Ultimate magazine theme for WordPress.

Food Habits ಗಂಡನ ಜೊತೆ ಊಟ ಮಾಡುವ ಹೆಂಡತಿ 

0 12,729

Food Habits for women in kannadatopten ಸ್ನೇಹಿತರೇ ನಾವು ಊಟ ಮಾಡುವಾಗ ಕೆಲವು ನಿಯಮಗಳನ್ನ ಪಾಲಿಸುವುದರಿಂದ ಅದು ನಮ್ಮ ಉನ್ನತಿಗೆ, ಅಭಿವೃದ್ಧಿಗೆ ಕಾರಣವಾಗುತ್ತದೆಂದು ಮಹಾಭಾರತ ಗ್ರಂಥದಲ್ಲಿ ಹೇಳಲಾಗಿದೆ. ಗಂಡ ಹೆಂಡತಿ ಒಂದೇ ಸಮಯದಲ್ಲಿ ಊಟ ಮಾಡಬಹುದಾ? ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಹುದಾ? ಮಾಡಬಾರದ?ಎಂಬ ಕುತೂಹಲಕಾರಿ ವಿಷಯವನ್ನು ಮತ್ತು ಊಟದ ಬಗೆಗಿನ ಕುತೂಹಲಕಾರಿ ವಿಷಯಗಳನ್ನು

ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗ್ರಂಥಗಳಲ್ಲಿ ಹೇಳಲಾಗಿರುವ ಈ ನಿಯಮಗಳು ವೈಜ್ಞಾನಿಕ ದೃಷ್ಠಿಕೋನದಿಂದಲೂ ನಿಜವಾಗಿದೆ. ಈ ಪ್ರಕಾರವಾಗಿ ಭೋಜನ ಮಾಡುವುದರಿಂದ ದೇವಾನುದೇವತೆಗಳ ಅಶೀರ್ವಾದ ಕೂಡ ಸಿಗುತ್ತದೆ. ಮಹಾಭಾರತದಲ್ಲಿ ಭೀಷ್ಮ ಅರ್ಜುನನಿಗೆ ಹೇಳಿದ ಸಂಗತಿಗಳು ತುಂಬಾ ಕುತೂಹಲಕಾರಿಯಾಗಿವೆ. Food Habits

ಊಟ ಮಾಡುವ ಮೊದಲು ಕೈ, ಕಾಲು, ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಊಟವನ್ನು ಆರಂಭ ಮಾಡುವುದಕ್ಕೆ ಮೊದಲು ಮಾತೆ ಅನ್ನಪೂರ್ಣೇಶ್ವರಿಯನ್ನು ಸ್ಮರಿಸಬೇಕು ಮತ್ತು ಜಗತ್ತಿನಲ್ಲಿ ಹಸಿದಿರುವ ಎಲ್ಲಾ ಪ್ರಾಣಿಗಳಿಗೂ ಕೂಡ ಊಟ ದೊರೆಯುವಂತಾಗಲಿ ಎಂದು ನಿಮ್ಮ ಇಷ್ಟ ದೇವರನ್ನು ಪ್ರಾರ್ಥನೆ ಮಾಡಿ ಆ ನಂತರ ಊಟವನ್ನು ಆರಂಭಿಸಬೇಕು. Food Habits

ಅಡುಗೆ ಮಾಡುವ ಮುಂಚೆ ಸ್ತ್ರೀಯರು ಶುಚಿಯಾಗಿ ಸ್ನಾನ ಮಾಡಿ ಶುದ್ಧವಾದ ಮನಸ್ಸಿನಿಂದ ಅಡುಗೆ ಮಾಡಬೇಕು. ಅಗ್ನಿದೇವರಿಗೆ ಪ್ರಾರ್ಥಿಸಿ ನಮಸ್ಕರಿಸಿ ಹೊಲೆ ಹಚ್ಚಬೇಕು. ಪ್ರತಿದಿನ ನೀವು ಮಾಡಿದ ಅಡುಗೆಯಲ್ಲಿ ಸ್ವಲ್ಪ ಆಹಾರವನ್ನು ಹಸು, ಕಾಗೆ, ನಾಯಿಗೆ ಎತ್ತಿ ಇಡಬೇಕು ಮತ್ತು ಅವುಗಳಿಗೆ ನೀಡಬೇಕು. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಊಟ ಮಾಡಬೇಕು.

ಬೇರೆ ಬೇರೆ ಕೂತು ಊಟ ಮಾಡಿದರೇ ಅಥವಾ ಬೇರೆ ಬೇರೆ ಸಮಯದಲ್ಲಿ ಊಟ ಮಾಡಿದರೇ ಆ ಮನೆಯ ಸದಸ್ಯರಲ್ಲಿ ಪ್ರೀತಿ ವಿಶ್ವಾಸ, ಹೊಂದಾಣಿಕೆ ಅಷ್ಟು ಚೆನ್ನಾಗಿರಲ್ಲ. ಸಾಯಂಕಾಲ ಸೂರ್ಯಾಸ್ತವಾಗಿ ಒಂದುವರೆ ಗಂಟೆಗಳ ಒಳಗೆ ಊಟ ಮಾಡಬೇಕು. ಆಗ ಜಠರಾಗ್ನಿ ಕ್ರಿಯಾಶೀಲವಾಗಿರುತ್ತದೆ. ಒಂದು ಸಲ ಊಟ ಮಾಡುವವನು ಯೋಗಿ, ಎರಡು ಸಲ ಊಟ ಮಾಡುವವನು ಭೋಗಿ ಎನ್ನಲಾಗುತ್ತದೆ. Food Habits

ಭೋಜನವನ್ನು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ಸೇವಿಸಿದರೆ ಉತ್ತಮ. ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಸೇವಿಸಿದಂತಹ ಊಟ ಪ್ರೇತಕ್ಕೆ ಪ್ರಾಪ್ತವಾಗುತ್ತದೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪಶ್ಚಿಮ ದಿಕ್ಕಿನತ್ತ ಕುಳಿತು ಊಟ ಮಾಡದರೇ ರೋಗದ ವೃದ್ಧಿಯಾಗುತ್ತದೆ. ಹಾಸಿಗೆಯ ಮೇಲೆ ಕುಳಿತುಕೊಂಡು ಊಟ ಮಾಡಬಾರದು. ಮುರಿದ ಹೋದ ಪ್ಲೇಟ್ ಗಳಲ್ಲಿ ಊಟ ಮಾಡಬಾರದು.

ಅರಳಿಮರದ ಕೆಳಗೆ ವಟವೃಕ್ಷದ ಕೆಳಗೆ ಕುಳಿತು ಊಟವನ್ನು ಮಾಡಬಾರದು. ಬಡಿಸಿಕೊಟ್ಟ ಊಟವನ್ನು ನಿಂದನೆ ಮಾಡಬಾರದು. ಚಪ್ಪಲಿಯನ್ನು ತೆಗೆದೇ ಊಟವನ್ನು ಮಾಡಬೇಕು. ತುಂಬಾ ಸಿಹಿ ಮತ್ತು ತುಂಬಾ ಖಾರದ ಊಟವನ್ನು ಮಾಡಬಾರದು. ಜಗಳ ಮತ್ತು ದ್ವೇಷದ ವಾತಾವರಣ ಇರುವಂತಹ ಸ್ಥಳದಲ್ಲಿ ಊಟವನ್ನು ಮಾಡಬಾರದು. Food Habits

ಅತಿಯಾದ ಗಲಾಟೆ, ಗದ್ದಲ ಇರುವ ಸ್ಥಳದಲ್ಲಿ ಕುಳಿತು ಊಟವನ್ನು ಮಾಡಬಾರದು. ನಿಂತುಕೊಂಡು ಊಟವನ್ನು ಮಾಡಬಾರದೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅರ್ಧ ನಿಂದುಬಿಟ್ಟ ಹಣ್ಣು ಮತ್ತು ಸಿಹಿ ಪದಾರ್ಥಗಳನ್ನು ಮತ್ತೆ ತಿನ್ನಬಾರದು. ಊಟ ಮಾಡುವಾಗ ಅರ್ಧಕ್ಕೆ ಊಟ ಬಿಟ್ಟು ಎದ್ದರೇ ಮತ್ತೆ ಊಟವನ್ನು ಮಾಡಬಾರದು. ಯಾರಾದರೂ ಅವಮಾನಿಸಿ ಊಟವನ್ನು ಕೊಟ್ಟರೇ ಅಂತಹ ಊಟವನ್ನು ಮಾಡಬಾರದು.

ಊಟ ಮಾಡುವಾಗ ಮನಸ್ಸು ಪ್ರಶಾಂತವಾಗಿರಬೇಕು. ಮೌನವಾಗಿ ಊಟವನ್ನ ಮಾಡಬೇಕು. ಜೋರಾಗಿ ನಗುನಗುತಾ, ಹರಟುತ್ತಾ ಊಟ ಮಾಡಬಾರದು. ಚಿಂತೆಯನ್ನ ಮಾಡುವಂತಹ ವಿಷಯಗಳನ್ನು ಊಟ ಮಾಡುವ ಸಮಯದಲ್ಲಿ ಚರ್ಚಿಸಬಾರದು. ಊಟ ಮಾಡಬೇಕಾದರೇ ಮಾತನಾಡಬೇಕೆನಿಸಿದರೇ ಧನಾತ್ಮಕ ವಿಷಯಗಳನ್ನು ಚರ್ಚಿಸಬೇಕು. ಊಟವನ್ನು ಅಗಿದು ಅಗಿದು ತಿನ್ನಬೇಕು. Food Habits

ಅತೀ ಬಿಸಿ ಮತ್ತು ಅತೀ ತಣ್ಣಗಿರುವ ಊಟವನ್ನು ಮಾಡಬಾರದು. ಊಟವಾದ ತಕ್ಷಣ ಟೀ, ಕಾಫೀ, ನೀರನ್ನು ಕುಡಿಯಬಾರದು. ಊಟವಾದ ತಕ್ಷಣ ಯಾವ ಕೆಲಸಗಳನ್ನು ಮಾಡಬಾರದು. ಊಟವಾದ ನಂತರ ಕುದುರೆ ಓಡಿಸುವುದು, ಓಡುವುದು, ಈಜುಗಳನ್ನು ಮಾಡಬಾರದು ಹೀಗೆ ಕೆಲವೊಂದು ಕೆಲಸಗಳನ್ನು ಮಾಡಬಾರದು. ಊಟವಾದ ನಂತರ ಕನಿಷ್ಠ ನೂರು ಹೆಜ್ಜೆ ನಡೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಯಾವ ಊಟದ ತಟ್ಟೆಗೆ ಕಾಲು ತಾಗಿರುತ್ತದೆಯೋ ಆ ತಟ್ಟೆಯಲ್ಲಿ ಆಹಾರವನ್ನು ಸ್ವೀಕಾರ ಮಾಡಬಾರು ಮತ್ತು ಯಾರಾದರೂ ಊಟದ ತಟ್ಟೆಯನ್ನು ದಾಟಿದರೇ ಆ ತಟ್ಟೆಯಲ್ಲಿರುವ ಆಹಾರವನ್ನು ಸೇವನೆ ಮಾಡಬಾರದು. ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟಮಾಡಬಾರದು. ಗಂಡನಿಗೆ ಊಟ ಬಡಿಸಿ ನಂತರ ಬೇರೆ ತಟ್ಟೆಯಲ್ಲಿ ಊಟ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಹೆಚ್ಚುತ್ತದೆ. ಇವುಗಳನ್ನು ಮಹಾಭಾರತದಲ್ಲಿ ಭೀಷ್ಮ ಅರ್ಜುನನಿಗೆ ಹೇಳಿದ ಸಂಗತಿಗಳು.

Leave A Reply

Your email address will not be published.