Ultimate magazine theme for WordPress.

Diwali 2023 Horoscope ದೀಪಾವಳಿ 2023 ರಾಶಿ ಭವಿಷ್ಯ

0 17,130

Diwali 2023 Horoscope ಇವತ್ತಿನ ಈ ಲೇಖನದಲ್ಲಿ ದೀಪಾವಳಿ ಹಬ್ಬದ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ. ದೀಪಾವಳಿಯು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ದೀಪಾವಳಿಯನ್ನು ಹಬ್ಬಗಳಲ್ಲೇ ಪ್ರಮುಖವಾದ ಹಬ್ಬವೆಂದು ಪರಿಗಣಿಸಲಾಗಿದೆ. ದೀಪಾವಳಿಯು ಬೆಳಕಿನ ವಿಜಯದ ಸಂಕೇತವಾಗಿದೆ. ಜನರು ಈ ಹಬ್ಬವನ್ನು ಐದು ದಿನಗಳ ಕಾಲ ಆಚರಣೆ ಮಾಡುತ್ತಾರೆ ಹಾಗೂ ಮಹಾಲಕ್ಷ್ಮಿದೇವಿಯು ಬಹಳ ಭಕ್ತಿಯಿಂದ,

ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಈ ವಿಶೇಷ ದಿನದಂದು ಮಹಾಲಕ್ಷ್ಮಿದೇವಿಯು ಭೂಮಿಗೆ ಭೇಟಿ ನೀಡುತ್ತಾಳೆ ಮತ್ತು ಭಕ್ತರಿಗೆ ಆರೋಗ್ಯ, ಸಂಪತ್ತು, ಸಂಮೃದ್ಧಿಯನ್ನು ನೀಡುತ್ತಾಳೆಂದು ನಂಬಲಾಗಿದೆ. ಜನರು ದೀಪಗಳನ್ನು ಬೆಳಗಿಸುವಾಗ ಕುಟುಂಬ ಮತ್ತು ಸ್ನೇಹಿತರಿಗೆ ಉಡುಗೊರೆಗಳನ್ನು ವಿತರಿಸುತ್ತಾರೆ. ದೀಪಗಳನ್ನು ಬೆಳಗಿಸುವುದು ಶುದ್ಧತೆ ಮತ್ತು Diwali

ಒಳ್ಳೆಯತನವನ್ನ ಪ್ರತಿನಿಧಿಸುತ್ತದೆ. ನವೆಂಬರ್ 12ರಂದು ಶನಿ ತನ್ನ ಸ್ವಂತ ರಾಶಿ ಕುಂಭರಾಶಿಯಲ್ಲಿ ಚಲಿಸುವುದರ ಮೂಲಕ ಮಹಾಯೋಗವಾದ ರಾಜಯೋಗವನ್ನು ರೂಪಿಸುತ್ತಿದೆ ಮತ್ತು ಪವಿತ್ರ ಆಯುಷ್ ಮಾನ್ ಯೋಗವೂ ಸಿಗಲಿದೆ. ಇದರಿಂದ ನವೆಂಬರ್ 16 ಮತ್ತು 17ರಂದು ಕ್ರಮವಾಗಿ ರುಚಿಕ ಮತ್ತು ಯುಕ್ತಯೋಗವು ಈ ವರ್ಷ ದೀಪಾವಳಿಯ ಯೋಗವನ್ನು ಹೆಚ್ಚಿಸುತ್ತದೆ.

ಈ ಯೋಗವು 12 ರಾಶಿಗಳಿಗೂ ಅನ್ವಯವಾಗುತ್ತದೆ. ದೀಪಾವಳಿಯಂದು ಚಂದ್ರನು ತುಲಾರಾಶಿಯಲ್ಲಿ ಚಲಿಸುತ್ತಾನೆ ಮತ್ತು ಮಂಗಳ ಮತ್ತು ಸೂರ್ಯನೊಂದಿಗೆ ತ್ರಿಘ್ರಾಯಿ ಯೋಗವನ್ನು ರೂಪಿಸುತ್ತಾನೆ. ಈ ಯೋಗವು ಮೇಷರಾಶಿಯಲ್ಲಿ ಸ್ಥಿತಗುರುವಿನ ಶುಭಾಂಶವನ್ನು ಹೊಂದಿರುತ್ತದೆ. ಇದರಿಂದ ಗಜಕೇಸರಿ ರಾಜಯೋಗವು ಉಂಟಾಗುತ್ತದೆ. ಇದರ ಜೊತೆಗೆ ಧನತ್ರಯೋದಶಿ Diwali

ದಿನದಂದು ಶುಕ್ರ ಮತ್ತು ಚಂದ್ರನ ಸಂಯೋಗದಿಂದ ಕನ್ಯಾರಾಶಿಯಲ್ಲಿ ಕಲಾನಿಧಿಯೋಗವು ರೂಪುಗೊಳ್ಳುತ್ತದೆ. ಈ ಶುಭ ಸಮಯದಲ್ಲಿ ಭೂಮಿ ಮತ್ತು ಕಟ್ಟಡದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೇ ಭವಿಷ್ಯದಲ್ಲಿ ಬಹಳಷ್ಟು ಲಾಭವನ್ನು ಪಡೆಯುತ್ತೀರಿ. ದೀಪಾವಳಿಯಂದು ಶನಿಯು 30 ವರ್ಷಗಳ ನಂತರ ತ್ರಿಕೋನ ರಾಶಿಯ ತನ್ನ ರಾಶಿಯಾದ ಕುಂಭರಾಶಿಯಲ್ಲಿ ನೇರವಾಗಿ ಚಲಿಸುತ್ತಿದ್ದಾನೆ.

ದೀಪಾವಳಿ ಹಬ್ಬವನ್ನು ಕಾರ್ತೀಕ ಮಾಸದ ಅಮಾವಾಸ್ಯೆತಿಥಿಯಂದು ಆಚರಣೆ ಮಾಡಲಾಗುತ್ತದೆ. ನವೆಂಬರ್ 12ನೇ ತಾರೀಖಿನಂದು ಬೆಳಕಿನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಸಂತೋಷ ಮತ್ತು ಸಂಮೃದ್ಧಿಗಾಗಿ ಲಕ್ಷ್ಮಿದೇವಿಯನ್ನು ಪೂಜೆ ಮಾಡಲಾಗುತ್ತದೆ. ವರ್ಷಪೂರ್ತಿ ಸುಖ ಸಂಮೃದ್ಧಿ ಕರುಣಿಸುವಂತೆ ಪ್ರಾರ್ಥಿಸಲಾಗುತ್ತದೆ.
ದೀಪಾವಳಿಯ ಪ್ರಯುಕ್ತ ಮಕರ ರಾಶಿಯವರಿಗೆ ಯಾವೆಲ್ಲಾ ಫಲಗಳು ಲಭಿಸಲಿದೆ Diwali

ಎಂದರೆ ಮಕರರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಹಳೆಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ.

ನಿಮ್ಮ ಮಾನಸಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳಿಗೆ ಉತ್ತಮ ಸಂಬಂಧ ಬರಬಹುದು. ಉದ್ಯೋಗಿಗಳಿಗೆ ಈ ಸಮಯವು ಬಹಳಷ್ಟು ಸಾಧನೆಯನ್ನು ತಂದುಕೊಡುತ್ತದೆ. ಬಹಳ ಬೇಗನೇ ಸಂಪತ್ತು ಈ ದೀಪಾವಳಿಯು ಅನುಕೂಲಕರವಾಗಿದೆ. ನಿಮ್ಮ ವೈಯಕ್ತಿಕ ಜೀವನವೂ ಆಹ್ಲಾದಕರವಾಗಿರುತ್ತದೆ. ವಿಶೇಷವಾಗಿ ವಿವಾಹಿತ ಜನರು ತಮ್ಮ ಸಂಗಾತಿಯೊಂದಿಗೆ Diwali

ತಮ್ಮ ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ನಿಮ್ಮ ಹಳೆಯ ಹೂಡಿಕೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಅರ್ಧಕ್ಕೆ ನಿಂತು ಹೋದ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಮಕರ ರಾಶಿಯ ಜನರಲ್ಲಿ ಸಂಪತ್ತು, ಸಂತೋಷವು ಸೃಷ್ಠಿಯಾಗುತ್ತಿದೆ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ನಿಮ್ಮ ಕುಟುಂಬದಿಂದ ಎಲ್ಲಾ ರೀತಿಯ ಬೆಂಬಲವನ್ನು ಪಡೆಯುತ್ತೀರಿ. ಮಕರ ರಾಶಿಯ ಜನರಿಗೆ ಶನಿಯ ನೇರ ಸಂಚಾರ ಮತ್ತು ಬುಧನ ಸಂಚಾರದಿಂದ ಉತ್ತಮ ಲಾಭಗಳು ಉಂಟಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವುದರ ಜೊತೆಗೆ ವೇಗದ ಪ್ರಗತಿ ಇರುತ್ತದೆ. ಮಕರ ರಾಶಿಯವರು ಖ್ಯಾತಿಯನ್ನು ಪಡೆಯುತ್ತಾರೆ ಮತ್ತು ಮಂಗಳಕರ ಯೋಗಕ್ಕೆ ಪಾತ್ರರಾಗುತ್ತಾರೆ. ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಶುಭವಾಗಲಿದೆ. ಮಕರರಾಶಿಯವರಿಗೆ ಹೊಸ ಉದ್ಯೋಗದ ಲಾಭವಿದೆ ಆದರೇ ಹೊಸ ಉದ್ಯೋಗಕ್ಕೆ ಹೋಗುವ ಮೊದಲು ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

Leave A Reply

Your email address will not be published.