Ultimate magazine theme for WordPress.

Cold and cough ಎದೆಯಲ್ಲಿ ಕಟ್ಟಿದ ಕಫ ತಕ್ಷಣ ಕರಗುತ್ತೆ

0 6,255

Cold and cough ಎಷ್ಟೇ ಕೆಮ್ಮು, ನೆಗಡಿ ಕಫ ಆಗಿರಲೀ , ತುಂಬಾ ದಿನಗಳಿಂದ ಕಟ್ಟಿದಂತಹ ಕಫವಾಗಿರಲೀ, ತಲೆಯಲ್ಲಿ ಕಟ್ಟಿರುವಂತಹ ಕಫವನ್ನು ಕರಗಿಸುವಂತಹ ಶಕ್ತಿ ಇವತ್ತಿನ ಮನೆ ಮದ್ದಿಗಿದೆ. ಗಂಟಲು ನೋವು, ಗಂಟಲು ಕೆರೆತವಾಗುತ್ತಿದ್ದರೇ ಮೂರು ದಿನ ಇದನ್ನು ಕುಡಿದರೆ ಸಾಕು ಬೇಗ ಕಡಿಮೆ ಯಾಗುತ್ತದೆ. ಗಂಟಲಿನಲ್ಲಿ ಕಟ್ಟಿದ ಕಫ ಕರಗಿ ನೀರಾಗಿ ಹೋಗುತ್ತದೆ.

ನಿಮಗೆ ಉಸಿರಾಟದ ಸಮಸ್ಯೆ ಇದ್ದರೇ ಈ ಮನೆಮದ್ದಿನಿಂದಾಗಿ ನೀವು ಆರಾಮವಾಗಿ ಉಸಿರಾಟವಾಡಬಹುದು. ಯಾವುದೇ ಖರ್ಚಿಲ್ಲದೇ ಈ ಮನೆಮದ್ದನ್ನು ಮಾಡಿಕೊಳ್ಳಬಹುದು.ಈ ಮನೆಮದ್ದನ್ನು ಹೇಗೆ ಮಾಡುವುದೆಂದರೆ
ದೊಡ್ಡಪತ್ರೆ ಎಲೆಯನ್ನ ತೆಗೆದುಕೊಳ್ಳಬೇಕು. ಕಪ್ಪು ತುಳಸಿಯನ್ನ ತೆಗೆದುಕೊಳ್ಳಿ, ಒಂದು ವೇಳೆ ಇಲ್ಲದಿದ್ದರೇ ರಾಮತುಳಸಿಯನ್ನ ತೆಗೆದುಕೊಳ್ಳಿ. Cold

ತುಳಸಿ ಎಲೆಗಳು ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ. ನಂತರ ವೀಳ್ಯೆದೆಲೆಯನ್ನ ತೆಗದುಕೊಳ್ಳಿ, ಈ ಎಲೆಯನ್ನು ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ಹಲವಾರು ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಮೂರು ತುಳಸಿ ಕುಡಿಗಳನ್ನು ತೆಗೆದುಕೊಳ್ಳಿ, ಎರಡು ದೊಡ್ದಪತ್ರೆ ಎಲೆಯನ್ನು ತೆಗೆದುಕೊಳ್ಳಿ,ಈ ಎಲೆಯು ಕಫವನ್ನ ಕರಗಿಸುತ್ತದೆ. Cold

ನಂತರ ಕಾಲ್ ಇಂಚಷ್ಟು ಅರಿಶಿಣದ ಕೊಂಬನ್ನು ತೆಗೆದುಕೊಳ್ಳಿ. ಇದರಲ್ಲಿ ಹೇರಳವಾದ ಆ್ಯಂಟಿಆಕ್ಸಿಡೆಂಟ್ಸ್ ಗಳು ಇವೆ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಪ್ಪವನ್ನ ಕಡಿಮೆ ಮಾಡುವಂತಹ ಮನೆಮದ್ದಾದ ಶುಂಠಿಯನ್ನ ಅರ್ಧ ಇಂಚಷ್ಟು ತೆಗೆದುಕೊಳ್ಳಿ, ಏಳರಿಂದ ಎಂಟು ಕಾಳುಮೆಣಸನ್ನು ತೆಗೆದುಕೊಳ್ಳೋಣ.

ಈ ಮೆಣಸುಕಾಳು ವಿಪರೀತ ತಂಡಿ ಶೀತವಾಗಿದ್ದರೆ, ಕಫ, ಗಂಟಲು ನೋವನ್ನ ಶಮನ ಮಾಡುತ್ತದೆ. ಎರಡು ವೀಳ್ಯೆದೆಲೆಯನ್ನ ತೆಗೆದುಕೊಳ್ಳಿ. ಕಫವನ್ನ ಕರಗಿಸುವ ಶಕ್ತಿ ಈ ವೀಳ್ಯೇದೆಲೆಗೆ ಇದೆ. ಒಂದು ಪಾತ್ರೆಗೆ ಎರಡು ಲೋಟದಷ್ಟು ನೀರನ್ನು ಹಾಕಿ, ಅದಕ್ಕೆ ದೊಡ್ಡಪತ್ರೆ ಎಲೆ, ತುಳಸಿ ಕುಡಿ, ವಿಳ್ಳೇದೆಲೆಯನ್ನ ಸಣ್ಣ ಸಣ್ಣ ಪೀಸ್ ಮಾಡಿ ಹಾಕಿ, ನಂತರ ಕುಟಾಣಿಯಲ್ಲಿ ಶುಂಠಿ, Cold

ಮೆಣಸಿನಕಾಳು, ಅರಿಶಿಣ ಕೊಂಬನ್ನು ಪುಡಿ ಮಾಡಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ, ಎರಡು ಲೋಟದ ನೀರು ಒಂದು ಲೋಟವಾಗುವಷ್ಟು ಚೆನ್ನಾಗಿ ಕುದಿಸಬೇಕು. ಸ್ವಲ್ಪ ಬೆಲ್ಲವನ್ನು ಸೇರಿಸಿ ನಂತರ ಸೋಸಿಕೊಳ್ಳಿ ಈ ಕಷಾಯವನ್ನು ಬಿಸಿಯಾಗಿರುವಾಗಲೇ ನಿಧಾನವಾಗಿ ಕುಡಿಯಿರಿ. ಮಕ್ಕಳು ಕುಡಿಯಬಹುದು. ಈ ಮನೆಮದ್ದನ್ನು ಒಂದು ಸಲ ಮಾಡಿ ನೋಡಿ ನಿಮಗೆ ತಿಳಿಯುತ್ತದೆ.

Leave A Reply

Your email address will not be published.