ್ನ ಪಾರಾಯಣವನ್ನ ಮಾಡಬೇಕು. ಇಷ್ಟೆಲ್ಲಾ ಪರಿಹಾರಗಳನ್ನ ಪಾಲಿಸಿದ್ದೇ ಆದರೇ ದೈವಬಲ ಮತ್ತು ಏಳಿಗೆಯನ್ನು ಮಕರ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಪಡೆದುಕೊಳ್ಳಬಹುದು.

Leave A Reply

Your email address will not be published.