Ultimate magazine theme for WordPress.

12 rules ಆರೋಗ್ಯವಾಗಿರಲು 12 ನಿಯಮಗಳು

0 9,534

12 rules to be healthy in kannadatopten ಆರೋಗ್ಯವಾಗಿರಲು 12 ನಿಯಮಗಳು ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಎದ್ದೇಳಬೇಕು. ಬೆಳಗಿನ ವಾತಾವರಣವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5ರಿಂದ 6 ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡು ಫಿಟ್ ಆಗಿರುತ್ತದೆ. ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ತುಂಬಾ ಅತ್ಯುತ್ತಮ ಸಮಯ.

ನಿದ್ದೆ: ನಿದ್ದೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಹ ಸಂಭವಿಸುತ್ತವೆ. ನಿದ್ದೆ ಇಲ್ಲದಿದ್ದರೆ ಇಡೀ ದಿನ ವ್ಯರ್ಥವಾಗುತ್ತದೆ. ನೀವು ಕನಿಷ್ಠ 6 ಘಂಟೆಗಳ ನಿದ್ದೆ ತೆಗೆದುಕೊಳ್ಳಬೇಕು ಮತ್ತು 8 ಘಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು. 12 rules

ನಿದ್ದೆಯ ಸಮಯದಲ್ಲಿ, ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ. ದೇಹವು ವಿಶ್ರಾಂತಿ ಪಡೆಯುತ್ತದೆ. ಇದರಿಂದಾಗಿ ನಾವು ಸಂಪೂರ್ಣವಾಗಿ ರಿಚಾರ್ಜ್ ಆಗುತ್ತೇವೆ. ಸಂಪೂರ್ಣ ನಿದ್ದೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಉತ್ಸಾಹ ಬರುತ್ತದೆ ಮತ್ತು ಇಡೀ ದಿನ ಚಟುವಟಿಕೆಯಿಂದ ಇರುತ್ತೇವೆ. ಆದ್ದರಿಂದ ಕನಿಷ್ಠ 6ರಿಂದ 8 ಗಂಟೆಗಳ ಕಾಲ ನಿರಂತರ ನಿದ್ದೆ ಮಾಡಬೇಕು.

ಪ್ರತಿದಿನ ವ್ಯಾಯಾಮ ಮಾಡಿ:ಪ್ರತಿದಿನ ವ್ಯಾಯಾಮ ಮಾಡುವುದು ನಿಮ್ಮನ್ನು ಆರೋಗ್ಯವಾಗಿಡಲು ಹೆಚ್ಚು ಸಹಾಯ ಮಾಡುತ್ತದೆ. ಕನಿಷ್ಠ 20 ನಿಮಿಷಗಳನ್ನು ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲು ಇಡಿ. ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣ ಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ.
ಅರೋಗ್ಯವಾಗಿರಲು ನೀರು ಕುಡಿಯಿರಿ. 12 rules

ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ಗ್ಲಾಸ್ ನೀರು ಕುಡಿಯುವುದು ಅತಿ ಅವಶ್ಯಕ. ಅಂದರೆ ಸುಮಾರು ಒಂದುವರೆ ಲೀಟರ್ ನಷ್ಟು ಉಗುರು ಬೆಚ್ಚಗಿನ ನೀರನ್ನು ಕುಡಿದರೆ, ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ನೀರು ಕುಡಿದ 45 ನಿಮಿಷಗಳವರೆಗೆ ನೀವು ಏನನ್ನೂ ತಿನ್ನಬೇಕಾಗಿಲ್ಲ ಎಂಬುದು ತಿಳಿದಿರಲಿ.
ಬೆಳಿಗ್ಗೆ ಯಾವಾಗಲೂ ಆರೋಗ್ಯಕರವಾದ ಬೆಳಗಿನ ತಿಂಡಿಯನ್ನು ತಿನ್ನಿ.

ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಚೆನ್ನಾಗಿ ಅಗೆಯಿರಿ. ಬೆಳಗಿನ ಆಹಾರವನ್ನು ಸೂರ್ಯ ನೆತ್ತಿಯ ಮೇಲೇರುವ ಮುಂಚೆಯೇ ಸೇವಿಸಬೇಕು. ಬೆಳಗಿನ ತಿಂಡಿಯ ಜೊತೆಗೆ ಹಣ್ಣಿನ ಜ್ಯೂಸ್ ಇದ್ದರೆ ಇನ್ನು ಒಳ್ಳೆಯದು.
ರಾತ್ರಿಯ ವೇಳೆ ಲಘುವಾಗಿ ಊಟವನ್ನು ಮಾಡಿ. ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು. 45 ನಿಮಿಷ ಮೊದಲು ಅಥವಾ ನಂತರ ಕುಡಿಯಿರಿ. 12 rules

ಆದಷ್ಟು ಜಂಕ್ ಫುಡ್ಸ್ ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್ ಇತ್ಯಾದಿಗಳ ಸೇವನೆಯನ್ನು ಕಡಿಮೆ ಮಾಡಿ.
ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ.ಪ್ರತಿದಿನ ಆಹಾರ ಸೇವಿಸಿದ ನಂತರ ಒಂದು ಬಾಳೇಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ. ಸಕ್ಕರೆ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ.

ನಿಮಗೆ ನಿಲ್ಲಿಸಲು ಸಾದ್ಯವಾಗದಿದ್ದರೇ ಅದನ್ನು ಸ್ವಲ್ಪ ಕಡಿಮೆ ಮಾಡಿ ಜೇನು, ಬೆಲ್ಲ ಇತ್ಯಾದಿಗಳನ್ನು ಬಳಸಿ.
ಐಸ್ ಕ್ರೀಂ, ಚಾಕಲೇಟ್, ಕೂಲ್ ಡ್ರಿಂಕ್ಸ್ ಅಥವಾ ಯಾವುದೇ ಸ್ವೀಟ್ಸ್ ಪದಾರ್ಥ ಸೇವನೆ ಕಡಿಮೆ ಮಾಡಿರಿ.
ಉಪ್ಪನ್ನು ಕೂಡ ಕನಿಷ್ಠ ಪ್ರಮಾಣದಲ್ಲಿ ಬಳಸಿ, ನೀವು ಉಪ್ಪು ತಿನ್ನುವುದಾದರೆ ರಾಕ್ ಸಾಲ್ಟ್ ಅನ್ನು ಮಾತ್ರ ಬಳಸಿ. ಉಪವಾಸ ಮಾಡೋ ಅವಕಾಶ ಸಿಕ್ಕಾಗ ಉಪವಾಸ ಮಾಡಿ. 12 rules

Leave A Reply

Your email address will not be published.